Gudibande News: ಗುಡಿಬಂಡೆ ಸೊಪ್ಪಿನಪೇಟೆಯಲ್ಲಿ 4ನೇ ವರ್ಷದ ದಸರಾ ಗಣೇಶ ಮಹೋತ್ಸವ: ಗಣೇಶ ಮೂರ್ತಿ, ದುರ್ಗಾದೇವಿ ಪ್ರತಿಷ್ಠಾಪನೆ; ನೂರಾರು ಭಕ್ತರು ಭಾಗಿ
ಪಟ್ಟಣದ ಸೊಪ್ಪಿನಪೇಟೆಯ ಸಪ್ಪಲಮ್ಮ ದೇವಾಲಯದ ಸಮೀಪ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಗಣೇಶ ಮೂರ್ತಿ ಹಾಗೂ ದುರ್ಗಾದೇವಿಯ ಪ್ರತಿಷ್ಠಾಪನೆ ಮತ್ತು ಪ್ರಾಣ ಪ್ರತಿಷ್ಠಾಪನಾ ಕಾರ್ಯಗಳು ಸಂಪ್ರದಾಯಬದ್ಧವಾಗಿ ನೆರವೇರಿದವು. ನೂರಾರು ಭಕ್ತಾದಿಗಳ ಸಮ್ಮುಖ ದಲ್ಲಿ ನಡೆದ ಪೂಜಾ ಕೈಂಕರ್ಯಗಳು ಭಕ್ತಿಭಾವದ ವಾತಾವರಣ ನಿರ್ಮಿಸಿದವು.
-
ಗುಡಿಬಂಡೆ: ನವರಾತ್ರಿ(Navaratri) ಹಬ್ಬದ ಪ್ರಯುಕ್ತ ಪಟ್ಟಣದ ಸೊಪ್ಪಿನಪೇಟೆಯಲ್ಲಿ ದಸರಾ ಗಣೇಶ ಮಹೋತ್ಸವ ಸಮಿತಿ ವತಿಯಿಂದ ನಾಲ್ಕನೇ ವರ್ಷದ ದಸರಾ ಗಣೇಶ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಪಟ್ಟಣದ ಸೊಪ್ಪಿನಪೇಟೆಯ ಸಪ್ಪಲಮ್ಮ ದೇವಾಲಯದ ಸಮೀಪ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಗಣೇಶ ಮೂರ್ತಿ ಹಾಗೂ ದುರ್ಗಾದೇವಿಯ ಪ್ರತಿಷ್ಠಾಪನೆ ಮತ್ತು ಪ್ರಾಣ ಪ್ರತಿಷ್ಠಾಪನಾ ಕಾರ್ಯಗಳು ಸಂಪ್ರದಾಯಬದ್ಧವಾಗಿ ನೆರವೇರಿದವು. ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ನಡೆದ ಪೂಜಾ ಕೈಂಕರ್ಯಗಳು ಭಕ್ತಿಭಾವದ ವಾತಾವರಣ ನಿರ್ಮಿಸಿದವು.
ಇದನ್ನೂ ಓದಿ: Gudibande News: ಸಮಾಜ ಸೇವೆಯ ಮೂಲಕ ಹುಟ್ಟುಹಬ್ಬ ಆಚರಣೆ: ಮೀನುಗಾರಿಕೆ ಮಹಿಳೆಯರಿಗೆ ಸೀರೆ ವಿತರಣೆ
ನವರಾತ್ರಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಮಹೋತ್ಸವದಲ್ಲಿ ಸ್ಥಳೀಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗಣೇಶ ಹಾಗೂ ದುರ್ಗಾದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ದಸರಾ ಗಣೇಶ ಮಹೋತ್ಸವ ಸಮಿತಿಯ ಸದಸ್ಯರು, ಸ್ಥಳೀಯ ಯುವಕರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಮಹಿಳೆಯರು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಧಾರ್ಮಿಕ ಆಚರಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
12ಜಿಯುಡಿ2: ಗುಡಿಬಂಡೆ ಪಟ್ಟಣದ ಸೊಪ್ಪಿನಪೇಟೆಯಲ್ಲಿ ದಸರಾ ಗಣೇಶ ಮಹೋತ್ಸವ ಸಮಿತಿ ವತಿಯಿಂದ ನಾಲ್ಕನೇ ವರ್ಷದ ದಸರಾ ಗಣೇಶ ಮಹೋತ್ಸವದ ಅಂಗವಾಗಿ ಗಣೇಶ ಮೂರ್ತಿ ಹಾಗೂ ದುರ್ಗಾದೇವಿಯ ಪ್ರತಿಷ್ಠಾಪನೆ ನೆರವೇರಿಸಲಾಯಿತು.