ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಶಾಸಕರ ವಿರುದ್ಧ ಮಾತನಾಡುವವರಿಗೆ ಕಠಿಣ ಕ್ರಮವಾಗಲಿ: ನಾಗಭೂಷಣ್ ಒತ್ತಾಯ

ನಾನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಆಯ್ಕೆಯಾದ ಸಂದರ್ಭದಲ್ಲಿ ನಡೆದ ಮೊದಲ ಸಭೆಯಲ್ಲಿ ಭರಣಿ ವೆಂಕಟೇಶ್ ಭಾಗಿಯಾಗಿದ್ದರು. ಆಗಲೇ ಟಿಎಪಿಸಿಎಂಎಸ್ ಚುನಾವಣೆ ಬಂದಿತ್ತು. ಅವುಲ ರೆಡ್ಡಿ ಕೂಡ ಇದ್ದರು. ಚುನಾವಣೆಗೆ ಎಷ್ಟು ಖರ್ಚಾಗಬಹುದು ಎಂದು ಕೇಳಿದವರು, ಅದೇ ಮೊದಲು ಅದೇ ಕೊನೆ ಅವರು ಈ ಕಡೆ ಬರಲೇಯಿಲ್ಲ. ಆವುಲರೆಡ್ಡಿ ಕೂಡ ಬರಲಿಲ್ಲ. ಈಗ ನೋಡಿದರೆ ಯಾವ ಅಭ್ಯರ್ಥಿ ಯನ್ನು ಗೆಲ್ಲಿಸಲಿಲ್ಲ, ಎಂಎಲ್‌ಎ ಇಂದಾಗಿ ಸೋತರು ಎಂದು ಮಾತನಾಡುತ್ತಾರೆ

ಶಾಸಕರ ವಿರುದ್ಧ ಮಾತನಾಡುವವರಿಗೆ ಕಠಿಣ ಕ್ರಮವಾಗಲಿ

ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಿರುವ ಶಾಸಕರ ವಿರುದ್ಧ ನಾಲಿಗೆ ಹರಿಯಬಿಟ್ಟ ಮುಖಂಡರಿಗೆ ಕಾರಣ ಕೇಳಿ ನೋಟೀಸು ಜಾರಿ ಮಾಡಿರುವ ಕ್ರಮವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ನಾನು ಸ್ವಾಗತಿಸುತ್ತೇನೆ ಎಂದು ಮಂಡಿಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್ ತಿಳಿಸಿದರು. -

Profile
Ashok Nayak Apr 24, 2026 10:05 PM

ಚಿಕ್ಕಬಳ್ಳಾಪುರ : ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಿರುವ ಶಾಸಕರ ವಿರುದ್ಧ ನಾಲಿಗೆ ಹರಿಯಬಿಟ್ಟ ಮುಖಂಡರಿಗೆ ಕಾರಣ ಕೇಳಿ ನೋಟೀಸು ಜಾರಿ ಮಾಡಿರುವ ಕ್ರಮವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ನಾನು ಸ್ವಾಗತಿಸುತ್ತೇನೆ ಎಂದು ಮಂಡಿಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್ ತಿಳಿಸಿದರು.

ನಗರದ ಕೆಪಿಸಿಸಿ(KPCC) ಪಕ್ಷದ ಜಿಲ್ಲಾ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ನಾನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಆಯ್ಕೆಯಾದ ಸಂದರ್ಭದಲ್ಲಿ ನಡೆದ ಮೊದಲ ಸಭೆಯಲ್ಲಿ ಭರಣಿ ವೆಂಕಟೇಶ್ ಭಾಗಿಯಾಗಿದ್ದರು. ಆಗಲೇ ಟಿಎಪಿಸಿಎಂಎಸ್ ಚುನಾವಣೆ ಬಂದಿತ್ತು. ಅವುಲ ರೆಡ್ಡಿ ಕೂಡ ಇದ್ದರು. ಚುನಾವಣೆಗೆ ಎಷ್ಟು ಖರ್ಚಾಗಬಹುದು ಎಂದು ಕೇಳಿದವರು,ಅದೇ ಮೊದಲು ಅದೇ ಕೊನೆ ಅವರು ಈ ಕಡೆ ಬರಲೇಯಿಲ್ಲ.ಆವುಲರೆಡ್ಡಿ ಕೂಡ ಬರಲಿಲ್ಲ.ಈಗ ನೋಡಿದರೆ ಯಾವ ಅಭ್ಯರ್ಥಿಯನ್ನು ಗೆಲ್ಲಿಸಲಿಲ್ಲ, ಎಂಎಲ್‌ಎ ಇಂದಾಗಿ ಸೋತರು ಎಂದು ಮಾತನಾಡುತ್ತಾರೆ ಎಂದು ದೂರಿದರು.

ಇದನ್ನೂ ಓದಿ: Chikkaballapur News: ನನ್ನ ವಿರುದ್ಧ ನಿಂತು ಜಿಲ್ಲಾ ಪಂಚಾಯಿತಿ ಸ್ಥಾನ ಗೆಲ್ಲಲಿ ನೋಡೋಣ : ಕಾಕಲ ಚಿಂತೆ ರಾಜಣ್ಣ ಸವಾಲು

ಉಸ್ತುವಾರಿ ಅಭಿಷೇಕ್ ದತ್ತಾ ಅವರು ಚಿಕ್ಕಬಳ್ಳಾಪುರಕ್ಕೆ ಬಂದಿದ್ದಾಗ ಅವರ ಎದುರೇ ಭರಣಿ ವೆಂಕಟೇಶ್ ಅವರ ತಂಡ ನನ್ನ ವಿರುದ್ಧ ತಿರುಗಿಬಿದ್ದು ಆಡದ ಮಾತಿಲ್ಲ,ಅದಕ್ಕೆ ಸಾಕ್ಷಿ ಅಭಿಷೇಕ್ ದತ್ತಾ ಅವರೇ ಇದ್ದರು.ಆವತ್ತು ಮಾರಾಮಾರಿ ಆಗಬೇಕಿತ್ತು. ಅವರು ಸಮಾಧಾನ ಮಾಡಿ ಕಳಿಸಿ ದರು.

ಅದಾದ ನಂತರ ಏ.21ರಂದು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯ ಉದ್ದಕ್ಕೂ ಪ್ರದೀಪ್ ಈಶ್ವರ್ ಅವರಿಗೆ ಅವಹೇಳನ ಮಾಡಿ ಮಾತನಾಡುತ್ತಾರೆ. ಶಾಸಕರು ಪಕ್ಷ ಕಟ್ಟುವ ಕೆಲಸಕ್ಕೆ ಮುಂದಾದಾಗಲೆಲ್ಲಾ ಅವರು ಹಿನ್ನಡೆ ಮಾಡುತ್ತಲೇ ಬಂದಿದ್ದಾರೆ. ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮ ಬೇಡವೆಂದೇ ಇವರು ಒತ್ತಿ ಹೇಳಿ ಪ್ರತಿರೋಧ ಒಡ್ಡಿದರು.ಪ್ರತಿ ಅವಧಿಯಲ್ಲಿ ಪಕ್ಷದ ಕೆಲಸಗಳಿಗೆ ಅಡ್ಡಿಪಡಿಸುತ್ತಲೇ ಬಂದಿದ್ದಾರೆ. ಇವರಿಂದ ಮುಂದಿನ ದಿನಗಳಲ್ಲಿ ಕಂಟಕವಿದೆ ಎಂದು ಘಂಟಾಘೋಷವಾಗಿ ಹೇಳುತ್ತೇನೆ.ಮೊನ್ನೆಯ ಪ್ರೆಸ್ ಮೀಟ್‌ನಲ್ಲಿ 2028ಕ್ಕೆ ಕಾಂಗ್ರೆಸ್ ಪಕ್ಷವನ್ನು ಸೋಲಿಸುತ್ತೇವೆ ಎಂದು ಹೇಳಿದ್ದಾರೆ ಎಂದರು.

ಶಾಸಕರ ಬಗ್ಗೆ ಪಕ್ಷದ ಸಂಘಟನೆ ಬಗ್ಗೆ ಆಡಿರುವ ಎಲ್ಲಾ ಮಾತುಗಳ ವಿಡಿಯೋಗಳನ್ನು ಪತ್ರಿಕಾ ಪ್ರಕಟಣೆಗಳನ್ನು ಪಕ್ಷದ ಮುಖಂಡರಿಗೆ ಕಳಿಸಿಕೊಡಲಾಗಿದೆ. ಅದರಂತೆ ಅವರು ಕ್ರಮಕ್ಕೆ ನೋಟೀಸು ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಕೆ.ಆರ್.ರಾಜಣ್ಣ ನಮ್ಮ ಪಕ್ಷಕ್ಕೆ ಬಂದು ಕೇವಲ 6 ತಿಂಗಳಾಗಿದೆ. ಸಚಿವರ ದಯಾ ಭಿಕ್ಷೆಯಿಂದ ಅವರಿಗೆ ಚಿಮುಲ್‌ನಲ್ಲಿ ನಾಮನಿರ್ದೇಶನ ಸದಸ್ಯತ್ವ ನೀಡಿರಬಹುದು.ನಿಮಗೆ ಇದನ್ನು ಕೊಟ್ಟಿರು ವುದು ಪಕ್ಷದ ಬಲವರ್ಧನೆಗೆ ಸಹಕಾರ ಮಾಡಿ ಎಂದೇ ಆಗಿದೆ. ಅದು ಬಿಟ್ಟು ನೀವು ಶಾಸಕರ ವಿರುದ್ದ ಪಕ್ಷದ ವಿರುದ್ದ ಮಾತನಾಡಿ ಎಂದಲ್ಲ. ರಾಜಣ್ಣ ಅವರೇ ನಮ್ಮ ಪಕ್ಷಕ್ಕೆ ನಿಮ್ಮಕೊಡುಗೆ ಏನಿದೆ ತಿಳಿಸಿ?ಸಚಿವರು ಏನಾದರೂ ಶಾಸಕರ ವಿರುದ್ಧ ಮಾತನಾಡಿ ಎಂದು ಕಳಿಸಿದ್ದಾರಾ? ಏನು ಮಾತನಾಡುತ್ತಿದ್ದೀರಿ ನೀವು ಬಂದು, ಎಚ್ಚರಿಕೆ ಕೊಡುತ್ತಿದ್ದೀರಿ. 2023ರ ಚುನಾವಣೆಯಲ್ಲಿ ನೀವು ನಮಗೆ ವಿರೋಧಿಸ್ಥಾನದಲ್ಲಿಯೇ ಇದ್ದಿರಿ. ಮಂಡಿಕಲ್ ಹೋಬಳಿಯಲ್ಲಿ ಹೀಗಿದ್ದಾಗಲೇ ನಾವು ಗೆದ್ದಿದ್ದೇವೆ.ನಮ್ಮ ಪಕ್ಷದಲ್ಲಿ ಇದ್ದುಕೊಂಡು ಪಕ್ಷ ಪಕ್ಷದ ನಾಯಕರಿಗೆ ಮುಜುಗರ ಆಗುವಂತೆ ನಡೆದುಕೊಂಡಿದ್ದೀರಿ. ಹೀಗಾಗಿ ಹೈಕಮಾಂಡ್ ಇಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು  ವರಿಷ್ಟರಿಗೆ ದೂರು ನೀಡಿ ಒತ್ತಾಯಿಸುತ್ತೇನೆ ಎಂದರು.

ಚಿಕ್ಕಬಳ್ಳಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್‌ ರೆಡ್ಡಿ ಮಾತನಾಡಿ, ಹಿರಿಯ ನಾಯಕರು ನಮಗೆ ಮಾರ್ಗದರ್ಶನ ಮಾಡಬೇಕು.ನಮ್ಮಂತಹ ಕಿರಿಯರನ್ನು ಜತೆಗಿಟ್ಟುಕೊಂಡು ಪಕ್ಷ ಸಂಘಟನೆ ಮಾಡುವ ಬದಲು ಮುಜುಗರ ಬರುವಂತೆ ಮಾಡುತ್ತಿದ್ದಾರೆ. ಹಾದಿ ಬೀದಿಯಲ್ಲಿ ಪಕ್ಷ ಪಕ್ಷದ ಮುಖಂಡರಿಗೆ ಇರಿಸು ಮುರುಸು ಆಗುವಂತೆ ಮಾಡಲಾಗಿದೆ. ಪಕ್ಷ ಪಕ್ಷದ ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವುದು, ಮಾತನಾಡುವುದು ಪಕ್ಷ ದ್ರೋಹದ ಕೆಲಸ ಎಂದು ನನ್ನ ಭಾವನೆ. ಕೆಪಿಸಿಸಿ ಹಿರಿಯರು ಹೇಳಿದಂತೆ ಪಕ್ಷದ ಶಿಸ್ತನ್ನು ಉಲ್ಲಂಘಿಸಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಕೆಪಿಸಿಸಿಗೆ ಪತ್ರ ನೀಡಲಾಗುವುದು ಎಂದರು.