ʼʼದೆಹಲಿ ಪ್ರವಾಸಿಗರಿಗಿಂತ ಬೆಂಗಳೂರಿಗರೇ ಬೆಸ್ಟ್ʼʼ: ಗೋವಾ ಹೋಟೆಲ್ ಸಿಬ್ಬಂದಿ ಹೀಗೆ ಹೇಳಿದ್ದೇಕೆ?
Viral Video: ದೆಹಲಿ ಪ್ರವಾಸಿಗರ ವರ್ತನೆ ಬಗ್ಗೆ ಗೋವಾ ಹೋಟೆಲ್ ಸಿಬ್ಬಂದಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಗೋವಾದಲ್ಲಿ ಪ್ರವಾಸಿಗರು ಮತ್ತು ಹೋಟೆಲ್ ಸಿಬ್ಬಂದಿ ನಡುವಿನ ಸಾಂದರ್ಭಿಕ ಸಂಭಾಷಣೆ ವೈರಲ್ ಆಗಿದ್ದು, ಪ್ರಯಾಣ ಶಿಸ್ತು ಮತ್ತು ಅಲ್ಲಿನ ಜನರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರ ಕುರಿತು ಚರ್ಚೆಗಳನ್ನು ಹುಟ್ಟುಹಾಕಿದೆ.
ಗೋವಾದ ಹೋಟೆಲ್ ಸಿಬ್ಬಂದಿ -
ಪಣಜಿ, ಏ. 14: ಇತ್ತೀಚೆಗೆ ಪ್ರವಾಸಿಗರ ಮೀತಿ ಮೀರಿದ ವರ್ತನೆಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ದೆಹಲಿ ಪ್ರವಾಸಿಗರ ವರ್ತನೆ ಬಗ್ಗೆ ಗೋವಾ ಹೋಟೆಲ್ ಸಿಬ್ಬಂದಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಗೋವಾದಲ್ಲಿ ಪ್ರವಾಸಿಗರು ಮತ್ತು ಹೋಟೆಲ್ ಸಿಬ್ಬಂದಿ ನಡುವಿನ ಸಾಂದರ್ಭಿಕ ಸಂಭಾಷಣೆ ವೈರಲ್ (Viral News) ಆಗಿದ್ದು, ಪ್ರಯಾಣ ಶಿಸ್ತು ಮತ್ತು ಅಲ್ಲಿನ ಜನರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರ ಕುರಿತು ಚರ್ಚೆ ಹುಟ್ಟುಹಾಕಿದೆ.
ಹೋಟೆಲ್ ಸಿಬ್ಬಂದಿ ದೆಹಲಿ, ಮುಂಬೈ ಮತ್ತು ಬೆಂಗಳೂರಿನ ಪ್ರವಾಸಿಗರ ನಡುವಿನ ವ್ಯತ್ಯಾಸವನ್ನು ವಿವರಿಸಿದ ರೀತಿ ಹೆಚ್ಚಿನವರ ಗಮನ ಸೆಳೆದಿದೆ. ಪ್ರವಾಸಿಗರೊಬ್ಬರು ಹೋಟೆಲ್ ಸಿಬ್ಬಂದಿಯನ್ನು "ಈಗ ವಿದೇಶಿ ಪ್ರವಾಸಿಗರ ಪ್ರವಾಸ ಮುಗಿಯಿತು. ಇನ್ನು ದೆಹಲಿ, ಮುಂಬೈ ಅಥವಾ ಬೆಂಗಳೂರಿನವರು ನಿಮ್ಮಲ್ಲಿ ಬರುತ್ತಾರೆ. ನಿಮಗೆ ಯಾವ ನಗರದವರು ಬರುವುದು ಇಷ್ಟ?" ಎಂದು ಕೇಳಿದ್ದಾರೆ.
ವಿಡಿಯೊ ನೋಡಿ:
ಅದಕ್ಕೆ ಹೋಟೆಲ್ ಸಿಬ್ಬಂದಿ ಇತರ ನಗರಗಳಿಂದ ಬರುವ ಪ್ರವಾಸಿಗರನ್ನು ಹೊಗಳುತ್ತಾ, ʼʼನನಗೆ ದೆಹಲಿಯವರು ಇಷ್ಟವಿಲ್ಲ. ಅವರ ಮಾತಿನಲ್ಲಿ ಗೌರವ ಇರಲ್ಲ. ಅವರು ತುಂಬಾ ಉದ್ಧಟತನದಿಂದ ಮಾತನಾಡುತ್ತಾರೆ. ಆದರೆ ಬೆಂಗಳೂರಿನ ಪ್ರವಾಸಿಗರು ಸಭ್ಯರು ಮತ್ತು ಒಳ್ಳೆಯ ಮನಸ್ಸು ಉಳ್ಳವರುʼʼ ಎಂದಿದ್ದಾರೆ. ʼʼಮುಂಬೈ ಪ್ರವಾಸಿಗರು ಕೂಡ ತುಂಬಾ ಸಂಸ್ಕಾರವಂತರು. ಅವರು ನಮ್ಮಂತ ಜನರಿಗೆ ಗೌರವ ನೀಡುತ್ತಾರೆʼʼ ಎಂದು ಹೇಳಿದ್ದಾರೆ.
ಸಂಗಾತಿ ಆಯ್ಕೆ ಬಗ್ಗೆ ಸಲಹೆ ನೀಡಿದ ಯುವತಿ!
ಇದು ತಮಾಷೆಯಾಗಿ ಕಂಡುಬಂದರೂ, ಅನೇಕರು ಈ ದೃಶ್ಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಪ್ರವಾಸಿಗರ ಸೌಜನ್ಯ ನಡೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದಕ್ಕೆ ಇದೇ ಸಾಕ್ಷಿ. ಹೋಟೆಲ್‌ಗಳಲ್ಲಿ ಎಷ್ಟು ಹಣ ಖರ್ಚು ಮಾಡುತ್ತಾರೆ ಎನ್ನುವುದಕ್ಕಿಂತ ಹೇಗೆ ವರ್ತಿಸುತ್ತಾರೆ ಅನ್ನೋದು ಮುಖ್ಯ ಎಂದು ಹಲವರು ಕಮೆಂಟ್ ಮಾಡಿದ್ದಾರೆ.