Chikkaballapur News: ಪೂರ್ಣಪ್ರಜ್ಞಾ ಶಾಲೆಯಲ್ಲಿ ಸಾಂಸ್ಕೃತಿಕ ದಿನಾಚರಣೆ ಕಲರವ: ವೇಷಭೂಷಣಗಳಲ್ಲಿ ಮಿಂಚಿದ ಗುರು ಶಿಷ್ಯರು
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಾಜಸ್ಥಾನ, ಪಂಜಾಬ್, ಉತ್ತರಪ್ರದೇಶ, ಛತ್ತೀಸ್‌ಗಡ, ಕರ್ನಾಟಕ, ತೆಲಂಗಾಣ, ತಮಿಳುನಾಡು ಇತ್ಯಾದಿ ರಾಜ್ಯಗಳ ಉಡುಗೆ ತೊಡುಗೆಗಳನ್ನು ಮಕ್ಕಳಿಗೆ ಹಾಕುವ ಮೂಲಕ ಅವರಲ್ಲಿ ದೇಶ ಪ್ರೇಮವನ್ನು ಬಿತ್ತಲಾಗುತ್ತದೆ.ಕಾರಣ ಈ ನೆಲದ ಸೊಗಡನ್ನು ಅವರಿಗೆ ಉಣಬಡಿಸು ವುದೇ ಆಗಿದೆ ಎನ್ನುವುದು ಪೂರ್ಣಪ್ರಜ್ಞಾ ಶಾಲೆಯ ಅಧ್ಯಕ್ಷ ವೆಂಕಟೇಶ್ ಅವರ ಮಾತಾಗಿದೆ.

ಪೂರ್ಣಪ್ರಜ್ಞಾ ಶಾಲೆಯಲ್ಲಿ ನಡೆದ ಯತ್ನಿಕ್ ಡೇ ಚಿತ್ರಗಳು ಮತ್ತು ಮಕ್ಕಳಿಂದ ಮೂಡಿಬಂದ ನೃತ್ಯದ ಚಿತ್ರ.. -

ಚಿಕ್ಕಬಳ್ಳಾಪುರ: ದೀಪಾವಳಿಯ ಹಬ್ಬದ ಈ ಸರಿ ಹೊತ್ತಿನಲ್ಲಿ ನಗರದ ಪೂರ್ಣಪ್ರಜ್ಞಾ ಶಾಲೆ ಯಲ್ಲಿ ಸಾಂಸ್ಕೃತಿಕ ದಿನಾಚರಣೆ ಕಲರವ ಮೇಳೈಸಿದ್ದು ವಿವಿಧತೆಯಲ್ಲಿ ಏಕತೆ ಸಾರುವ ವೇಷ ಭೂಷಣಗಳಲ್ಲಿ ಮಕ್ಕಳು ಮತ್ತು ಶಿಕ್ಷಕರು ಮಿಂಚಿದ್ದು ಮಾತ್ರ ಪೋಷಕರ ಆನಂದವನ್ನು ಇಮ್ಮಡಿ ಗೊಳಿಸಿತ್ತು.
ಹೌದು ಇತ್ತೀಚೆಗೆ ಶಾಲಾ-ಕಾಲೇಜುಗಳಲ್ಲಿ ಯತ್ನಿಕ್‌ಡೇ ಹೆಸರಿನಲ್ಲಿ ಮಕ್ಕಳಿಗೆ ವೇಷ ಭೂಷಣ ಗಳನ್ನು ತೊಡಿಸಿ ಕುಣಿಸುವ ಮೂಲಕ ತಾವೂ ಕುಣಿಯುವುದು ಸಾಮಾನ್ಯ ಎಂಬಂತಾಗಿದೆ. ಆ ಮೂಲಕ ಭಾರತ ದೇಶದ ಸೌಹಾರ್ದ ಪರಂಪರೆಗೆ ಮಕ್ಕಳನ್ನು ಪರಿಚಯಿಸುವುದು ಇದರ ಉದ್ದೇಶವಾಗಿದೆ.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಾಜಸ್ಥಾನ, ಪಂಜಾಬ್, ಉತ್ತರಪ್ರದೇಶ, ಛತ್ತೀಸ್‌ಗಡ, ಕರ್ನಾಟಕ, ತೆಲಂಗಾಣ, ತಮಿಳುನಾಡು ಇತ್ಯಾದಿ ರಾಜ್ಯಗಳ ಉಡುಗೆ ತೊಡುಗೆಗಳನ್ನು ಮಕ್ಕಳಿಗೆ ಹಾಕುವ ಮೂಲಕ ಅವರಲ್ಲಿ ದೇಶ ಪ್ರೇಮವನ್ನು ಬಿತ್ತಲಾಗುತ್ತದೆ.ಕಾರಣ ಈ ನೆಲದ ಸೊಗಡನ್ನು ಅವರಿಗೆ ಉಣಬಡಿಸುವುದೇ ಆಗಿದೆ ಎನ್ನುವುದು ಪೂರ್ಣಪ್ರಜ್ಞಾ ಶಾಲೆಯ ಅಧ್ಯಕ್ಷ ವೆಂಕಟೇಶ್ ಅವರ ಮಾತಾಗಿದೆ.
ಇದನ್ನೂ ಓದಿ: Chikkaballapur News: ನವವಿವಾಹಿತೆ ಸಾವಿಗೆ ಅಂಗನವಾಡಿ ಕಾರ್ಯಕರ್ತೆಯೇ ಕಾರಣವೆಂದು ಆರೋಪಿಸಿದ ಪೋಷಕರು
ಕಾರ್ಯಕ್ರಮದ ನಡುವೆ ಮಾಧ್ಯಮದೊಂದಿಗೆ ಮಾತನಾಡಿದ ಸಂಸ್ಥಾಪಕ ಕಾರ್ಯದರ್ಶಿ ಶೈಲಜಾ ವೆಂಕಟೇಶ್ ದೀಪಾವಳಿ ಬೆಳಕಿನ ಹಬ್ಬವಾದರೆ, ಯತ್ನಿಕ್ ಡೇ ದೇಶದ ಸೌಹಾರ್ದ ಪರಂಪರೆ ಸಾರುವ ಹಬ್ಬವಾಗಿದೆ. ನಮ್ಮ ಶಾಲೆಯು ಪಠ್ಯದ ಚಟುವಟಿಕೆಗಷ್ಟೇ ಸೀಮಿತವಾಗಿಲ್ಲ. ಸಾಹಿತ್ಯ ಸಂಸ್ಕೃತಿ ಕ್ರೀಡೆಗಳ ಪ್ರೋತ್ಸಾಹಕ್ಕೂ ಹೆಚ್ಚಿನ ಮನ್ನಣೆ ನೀಡಲಾಗಿದೆ. ಇಂದು ನಡೆದ ಯತ್ನಿಕ್ ಡೇ ಕಾರ್ಯ ಕ್ರಮದಲ್ಲಿ ಮಕ್ಕಳು ನವೀನ ವೇಷಭೂಷಣಗಳೊಂದಿಗೆ ಕಂಗೊಳಿಸಿದ್ದು ಪೋಷಕರು ಮತ್ತು ಸಂಸ್ಥೆಗೆ ಸಂತೋಷ ತಂದಿದೆ ಎಂದರು.
ಶಾಲೆಯ ಪ್ರಾಂಶುಪಾಲೆ ರಾಧಿಕಾ ಮಾತನಾಡಿ ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಸರ್ವತೋಮುಖ ಬೆಳವಣಿಗೆ ಆಗಬೇಕಾದರೆ ದೇಶದ ಭಾಷೆ ಸಾಹಿತ್ಯ ಸಂಸ್ಕೃತಿ ಆಹಾರ ಕೊಡುಗೆಗಳ ಪರಿಚಯ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಯತ್ನಿಕ್ ದೇ ಅತ್ಯಂತ ಯಶಸ್ವಿಯಾಗಿ ಮುಗಿದಿದೆ ಎಂದರು.
ಹತ್ತನೇ ತರಗತಿ ವಿದ್ಯಾರ್ಥಿನಿ ಸುಶ್ಮಿತಾ ಮಾತನಾಡಿ ನಮ್ಮ ಶಾಲೆಯಲ್ಲಿ ಈದಿನ ಏರ್ಪಡಿಸಿದ್ದ ಸಾಂಸ್ಕೃತಿಕ ಹಬ್ಬವು ನಮಗೆ ಅಪಾರ ಸಂತೋಷ ತಂದಿದೆ.ಯೂನಿಫಾರA ಹೊರತುಪಡಿಸಿ ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ಹಾಡಿನ ಲಯಕ್ಕೆ ತಕ್ಕಂತೆ ಕುಣಿಯುವ ಮೂಲಕ ಓದಿನ ಏಕತಾನತೆಗೆ ಬಿಡುಗಡೆ ಸಿಕ್ಕಿತು.ಸ್ನೇಹಿತರೊಡಗೂಡಿ ನಕ್ಕು ನಲಿಯುವುದು ಜೀವನ ಪರ್ಯಂತ ನೆನಪಿನಲ್ಲಿ ಉಳಿಯುವಂತಹುದು. ಇದಕ್ಕಾಗಿ ಶಾಲಾಡಳಿತ ಮಂಡಳಿಗೆ ಧನ್ಯವಾದಗಳು ಅರ್ಪಿಸು ತ್ತೇನೆ ಎಂದರು.
ಈ ವೇಳೆ ಕಿಂಡರ್ ಗಾರ್ಡನ್ ಮಕ್ಕಳಿಂದ ಮೊದಲಾಗಿ ಪ್ರೌಢಶಾಲೆಯವರೆಗೆ ಎಲ್ಲರೂ ತಮತಮಗೆ ಇಷ್ಟವಾದ ಹಾಡುಗಳಿಗೆ ಮಾಡಿದ ಸಮೂಹ ನರ್ತನ ಪ್ರೇಕ್ಷಕರ ಮನಸೂರೆಗೊಂಡಿತು. ಈ ವೇಳೆ ಶಿಕ್ಷಕರು, ವಿದ್ಯಾರ್ಥಿಗಳು ಪೋಷಕರು ಹಾಜರಿದ್ದರು.