ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸರ್ಕಾರಿ ಜಾಗದಲ್ಲಿ ಅಂಬೇಡ್ಕರ್‌ ಜಯಂತಿ ಆಚರಣೆಗೆ ಅನುಮತಿ ನಿರಾಕರಣೆ, ಇದು ಖಂಡನೀಯ: ಸಂಸದ ಡಾ.ಕೆ.ಸುಧಾಕರ್‌ ಆಕ್ರೋಶ

ಬಾಬಾ ಸಾಹೇಬ್‌ ಅಂಬೇಡ್ಕರ್‌ ಜೀವಂತವಿದ್ದಾಗ ಕಾಂಗ್ರೆಸ್‌ ನಾಯಕರು ಬದುಕಲು ಬಿಡಲಿಲ್ಲ. ಇನ್ನು ಅಂಬೇಡ್ಕರ್‌ ಜಯಂತಿಗೆ ಕಾಂಗ್ರೆಸ್‌ ಶಾಸಕರು ಸ್ಥಳವಾಕಾಶ ನೀಡುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯ ವಿಲ್ಲ. ಬಾಗೇಪಲ್ಲಿಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮ ನಡೆಸಲು ತಹಶೀಲ್ದಾರ್‌ ಮೊದಲಿಗೆ ಅನುಮತಿ ನೀಡಿದ್ದರೂ, ಬಳಿಕ ಅನುಮತಿ ನಿರಾಕರಿಸ ಲಾಯಿತು.

ಸರ್ಕಾರಿ ಜಾಗದಲ್ಲಿ ಅಂಬೇಡ್ಕರ್‌ ಜಯಂತಿ ಆಚರಣೆಗೆ ನಿರಾಕರಣೆ, ಇದು ಖಂಡನೀಯ

-

Profile
Ashok Nayak Apr 14, 2026 10:38 PM

ಚಿಕ್ಕಬಳ್ಳಾಪುರ: ಸರ್ಕಾರಿ ಜಾಗದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ(Dr.B.R.Ambedkar Jayanti) ಆಚರಿಸಲು ಅನುಮತಿ ನಿರಾಕರಿಸಿರುವುದು ಖಂಡನೀಯ. ಇದು ಬಾಗೇಪಲ್ಲಿಯ ಶೋಷಿತ ವರ್ಗಕ್ಕೆ ಮಾಡಿದ ಅಪಮಾನ ಎಂದು ಸಂಸದ ಡಾ.ಕೆ.ಸುಧಾಕರ್‌(MP Dr K Sudhakar) ಆಕ್ರೋಶ ವ್ಯಕ್ತಪಡಿಸಿದರು.

ಬಾಗೇಪಲ್ಲಿಯಲ್ಲಿ ನಡೆದ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಬಾ ಸಾಹೇಬ್‌ ಅಂಬೇಡ್ಕರ್‌ ಜೀವಂತವಿದ್ದಾಗ ಕಾಂಗ್ರೆಸ್‌ ನಾಯಕರು ಬದುಕಲು ಬಿಡಲಿಲ್ಲ. ಇನ್ನು ಅಂಬೇಡ್ಕರ್‌ ಜಯಂತಿಗೆ ಕಾಂಗ್ರೆಸ್‌ ಶಾಸಕರು ಸ್ಥಳವಾಕಾಶ ನೀಡುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಬಾಗೇಪಲ್ಲಿಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮ ನಡೆಸಲು ತಹಶೀಲ್ದಾರ್‌ ಮೊದಲಿಗೆ ಅನುಮತಿ ನೀಡಿದ್ದರೂ, ಬಳಿಕ ಅನುಮತಿ ನಿರಾಕರಿಸ ಲಾಯಿತು. ಬಾಬಾ ಸಾಹೇಬರ ಜಯಂತಿ ಆಚರಿಸಲು ಸರ್ಕಾರಿ ಜಾಗ ದೊರೆಯುತ್ತಿಲ್ಲ. ರೈತನ ಮಗನಾದ ಸುಬ್ಬಾರೆಡ್ಡಿಯವರು ಶಾಸಕರಾಗಲು ಅಂಬೇಡ್ಕರ್‌ ಕಾರಣ ಎಂಬುದನ್ನು ಮರೆಯ ಬಾರದು. ಅಂತಹವರ ಜಯಂತಿಗೆ ಅವಕಾಶ ಕೊಡದ ಧೋರಣೆಯನ್ನು ನಾನು ಖಂಡಿಸುತ್ತೇನೆ ಎಂದರು.

ಬಾಬಾ ಸಾಹೇಬ್‌ ಅಂಬೇಡ್ಕರ್‌ ಬದುಕಿದ್ದಾಗ, ಅವರ ವಿರುದ್ಧ ಅವರ ಕಾರ್ಯದರ್ಶಿಯನ್ನೇ ಕಾಂಗ್ರೆಸ್‌ ಚುನಾವಣೆಗೆ ನಿಲ್ಲಿಸಿ ಸೋಲಿಸಿತ್ತು. ಅವರ ವಿರುದ್ಧ ಪ್ರಧಾನಿ ನೆಹರು ಪ್ರಚಾರ ಮಾಡಿ ದ್ದರು. ಆದರೆ ಈಗ ಕಾಂಗ್ರೆಸ್‌ ಮತಬ್ಯಾಂಕ್‌ಗಾಗಿ ಅಂಬೇಡ್ಕರ್‌ ಚಿತ್ರಕ್ಕೆ ಮಾಲಾರ್ಪಣೆ ಮಾಡುತ್ತಿದೆ. ಅಂಬೇಡ್ಕರ್‌ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯಲು ಕುಟುಂಬದ ಬಳಿ ಹಣ ಇಲ್ಲದಿ ದ್ದಾಗ ಕಾಂಗ್ರೆಸ್‌ ಸಹಾಯ ಮಾಡಲಿಲ್ಲ. ಇಂತಹ ಅಪಮಾನ ಬಾಗೇಪಲ್ಲಿಯಲ್ಲೂ ಮುಂದುವರಿ ದಿದೆ. ಇದು ಇಡೀ ಶೋಷಿತ ವರ್ಗದ ಜನರಿಗೆ ಆಗಿರುವ ಅಪಮಾನ. ಆದ್ದರಿಂದ ಮುಖಂಡ ಹರಿನಾಥ್‌ ರೆಡ್ಡಿ ಅವರು ಮತ್ತೊಮ್ಮೆ ದೊಡ್ಡ ಕಾರ್ಯಕ್ರಮವನ್ನು ಬಾಗೇಪಲ್ಲಿಯಲ್ಲಿ ಮಾಡಲಿ ಎಂದರು.

ಇದನ್ನೂ ಓದಿ: Chikkaballapur News: 5 ಲಕ್ಷ ಗಿಡ ನೆಟ್ಟು ಬೆಳೆಸುವ ಕಾರ್ಯಕ್ರಮಕ್ಕೆ ಚಾಲನೆ ದೊರಕಿದೆ: ನ್ಯಾ.ಟಿ.ಪಿ.ರಾಮಲಿಂಗೇಗೌಡ

ಬಾಬಾ ಸಾಹೇಬ್‌ ಅಂಬೇಡ್ಕರ್‌ ಕೇವಲ ಶಕ್ತಿಯಾಗದೆ ಮಹಾ ಚೇತನವಾಗಿದ್ದರು. ಸಮಾನತೆ ಬರುವವರೆಗೂ, ಸಾಮಾಜಿಕ ಸಮಾನತೆಯನ್ನು ಎತ್ತಿ ಹಿಡಿಯುವವರೆಗೂ ಅವರು ಅಜರಾಮರ ರಾಗಿರುತ್ತಾರೆ. ಮೊದಲನೆಯ ದೇವರು ಜ್ಞಾನ, ಎರಡನೇ ದೇವರು ಸ್ವಾಭಿಮಾನ, ಮೂರನೇ ದೇವರು ಅಂತಃಕರಣ ಎಂದು ಅವರು ಹೇಳಿದ್ದರು. ಜ್ಞಾನ ಸಂಪತ್ತಿದ್ದು,  ಸ್ವಾಭಿಮಾನ ಹಾಗೂ ಮಾನವೀಯತೆ ಹೊಂದಿರುವವರು ದೇವತಾ ಮನುಷ್ಯರಾಗುತ್ತಾರೆ. ಡಾ.ಬಿ.ಆರ್‌.ಅಂಬೇಡ್ಕರ್‌ ಅಂತಹ ದೇವತಾ ಮನುಷ್ಯರಾಗಿದ್ದರು ಎಂದರು.

ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅತಿ ಹೆಚ್ಚು ಜ್ಞಾನವಿರುವ ವ್ಯಕ್ತಿಗಳ ಚಿತ್ರ ಇಟ್ಟಿದ್ದಾರೆ. ಅಲ್ಲಿ ಮೊದಲ ಚಿತ್ರವೇ ಬಾಬಾ ಸಾಹೇಬ್‌ ಅಂಬೇಡ್ಕರ್‌ರದ್ದು. ಇವರ ಜಯಂತಿಯನ್ನು ವಿಶ್ವ ಜ್ಞಾನದ ದಿನ ಎಂದು ಕರೆಯಲಾಗಿದೆ. ಬಾಬಾ ಸಾಹೇಬ್‌ ಅಂಬೇಡ್ಕರ್‌ರ ಬಾಲ್ಯ ಅತ್ಯಂತ ಕಠಿಣವಾಗಿತ್ತು. ಶೋಷಣೆ, ತಾರತಮ್ಯ, ಅಸಮಾನತೆಯನ್ನು ಅವರು ಎದುರಿಸಿದ್ದರು. ಬಾಲ್ಯದಲ್ಲಿ ಅವರು ಎತ್ತಿನ ಗಾಡಿಯಲ್ಲಿ ಹೋಗುವಾಗ ಅವರನ್ನು ಕೆಳಕ್ಕೆ ಇಳಿಸಿ ಅಪಮಾನಿಸಲಾಗಿತ್ತು. ಶಾಲೆಗೆ ಹೋದರೆ ಗೋಣಿಚೀಲದಲ್ಲಿ ಪ್ರತ್ಯೇಕವಾಗಿ ಕೂರಬೇಕಾಗಿತ್ತು. ಇಂತಹ ಕಷ್ಟಗಳನ್ನು ಕಂಡ ಅವರು, ಎಲ್ಲರಿಗೂ ನ್ಯಾಯ ಕೊಡಿಸಬೇಕು ಎಂದು ನಿರ್ಧಾರ ಮಾಡಿದ್ದರು ಎಂದರು.

cbpm7drk

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಭಾರತದಲ್ಲಿ ಸ್ಥಾಪನೆಯಾಗಲು ಅಂಬೇಡ್ಕರ್‌ರ ಸಲಹೆಯೇ ಕಾರಣ. ಭಾರತದ ಆರ್ಥಿಕ ನೀತಿಯ ಪಿತಾಮಹ ಅಂಬೇಡ್ಕರ್‌ ಎಂದು  ಆರ್ಥಿಕ ತಜ್ಞ ಅಮರ್ತ್ಯ ಸೇನ್‌ ಹೇಳಿದ್ದಾರೆ. ಆದರೆ ಅಂತಹ ಅಂಬೇಡ್ಕರ್‌ರ ಹೆಸರನ್ನು ರಾಜಕೀಯ ಪಕ್ಷಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಕೇವಲ ಮತಬ್ಯಾಂಕ್‌ಗಾಗಿ ಅವರ ಹೆಸರು ಹೇಳುತ್ತಿದ್ದಾರೆ. ಅವರು ಬದುಕಿದ್ದಾಗ ಕಾಂಗ್ರೆಸ್‌ ಪಕ್ಷ ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿತ್ತು. ಅವರ ಸಾವಿನ ನಂತರ 40 ವರ್ಷ ವಾದರೂ ಭಾರತರತ್ನ ಕೊಟ್ಟಿರಲಿಲ್ಲ. ಅಂತಿಮವಾಗಿ ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿ ಯಾದ ಬಳಿಕ ಅಂಬೇಡ್ಕರ್‌ಗೆ ಭಾರತರತ್ನ ದೊರೆಯಿತು ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಅಂಬೇಡ್ಕರ್‌ ಆಶಯಗಳನ್ನು ಈಡೇರಿಸುತ್ತಿದ್ದಾರೆ. ಜನಧನ ಯೋಜನೆಯಡಿ 52 ಕೋಟಿ ಬಡವರಿಗೆ ಬ್ಯಾಂಕ್‌ ಖಾತೆ ರೂಪಿಸಲಾಗಿದೆ. ಅಂಬೇಡ್ಕರ್‌ ಹಿಂದೂ ಬಿಲ್‌ ತಂದಾಗ ಅದನ್ನು ಕಾಂಗ್ರೆಸ್‌ ವಿರೋಧಿಸಿತ್ತು. ಈಗ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಯನ್ನು ತರಲಾಗುತ್ತಿದೆ. ಅಂಬೇಡ್ಕರ್‌ ಜೀವನದ ಪ್ರಮುಖ ಐದು ಸ್ಥಳಗಳನ್ನು ಪಂಚತೀರ್ಥವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದರು.

ಕಳೆದ 15 ವರ್ಷದಿಂದಲೂ ಬಾಗೇಪಲ್ಲಿ ಅಭಿವೃದ್ಧಿ ಕಂಡಿಲ್ಲ. ಮುಂದೆ ಬಿಜೆಪಿ ಸರ್ಕಾರ ಬಂದಾಗ ಇದನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿ ಮಾಡುತ್ತೇವೆ. ಅದಕ್ಕಾಗಿ ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.