ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

CSK vs KKR: ಸತತ ನಾಲ್ಕನೇ ಪಂದ್ಯ ಸೋತ ಕೋಲ್ಕತಾ, ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಎರಡನೇ ಜಯ!

CSK vs KKR Match Highlights: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ 32 ರನ್‌ಗಳ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು.

IPL 206: ಕೋಲ್ಕತಾ ಸವಾಲು ಮೆಟ್ಟಿನಿಂತ ಚೆನ್ನೈ ಸೂಪರ್‌ ಕಿಂಗ್ಸ್‌!

ಕೆಕೆಆರ್‌ ಎದುರು ಮೂರು ವಿಕೆಟ್‌ ಕಿತ್ತು ಸಂಭ್ರಮಿಸಿದ ನೂರ್‌ ಅಹ್ಮದ್‌. -

Profile
Ramesh Kote Apr 14, 2026 11:43 PM

ಚೆನ್ನೈ: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ 22ನೇ ಪಂದ್ಯದಲ್ಲಿ (CSK vs KKR) ಕೋಲ್ಕತಾ ನೈಟ್‌ ರೈಡರ್ಸ್‌ ಎದುರು 32 ರನ್‌ಗಳ ಗೆಲುವು ಪಡೆಯಿತು. ಇದರೊಂದಿಗೆ 19ನೇ ಸೀಸನ್‌ನಲ್ಲಿ ಋತುರಾಜ್‌ ಗಾಯಕ್ವಾಡ್‌ ನಾಯಕತ್ವದ ಸಿಎಸ್‌ಕೆ ಎರಡನೇ ಗೆಲುವು ದಾಖಲಿಸಿತು. ಇನ್ನು ಬ್ಯಾಟಿಂಗ್‌ ವೈಫಲ್ಯದಿಂದಾಗಿ ಅಜಿಂಕ್ಯ ರಹಾನೆ (Ajinkya Rahane) ನಾಯಕತ್ವದ ಕೆಕೆಆರ್‌, ನಾಲ್ಕನೇ ಸೋಲು ಅನುಭವಿಸಿತು.

ಮಂಗಳವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಸಿಎಸ್‌ಕೆ ನೀಡಿದ್ದ 193 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಕೆಕೆಆರ್‌, ನೂರ್‌ ಅಹ್ಮದ್‌ (21ಕ್ಕೆ 3) ಸ್ಪಿನ್‌ ಮೋಡಿ ಹಾಗೂ ಅನ್ಷುಲ್‌ ಕಾಂಬೋಜ್‌ (32 ಕ್ಕೆ 2) ಮಾರಕ ಬೌಲಿಂಗ್‌ ದಾಳಿಗೆ ನಲುಗಿತು. ಆ ಮೂಲಕ ತನ್ನ ಪಾಲಿನ 20 ಓವರ್‌ಗಳನ್ನು ಮುಗಿಸಿದರೂ 7 ವಿಕೆಟ್‌ಗಳ ನಷ್ಟಕ್ಕೆ 160 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಸೋಲು ಒಪ್ಪಿಕೊಂಡಿತು.

CSK vs KKR: ಸತತ ಐದನೇ ಬಾರಿ ವಿಫಲರಾದ ಋತುರಾಜ್‌ ಗಾಯಕ್ವಾಡ್‌ಗೆ ಸಂಕಷ್ಟ!

ಈ ಪಂದ್ಯದಲ್ಲಿ ಆರಂಭಿಕ ಜೋಡಿಯನ್ನು ಬದಲಿಸಿದ್ದ ಕೆಕೆಆರ್‌ ಯೋಜನೆ ಸಫಲವಾಗಲಿಲ್ಲ. ಫಿನ್‌ ಆಲೆನ್‌ ಕೇವಲ ಒಂದು ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆರಂಭಿಕ ಸ್ಥಾನಕ್ಕೆ ಮರಳಿದ ಸುನೀಲ್‌ ನರೇನ್‌ 17 ಎಸೆತಗಳಲ್ಲಿ 24 ರನ್‌ ಗಳಿಸಿ ಉತ್ತಮ ಆರಂಭ ಪಡೆದರೂ ಇದನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ವಿಫಲರಾದರು. ಅಜಿಂಕ್ಯ ರಹಾನೆ (28) ಹಾಗೂ ಅಂಗ್‌ಕೃಷ್‌ ರಘುವಂಶಿ (27) ಅವರು ಕೂಡ ಸಿಕ್ಕ ಉತ್ತಮ ಆರಂಭವನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸ್ಟಾರ್‌ ಬ್ಯಾಟ್ಸ್‌ಮನ್‌ಗಳಾದ ರಿಂಕು ಸಿಂಗ್‌ ಹಾಗೂ ಕ್ಯಾಮೆರಾನ್‌ ಗ್ರೀನ್‌ ಅವರನ್ನು ನೂರ್‌ ಅಹ್ಮದ್‌ ಸ್ಪಿನ್‌ ಮೋಡಿಯಲ್ಲಿ ಕಟ್ಟಿ ಹಾಕಿದರು.



ಏಳನೇ ವಿಕೆಟ್‌ಗೆ ರೊವ್ಮನ್‌ ಪೊವೆಲ್‌ ಹಾಗೂ ರಮಣ್‌ದೀಪ್‌ ಸಿಂಗ್‌ 63 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಸ್ವಲ್ಪ ಪ್ರತಿರೋಧವನ್ನು ತೋರಿದರೂ ಪ್ರಯೋಜನವಾಗಲಿಲ್ಲ. ರಮಣ್‌ದೀಪ್‌ 35 ರನ್‌ ಹಾಗೂ ರೊವ್ಮನ್‌ ಪೊವೆಲ್‌ ಅಜೇಯ 31 ರನ್‌ ಗಳಿಸಿದರು. ಸಿಎಸ್‌ಕೆ ಪರ 4 ಓವರ್‌ಗಳಿಗೆ 21 ರನ್‌ ನೀಡಿ 3 ವಿಕೆಟ್‌ ಕಿತ್ತ ನೂರ್‌ ಅಹ್ಮದ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

192 ರನ್‌ ಕಲೆ ಹಾಕಿದ್ದ ಸಿಎಸ್‌ಕೆ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಯಾವೊಬ್ಬ ಬ್ಯಾಟ್ಸ್‌ಮನ್‌ ಅರ್ಧಶತಕ ಗಳಿಸದಿದ್ದರೂ ಸಂಜು ಸ್ಯಾಮ್ಸನ್‌, ಡೆವಾಲ್ಡ್‌ ಬ್ರೆವಿಸ್‌ ಹಾಗೂ ಆಯುಷ್‌ ಮ್ಹಾತ್ರೆ ಅವರ ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 192 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಕೆಕೆಆರ್‌ಗೆ 193 ರನ್‌ಗಳ ಗುರಿಯನ್ನು ನೀಡಿತ್ತು.

Blessing Muzarabani: ಕೆಕೆಆರ್‌ ವೇಗಿಗೆ ಎರಡು ವರ್ಷ ಬ್ಯಾನ್‌! ಕಾರಣ ಇಲ್ಲಿದೆ ನೋಡಿ

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಇನಿಂಗ್ಸ್‌ ಅತ್ಯಂತ ಆಕ್ರಮಣಕಾರಿ ಆರಂಭವನ್ನು ಪಡೆಯಿತು. ಯುವ ಅನುಭವಿ ಆಯುಷ್ ಮ್ಹಾತ್ರೆ ಪವರ್‌ಪ್ಲೇ ಅನ್ನು ಸಂಪೂರ್ಣವಾಗಿ ಬಳಸಿಕೊಂಡರು, ಕೇವಲ 17 ಎಸೆತಗಳಲ್ಲಿ 38 ರನ್‌ಗಳನ್ನು (6 ಬೌಂಡರಿಗಳು, 2 ಸಿಕ್ಸರ್‌ಗಳು) ಗಳಿಸಿದರು. ಅವರ ಔಟಾದ ನಂತರ, ಸಂಜು ಸ್ಯಾಮ್ಸನ್ ಜವಾಬ್ದಾರಿಯನ್ನು ವಹಿಸಿಕೊಂಡರು ಮತ್ತು 32 ಎಸೆತಗಳಲ್ಲಿ 48 ರನ್‌ಗಳನ್ನು ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಡೆವಾಲ್ಡ್ ಬ್ರೆವಿಸ್ (41) ಮತ್ತು ಸರ್ಫರಾಜ್ ಖಾನ್ (23) ಅವರ ಕೊಡುಗೆಯನ್ನು ನೀಡಿದ್ದರು.