ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಿರಿಯ ನಾಗರೀಕರಿಗೆ ಕಾನೂನು ಅರಿವು ನೆರವು ನೀಡಲು ಸದಾ ಸಿದ್ಧ: ಬಿ.ಶಿಲ್ಪ ಹೇಳಿಕೆ

ಹಿರಿಯ ನಾಗರೀಕರನ್ನು ಗೌರವಿಸುವ ಸಂಸ್ಕೃತಿ ಹೊಂದಿರುವ ಭಾರತದೇಶದಲ್ಲಿ ನಾವಿದ್ದೇವೆ ಎಂಬುದೇ ಹೆಮ್ಮೆಯ ಸಂಗತಿ. ಇಳಿಸಂಜೆಯಲ್ಲಿರುವ ನೀವು ಈ ಅವಧಿಯಲ್ಲಿ ದೈಹಿಕ ಆರೋಗ್ಯ ದ ಜತೆಗೆ ಮಾನಸಿಕ ಆರೋಗ್ಯವನ್ನು ಕೂಡ ತಪ್ಪದೆ ಕಾಪಾಡಿಕೊಳ್ಳಲು ಗಮನ ಕೊಡಬೇಕು ಎಂದು ಮನವಿ ಮಾಡಿದ ಅವರು ಜಿಲ್ಲಾ ನಿವೃತ್ತ ನೌಕರರ ಸಂಘ ಮತ್ತು ಹಿರಿಯ ನಾಗರೀಕರ ಸಂಘದ ಜೊತೆಗೂಡಿ ಶೀಘ್ರವೇ ವೈದ್ಯಕೀಯ ತಪಾಸಣಾ ಶಿಬಿರ ಆಯೋಜನೆ ಮಾಡೋಣ

ಹಿರಿಯ ನಾಗರೀಕರಿಗೆ ಕಾನೂನು ಅರಿವು ನೆರವು ನೀಡಲು ಸದಾ ಸಿದ್ಧ

ಹಿರಿಯ ನಾಗರೀಕರಿಗೆ ಸೇವೆ ಒದಗಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಬಾಗಿಲು ಸದಾ ತೆರೆದಿದೆ. ಯಾವ ಸಮಯದಲ್ಲಿಯೇ ಬಂದರೂ, ಕರೆ ಮಾಡಿ ದೂರು ನೀಡಿದರೂ ಕೂಡಲೇ ನೆರವು ಒದಗಿಸಲು ಸಿದ್ಧ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಿಲ್ಪಾ ಬಿ.ತಿಳಿಸಿದರು. -

Profile
Ashok Nayak Apr 26, 2026 12:01 AM

ಚಿಕ್ಕಬಳ್ಳಾಪುರ: ಹಿರಿಯ ನಾಗರೀಕರಿಗೆ ಸೇವೆ ಒದಗಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಬಾಗಿಲು ಸದಾ ಸಿದ್ಧವಿದೆ.ಯಾವ ಸಮಯದಲ್ಲಿ ಬಂದರೂ ಕರೆ ಮಾಡಿ ದೂರು ನೀಡಿದರೂ ಪ್ರಾಧಿಕಾರ ಕೂಡಲೇ ನೆರವು ಒದಗಿಸಲು ಸಿದ್ಧವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಿಲ್ಪಾ ಬಿ.ತಿಳಿಸಿದರು.

ನಗರದ ಜಿಲ್ಲಾ ಸರಕಾರಿ ನೌಕರರ ಭವನದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಹಿರಿಯ ನಾಗರೀಕರ ವೇದಿಕೆ, ಜಿಲ್ಲಾ ನಿವೃತ್ತ ನೌಕರರ ಸಂಘದ ಸಹಯೋಗದಲ್ಲಿ ನಡೆದ ಕಾನೂನು ಅರಿವು ನೆರವು ಹಾಗೂ ಮಾಹೆಗೊಮ್ಮೆ ಆರೋಗ್ಯ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಿರಿಯ ನಾಗರೀಕರನ್ನು ಗೌರವಿಸುವ ಸಂಸ್ಕೃತಿ ಹೊಂದಿರುವ ಭಾರತದೇಶದಲ್ಲಿ ನಾವಿದ್ದೇವೆ ಎಂಬುದೇ ಹೆಮ್ಮೆಯ ಸಂಗತಿ. ಇಳಿಸಂಜೆಯಲ್ಲಿರುವ ನೀವು ಈ ಅವಧಿಯಲ್ಲಿ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವನ್ನು ಕೂಡ ತಪ್ಪದೆ ಕಾಪಾಡಿಕೊಳ್ಳಲು ಗಮನ ಕೊಡಬೇಕು ಎಂದು ಮನವಿ ಮಾಡಿದ ಅವರು ಜಿಲ್ಲಾ ನಿವೃತ್ತ ನೌಕರರ ಸಂಘ ಮತ್ತು ಹಿರಿಯ ನಾಗರೀಕರ ಸಂಘದ ಜೊತೆಗೂಡಿ ಶೀಘ್ರವೇ ವೈದ್ಯಕೀಯ ತಪಾಸಣಾ ಶಿಬಿರ ಆಯೋಜನೆ ಮಾಡೋಣ ಎಂದು ತಿಳಿಸಿದರು.

ಇದನ್ನೂ ಓದಿ: Chikkaballapur News: ಶಾಸಕರ ವಿರುದ್ಧ ಮಾತನಾಡುವವರಿಗೆ ಕಠಿಣ ಕ್ರಮವಾಗಲಿ: ನಾಗಭೂಷಣ್ ಒತ್ತಾಯ

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಅಭಿಲಾಷ್ ಮಾತನಾಡಿ, ಹಿರಿಯರೇ ಮನೆಗೆ ಮಕ್ಕಳು ಮೊಮ್ಮಕ್ಕಳಿಗೆ ಸದಾ ಸ್ಪೂರ್ತಿಯಾಗಿದ್ದಾರೆ. ನಿವೃತ್ತರಾದರೇನಂತೆ ಸಂಘದ ಅಡಿಯಲ್ಲಿ ಉತ್ತಮ ರೀತಿಯಲ್ಲಿ ಸಂಘಟಿತರಾದಲ್ಲಿ ಇಳಿವಯಸ್ಸಿನಲ್ಲಿ ನಿಮ್ಮ ಹಕ್ಕು ಗಳನ್ನು ಪಡೆಯಲು ಸಾಧ್ಯ.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವೂ ನಿಮಗೆ ನೆರವು ಕೊಡಲು ಸದಾ ಸಿದ್ಧವಿದೆ. ಮಕ್ಕಳು ಪೋಷಕರನ್ನು ಕಾಪಾಡುವ ಹೊಣೆ ಹೊರುವುದು ಕಾನೂನು ಬದ್ದ ಕರ್ತವ್ಯವಾಗಿದೆ. ಹೆತ್ತವರ ಬಗ್ಗೆ ಬೇಜವಾಬ್ದಾರಿ ಮಾಡಿದಲ್ಲಿ ಶಿಕ್ಷೆ ಖಚಿತ. ಮಕ್ಕಳಿಂದ ವಂಚನೆಗೆ ಒಳಗಾದ ಹಿರಿಯರಿಗೆ ಉಚಿತ ಕಾನೂನಿನ ರಕ್ಷಣೆ ದೊರೆಯುತ್ತದೆ. ಇಷ್ಟೇ ಅಲ್ಲದೆ ಆರ್ಥಿಕವಾಗಿ ಹಿಂದುಳಿದ, ನೊಂದ ಮಹಿಳೆಯರಿಗೆ ಕೂಡ ಉಚಿತ ಕಾನೂನು ನೆರವು ಸಾಧ್ಯ. ನಿವೃತ್ತ ನೌಕರರು ಪೆನ್ಶನ್ ಪಡೆಯುವುದು, ಆಸ್ತಿಗಳನ್ನು ರಕ್ಷಿಸಿ ಕೊಳ್ಳುವುದು, ಜೀವನಾಂಶ ಪಡೆಯವುದು ಇತ್ಯಾದಿ ನೆರವು ಪಡೆಯಲು ಪ್ರಾಧಿಕಾರದ ನೆರವು ಪಡೆಯಿರಿ ಎಂದು ಸಲಹೆ ನೀಡಿದರು.

ಸರ್ಕಾರಿ ಅಭಿಯೋಜಕ ನವೀನ್ ಕುಮಾರ್ ಮಾತನಾಡಿ, ರಾಜ್ಯ ಕೇಂದ್ರ ಸರ್ಕಾರಗಳು ರೂಪಿಸಿರುವ ಹಿರಿಯ ನಾಗರೀಕರ ಹಕ್ಕುಗಳನ್ನು ಅಮೂಲಾಗ್ರವಾಗಿ ತಿಳಿದು ಇದರ ಅನುಕೂಲ ಪಡೆಯಿರಿ. ಮಕ್ಕಳು ಭೂಮಿ ವಿಭಾಗವಾದ ನಂತರ ಹೆತ್ತವರಿಗೆ ಮೋಸ ಮಾಡಿದಾಗ, ಪ್ರಾಧಿಕಾರಕ್ಕೆ ಬಂದರೆ ನಯಾಪೈಸೆ ಶುಲ್ಕವಿಲ್ಲದೆ ಉಚಿತವಾಗಿ ಕಾನೂನು ಸೇವೆಗಳ ನೆರವು ನೀಡಲಾಗುವುದು.ಪಿಂಚಣಿ ಹಣವನ್ನು ನೀವೇ ಬೆಳೆಸಿಕೊಳ್ಳಿ,ನೀವು ಜೀವಂತವಾಗಿ ಇರುವವರೆಗೆ ಭೂಮಿ ನಿಮ್ಮ ಹೆಸರಿನಲ್ಲಿಯೇ ಉಳಿಸಿಕೊಳ್ಳಿ, ಇಲ್ಲದಿದ್ದಲ್ಲಿ ಮಕ್ಕಳಿಂದ ಅನ್ಯಾಯ ಖಚಿತ ಎಂದು ಎಚ್ಚರಿಕೆ ನೀಡಿದರು.

*
ಮಾಹೆಗೊಮ್ಮೆ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಹಿರಿಯ ವೈದ್ಯ ಶ್ಯಾಮಸುಂದರ್ ಹಿರಿಯ ನಾಗರೀಕರ ಪಾಲಿಗೆ ಬೇಸಿಗೆಯ ತಾಪಮಾನ ಅಪಾಯವನ್ನು ಉಂಟು ಮಾಡಲಿದೆ,ಹೆಚ್ಚಿನ ತಾಪಮಾನ ಅನಾರೋಗ್ಯಕ್ಕೆ ಕಾರಣವಾಗುತ್ತದೆ.ಎಲ್ ನಿನೋ ಗಾಳಿಯ ಕಾರಣ ಈಗಿರುವುದಕ್ಕಿಂತಲೂ ತಾಪಮಾನ ಹೆಚ್ಚಳವಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.ಬಿಸಿಲಿನಲ್ಲಿ ತಿರುಗುವುದರಿಂದ ನಿರ್ಜಲೀಕರಣಕ್ಕೆ ಒಳಗಾಗು ವುದು, ಉಸಿರಾಟಕ್ಕೆ ತೊಂದರೆ, ಕಿಡ್ನಿ ವೈಫಲ್ಯ, ಹೃದಯಾಘಾತ ಆಗುವ ಸಂಭವ ಹೆಚ್ಚು. ಇದನ್ನು ತಪ್ಪಿಸಬೇಕಾದರೆ ಬಿಸಿಲಿನಿಂದ ದೂರವಿರಿ. ಎಳೆನೀರು, ಓಆರ್‌ಎಸ್, ನಿಂಬೆ ಜ್ಯೂಸ್ ಕುಡಿಯಿರಿ. ಹೆಚ್ಚು ಹೆಚ್ಚು ಶುದ್ಧ ನೀರು ಕುಡಿಯಲು ಮುಂದಾಗಬೇಕು ಎಂದರು.

ಕಡಿಮೆ ನೀರು ಕುಡಿದರೆ ಚಯಾಪಚಯ ಕ್ರಿಯೆಗೆ ತೊಂದರೆಯಾಗಲಿದೆ.ಕ್ರೀಯಾಟಿನ್ ಸಮಸ್ಯೆ ಇರುವವರು ಕಡಿಮೆ ನೀರು ಕುಡಿಯಬೇಕು.ಈ ಸಮಸ್ಯೆ ಇಲ್ಲದವರು ಕನಿಷ್ಟ 5 ಲೀಟರ್ ಕುಡಿಯುವುದನ್ನು ಮರೆಯಬಾರದು. ಕಿಡ್ನಿ ಕೆಲಸ ನಾವು ತಿಂದ ಊಟವನ್ನು ಕಾರ್ಬೋಹೈಡ್ರೇಟ್, ಪ್ರೋಟೀನ್ ಪ್ಯಾಟ್,ಮಿನರಲ್,ಆಗಿ ಬದಲಾಯಿಸುವುದೇ ಆಗಿದೆ.
ಮೈಟೋಕಾಂಡ್ರಿಯಾ ಶಕ್ತಿ ಉತ್ಪಾದನೆ ಮಾಡುವ ಕೇಂದ್ರವಾಗಿದೆ. ಶಕ್ತಿ ಉತ್ಪತ್ತಿಯ ನಂತರ ಕಲ್ಮಶಗಳು ಹೊರ ಬರಬೇಕು.ತ್ಯಾಜ್ಯವನ್ನು ರಕ್ತ ಹೊರ ಹಾಕಬೇಕು. ಯೂರಿಯಾ ಕ್ರಿಯಾ ಟಿನ್ ಬೇಡವಾದ ತ್ಯಾಜ್ಯಗಳು. ಇದು ರಕ್ತದ ಮೂಲಕ ಹೊರಹೋಗಲಿಲ್ಲ ಎಂದರೆ ಶುಗರ್, ಕಿಡ್ನಿ ವೈಫಲ್ಯ ಆಗಲಿದೆ ಎಂದರು.

*

ಬಿ.ವಿ.ಕೃಷ್ಣ ಮಾತನಾಡಿ, ಏ.25ರ ಶನಿವಾರ ಜಿಲ್ಲಾ ನಿವೃತ್ತ ನೌಕರರ ಸಂಘದ ವತಿಯಿಂದ ನಡೆಯುತ್ತಿರುವ ಮಾಹೆಗೊಂದು ಆರೋಗ್ಯ ಜಾಗೃತಿ ಕಾರ್ಯಕ್ರಮವು 45ನೇ ಕಾರ್ಯಕ್ರಮ ವಾಗಿದೆ. ನಮ್ಮ ಸಂಘಟನೆ ನಿವೃತ್ತರು ಮತ್ತು ಸಮಾಜದ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ನಾವು ಸೇವೆಯಿಂದ ನಿವೃತ್ತಿಯಾಗಿರ ಬಹುದು ಆದರೆ ನಮ್ಮ ಬದುಕಿನಿಂದ, ಜೀವ ಪ್ರೀತಿ ಲವಲವಿಕೆಯಿಂದ ಅಲ್ಲ ಎಂಬುದನ್ನು ತೋರಿಸುವ ಉದ್ದೇಶದಿಂದ ನಿರಂತರವಾಗಿ ಕಾರ್ಯಕ್ರಮಗಳ ಆಯೋಜನೆ ಆಗುತ್ತಿದೆ. ಎಲ್ಲಾ ಸದಸ್ಯರ ಸಹಕಾರದಿಂದ ಸಂಘವು ಉತ್ತಮವಾಗಿ ನಡೆದುಕೊಂಡು ಹೋಗುತ್ತಿದೆ. ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು.

ಇದೇ ವೇಳೆ ಹಿರಿಯ ನಾಗರೀಕರಿಗೆ ಗುರುತಿನ ಚೀಟಿಯನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರವಿಕುಮಾರ್, ಹಿರಿಯ ಪತ್ರಕರ್ತರು ಕನ್ನಡಪ್ರಭದ ಜಿಲ್ಲಾ ವರದಿಗಾರ ದಯಾಸಾಗರ್, ಸಂಜೆವಾಣಿಯ ಟಿ.ಎಸ್.ನಾಗೇಂದ್ರ ಬಾಬು, ವಿಶ್ವವಾಣಿ ದಿನಪತ್ರಿಕೆಯ ಮುನಿರಾಜು ಎಂ ಅರಿಕೆರೆ, ಟೈಮ್ಸ್ ಆಫ್ ಕರ್ನಾಟಕದ ಎಂ.ಕೃಷ್ಣಪ್ಪ ಮೊದಲಾದ ಪತ್ರಕರ್ತರನ್ನು ಕೂಡ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ವಿ.ಕೃಷ್ಣ, ಪ್ರಧಾನ ಕಾರ್ಯದರ್ಶಿ ತಿರುಮಳಪ್ಪ, ಖಜಾಂಚಿ ಶ್ರೀನಿವಾಸರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಅಭಿಲಾಶ್, ಜಿಲ್ಲಾ ನಿವೃತ್ತ ನೌಕರರ ಸಂಘದ ಜಯರಾಮರೆಡ್ಡಿ,ಈಶ್ವರ್ ರೆಡ್ಡಿ, ರವಿಕುಮಾರ್, ಅರುಣ್ ಇತರರು ಇದ್ದರು.