ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಭೂಮಿ ನೀಡಲು ಸಿದ್ದವಿರುವ ರೈತರ ಭೂಮಿ ಪಡೆದು ಕೈಗಾರಿಕೆ ಸ್ಥಾಪಿಸಿ ಎಂದು ಒತ್ತಾಯ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಶಿಡ್ಲಘಟ್ಟ ತಾಲೂಕು ಸಂಚಾಲಕ ರಾಮಾಂಜಿ ಮಾತನಾಡಿ, ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ನೂರಾರು ರೈತರು ಕೆಐಎಡಿಬಿಗೆ ಕೈಗಾರಿಕೆ ಸ್ಥಾಪಿಸಲು ಭೂಮಿ ಕೊಡಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿದ್ದರೂ ಸರಕಾರವಾಗಲಿ, ಜಿಲ್ಲಾಡಳಿತ ವಾಗಲಿ ಈ ವಿಚಾರದಲ್ಲಿ ಕ್ಷಿಪ್ರಗತಿಯಲ್ಲಿ ಏನನ್ನೂ ಮಾಡುತ್ತಿಲ್ಲ

ಪಂಜಿನ ಮೆರವಣಿಗೆ ನಡೆಸಿದ ಕೆಐಎಡಿಬಿ ಪರವಾದ 13 ಹಳ್ಳಿಗಳ ರೈತರ ಸಂಘಟನೆ

75 ದಿನಗಳಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸುತ್ತಿರುವ 13 ಹಳ್ಳಿಗಳ ಕೆಐಎಡಿಬಿಗೆ ಭೂಮಿ ಕೊಡಲು ಸಿದ್ಧವಿರುವ ರೈತರ ಅಹವಾಲನ್ನು ಜಿಲ್ಲಾಡಳಿತವಾಗಲಿ ಸರಕಾರವಾಗಲಿ ಪರಿಗಣಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಅಂಬೇಡ್ಕರ್ ವೃತ್ತದಿಂದ ಪಂಜಿನ ಮೆರವಣಿಗೆ ನಡೆಸಿ ಗಮನ ಸೆಳೆದರು. -

Profile
Ashok Nayak Jun 4, 2026 10:12 PM

ಚಿಕ್ಕಬಳ್ಳಾಪುರ: 75 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವ 13 ಹಳ್ಳಿಗಳ ಕೆಐಎಡಿಬಿ(KIADB)ಗೆ ಭೂಮಿ ಕೊಡಲು ಸಿದ್ಧವಿರುವ ರೈತರ ಅಹವಾಲನ್ನು ಜಿಲ್ಲಾಡಳಿತ ವಾಗಲಿ ಸರಕಾರವಾಗಲಿ ಪರಿಗಣಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಅಂಬೇಡ್ಕರ್ ವೃತ್ತದಿಂದ ಪಂಜಿನ ಮೆರವಣಿಗೆ ನಡೆಸಿ ಗಮನ ಸೆಳೆದರು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಏರ್ಪಡಿಸಿದ್ದ ಪಂಜಿನ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ ದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಶಿಡ್ಲಘಟ್ಟ ತಾಲೂಕು ಸಂಚಾಲಕ ರಾಮಾಂಜಿ ಮಾತನಾಡಿ, ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ನೂರಾರು ರೈತರು ಕೆಐಎಡಿಬಿಗೆ ಕೈಗಾರಿಕೆ ಸ್ಥಾಪಿಸಲು ಭೂಮಿಕೊಡಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿದ್ದರೂ ಸರಕಾರವಾಗಲಿ, ಜಿಲ್ಲಾಡಳಿತ ವಾಗಲಿ ಈ ವಿಚಾರದಲ್ಲಿ ಕ್ಷಿಪ್ರಗತಿಯಲ್ಲಿ ಏನನ್ನೂ ಮಾಡುತ್ತಿಲ್ಲ. ಬದಲಿಗೆ ಭೂಮಿ ಕೊಡಲ್ಲ ಎಂಬ ಸಂಘಟನೆಗೆ ನೆರವು ನೀಡುತ್ತಾ ಭೂಮಿ ಕೊಡಲು ಮುಂದೆ ಬಂದಿರುವ ಪಹಣಿ ದಾರರಿಗೆ ಪರೋಕ್ಷವಾಗಿ ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಇಲ್ಲಿಗೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: Celebrations in Chikkaballapur: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ : ಚಿಕ್ಕಬಳ್ಳಾಪುರದಲ್ಲಿ ಸಂಭ್ರಮಾಚರಣೆ

ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ನೈಜ ಫಲಾನುಭವಿಗಳು ಕೈಗಾರಿಕೆ ಸ್ಥಾಪನೆಗೆ ಭೂಮಿ ನೀಡಲು ಮುಂದೆ ಬಂದಿದ್ದು ಈ ಸಂಬಂಧ ಶಾಂತಿಯುತವಾಗಿ ಕಳೆದ 75 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಈವರೆಗೆ ಜಿಲ್ಲಾಧಿಕಾರಿಗಳು ನಮ್ಮ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿಲ್ಲ. ನಿಮ್ಮ ಕಷ್ಟ ಏನು ಎಂದು ಕೇಳಿಲ್ಲ.ಪ್ರಜಾಪ್ರಭುತ್ವದಲ್ಲಿ ಕಾನೂನು ಬದ್ಧವಾಗಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕಿದೆ. ಸಂಬಂಧಪಟ್ಟ ಅಧಿಕಾರಿಗಳು ಅಥವಾ ಸರಕಾರ ಪ್ರತಿಭಟನಾ ಸ್ಥಳಕ್ಕೆ ಬಂದು ಅಹವಾಲು ಸ್ವೀಕರಿಸುವುದು ಅವರ ಕರ್ತವ್ಯವಾಗಿದೆ. ಇದನ್ನು ಮಾಡದ ಜಿಲ್ಲಾಧಿಕಾರಿಗಳು ನಮಗೆ ಹೇಗೆ ನ್ಯಾಯಕೊಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ನಾವು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದೇವೆ ಎಂದರು.

5cbpm3

ಕೈಗಾರಿಕೆಗಳು ಜಂಗಮಕೋಟೆ ಹೋಬಳಿಯಲ್ಲಿ ಬರಬೇಕು ಎಂದು ಆಗ್ರಹಿಸಿ 13 ಹಳ್ಳಿಗಳ ರೈತರ ಜತೆಗೂಡಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ದಸಂಸ ಭೀಮಮಾರ್ಗ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇವೆ ಸಾಮೂಹಿಕ ನಾಯಕತ್ವದ ಜತೆಗೂಡಿ 75 ದಿನಗಳಿಂದ ಆಹೋರಾತ್ರಿ ಹೋರಾಟ ನಡೆಸಲಾಗುತ್ತಿದೆ.ನಮ್ಮ ಜತೆಗಿರುವ ರೈತರು ಭೂಮಿ ಕೊಡಲು ಸಿದ್ಧವಿದ್ದರು ಕೆಲವರು ಅದನ್ನು ತಡೆ ಹಿಡಿಯಲು ಪ್ರಯತ್ನಿಸಿದ್ದಾರೆ. ಇದಕ್ಕೆ ಯಾವುದೇ ರೀತಿ ಕಿಮ್ಮತ್ತು ಕೊಡಬಾರದು. ಈಗಾಗಲೇ ದರ ನಿಗದಿ ಮಾಡಿರುವಂತೆ ರೈತರ ಖಾತೆಗಳಿಗೆ ಹಣ ಹಾಕಿ ಭೂಮಿ ಪಡೆಯಲಿ ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ ಎಂದರು.

4cbpm8

ಈ ವೇಳೆ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಜಿಲ್ಲಾ ಯುವಘಟಕದ ಆಧ್ಯಕ್ಷ ನಲ್ಲೇನಹಳ್ಳಿ ಸುಭ್ರಮಣಿ, ಬಸವಾಪಟ್ಟಣ ಪ್ರಭು ಗೌಡ, ನಾಗರಾಜ್, ವೆಂಕಟೇಶ್, ಕನಕಪ್ಪ, ಮೋಹನ್, ವಾಸುದೇವ ಮೂರ್ತಿ, ಆಂಜಿನಪ್ಪ, ಚನ್ನಕೃಷ್ಣಪ್ಪ, ಮುನಿರಾಜು ಇತರರು ಇದ್ದರು.