ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

JDU: ಯುವಕರ ಬೆಂಬಲಕ್ಕೆ ಕರೆ: ಪದವೀಧರರ ಕ್ಷೇತ್ರದಲ್ಲಿ ನಾಗರಾಜು ಸಕ್ರಿಯ ಪ್ರಚಾರ

ಜೆಡಿಯು ಪಕ್ಷದ ತತ್ವಗಳು, ಅಭಿವೃದ್ಧಿ ಪರ ಕಾರ್ಯಕ್ರಮಗಳು ಹಾಗೂ ಪದವೀಧರರ ಕಲ್ಯಾಣ ಕ್ಕಾಗಿ ರೂಪಿಸಲಾದ ಯೋಜನೆಗಳನ್ನು ಮನೆಮಾತಾಗಿಸುವ ಉದ್ದೇಶದಿಂದ ಕ್ಷೇತ್ರದಾದ್ಯಂತ ತೀವ್ರ ಮತ ಯಾಚನೆ ನಡೆಸಲಾಗುತ್ತಿದೆ. ಪ್ರತಿ ಭಾಗದಲ್ಲೂ ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ

ಯುವಕರ ಬೆಂಬಲಕ್ಕೆ ಕರೆ: ಪದವೀಧರರ ಕ್ಷೇತ್ರದಲ್ಲಿ ನಾಗರಾಜು ಸಕ್ರಿಯ ಪ್ರಚಾರ

ಆಗ್ನೇಯ ಪದವೀಧರರ ಕ್ಷೇತ್ರದ ಸಮಗ್ರ ಅಭಿವೃದ್ಧಿ, ಪದವೀಧರರ ಉದ್ಯೋಗಾವಕಾಶಗಳ ಹೆಚ್ಚಳ ಮತ್ತು ಅವರ ಹಕ್ಕುಗಳ ರಕ್ಷಣೆಗೆ ತಾನು ಬದ್ಧನಾಗಿದ್ದು, ಈ ನಿಟ್ಟಿನಲ್ಲಿ ನಿರಂತರ ಹೋರಾಟ ನಡೆಸುವುದಾಗಿ ಜೆಡಿಯು ಪದವೀಧರರ ಆಕಾಂಕ್ಷಿ ಡಾ.ಎಂ.ನಾಗರಾಜು ತಿಳಿಸಿದ್ದಾರೆ. -

Profile
Ashok Nayak Apr 8, 2026 10:28 PM

ಶಿಡ್ಲಘಟ್ಟ: ಆಗ್ನೇಯ ಪದವೀಧರರ ಕ್ಷೇತ್ರದ ಸಮಗ್ರ ಅಭಿವೃದ್ಧಿ, ಪದವೀಧರರ ಉದ್ಯೋಗಾವ ಕಾಶಗಳ ಹೆಚ್ಚಳ ಮತ್ತು ಅವರ ಹಕ್ಕುಗಳ ರಕ್ಷಣೆಗೆ ತಾನು ಬದ್ಧನಾಗಿದ್ದು, ಈ ನಿಟ್ಟಿನಲ್ಲಿ ನಿರಂತರ ಹೋರಾಟ ನಡೆಸುವುದಾಗಿ ಜೆಡಿಯು ಪದವೀಧರರ ಆಕಾಂಕ್ಷಿ ಡಾ.ಎಂ.ನಾಗರಾಜು( JDU graduate aspirant Dr. M. Nagaraju) ತಿಳಿಸಿದ್ದಾರೆ.

cbpm7k (1)

ನಗರದ ಪ್ರವಾಸಿ ಮಂದಿರದಲ್ಲಿ ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಜ. ಪಾಟೀಲ್(JDU state president Mahima J. Patil) ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಪದವೀಧರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ತನ್ನ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು. ಮತದಾರರ ನೋಂದಣಿ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಯುವಕರು ಹಾಗೂ ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: Shidlaghatta News: ತಾಲ್ಲೂಕು ಕಚೇರಿಯಲ್ಲಿ ಜಗಜೀವನ ರಾಮ್ ಜಯಂತಿ ಆಚರಣೆ

ಜೆಡಿಯು ಪಕ್ಷದ ತತ್ವಗಳು, ಅಭಿವೃದ್ಧಿ ಪರ ಕಾರ್ಯಕ್ರಮಗಳು ಹಾಗೂ ಪದವೀಧರರ ಕಲ್ಯಾಣ ಕ್ಕಾಗಿ ರೂಪಿಸಲಾದ ಯೋಜನೆಗಳನ್ನು ಮನೆಮಾತಾಗಿಸುವ ಉದ್ದೇಶದಿಂದ ಕ್ಷೇತ್ರದಾದ್ಯಂತ ತೀವ್ರ ಮತಯಾಚನೆ ನಡೆಸಲಾಗುತ್ತಿದೆ. ಪ್ರತಿ ಭಾಗದಲ್ಲೂ ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಗಂಗೂರ್, ಕೆ.ಆರ್.ರಂಗನಾಥನ್, ಡಿ.ಜೆ. ಪ್ರಭು, ಕೆ.ವಿ. ಶಿವರಾಮ್, ರಮೇಶ್ ಗೌಡ, ಕಲಾವತಿ, ಶಾಂತಕುಮಾರಿ, ನಿರ್ಮಲಾ, ನೇತ್ರಾ ಗೌಡ, ನಾರಾಯಣಸ್ವಾಮಿ ಗೌಡ, ಯಾರಬ್, ಮಾನವ ಹಕ್ಕುಗಳ ಪ್ರಧಾನ ಕಾರ್ಯದರ್ಶಿ ನಿತಿನ್, ಮನೋಜ್, ಸೂರಿ, ಪಾಲಾಕ್ಷಪ್ಪ, ಶಿವಣ್ಣ, ಶಿವಯ್ಯ, ಮನು, ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

image

“ಜೆಡಿಯು ಪಕ್ಷವು ಸದಾ ಪದವೀಧರರ ಹಿತಾಸಕ್ತಿಗಳು, ಅವರ ಉದ್ಯೋಗಾವಕಾಶಗಳ ವಿಸ್ತರಣೆ ಮತ್ತು ಸಮಾಜದಲ್ಲಿ ಅವರ ಪಾತ್ರವನ್ನು ಬಲಪಡಿಸುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಗ್ನೇಯ ಪದವೀಧರರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಡಾ. ಎಂ ನಾಗರಾಜು ಅವರಂತಹ ಸಮರ್ಥ, ಜನಪರ ಅಭ್ಯರ್ಥಿಗೆ ಮತದಾರರು ಹೆಚ್ಚಿನ ಬೆಂಬಲ ನೀಡಬೇಕು,”ಎಂದು ತಿಳಿಸಿದ್ದಾರೆ.

-ಮಹಿಮಾ ಜ. ಪಾಟೀಲ್ ರಾಜ್ಯಾಧ್ಯಕ್ಷ