Gudibande News: ಗುಡಿಬಂಡೆಯಲ್ಲಿ ಮೂಕಪ್ರಾಣಿಗಳಿಗೆ ಹಣ್ಣು-ಹಂಪಲು ವಿತರಣೆ
ಬಿಸಿಲಿನ ತಾಪಕ್ಕೆ ನಲುಗಿ ಮೂಕಪ್ರಾಣಿಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಆದ್ದರಿಂದ ಸಾರ್ವ ಜನಿಕರು ಪ್ರಾಣಿಗಳ ಮೇಲೆ ದಯೆ ತೋರಬೇಕು. ಪ್ರತಿಯೊಬ್ಬರೂ ತಮ್ಮ ಮನೆಯ ಮಹಡಿಯ ಮೇಲೆ ಮಣ್ಣಿನ ಗಡಿಗೆಯಲ್ಲಿ ನೀರು ಮತ್ತು ಅಕ್ಕಿಯನ್ನು ಇಡುವ ಮೂಲಕ ಅವುಗಳ ಜೀವ ಉಳಿಸಲು ಮುಂದಾಗಬೇಕು. ಹೆಚ್ಚೆಚ್ಚು ಗಿಡಮರಗಳನ್ನು ಬೆಳೆಸಿ ಪ್ರಾಣಿ-ಪಕ್ಷಿಗಳಿಗೆ ಆಶ್ರಯ ನೀಡಿದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ
ಗುಡಿಬಂಡೆ ಹೊರವಲಯದ ಕಣಿವೆಯಲ್ಲಿ ಪರಿಸರ ವೇದಿಕೆ ಹಾಗೂ ಬೆಂಗಳೂರು ಮಹಿಳಾ ಮಂಡಳಿಯ ಜಂಟಿ ಆಶ್ರಯದಲ್ಲಿ ಕೋತಿಗಳಿಗೆ ಬನ್ನು ಮತ್ತು ಬಾಳೆಹಣ್ಣುಗಳನ್ನು ವಿತರಿಸಲಾಯಿತು. -
ಗುಡಿಬಂಡೆ: ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟಿರುವ ಮೂಕಪ್ರಾಣಿಗಳ ಹಸಿವು ನೀಗಿಸುವ ಉದ್ದೇಶದಿಂದ, ಗುಡಿಬಂಡೆ ಹೊರವಲಯದ ಕಣಿವೆಯಲ್ಲಿ ಪರಿಸರ ವೇದಿಕೆ ಹಾಗೂ ಬೆಂಗಳೂರು ಮಹಿಳಾ ಮಂಡಳಿಯ ಜಂಟಿ ಆಶ್ರಯದಲ್ಲಿ ಕೋತಿಗಳಿಗೆ ಬನ್ನು ಮತ್ತು ಬಾಳೆ ಹಣ್ಣುಗಳನ್ನು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಪರಿಸರ ವೇದಿಕೆ ಅಧ್ಯಕ್ಷ ಡಾ. ಗುಂಪು ಮರದ ಆನಂದ್, ಗುಡಿಬಂಡೆಯಲ್ಲಿ ಬೇಸಿಗೆಯ ಬಿಸಿಲಿನ ಝಳ ಹೆಚ್ಚಾಗಿರುವುದರಿಂದ ಪ್ರಾಣಿ-ಪಕ್ಷಿಗಳಿಗೆ ತೀವ್ರವಾದ ಆಹಾರ ಮತ್ತು ನೀರಿನ ಕೊರತೆ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿ ದರು.
ಇದನ್ನೂ ಓದಿ: Chikkaballapur News: ಮೊಬೈಲ್ ಮೋಹದಿಂದ ಮಕ್ಕಳು ಹಾದಿ ತಪ್ಪುವುದನ್ನು ತಡೆಯಬೇಕಿದೆ: ವಕೀಲ ಆರ್.ಮಟಮಪ್ಪ
ಬಿಸಿಲಿನ ತಾಪಕ್ಕೆ ನಲುಗಿ ಮೂಕಪ್ರಾಣಿಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಆದ್ದರಿಂದ ಸಾರ್ವಜನಿಕರು ಪ್ರಾಣಿಗಳ ಮೇಲೆ ದಯೆ ತೋರಬೇಕು. ಪ್ರತಿಯೊಬ್ಬರೂ ತಮ್ಮ ಮನೆಯ ಮಹಡಿಯ ಮೇಲೆ ಮಣ್ಣಿನ ಗಡಿಗೆಯಲ್ಲಿ ನೀರು ಮತ್ತು ಅಕ್ಕಿಯನ್ನು ಇಡುವ ಮೂಲಕ ಅವುಗಳ ಜೀವ ಉಳಿಸಲು ಮುಂದಾಗಬೇಕು. ಹೆಚ್ಚೆಚ್ಚು ಗಿಡಮರಗಳನ್ನು ಬೆಳೆಸಿ ಪ್ರಾಣಿ-ಪಕ್ಷಿಗಳಿಗೆ ಆಶ್ರಯ ನೀಡಿದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಕರೆ ನೀಡಿದರು.
ಮಹಿಳಾ ಮಂಡಳಿಯ ಅಧ್ಯಕ್ಷರಾದ ರತ್ನಮ್ಮ ಮಾತನಾಡಿ, ಪ್ರತಿಯೊಬ್ಬರೂ ದಯೆ, ಕರುಣೆಯಂತಹ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಮೂಕ ಪ್ರಾಣಿ-ಪಕ್ಷಿಗಳನ್ನು ರಕ್ಷಿಸಿ, ಅವುಗಳಿಗೆ ಸಾಧ್ಯವಾದಷ್ಟು ಆಹಾರ ಹಾಗೂ ನೀರು ಒದಗಿಸಿದರೆ ನಮಗೆ ಪುಣ್ಯ ಲಭಿಸುತ್ತದೆ ಮತ್ತು ಜೀವನಕ್ಕೆ ಒಂದು ಅರ್ಥ ಸಿಗುತ್ತದೆ ಎಂದು ತಿಳಿಸಿದರು.
ಪರಿಸರ ವೇದಿಕೆಯ ನಿತಿನ್ ಸಿಂಗ್ ಮಾತನಾಡಿ, ಪರಿಸರ ವೇದಿಕೆ ವತಿಯಿಂದ ಪ್ರತಿ ವರ್ಷ ಗುಡಿಬಂಡೆಯಲ್ಲಿ ಹತ್ತು-ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅದರ ಭಾಗವಾಗಿ ಇಂದು ಪ್ರಾಣಿ-ಪಕ್ಷಿಗಳಿಗೆ ನೀರು ಮತ್ತು ಆಹಾರ ಒದಗಿಸುವ ಈ ಕಾರ್ಯವನ್ನು ಮಾಡಿದ್ದೇವೆ. ಮನುಷ್ಯರಾಗಿ ಹುಟ್ಟಿದ ಮೇಲೆ ನಮ್ಮಲ್ಲಿ ಮೂಕಪ್ರಾಣಿಗಳ ಬಗ್ಗೆ ಕರುಣೆ ಇರಬೇಕು ಮತ್ತು ಅವುಗಳ ಹಸಿವು ನೀಗಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಹೇಳಿದರು.
ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಬೆಂಗಳೂರು ಮಹಿಳಾ ಮಂಡಳಿಯ ಕಾರ್ಯದರ್ಶಿ ಮಂಜುಳಾ ಸೇರಿದಂತೆ ಹಲವರು ಇದ್ದರು.