RCB vs MI: ಮುಂಬೈ ಎದುರು ಕೊನೆಯ ಓವರ್ ಥ್ರಿಲ್ಲರ್ ಗೆದ್ದ ಆರ್‌ಸಿಬಿಗೆ ಅಗ್ರ ಸ್ಥಾನ!
RCB vs MI Match Highlights: ಕೃಣಾಲ್ ಪಾಂಡ್ಯ ಹಾಗೂ ಭುವನೇಶ್ವರ್ ಕುಮಾರ್ ಅವರ ನಿರ್ಣಾಯಕ ಪ್ರದರ್ಶನದ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮುಂಬೈ ಇಂಡಿಯನ್ಸ್ ಎದುರು ಕೊನೆಯ ಓವರ್‌ನಲ್ಲಿ ರೋಚಕ ಗೆಲುವು ಸಾಧಿಸಿತು. ಆ ಮೂಲಕ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಆರ್‌ಸಿಬಿ ಅಗ್ರ ಸ್ಥಾನಕ್ಕೇರಿತು. ಆದರೆ, ಸೋತ ಮುಂಬೈ ಪ್ಲೇಆಫ್ ರೇಸ್‌ನಿಂದ ಅಧಿಕೃತವಾಗಿ ಎಲಿಮಿನೇಟ್ ಆಯಿತು.
ಮುಂಬೈ ಎದುರು ಆರ್‌ಸಿಬಿ ರೋಚಕ ಜಯ. -
ರಾಯ್ಪುರ: ಕೃಣಾಲ್ ಪಾಂಡ್ಯ (Krunal Pandya) ಹಾಗೂ ಭುವನೇಶ್ವರ್ ಕುಮಾರ್ (Bhuvneshwar Kumar) ನಿರ್ಣಾಯಕ ಪ್ರದರ್ಶನದ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಮುಂಬೈ ಇಂಡಿಯನ್ಸ್ ಎದುರು ಕೊನೆಯ ಓವರ್‌ನಲ್ಲಿ ರೋಚಕ ಗೆಲುವು ಸಾಧಿಸಿತು. ಆ ಮೂಲಕ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಅಂಕಪಟ್ಟಿಯಲ್ಲಿ ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ಅಗ್ರ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಇನ್ನು ಸೋಲಿನ ಆಘಾತ ಅನುಭವಿಸಿದ ಸೂರ್ಯಕುಮಾರ್ ಯಾದವ್ ನಾಯಕತ್ವದ ಮುಂಬೈ ತಂಡ ಟೂರ್ನಿಯ ಪ್ಲೇಆಫ್ಸ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿತು.
ಭಾನುವಾರ ಇಲ್ಲಿನ ಶಾಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ್ದ 167 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ತಂಡ ಸುಲಭವಾಗಿ ಗೆಲ್ಲಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಇದಕ್ಕೆ ದೀಪಕ್ ಚಹರ್, ಕಾರ್ಬಿನ್ ಬಾಷ್ ಹಾಗೂ ಜಸ್‌ಪ್ರೀತ್ ಬುಮ್ರಾ ಅವಕಾಶ ನೀಡಲಿಲ್ಲ. ವಿರಾಟ್ ಕೊಹ್ಲಿ ರಜತ್ ಪಾಟಿದಾರ್, ಟಿಮ್ ಡೇವಿಡ್ ವಿಫಲರಾದರು. ಆದರೆ, ಒಂದು ತುದಿಯಲ್ಲಿ ಏಕಾಂಗಿ ಹೋರಾಟ ನಡೆಸಿದ್ದ ಕೃಣಾಲ್ ಪಾಂಡ್ಯ 46 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 73 ರನ್ ಗಳಿಸಿ ಆರ್‌ಸಿಬಿಯನ್ನು ಗೆಲುವಿನ ಹಾದಿಯಲ್ಲಿರಿಸಿದರು. ಅಲ್ಲದೆ, ಜೇಕಬ್ ಬೆಥೆಲ್ ಜೊತೆ 55 ರನ್ ಹಾಗೂ ಜಿತೇಶ್ ಶರ್ಮಾ ಜೊತೆಗೆ 37 ರನ್‌ಗಳ ಜೊತೆಯಾಟವನ್ನು ಆಡಿದರು. ಇದಕ್ಕೂ ಮುನ್ನ ಜೇಕಬ್ ಬೆಥೆಲ್ 27 ರನ್‌ಗಳ ಕೊಡುಗೆಯನ್ನು ನೀಡಿದರು.
CSK vs LSG: ಚೆನ್ನೈ ಎದುರು ಲಖನೌ ಸೋಲಿಗೆ ಈ ಇಬ್ಬರೇ ಕಾರಣ ಎಂದ ರಿಷಭ್ ಪಂತ್!
ಕೊನೆಯ ಓವರ್ ಥ್ರಿಲ್ಲರ್ ಗೆದ್ದ ಆರ್‌ಸಿಬಿ
ಕೊನೆಯ ಮೂರು ಓವರ್‌ಗಳಲ್ಲಿ ಆರ್‌ಸಿಬಿಗೆ 30 ರನ್ ಅಗತ್ಯವಿತ್ತು. 18ನೇ ಓವರ್‌ನಲ್ಲಿ ಕೃಣಾಲ್ ಪಾಂಡ್ಯ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾದರೂ ಘಝನ್‌ಫರ್‌ಗೆ ಎರಡು ಭರ್ಜರಿ ಸಿಕ್ಸರ್ ಸಿಡಿಸಿದ ಬಳಿಕ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಆ ಮೂಲಕ ಕೊನೆಯ ಎರಡು ಓವರ್‌ಗಳಿಗೆ 18 ರನ್ ಅಗತ್ಯವಿತ್ತು. ಆದರೆ ಪೆನಾಲ್ಟಿಮೇಟ್ ಓವರ್‌ನಲ್ಲಿ ಜಸ್‌ಪ್ರೀತ್ ಬುಮ್ರಾ ಕೇವಲ ಮೂರು ರನ್ ಕೊಟ್ಟರು. ಅಂತಿಮವಾಗಿ 15 ಬೇಕಿದ್ದಾಗ, ರಾಜಾ ಬಾವಾ ನಾಲ್ಕು ವೈಡ್ ಹಾಗೂ ಒಂದು ನೋ ಬಾಲ್ ಸೇರಿದಂತೆ 15 ರನ್‌ಗಳನ್ನು ಬಿಟ್ಟುಕೊಟ್ಟರು. ಮೂರನೇ ಎಸೆತದಲ್ಲಿ ಶೆಫರ್ಡ್ ವಿಕೆಟ್ ಒಪ್ಪಿಸಿದ ಬಳಿಕ ಭುವನೇಶ್ವರ್ ನಾಲ್ಕನೇ ಎಸೆತದಲ್ಲಿ ನಿರ್ಣಾಯಕ ಸಿಕ್ಸರ್ ಪಂದ್ಯದ ದಿಕ್ಕನ್ನು ಬದಲಿಸಿತು. ಕೊನೆಯ ಎರಡು ಎಸೆತಗಳಲ್ಲಿ ಮೂರು ರನ್ ಬೇಕಿದ್ದಾಗ ಭುವಿ ಒಂದು ರನ್ ಪಡೆದರು. ಕೊನೆಯ ಎಸೆತದಲ್ಲಿ ರಸಿಕ್ ಸಲಾಮ್ ಎರಡು ಪಡೆದು ಆರ್‌ಸಿಬಿಯನ್ನು ಗೆಲುವಿನ ದಡ ಸೇರಿಸಿದರು.
Swinging the ball, swinging the bat, and swinging the match entirely his way! 🌪️
— IndianPremierLeague (@IPL) May 10, 2026
Who better than Bhuvneshwar Kumar to get the POTM award? 🤌
Relive his spell 👉 https://t.co/hYmwvT7PcN#TATAIPL | #KhelBindaas | #RCBvMI | @RCBTweets pic.twitter.com/o2HkDi6tCJ
ಭುವನೇಶ್ವರ್ ಕುಮಾರ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ
ಅಂದ ಹಾಗೆ ಎರಡು ಎಸೆತಗಳಲ್ಲಿ 7 ರನ್ ಗಳಿಸುವುದಕ್ಕೂ ಮುನ್ನ ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ ನಾಲ್ಕು ವಿಕೆಟ್ ಸಾಧನೆ ಮಾಡಿದ್ದರು. ಇದರ ಫಲವಾಗಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.ಮುಂಬೈ ಪರ ಅದ್ಭುತವಾಗಿ ಬೌಲ್ ಮಾಡಿದ ಕಾರ್ಬಿನ್ ಬಾಷ್ 4 ವಿಕೆಟ್ ಸಾಧನೆ ಮಾಡಿದರೆ, ದೀಪಕ್ ಚಹರ್ ಎರಡು ವಿಕೆಟ್ ಕಿತ್ತರು.
#RCB fans, how are the nerves now? 😅❤️
— IndianPremierLeague (@IPL) May 10, 2026
🎥 An 𝗮𝗯𝘀𝗼𝗹𝘂𝘁𝗲𝗹𝘆 𝗺𝗶𝗻𝗱-𝗯𝗹𝗼𝘄𝗶𝗻𝗴 finish in Raipur takes @RCBTweets to the 🔝 of the points table 🔢👏
Scorecard ▶️ https://t.co/wYlCB10dhm#TATAIPL | #KhelBindaas | #RCBvMI pic.twitter.com/BcYyHO01gB
ಮುಂಬೈಗೆ ಆರಂಭಿಕ ಆಘಾತ ನೀಡಿದ ಭುವನೇಶ್ವರ್ ಕುಮಾರ್
ಇದಕ್ಕೂ ಮುನ್ನ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅವರ ನಿರ್ಧಾರವನ್ನು ಆರ್‌ಸಿಬಿ ಬೌಲರ್‌ಗಳು ವಿಶೇಷವಾಗಿ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಸಮರ್ಥಿಸಿಕೊಂಡರು. ಅವರು ಪವರ್‌ಪ್ಲೇನಲ್ಲಿ ಮುಂಬೈ ತಂಡದ ಮೂವರು ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿ ಐದು ಬಾರಿ ಚಾಂಪಿಯನ್ಸ್‌ಗೆ ಆರಂಭಿಕ ಆಘಾತ ನೀಡಿದ್ದರು. ಮೊದಲನೇ ಓವರ್‌ನಲ್ಲಿ ರಯಾನ್ ರಿಕೆಲ್ಟನ್, ಮೂರನೇ ಓವರ್‌ನಲ್ಲಿ 22 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದ ರೋಹಿತ್ ಶರ್ಮಾ ಹಾಗೂ ನಾಯಕ ಸೂರ್ಯಕುಮಾರ್ ಅವರನ್ನು ಸ್ವಿಂಗ್ ಮಾಸ್ಟರ್ ಔಟ್ ಮಾಡಿದರು. ಆ ಮೂಲಕ ಪವರ್‌ಪ್ಲೇನಲ್ಲಿ ಆರ್‌ಸಿಬಿಗೆ ಮುನ್ನಡೆ ತಂದುಕೊಟ್ಟಿದ್ದರು.
A breathtaking finish that will be remembered for ages 🤩
— IndianPremierLeague (@IPL) May 10, 2026
Incredible scene out there in the middle 🥹
Scorecard ▶️ https://t.co/wYlCB10dhm#TATAIPL | #KhelBindaas | #RCBvMI | @RCBTweets pic.twitter.com/VqXzwhUOnH
ನಮನ್-ತಿಲಕ್ ಜುಗಲ್‌ಬಂದಿ
ಕೇವಲ 28 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭಿಸಿದ್ದ ವೇಳೆ ನಾಲ್ಕನೇ ವಿಕೆಟ್‌ಗೆ ಜೊತೆಯಾದ ನಮನ್ ಧಿರ್ ಹಾಗೂ ತಿಲಕ್ ವರ್ಮಾ, ಸನ್ನಿವೇಶಕ್ಕೆ ತಕ್ಕಂತೆ ಬ್ಯಾಟ್ ಮಾಡಿದರು. ಈ ಜೋಡಿ ದೀರ್ಘಾವಧಿ ಬ್ಯಾಟ್ ಮಾಡಿ 82(57 ಎಸೆತಗಳು) ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿತು ಹಾಗೂ ತಮ್ಮ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು ಹಾಗೂ ತಂಡದ ಮೊತ್ತವನ್ನು 110ರ ಗಡಿ ದಾಟಿಸಿತು. ಆ ಮೂಲಕ ಮುಂಬೈ ತಂಡ ಕಮ್‌ಬ್ಯಾಕ್ ಮಾಡಿತು. ಜವಾಬ್ದಾರಿಯುತ ಬ್ಯಾಟ್ ಮಾಡುತ್ತಿದ್ದ ನಮನ್, 32 ಎಸೆತಗಳಲ್ಲಿ 47 ರನ್ ಗಳಿಸಿದ್ದರು. ಆದರೆ, ಈ ವೇಳೆ ರಸಿಖ್ ದಾರ್ ಸಲಾಮ್ ಅತ್ಯುತ್ತಮ ತಂತ್ರದೊಂದಿಗೆ ನಮನ್ ಧಿರ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿ ಮುಂಬೈಗೆ ವಿಶ್ವಾಸ ಮೂಡಿಸಿದ್ದ ಜೊತೆಯಾಟವನ್ನು ಬ್ರೇಕ್ ಮಾಡಿದರು ಹಾಗೂ ಆರ್‌ಸಿಬಿ ಕಮ್‌ಬ್ಯಾಕ್‌ಗೆ ನೆರವು ನೀಡಿದರು.
WHAT ON EARTH HAVE WE JUST WITNESSED! 🤯
— IndianPremierLeague (@IPL) May 10, 2026
Bhuvneshwar Kumar & Rasikh Dar, take a bow ❤️
Updates ▶️ https://t.co/wYlCB10dhm#TATAIPL | #KhelBindaas | #RCBvMI | @RCBTweets pic.twitter.com/tqkuPMEsHR
ಮುಂಬೈಗೆ ತಿಲಕ್ ಅರ್ಧಶತಕದ ಆಸರೆ
10 ರನ್ ಗಳಿಸಿ ಆಡುತ್ತಿದ್ದ ಅಪಾಯಕಾರಿ ವಿಲ್ ಜ್ಯಾಕ್ಸ್ ಅವರನ್ನು ರೊಮ್ಯಾರಿಯೊ ಶೆಫರ್ಡ್ ಔಟ್ ಮಾಡಿದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಜವಾಬ್ದಾರಿಯುತವಾಗಿ ಬ್ಯಾಟ್ ಮಾಡುತ್ತಿದ್ದ ತಿಲಕ್ ವರ್ಮಾ, ದೀರ್ಘಾವಧಿ ಆರ್‌ಸಿಬಿ ಬೌಲರ್‌ಗಳನ್ನು ಕಾಡಿದರು. 18ನೇ ಓವರ್‌ವರೆಗೂ ಬ್ಯಾಟ್ ಮಾಡಿದ್ದ ತಿಲಕ್, 42 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಮೂರು ಬೌಂಡರಿಗಳೊಂದಿಗೆ 57 ರನ್ ಗಳಿಸಿ ಮುಂಬೈ ತಂಡದ ಮೊತ್ತವನ್ನು 200ರ ಸನಿಹ ತರುವ ಪ್ರಯತ್ನದಲ್ಲಿ ಭುವನೇಶ್ವರ್ ಕುಮಾರ್ ಮಾಸ್ಟರ್ ಪ್ಲ್ಯಾನ್‌ಗೆ ಶರಣಾದರು. ತಿಲಕ್ ಔಟ್ ಆದ ಬಳಿಕ ಡೆತ್ ಓವರ್‌ಗಳಲ್ಲಿ ಮುಂಬೈ ಹೆಚ್ಚಿನ ರನ್ ಬರಲಿಲ್ಲ. ಕೊನೆಯಲ್ಲಿ ರಾಜ್ ಬಾವ 16 ರನ್ ಗಳಿಸಿದರು. ಅಂತಿಮವಾಗಿ ಮುಂಬೈ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್ ನಷ್ಟಕ್ಕೆ 166 ರನ್‌ಗಳಿಗೆ ಸೀಮಿತವಾಯಿತು.
Standing tall when needed 🫡
— IndianPremierLeague (@IPL) May 10, 2026
Krunal Pandya with his 3️⃣rd #TATAIPL fifty to lead #RCB's chase 👏
Updates ▶️ https://t.co/wYlCB10dhm#KhelBindaas | #RCBvMI | @RCBTweets | @krunalpandya24 pic.twitter.com/SM6tp474Bl
ಭುವನೇಶ್ವರ್ ಕುಮಾರ್‌ಗೆ 4 ವಿಕೆಟ್
ಆರ್‌ಸಿಬಿ ಪರ ಪರಿಣಾಮಕಾರಿಯಾಗಿ ಬೌಲ್ ಮಾಡಿದ ಭುವೇಶ್ವರ್ ಕುಮಾರ್ 4 ಓವರ್‌ಗಳಿಗೆ ಕೇವಲ 23 ರನ್ ನೀಡಿ 4 ವಿಕೆಟ್ ಸಾಧನೆ ಮಾಡಿದರು ಹಾಗೂ ಪರ್ಪಲ್ ಕ್ಯಾಪ್ ಅನ್ನು ಮರಳಿ ಪಡೆದರು. ರಸಿಖ್ ದಾರ್ ಸಲಾಮ್, ಜಾಶ್ ಹೇಝಲ್‌ವುಡ್ ಹಾಗೂ ರೊಮ್ಯಾರಿಯೊ ಶೆಫರ್ಡ್ ತಲಾ ಒಂದೊಂದು ವಿಕೆಟ್ ಪಡೆದರು.