KH Puttaswamy Gowda: ತವರು ಮನೆಯ ಅಣ್ಣನಂತೆ ಮಹಿಳೆಯರಿಗೆ ಬಾಗಿನ: ಶಾಸಕ ಪುಟ್ಟಸ್ವಾಮಿಗೌಡ
ಕಳೆದ ಮೂರು ವರ್ಷಗಳಲ್ಲಿ ತಾಲೂಕಿನಾದ್ಯಂತ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳ ಲಾಗಿದೆ. ಗ್ರಾಮೀಣ ಭಾಗದಲ್ಲಿ ರಸ್ತೆ, ಚರಂಡಿ, ಹೈಮಾಸ್ಟ್ ದೀಪ, ಶುದ್ಧ ಕುಡಿಯುವ ನೀರಿನ ಘಟಕ, ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಮುಂದಿನ ಐದಾರು ತಿಂಗಳಲ್ಲಿ ತಾಲೂಕಿನ ಬಹುತೇಕ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸ ಲಾಗುವುದು ಎಂದು ತಿಳಿಸಿದರು
-
ಗೌರಿಬಿದನೂರು: ಗೌರಿ–ಗಣೇಶ ಹಬ್ಬದ ಸಂದರ್ಭದಲ್ಲಿ ಅಕ್ಕ–ತಂಗಿಯರಿಗೆ ತವರು ಮನೆಯ ಅಣ್ಣ–ತಮ್ಮಂದಿರು ಅರಿಶಿಣ–ಕುಂಕುಮ, ಬಳೆ, ಸೀರೆ ಸೇರಿದಂತೆ ಬಾಗಿನ ನೀಡಿ ಆಶೀರ್ವಾದ ಪಡೆಯುವುದು ನಮ್ಮ ನಾಡಿನ ಬಹುಕಾಲದ ಸಂಪ್ರದಾಯ. ಅದರಂತೆ ಕ್ಷೇತ್ರದ ಸೋದರಿಯರಿಗೆ ಪ್ರತಿವರ್ಷದಂತೆ ಈ ಬಾರಿಯೂ ಸೀರೆ ಸಮೇತ ಬಾಗಿನ ನೀಡುವ ಮೂಲಕ ಅವರ ಆಶೀರ್ವಾದ ಪಡೆಯುತ್ತಿದ್ದೇನೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ(MLA KH Puttaswamy Gowda) ಹೇಳಿದರು.
ತಾಲೂಕಿನ ನಗರಗೆರೆ ಗ್ರಾಮದಲ್ಲಿ ಮಹಿಳೆಯರಿಗೆ ಸೀರೆ ಸಮೇತ ಬಾಗಿನ ವಿತರಿಸಿ ಮಾತನಾಡಿದರು.
ಗೌರಿ ಹಬ್ಬದ ಸಂದರ್ಭದಲ್ಲಿ ಪ್ರತಿಯೊಬ್ಬ ಮಹಿಳೆಯೂ ತವರು ಮನೆಯಿಂದ ಸಹೋದರರು ತಂದುಕೊಡುವ ಬಾಗಿನವನ್ನು ನಿರೀಕ್ಷಿಸುತ್ತಾರೆ. ಆದರೆ ಕೆಲ ಮಹಿಳೆಯರಿಗೆ ತಂದೆ–ತಾಯಿ ಹಾಗೂ ಸಹೋದರರು ಇಲ್ಲದ ಕಾರಣ ತವರು ಮನೆಯ ಬಾಗಿನ ಸಿಗುವುದಿಲ್ಲ. ಅಂತಹ ಮಹಿಳೆಯರು ಹಬ್ಬದ ಸಂದರ್ಭದಲ್ಲಿ ನೋವು ಅನುಭವಿಸಬಾರದು ಎಂಬ ಉದ್ದೇಶದಿಂದ, ಕ್ಷೇತ್ರದ ತಾಯಂದಿ ರಿಗೆ ನೀಡಿದ ಮಾತಿನಂತೆ ಪ್ರತಿ ವರ್ಷ ಅರಿಶಿಣ–ಕುಂಕುಮ ಸಮೇತ ಗೌರಿ–ಗಣೇಶ ಹಬ್ಬದ ಉಡುಗೊರೆಯಾಗಿ ಬಾಗಿನ ನೀಡುತ್ತಿದ್ದೇನೆ ಎಂದರು.
ಇದನ್ನೂ ಓದಿ: K H Puttaswamy Gowda: ಕೆಪಿಎಸ್ ಶಾಲೆಗೆ ಶಾಸಕರಿಂದ ಎರಡು ಬಸ್‌ಗಳ ಕೊಡುಗೆ
ಕಳೆದ ಮೂರು ವರ್ಷಗಳಲ್ಲಿ ತಾಲೂಕಿನಾದ್ಯಂತ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಗ್ರಾಮೀಣ ಭಾಗದಲ್ಲಿ ರಸ್ತೆ, ಚರಂಡಿ, ಹೈಮಾಸ್ಟ್ ದೀಪ, ಶುದ್ಧ ಕುಡಿಯುವ ನೀರಿನ ಘಟಕ, ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಮುಂದಿನ ಐದಾರು ತಿಂಗಳಲ್ಲಿ ತಾಲೂಕಿನ ಬಹುತೇಕ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸ ಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ತಿಪ್ಪೇನಾಯಕ್, ಮುಖಂಡರಾದ ಆರ್.ಆರ್.ರೆಡ್ಡಿ, ನಾಗೇಂದ್ರ, ಮುರುಳೀಗೌಡ, ವಿವೇಕಾನಂದರೆಡ್ಡಿ, ಕೃಷ್ಣಪ್ಪ, ನವೀನ್, ನಾಗರೆಡ್ಡಿ, ಅಸ್ಲಾಂ, ಪ್ರತಾಪ್, ನಂದೀಶ್, ಮಂಜುನಾಥ್, ಗಂಗರೆಡ್ಡಿ, ತೇಜು, ಪ್ರದೀಪ್, ನಾರಾಯಣಸ್ವಾಮಿ, ವೆಂಕಟರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.