Gauribidanur News: ತೊಂಡೆಬಾವಿ ಹಾಲು ಡೇರಿಯ ಹಣ ದುರುಪಯೋಗ ಚಿಮುಲ್ ನಿರ್ದೇಶಕ ಜೆ.ಕಾಂತರಾಜು ಬೇಸರ
ತಾಲೂಕಿನ ತೊಂಡೇಬಾವಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರೊಂದಿಗೆ ಹಮ್ಮಿ ಕೊಂಡಿದ್ದ ಸಾರ್ವಜನಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡೇರಿಯಲ್ಲಿ ನಡೆದಿರುವ ಹಣದ ದುರುಪಯೋಗದ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಂಶ ಬಹಿರಂಗಪಡಿಸಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ತೊಂಡೆಬಾವಿ ಹಾಲು ಡೇರಿಯ ಹಣ ದುರುಪಯೋಗದ ಬಗ್ಗೆ ಚಿಮುಲ್ ನಿರ್ದೇಶಕ ಜೆ.ಕಾಂತರಾಜು ಬೇಸರ ವ್ಯಕ್ತಪಡಿಸಿದ್ದು ಕಾರ್ಯದರ್ಶಿ ಚಂದ್ರಶೇಖರ್‌ರೆಡ್ಡಿ ೨,೩೩,೬೯೬ ರೂಗಳಷ್ಟು ಹಣ ದುರುಪಯೋಗ ಮಾಡಿಕೊಂಡಿರುವುದು ಪತ್ತೆಯಾಗಿದ್ದು ಹಣ ವಾಪಸ್ಸು ಕಟ್ಟುವಂತೆ ಸಭೆಯಲ್ಲಿ ತಿಳಿಸಲಾಯಿತು. -
ಕಾರ್ಯದರ್ಶಿ ಚಂದ್ರಶೇಖರ್‌ರೆಡ್ಡಿ 2,33,696 ರೂಗಳಷ್ಟು ಹಣ ದುರುಪಯೋಗ ಮಾಡಿಕೊಂಡಿರುವುದು ಪತ್ತೆ
ಗೌರಿಬಿದನೂರು: ಹಾಲು ಉತ್ಪಾದಕರ ಸಹಕಾರ ಸಂಘವು ರೈತರ ಹಿತಾಸಕ್ತಿಗಾಗಿ ಕಾರ್ಯ ನಿರ್ವಹಿಸಬೇಕಾದ ಸಂಸ್ಥೆಯಾಗಿದ್ದು, ಅದರ ಸಂಪನ್ಮೂಲಗಳು ಮತ್ತು ಹಣಕಾಸು ವ್ಯವಹಾರಗಳು ಪಾರದರ್ಶಕ ವಾಗಿರಬೇಕು. ಸಂಘದ ಆಡಳಿತದಲ್ಲಿ ಯಾವುದೇ ರೀತಿಯ ದುರುಪಯೋಗ ಅಥವಾ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ತೊಂಡೇಬಾವಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜೆ.ಕಾಂತರಾಜು ಹೇಳಿದರು.
ತಾಲೂಕಿನ ತೊಂಡೇಬಾವಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರೊಂದಿಗೆ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡೇರಿಯಲ್ಲಿ ನಡೆದಿರುವ ಹಣದ ದುರುಪಯೋಗದ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಂಶ ಬಹಿರಂಗ ಪಡಿಸಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ರೈತರು ಸಂಘದ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದು ಆಡಳಿತ ಮಂಡಳಿಯ ಜವಾಬ್ದಾರಿಯಾಗಿರುವಂತೆ ಸಂಘದ ಅಭಿವೃದ್ಧಿ ಹಾಗೂ ಹಾಲು ಉತ್ಪಾದನೆ ಹೆಚ್ಚಿಸುವುದೂ ಆಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Gauribidanur News: ಛಾಯಾಗ್ರಾಹಕರು ಸಮಾಜದ ಕಣ್ಣುಗಳಾಗಿ ಕೆಲಸ ಮಾಡುತ್ತಿದ್ದಾರೆ: ಕೆಪಿಎ ರಾಜ್ಯಾಧ್ಯಕ್ಷ ಎಚ್.ಎಸ್.ನಾಗೇಶ್
ಸಂಘವು ಹಾಲು ಉತ್ಪಾದಕರ ಕಲ್ಯಾಣಕ್ಕೆ ಪ್ರಾಮುಖ್ಯತೆ ನೀಡಬೇಕು. ಯಾವುದೇ ಅವ್ಯವಹಾರಕ್ಕೆ ಅವಕಾಶ ನೀಡದೆ ಪ್ರಾಮಾಣಿಕ ಮತ್ತು ಪಾರದರ್ಶಕ ಆಡಳಿತ ನಡೆಸುವ ಮೂಲಕ ಸದಸ್ಯರ ವಿಶ್ವಾಸವನ್ನು ಪಡೆಯಬೇಕಿದೆ ಎಂದರು.
*
ಡೇರಿಯಲ್ಲಿ ಪ್ರತಿನಿತ್ಯ ಸ್ಥಳೀಯ ಮಾರಾಟದ ಹಾಲು ಕಳೆದ 5 ತಿಂಗಳುಗಳಿಂದ ವ್ಯತ್ಯಾಸ ಕಂಡು ಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲಿಸಿದಾಗ 2,33,696 ರೂಗಳಷ್ಟು ಹಣ ದುರುಪಯೋಗವಾಗಿರುವುದು ಬೆಳಕಿಗೆ ಬಂದಿದ್ದು. ಈ ಹಣವನ್ನು ಕಾರ್ಯದರ್ಶಿ ಚಂದ್ರಶೇಖರ ರೆಡ್ಡಿ ದುರುಪಯೋಗ ಪಡಿಸಿರುವುದು ಖಾತರಿಯಾಗಿದ್ದು, ಸ್ವತಃ ಕಾರ್ಯದರ್ಶಿಯೇ ಒಪ್ಪಿಕೊಂಡಿದ್ದಾನೆ. ೧೫ ದಿನಗಳೊಳಗೆ ಈ ಹಣವನ್ನು ಸಹಕಾರ ಸಂಘಕ್ಕೆ ಮರುಪಾವತಿಸಬೇಕು ಎಂದು ತಿಳಿಸಿದ ಅವರು ನಂತರವೇ ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆಯನ್ನು ಪಡೆದು ಕೊಳ್ಳುವುದಾಗಿ ಕಾಂತರಾಜ್ ತಿಳಿಸಿದರು.
*
ಹಣ ದುರುಪಯೋಗದ ವಿಚಾರದಲ್ಲಿ ಸಭೆಯಲ್ಲಿ ಹಾಲು ಉತ್ಪಾದಕರು ಮತ್ತು ನಿರ್ದೇಶಕರುಗಳ ನಡುವೆ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ನಂತದ ಸಂಘದ ಅಧ್ಯಕ್ಷ ಜೆ.ಕಾಂತರಾಜು ಮಧ್ಯಪ್ರವೇಶಿಸಿ ಸಮಸ್ಯೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿ 8 ಸಹಕಾರ ಸಂಘ ಗಳಿಂದ ತೊಂಡೇಬಾವಿ ಬಿಎಂಸಿಗೆ ಪ್ರತಿದಿನ 3300 ಲೀ.ಹಾಲು ಶೇಖರಣೆಯಾಗುತ್ತಿದೆ. ಪ್ರತಿನಿತ್ಯ ತೊಂಡೇಬಾವಿ ಡೇರಿಯಲ್ಲಿ ಮಾರಾಟವಾಗುವ ಹಾಲಿನ ಹಣವನ್ನು ಕಾರ್ಯದರ್ಶಿ ದುರುಪ ಯೋಗ ಮಾಡಿಕೊಂಡಿದ್ದು,ಸದರಿ ಹಣವನ್ನು ವಸೂಲಿ ಮಾಡಿಕೊಂಡು ಕಾರ್ಯದರ್ಶಿಯ ರಾಜಿನಾಮೆಯನ್ನು ಪಡೆದುಕೊಳ್ಳುವುದಾಗಿ ತಿಳಿಸಿದ ಬಳಿಕ ಪರಿಸ್ಥಿತಿ ತಿಳಿಗೊಂಡಿತು.
ತಪ್ಪೊಪ್ಪಿಗೆ: ತೊಂಡೇಬಾವಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಚಂದ್ರ ಶೇಖರರೆಡ್ಡಿ ತಾನು ಸ್ಥಳೀಯವಾಗಿ ಹಾಲು ಮಾರಾಟದ ಹಣವನ್ನು ದುರುಪಯೋಗಿಸಿ ಕೊಂಡಿರುವುದಾಗಿ ತಿಳಿಸಿ 15 ದಿನದೊಳಗೆ ಹಣವನ್ನು ಪಾವತಿ ಮಾಡುವುದಾಗಿ ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಚಿಮುಲ್ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ನರೇಂದ್ರ ಸಿದ್ದಣ್ಣ ಬೂದಿಹಾಳ್ ಮಾತನಾಡಿ, ತೊಂಡೇಬಾವಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದಿರುವ ಸ್ಥಳೀಯ ಹಾಲು ವಹಿವಾಟಿನಲ್ಲಿ ದುರುಪ ಯೋಗವಾಗಿದ್ದು, ಅದನ್ನು ಕಾರ್ಯದರ್ಶಿಯಿಂದ ಮರು ಪಾವತಿಸಿಕೊಂಡು ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು.ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಸಹಕಾರ ಸಂಘದ ನಿರ್ದೇಶಕರು, ಚಿಮುಲ್ ವಿಸ್ತರಣಾಧಿಕಾರಿಗಳು ಹಾಜರಿದ್ದರು.