ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gudibande News: ದೇವರಾಜ ಅರಸು ಅವರ ಆದರ್ಶ ಪಾಲನೆಯೇ ಜಯಂತಿ ಆಚರಣೆಗೆ ಸಾರ್ಥಕತೆ: ಪರಿಮಳ

ಮಹನೀಯರ ಜಯಂತಿ ಆಚರಿಸುವುದಷ್ಟೇ ಸಾಲದು. ಅವರು ತೋರಿದ ಆದರ್ಶ ಹಾಗೂ ಸಮಾಜ ಮುಖಿ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಗೆ ನಿಜವಾದ ಸಾರ್ಥಕತೆ ದೊರೆಯುತ್ತದೆ ಎಂದು ನ್ಯೂ ವಿಷನ್ ಇಂಗ್ಲೀಷ್ ಶಾಲೆಯ ಮುಖ್ಯಸ್ಥೆ ಪರಿಮಳ ಹೇಳಿದರು.

ಅರಸು ಅವರ ಆದರ್ಶ ಪಾಲನೆಯೇ ಜಯಂತಿ ಆಚರಣೆಗೆ ಸಾರ್ಥಕತೆ

-

Profile
Ashok Nayak Aug 21, 2026 11:37 AM

ಗುಡಿಬಂಡೆ: ಮಹನೀಯರ ಜಯಂತಿ ಆಚರಿಸುವುದಷ್ಟೇ ಸಾಲದು. ಅವರು ತೋರಿದ ಆದರ್ಶ ಹಾಗೂ ಸಮಾಜಮುಖಿ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಗೆ ನಿಜವಾದ ಸಾರ್ಥಕತೆ ದೊರೆಯುತ್ತದೆ ಎಂದು ನ್ಯೂ ವಿಷನ್ ಇಂಗ್ಲೀಷ್ ಶಾಲೆಯ ಮುಖ್ಯಸ್ಥೆ ಪರಿಮಳ ಹೇಳಿದರು.

ಪಟ್ಟಣದ ಹೊರವಲಯದ ದೇವರಾಜ ಅರಸು ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು (Late D Devraj Urs)ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದನ್ನೂ ಓದಿ; Gudibande News: ಕೆರೆ ತುಂಬಲಿ, ರೈತರ ಬದುಕು ಹಸಿರಾಗಲಿ: ಒಡ್ಡಮ್ಮದೇವಿಗೆ ವಿಶೇಷ ಕುಂಭಾಭಿಷೇಕ

ಬಡವರು ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅರಸು ಅವರು ಆದ್ಯತೆ ನೀಡಿದ್ದರು. ಭೂ ಸುಧಾರಣಾ ಕಾಯ್ದೆ ಜಾರಿಗೊಳಿಸಿ ‘ಉಳುವವನೇ ಭೂಮಿಯ ಒಡೆಯ’ ಎಂಬ ಕಾನೂನಿನ ಮೂಲಕ ಭೂರಹಿತರಿಗೆ ಭೂಮಿಯ ಹಕ್ಕು ಕಲ್ಪಿಸಿದರು. ಜೀತ ಪದ್ಧತಿ ನಿರ್ಮೂಲನೆಗೂ ಶ್ರಮಿಸಿ ದರು ಎಂದು ಹೇಳಿದರು.

ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥರೆಡ್ಡಿ ಮಾತನಾಡಿ, ಅರಸು ಅವರು ಸಾಮಾಜಿಕ ಪರಿವರ್ತನೆಗೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದ ಮಹಾನ್ ನಾಯಕರು ಎಂದರು.

ಕಾರ್ಯಕ್ರಮದಲ್ಲಿ ರಿಯಾಜ್ ಪಾಷ, ಅಂಬರೀಶ್ ಮಾತನಾಡಿದರು. ವಿವಿಧ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪಪಂ ಅಧ್ಯಕ್ಷ ವಿಕಾಸ್, ಮುಖ್ಯಾಧಿಕಾರಿ ಆರತಿ, ಮುನಿಕೃಷ್ಣಪ್ಪ, ನಟರಾಜ್, ಬಷೀರ್, ರಾಜೇಶ್, ಚಂದ್ರಶೇಖರ್ ಉಪಸ್ಥಿತರಿದ್ದರು.