ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಶ್ರೇಷ್ಟ ಸಹಕಾರಿ ಪ್ರಶಸ್ತಿಗೆ ನಗರದ ಅಕ್ಷಯ ಸೌಹಾರ್ದ ಸಹಕಾರಿ ಬ್ಯಾಂಕ್ ಭಾಜನ

ಆರ್.ನಾಗೇಂದ್ರ ಗುಪ್ತ ಅವರನ್ನು ಅಭಿನಂದಿಸಿದ ಸಿ.ಇ.ಒ ಈಸ್ತೂರಿ ರಂಗನಾಥಯ್ಯ ಶೆಟ್ಟಿ ಮಾತನಾಡಿ, ಕಳೆದ ಹದಿನಾರು ವರ್ಷಗಳಿಂದಲೂ ಅಕ್ಷಯ ಸೌಹಾರ್ದ ಸಹಕಾರಿ ಸಂಸ್ಥೆಯು ಯೋಜಿತ ಗುರಿ ಗಳೊಂದಿಗೆ ಕಾರ್ಯವನ್ನು ಸಮರ್ಪಕ ವಾಗಿ ನಿರ್ವಹಿಸುತ್ತಿದೆ. ಬಡವರ ಮತ್ತು ಮಧ್ಯಮ ವರ್ಗದವರ ಕಲ್ಯಾಣದ ದೃಷ್ಟಿಯಿಂದ ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ನೀಡುತ್ತಾ ಈ ವರ್ಗದವರ ಆರ್ಥಿಕ ಚೇತರಿಕೆಗಾಗಿ ಶ್ರಮಿಸುತ್ತಿದೆ ಎಂದರು

ಶ್ರೇಷ್ಟ ಸಹಕಾರಿ ಪ್ರಶಸ್ತಿಗೆ ನಗರದ ಅಕ್ಷಯ ಸೌಹಾರ್ದ ಸಹಕಾರಿ ಬ್ಯಾಂಕ್ ಭಾಜನ

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಯ ವತಿಯಿಂದ ಕೊಡಲ್ಪಡುವ ಶ್ರೇಷ್ಟ ಸಹಕಾರಿ ಪ್ರಶಸ್ತಿಗೆ ನಗರದ ಅಕ್ಷಯ ಸೌಹಾರ್ದ ಸಹಕಾರಿ ಬ್ಯಾಂಕ್ ಪಾತ್ರವಾಗಿದೆ.

Ashok Nayak Ashok Nayak Aug 24, 2025 8:39 PM

ಗೌರಿಬಿದನೂರು : ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಯ ವತಿಯಿಂದ ಕೊಡಲ್ಪಡುವ ಶ್ರೇಷ್ಟ ಸಹಕಾರಿ ಪ್ರಶಸ್ತಿಗೆ ನಗರದ ಅಕ್ಷಯ ಸೌಹಾರ್ದ ಸಹಕಾರಿ ಬ್ಯಾಂಕ್ ಪಾತ್ರ ವಾಗಿದೆ.

ಕರ್ನಾಟಕ ರಾಜ್ಯದ ಸಹಕಾರಿ ರಂಗದಲ್ಲಿನ ಸಂಸ್ಥೆಗಳ ಅತ್ಯತ್ತಮ ಮಟ್ಟದ ಕಾರ್ಯ ನಿರ್ವಹಣೆ, ಸಾಮಾಜಿಕ ಮತ್ತು ಆರ್ಥಿಕ  ಧ್ಯೇಯೋದ್ದೇಶಗಳೊಂದಿಗೆ ರೂಪಿಸಲ್ಪಡುವ ಹೊಸ ಬಗೆಯ ಯೋಜನೆಗಳು ಮತ್ತು ಅವುಗಳ ಸಮರ್ಪಕ ಅನುಷ್ಟಾನ ಹೀಗೆ ಇವೇ ಮೊದಲಾದ ಮಾನದಂಡ ಗಳನ್ನು ಗಮನಿಸಿ ಈ  ಪ್ರಶಸ್ತಿಯನ್ನು ಕೊಡಲಾಗುತ್ತದೆ.

ಪ್ರಶಸ್ತಿಯನ್ನು ಸ್ವೀಕರಿಸಿದ ಸಂಸ್ಥೆಯ ಅಧ್ಯಕ್ಷ ಆರ್.ನಾಗೇಂದ್ರ ಗುಪ್ತ ಅವರನ್ನು ಅಭಿನಂದಿಸಿದ ಸಿ.ಇ.ಒ ಈಸ್ತೂರಿ ರಂಗನಾಥಯ್ಯ ಶೆಟ್ಟಿ ಮಾತನಾಡಿ, ಕಳೆದ ಹದಿನಾರು ವರ್ಷಗಳಿಂದಲೂ ಅಕ್ಷಯ ಸೌಹಾರ್ದ ಸಹಕಾರಿ ಸಂಸ್ಥೆಯು ಯೋಜಿತ ಗುರಿಗಳೊಂದಿಗೆ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದೆ. ಬಡವರ ಮತ್ತು ಮಧ್ಯಮ ವರ್ಗದವರ ಕಲ್ಯಾಣದ ದೃಷ್ಟಿಯಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲಗಳನ್ನು ನೀಡುತ್ತಾ ಈ ವರ್ಗದವರ ಆರ್ಥಿಕ ಚೇತರಿಕೆಗಾಗಿ ಶ್ರಮಿಸುತ್ತಿದೆ ಎಂದರು.

ಇದನ್ನೂ ಓದಿ: Children's Ear: ಮಳೆಗಾಲದಲ್ಲಿ ಮಕ್ಕಳ ಕಿವಿಸೋಂಕು ತಡೆ ಹೇಗೆ?

ಎಲ್ಲರಿಗೂ ಹೊಂದುವ ರೀತಿಯಲ್ಲಿ ಫಿಗ್ಮಿ ವ್ಯವಸ್ತೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸ ಲಾಗಿದೆ. ಹೀಗಿ ಅಕ್ಷಯ ಸೌರ್ಹಾರ್ಧ ಬ್ಯಾಂಕ್ ಹಲವಾರು ಆಕರ್ಷಕ ಠೇವಣಿ ವಿಧಾನಗಳನ್ನು ಸಹ ಪರಿಚಯಿಸಿದ್ದು, ಸಮಾಜದ ಸಾಮಾನ್ಯ ಜನರ ಆರ್ಥಿಕ ಪುನಶ್ಚೇತನವೇ ನಮ್ಮ ಸಂಸ್ಥೆಯ ಗುರಿ ಯಾಗಿದೆ. ನಮ್ಮ ಬ್ಯಾಂಕಿನ ಪ್ರಾಮಾಣಿಕ ಕಾರ್ಯವನ್ನು ಗುರ್ತಿಸಿ ಶ್ರೇಷ್ಟ ಸಹಕಾರಿ ಪ್ರಶಸ್ತಿ ಸಂದಿರು ವುದು ಹೆಮ್ಮೆ ಎನಿಸುತ್ತಿದೆ ಎಂದರು.

ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ನಾಗೇಂದ್ರ ಗುಪ್ತ ಮಾತನಾಡಿ ಸಂಸ್ಥೆಯ ಎಲ್ಲಾ ಪದಾಧಿ ಕಾರಿಗಳು, ಸಿಬ್ಬಂದಿ ವರ್ಗ ಮತ್ತು ವಿಶೇಷವಾಗಿ ಸಂಸ್ಥೆಯ ಮೇಲಿನ ಅಭಿಮಾನ ಹಾಗೂ ನಂಬಿಕೆ ಯನ್ನು ಹೊಂದಿರುವ ಗ್ರಾಹಕರು ಹೀಗೆ ಇವರೆಲ್ಲರ ಯೋಗಧಾನದಿಂದಲೇ ಇಂದು ಶ್ರೇಷ್ಠ ಸಹಕಾರಿ ಪ್ರಶಸ್ತಿಯನ್ನು ಪಡೆಯಲು ಸಾಧ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಭದ್ರಿನಾಥ್ ರವರು ಮತ್ತು ನಿರ್ದೇಶಕರುಗಳಾದ, ಎಸ್ ಎ ಎಸ್ ಸುರೇಶ್, ರವಿ ಶಂಕರ್ ಬಾಬು, ಡಿ.ಆರ್. ನಟರಾಜ್, ಕಿಶೋರ್, ಗುರುಪ್ರಸಾದ್,  ಮತ್ತು ಸಿಬ್ಬಂದ್ಧಿ ವರ್ಗ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.