ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Navaratri Utsava: ದೇವರಿಗೆ ಕೃತಜ್ಞತೆ ಸಲ್ಲಿಸುವ ಪರ್ವಕಾಲವೇ ನವರಾತ್ರಿ: ಸದ್ಗುರು ಮಧುಸೂದನ ಸಾಯಿ

ತಾಲ್ಲೂಕಿನ ಸತ್ಯ ಸಾಯಿ ಗ್ರಾಮದಲ್ಲಿ ಭಾನುವಾರ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಆಶೀರ್ವ ಚನ ನೀಡಿದ ಅವರು, ನವರಾತ್ರಿ ಬ್ರಹ್ಮಾನುಭವದ ಪಯಣಕ್ಕೆ ಉತ್ತಮ ವೇದಿಕೆಯಾಗಿದೆ. ಮನುಷ್ಯರ ಬದುಕಿಗೆ ಅಗತ್ಯವಾದ ಪಂಚಭೂತ ಸೇರಿದಂತೆ ಎಲ್ಲವನ್ನೂ ನೀಡಿದ ದೇವರಿಗೆ ಪೂಜೆ, ಹೋಮಗಳ ಮೂಲಕ ಕೃತಜ್ಞತೆ ಸಲ್ಲಿಸಲು ಈ ಪರ್ವಕಾಲ ಅವಕಾಶ ಕಲ್ಪಿಸುತ್ತದೆ ಎಂದರು.

ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಉತ್ಸವ ಆರಂಭ

-

Profile
Ashok Nayak Oct 11, 2026 8:41 PM

ಚಿಕ್ಕಬಳ್ಳಾಪುರ: ಸತತ ಪ್ರಯತ್ನದಿಂದ ಮಾತ್ರ ಭವಿಷ್ಯ ಉಜ್ವಲಗೊಳ್ಳಲು ಸಾಧ್ಯ. ಕರ್ಮ ಸಿದ್ಧಾಂತದ ಹೆಸರಿನಲ್ಲಿ ಪ್ರಯತ್ನ ಕೈಬಿಡುವುದು ಸರಿಯಲ್ಲ. ನಮ್ಮ ಕರ್ತವ್ಯತತ್ಪರತೆ ಮತ್ತು ಪರಿಶ್ರಮದಿಂದ ಫಲಪ್ರಾಪ್ತಿಯ ಸಾಧ್ಯತೆ ಸದಾ ಇರುತ್ತದೆ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ(One World One Mission) ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ತಾಲ್ಲೂಕಿನ ಸತ್ಯ ಸಾಯಿ ಗ್ರಾಮದಲ್ಲಿ ಭಾನುವಾರ ನವರಾತ್ರಿ ಉತ್ಸವ(Navaratri Utsava)ಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ನವರಾತ್ರಿ ಬ್ರಹ್ಮಾನುಭವದ ಪಯಣಕ್ಕೆ ಉತ್ತಮ ವೇದಿಕೆಯಾಗಿದೆ. ಮನುಷ್ಯರ ಬದುಕಿಗೆ ಅಗತ್ಯವಾದ ಪಂಚಭೂತ ಸೇರಿದಂತೆ ಎಲ್ಲವನ್ನೂ ನೀಡಿದ ದೇವರಿಗೆ ಪೂಜೆ, ಹೋಮಗಳ ಮೂಲಕ ಕೃತಜ್ಞತೆ ಸಲ್ಲಿಸಲು ಈ ಪರ್ವಕಾಲ ಅವಕಾಶ ಕಲ್ಪಿಸುತ್ತದೆ ಎಂದರು.

ಇದನ್ನೂ ಓದಿ: Navaratri Celebration in Bengali Style: ಸತ್ಯಸಾಯಿ ಗ್ರಾಮದಲ್ಲಿ ಬಂಗಾಳ ಶೈಲಿಯಲ್ಲಿ ನವರಾತ್ರಿ ಆಚರಣೆ: 18ರಿಂದ ನಾಲ್ಕು ದಿನ ಮಹಾ ರುದ್ರಯಾಗ

ಮನಸ್ಸಿನ ಶುದ್ಧತೆ ಇಲ್ಲದೆ ಮಾಡುವ ಸಾಧನೆ ಫಲಪ್ರದವಾಗುವುದಿಲ್ಲ. ಏಕಾಗ್ರತೆ ಮತ್ತು ಮನಸ್ಸಿನ ಪರಿಶುದ್ಧತೆ ಸಾಧಿಸಲು ಹಿರಿಯರು ಧಾರ್ಮಿಕ ಚೌಕಟ್ಟಿನಲ್ಲಿ ಹಲವು ಆಚರಣೆಗಳನ್ನು ರೂಪಿಸಿದ್ದಾರೆ ಎಂದು ತಿಳಿಸಿದರು.

ದೆಹಲಿಯಲ್ಲಿರುವ ಕರ್ನಾಟಕ ಸರ್ಕಾರದ ಪ್ರತಿನಿಧಿ ಟಿ.ಬಿ.ಜಯಚಂದ್ರ(T B Jayachandra) ಮಾತ ನಾಡಿ, ಸದ್ಗುರು ಮಧುಸೂದನ ಸಾಯಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸೇವಾ ಚಟುವಟಿಕೆ ಗಳ ವ್ಯಾಪ್ತಿ ಅಗಾಧವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶೃಂಗೇರಿಯಿಂದ ಆಗಮಿಸಿದ್ದ ಋತ್ವಿಜರ ಪರವಾಗಿ ಮಾತನಾಡಿದ ಚಿಕ್ಕಮಗಳೂರು ಜಿಲ್ಲೆಯ ಜಯಪುರದ ಯಜ್ಞಮೂರ್ತಿ ಭಟ್, ನವಗ್ರಹಗಳ ಮಹತ್ವ ಹಾಗೂ ಮಾನವ ಜೀವನದಲ್ಲಿ ಅವುಗಳ ಪ್ರಭಾವದ ಕುರಿತು ಮಾಹಿತಿ ನೀಡಿದರು.

ಇಂದು ದುರ್ಗಾ ಹೋಮ, 1,500 ಮಹಿಳೆಯರಿಂದ ಕುಂಕುಮಾರ್ಚನೆ

ನವರಾತ್ರಿಯ ಮೊದಲ ದಿನ ಸತ್ಯ ಸಾಯಿ ಗ್ರಾಮದಲ್ಲಿ ಸಹಸ್ರ ಮೋದಕ ಗಣಪತಿ ಹೋಮ, ನವಗ್ರಹ ಹೋಮ ಹಾಗೂ ಶನಿಶಾಂತಿ ಹೋಮಗಳು ನೆರವೇರಿದವು. ದೇಶ-ವಿದೇಶಗಳ ನೂರಾರು ಭಕ್ತರು ಪಾಲ್ಗೊಂಡಿದ್ದರು. ಸೋಮವಾರ ಎರಡನೇ ದಿನ ದುರ್ಗಾ ಹೋಮ, ಭಗವತಿ ತ್ರಿಕಾಲ ಪೂಜೆ, ದುರ್ಗಾ ದೀಪ ನಮಸ್ಕಾರ ಹಾಗೂ ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ ನಡೆಯಲಿದೆ. ಸಾಮೂಹಿಕ ಕುಂಕು ಮಾರ್ಚನೆಯಲ್ಲಿ ಸುಮಾರು 1,500 ಮಹಿಳೆಯರು ಭಾಗವಹಿಸಲಿದ್ದಾರೆ.

ಹಸೆ ಚಿತ್ತಾರ, ಬಂಗಾಳಿ ಶೈಲಿಯ ದುರ್ಗಾಮೂರ್ತಿ ಆಕರ್ಷಣೆ

ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಅಂಗವಾಗಿ ಆಯೋಜಿಸಿರುವ ಹಸೆ ಚಿತ್ತಾರದ ಕಲಾಕೃತಿಗಳು, ಬಂಗಾಳಿ ಶೈಲಿಯ ದುರ್ಗಾಮೂರ್ತಿ ಹಾಗೂ ಗೊಂಬೆಗಳ ಪ್ರದರ್ಶನ ಭಕ್ತರ ಗಮನ ಸೆಳೆಯುತ್ತಿವೆ.

ಕರ್ನಾಟಕದ ಮಲೆನಾಡಿನ ಪಾರಂಪರಿಕ ಹಸೆ ಚಿತ್ತಾರ ಶೈಲಿಯ ಕಲಾಕೃತಿಗಳನ್ನು ಮೆಚ್ಚಿದ ಸದ್ಗುರು ಮಧುಸೂದನ ಸಾಯಿ, ಗ್ರಾಮೀಣ ಬದುಕಿನ ಸಂಭ್ರಮವನ್ನು ಬಿಂಬಿಸುವ ಈ ಚಿತ್ರಗಳು ಕರ್ನಾಟಕದ ಹೆಮ್ಮೆ ಎಂದರು.

ಪಶ್ಚಿಮ ಬಂಗಾಳದ ಕುಮಾರ್‌ತೋಲಿ ಕಲಾವಿದರ ಶೈಲಿಯಲ್ಲಿ ರೂಪಿಸಲಾದ ಮಣ್ಣಿನ ದುರ್ಗಾ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಗಂಗಾ ನದಿ ತೀರದ ಮಣ್ಣಿನಿಂದ ಮೂರ್ತಿಯನ್ನು ರೂಪಿಸ ಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ನವರಾತ್ರಿ ಅಂಗವಾಗಿ ಗೊಂಬೆಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ.