ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gudibande News: ದಲಿತ ಸಂಘಟನೆಗಳ ಒಕ್ಕೂಟದಿಂದ ಜಾಗೃತಿ ಪಾದಯಾತ್ರೆ: ಭೀಮ-ಅಕ್ಷರ ಜ್ಯೋತಿಗೆ ಅದ್ಧೂರಿ ಚಾಲನೆ

ದೀನ ದಲಿತರ ಅಕ್ಷರ ಹಕ್ಕಿಗಾಗಿ ಇಂತಹ ಜಾಗೃತಿ ಕಾರ್ಯಕ್ರಮಗಳು ಇಂದಿನ ಅಗತ್ಯವಾಗಿದೆ. ಗೌರಿಬಿದನೂರು ತಾಲ್ಲೂಕಿನಲ್ಲಿ ಎರಡನೇ ಬಾರಿಗೆ ಕೋರೇಗಾಂವ್ ವಿಜಯೋತ್ಸವ ಆಯೋಜಿಸ ಲಾಗಿದ್ದು, ಇದು ಜನರಲ್ಲಿ ಸಂವಿಧಾನಾತ್ಮಕ ಮೌಲ್ಯಗಳನ್ನು ಬಿತ್ತಲಿದೆ. ಅಷ್ಟೇಅಲ್ಲದೇ, ಡಾ. ಬಿ.ಆರ್. ಅಂಬೇಡ್ಕರ್ ಅವರು ಕೋರೇಗಾಂವ್ ಯುದ್ಧದ ಮಹತ್ವವನ್ನು ಸಾರಿದ ಹಿನ್ನೆಲೆ ಯಲ್ಲಿ, ಮಹರ್ ರೆಜಿಮೆಂಟ್‌ನ 22 ವೀರಯೋಧರ ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಈ ವಿಜಯೋತ್ಸವ ಆಚರಿಸಲಾಗುತ್ತಿದೆ

ದಲಿತ ಸಂಘಟನೆಗಳ ಒಕ್ಕೂಟದಿಂದ ಜಾಗೃತಿ ಪಾದಯಾತ್ರೆ

ಭೀಮಾ ಕೋರೇಗಾಂವ್ ವಿಜಯೋತ್ಸವದ ಜಾಗೃತಿ ಮೂಡಿಸುವ ಸಲುವಾಗಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಭೀಮ–ಅಕ್ಷರ ಜ್ಯೋತಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. -

Ashok Nayak
Ashok Nayak Jan 17, 2026 10:54 PM

ಗುಡಿಬಂಡೆ: ಭೀಮಾ ಕೋರೇಗಾಂವ್ ವಿಜಯೋತ್ಸವದ ಸ್ಮರಣಾರ್ಥ ಹಾಗೂ ಜನರಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವ ಸಲುವಾಗಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ಭೀಮ–ಅಕ್ಷರ ಜ್ಯೋತಿ ಪಾದಯಾತ್ರೆಗೆ ಅದ್ಧೂರಿ ಚಾಲನೆ ನೀಡಲಾಯಿತು.

ತಾಲ್ಲೂಕಿನ ಎಲ್ಲೋಡು ಗ್ರಾಮದ ದಿವಂಗತ ಹಿರಿಯ ಮುಖಂಡ ಆಂಜಿನಪ್ಪ ಅವರ ಸಮಾಧಿ ಸ್ಥಳದಲ್ಲಿ ಭೀಮ ಮತ್ತು ಅಕ್ಷರ ಜ್ಯೋತಿಯನ್ನು ಬೆಳಗುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಪಾದಯಾತ್ರೆಯ ಆರಂಭದಲ್ಲಿ ದಿವಂಗತ ಎನ್. ಅಂಜನಪ್ಪ ಅವರನ್ನು ಸ್ಮರಿಸಿ, ಅವರಿಗೆ ಭಾವನಾತ್ಮಕ ಗೀತೆಗಳ ಮೂಲಕ ಗೌರವ ಸಮರ್ಪಿಸಲಾಯಿತು. ವಾಟದಹೊಸಹಳ್ಳಿ ಗ್ರಾಮದಿಂದ ಪ್ರಾರಂಭವಾದ ಪಾದಯಾತ್ರೆಯು ಮುದಲೋಡು ಗ್ರಾಮದತ್ತ ಸಾಗಿತು.

ಇದನ್ನೂ ಓದಿ: Gudibande News: ತೆರಿಗೆ ಪಾವತಿಸದಿದ್ದರೆ ಸೌಲಭ್ಯ ಕಡಿತ; ಲೇಔಟ್ ಮಾಲೀಕರಿಗೆ ಪಿಡಿಒ ಎಚ್ಚರಿಕೆ

ಈ ವೇಳೆ ಮಾತನಾಡಿದ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಆರ್. ಸತ್ಯನಾರಾಯಣ, ದೀನ ದಲಿತರ ಅಕ್ಷರ ಹಕ್ಕಿಗಾಗಿ ಇಂತಹ ಜಾಗೃತಿ ಕಾರ್ಯಕ್ರಮಗಳು ಇಂದಿನ ಅಗತ್ಯವಾಗಿದೆ. ಗೌರಿಬಿದನೂರು ತಾಲ್ಲೂಕಿನಲ್ಲಿ ಎರಡನೇ ಬಾರಿಗೆ ಕೋರೇಗಾಂವ್ ವಿಜಯೋತ್ಸವ ಆಯೋಜಿಸ ಲಾಗಿದ್ದು, ಇದು ಜನರಲ್ಲಿ ಸಂವಿಧಾನಾತ್ಮಕ ಮೌಲ್ಯಗಳನ್ನು ಬಿತ್ತಲಿದೆ. ಅಷ್ಟೇ ಅಲ್ಲದೇ, ಡಾ. ಬಿ.ಆರ್. ಅಂಬೇಡ್ಕರ್ ಅವರು ಕೋರೇಗಾಂವ್ ಯುದ್ಧದ ಮಹತ್ವವನ್ನು ಸಾರಿದ ಹಿನ್ನೆಲೆ ಯಲ್ಲಿ, ಮಹರ್ ರೆಜಿಮೆಂಟ್‌ನ 22 ವೀರಯೋಧರ ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಈ ವಿಜಯೋ ತ್ಸವ ಆಚರಿಸಲಾಗುತ್ತಿದೆ ಎಂದು ವಿವರಿಸಿದರು.

ಮೂರು ದಿನಗಳ ಕಾಲ ಗೌರಿಬಿದನೂರು ತಾಲ್ಲೂಕಿನ ವಿವಿಧ ಹಳ್ಳಿಗಳ ಮೂಲಕ ಹಾದುಹೋಗುವ ಈ ಪಾದಯಾತ್ರೆಯು, ಶಿಕ್ಷಣದ ಮಹತ್ವದ ಜೊತೆಗೆ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ ಜೀವನ ಮತ್ತು ಅಪ್ರತಿಮ ಸೇವೆಯ ಬಗ್ಗೆ ಗ್ರಾಮೀಣ ಜನರಲ್ಲಿ ಅರಿವು ಮೂಡಿಸುವ ಗುರಿ ಹೊಂದಿದೆ.

ಈ ಸಮಯದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಸಿ. ಚನ್ನಪ್ಪ, ಹಿರಿಯ ವಕೀಲ ಬಿ.ಕೆ. ನರಸಿಂಹಮೂರ್ತಿ, ಸನಂದಪ್ಪ, ಅಶ್ವತ್ಥಮ್ಮ, ರಾಮಾಂಜಿನಮ್ಮ, ಗಂಗಪ್ಪ, ನಾರಾಯಣ ಸ್ವಾಮಿ, ಲಚ್ಚಿ, ಗಂಗಣ್ಣ, ಟಿ. ಬಾಲಯ್ಯ, ಬಾಲಾಜಿ, ಗೋಪಾಲ, ಅಶ್ವತ್, ವೆಂಕಟೇಶ್, ಕಿರಣ್, ನಾಗರಾಜು, ಮೂರ್ತಿ ಸೇರಿದಂತೆ ಗುಡಿಬಂಡೆ ಮತ್ತು ಗೌರಿಬಿದನೂರು ತಾಲ್ಲೂಕಿನ ನೂರಾರು ದಲಿತ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.