ಹಗುರ ಮಾತುಗಳಿಂದ ಕ್ಷೇತ್ರದ ಮರ್ಯಾದೆ ಹಾಳು ಮಾಡಬೇಡಿ, ಶಾಸಕ ಪ್ರದೀಪ್ ಅವರೇ ಕ್ಷೇತ್ರದ ಅಭಿವೃದ್ದಿಗೆ ತೊಡೆ ತಟ್ಟಿ : ಸಂದೀಪ್‌ರೆಡ್ಡಿ ಸಲಹೆ
ಶಾಸಕರೇ ನಿಮಗೆ ಇನ್ನು ಕೇವಲ 1.5 ವರ್ಷವಷ್ಟೇ ಅಭಿವೃದ್ದಿಗೆ ಸಮಯವಿದೆ. ಈ ಅವಧಿ ಯಲ್ಲಾದರೂ ಜನತೆಯ ಕಷ್ಟವನ್ನು ನೋಡಿ. ಚಿಕ್ಕಬಳ್ಳಾಪುರಕ್ಕಾಗಿ ಶಾಸಕರಾಗಿ ಏನು ಮಾಡ ಬೇಕೋ ಅಷ್ಟನ್ನೇ ಮಾಡಿ. ನೀವು ಸ್ಕಾಲರ್‌ಶಿಫ್ ಕೊಡುತ್ತಿದ್ದೀರಿ, ಅಂಬುಲೆನ್ಸ್ ಬಿಟ್ಟಿದ್ದೀರಿ, ಶಾಲೆಯ ಮಕ್ಕಳಿಗೆ, ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ಬಾಗಿನ ಕೊಡುವುದು ಇವೆಲ್ಲಾ ಮಾಡುತ್ತಿರುವುದು ಸಂತೋಷವೇ.
ಸಂದೀಪ್ ರೆಡ್ಡಿ -
ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಅವರೇ ಮೂರನೇ ಹಂತದ ಶುದ್ಧೀಕರಣದ ಬಗ್ಗೆ ದನಿ ಎತ್ತುವ ಧೈರ್ಯವಿಲ್ಲದ ನಿಮಗೆ ಅಲ್ಲೆಲ್ಲೋ ದಾವಣಗೆರೆ ಯಲ್ಲಿ ಹೋಗಿ ತೊಡೆ ತಟ್ಟುವುದು ಬಿಡಿ. ಮೊದಲು ಕ್ಷೇತ್ರದ ಹಾಳಾದ ರಸ್ತೆಗಳು ಸೇರಿ ಅಭಿವೃದ್ಧಿಗೆ ತೊಡೆ ತಟ್ಟಬೇಕು ಎಂದು ಸಲಹೆ ನೀಡಿದರು.
ಶಾಸಕರಿಗೆ ಫೇಸ್‌ಬುಕ್ ಮೂಲಕ ವಿಡಿಯೋ ಮಾಡಿ ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ನೀವು ದಾವಣಗೆರೆಗೆ ಹೋಗಿ ಆಟಾಟೋಪಗಳನ್ನು ಮೆರೆಯಲು ಸಮಯವಿದೆ. ನಿಮ್ಮದೇ ವಿಧಾನ ಸಭಾ ಕ್ಷೇತ್ರದಲ್ಲಿ ಅಧ್ವಾನಗೊಂಡಿರುವ ರಸ್ತೆಗಳಲ್ಲಿ ಜನತೆ ಜೀವವನ್ನು ಪಣ ಕ್ಕಿಟ್ಟು ಹೇಗೆ ಸಂಚಾರ ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಲು ಕೂಡ ಸಮಯ ಕೊಡಿ ಎಂದಿದ್ದಾರೆ.
ಶಾಸಕರೇ ನಿಮಗೆ ಇನ್ನು ಕೇವಲ 1.5 ವರ್ಷವಷ್ಟೇ ಅಭಿವೃದ್ದಿಗೆ ಸಮಯವಿದೆ. ಈ ಅವಧಿ ಯಲ್ಲಾದರೂ ಜನತೆಯ ಕಷ್ಟವನ್ನು ನೋಡಿ. ಚಿಕ್ಕಬಳ್ಳಾಪುರಕ್ಕಾಗಿ ಶಾಸಕರಾಗಿ ಏನು ಮಾಡಬೇಕೋ ಅಷ್ಟನ್ನೇ ಮಾಡಿ. ನೀವು ಸ್ಕಾಲರ್‌ಶಿಫ್ ಕೊಡುತ್ತಿದ್ದೀರಿ, ಅಂಬುಲೆನ್ಸ್ ಬಿಟ್ಟಿದ್ದೀರಿ, ಶಾಲೆಯ ಮಕ್ಕಳಿಗೆ, ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ಬಾಗಿನ ಕೊಡುವುದು ಇವೆಲ್ಲಾ ಮಾಡುತ್ತಿರುವುದು ಸಂತೋಷವೇ. ಆದರೆ ಇದರ ಜತೆಗೆ ಶಾಸಕರ ಅನುದಾನ, ಮುಖ್ಯಮಂತ್ರಿಗಳ ವಿಶೇಷ ಅನುದಾನ ತಂದು ಕ್ಷೇತ್ರವನ್ನು ಮಾದರಿಯಾಗಿ ರೂಪಿಸಿ ಎಂದು ಕರೆ ನೀಡಿದರು.
ಇದನ್ನೂ ಓದಿ: Chinthamai News: ಚಿಂತಾಮಣಿ ನಗರದಲ್ಲಿ ಏಪ್ರಿಲ್ 1ರಿಂದ ಜನಗಣತಿ ಕಾರ್ಯ ಆರಂಭ : ಪೌರಾಯುಕ್ತ ಚಲಪತಿ
3ನೇ ಹಂತದ ಶುದ್ಧೀಕರಣದ ಹೋರಾಟ ತೀವ್ರವಾಗುತ್ತಿದ್ದರೂ ಸಪ್ಲಿಮೆಂಟರಿ ಬಜೆಟ್‌ನಲ್ಲಿ ಅನುದಾನ ತರುತ್ತೀರಿ ಎಂಬ ನಮ್ಮ ಆಸೆ ಕಮರಿಹೋಗಿದೆ. ನೀವೇ ಹೇಳಿದಂತೆ ಚಿಕ್ಕಬಳ್ಳಾ ಪುರವನ್ನು ಚಿಕ್ಕಬಳ್ಳಾಪುರವಾಗಿಯೇ ಮಾಡಿ ಪುಣ್ಯ ಕಟ್ಟಿಕೊಳ್ಳಿ. ಹಿಂದೆ ಹೀಗೆ ಇರಲಿಲ್ಲ, ಇತ್ತೀಚೆಗೆ ಯಾಕೋ ಪದೇ ಪದೇ ಅಹಿಂದ ಎಂಬ ಪರದೆ ಹಿಂದೆ ಬಚ್ಚಿಟ್ಟು ಕೊಳ್ಳಲು ಬಯಸುತ್ತಿದ್ದಿರಿ. ಅಹಿಂದ ಅದೊಂದು ಶಕ್ತಿಯಾಗಬೇಕೇ ವಿನಃ ತಮ್ಮ ದೌರ್ಬಲ್ಯ ವಾಗಬಾರದು. ನೀವು ಅಹಿಂದ ಹುಡುಗನೇ ಆಗಿದ್ದರೆ ದಾವಣಗೆರೆಯಲ್ಲಿ ಟಿಕೆಟ್ ವಂಚಿತರು ಯಾರು? ಅತ್ಯಂತ ಹೆಚ್ಚಾಗಿರುವ ಮುಸ್ಲಿಂ ಸಮುದಾಯ. ಮುಸ್ಲಿಂ ಸಮು ದಾಯ ಅಹಿಂದ ಅಲ್ಲವಾ? ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಸಾಮಾನ್ಯ ಕುಟುಂಬದಿಂದ ಬಂದು ವಾಲ್ಮೀಕಿ ಸಮುದಾಯದ ಅಭ್ಯರ್ಥಿ ಅಲ್ಲವಾ? ಅವರು ಅಹಿಂದ ಅಲ್ಲವಾ? ಅಹಿಂದ ಎಂದರೆ ಬೇಕಾದಾಗ ಬೇಕಾದಂತೆ ಬಳಸಿಕೊಳ್ಳುವುದಾ? ಎಂದು ಪ್ರಶ್ನಿಸಿದರು.
ನಿಮ್ಮನ್ನು ಯಾರಾದರೂ ಪ್ರಶ್ನೆ ಮಾಡಿದರೆ ಉತ್ತರಿಸುವ ಬದಲು ಅಹಿಂದ ಹೆಸರಿನ ಹಿಂದೆ ಬಚ್ಚಿಟ್ಟುಕೊಳ್ಳಲು ಹೋಗುತ್ತೀರಲಾ? ಅಹಿಂದ ಪವಿತ್ರವಾದ ಪದ. ತೊಡೆ ತಟ್ಟುವುದು ದೇವರು ನಿಮಗೆ ಕೊಟ್ಟಿರುವ ಶಾಸಕತ್ವವೆಂಬ ಅವಕಾಶವನ್ನು ಬಳಸಿಕೊಂಡು ಕೆಲಸ ಮಾಡುವ ಮೂಲಕ ತಟ್ಟಿ. ಅಲ್ಲೆಲ್ಲೋ ಹೋಗಿ ಪೊಲೀಸರನ್ನು ಅಡ್ಡ ಇಟ್ಟುಕೊಂಡು ತೊಡೆ ತಟ್ಟುವುದಲ್ಲ. ನಿಮ್ಮಿಂದ ಇದನ್ನು ನಾವು ನಿರೀಕ್ಷಿರಲಿಲ್ಲ. ಬಡತನ ಅನುಭವಿಸಿದ ಸಾಮಾನ್ಯ ವರ್ಗದಿಂದ ಬಂದ ಒಬ್ಬ ಹುಡುಗ ಶಾಸಕನಾದ ಸಂದರ್ಭದಲ್ಲಿ ಸಂತೋಷ ಪಟ್ಟವರಲ್ಲಿ ನಾನೂ ಕೂಡ ಒಬ್ಬ.ಏನು ಮಾಡುತ್ತಿದ್ದೀರಿ ನೀವು? 5 ವರ್ಷ ಕಳೆದು ಹೋಗಲಿ ಎಂದು ಕಾಲಹರಣ ಮಾಡುತ್ತಿದ್ದೀರಾ? ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ನಿಮಗೆ ಎಚ್ಚರಿಕೆ ಕೊಡುತ್ತಿದ್ದೇನೆ.
ಶಾಸಕರೇ ಅನಗತ್ಯವಾಗಿ ಬಿಜೆಪಿ ಕಾರ್ಯಕರ್ತರು, ಮುಖಂಡರ ಬಗ್ಗೆ ಅನಾವಶ್ಯಕವಾಗಿ ಹಗುರವಾಗಿ ಮಾತನಾಡುವುದು, ಗೊತ್ತಿರುವ ಪದಗಳನ್ನು ಬಳಸುವುದು ಬೇಡ? ಶಾಸಕ ರಾಗುವ ಮೊದಲು ಯಾವ ಹಂಬಲ್‌ನೆಸ್ ಇತ್ತೋ ಅದನ್ನು ಮುಂದೆಯೂ ಉಳಿಸಿಕೊಳ್ಳಿ. ನಿಮ್ಮ ವೀರಾವೇಶ ಕೆಲಸದಲ್ಲಿ ಮಾಡಿತೋರಿಸಿ ಅಭಿವೃದ್ದಿಯಲ್ಲಿ ಮಾಡಿ ತೋರಿಸಿ?ಪೊಲೀಸರನ್ನು ಇಟ್ಟುಕೊಂಡು ತೊಡೆ ತಟ್ಟುವ ಕೆಲಸವನ್ನು ಅಧಿಕಾರದಲ್ಲಿರುವ ಯಾರು ಬೇಕಾದರೂ ಮಾಡುತ್ತಾರೆ. ನಿವೊಬ್ಬರೇ ಮಾಡಿರುವ ವಿಶೇಷವೂ ಇದಲ್ಲ. ನಿಮಗಿಂತ ಹೇಗೋಗೋ ಬಾಳಿದವರು ಕಣ್ಣಿಗೆ ಮರೆಯಾಗಿ ಹೋಗಿದ್ದಾರೆ. ರಾಜಕೀಯವಾಗಿ ನಾಮಾ ವಶೇಷವಾಗಿ ಹೋಗಿದ್ದಾರೆ.
ದಯವಿಟ್ಟು ನಿಮಗೆ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಚಿಕ್ಕಬಳ್ಳಾಪುರದ ಅಭಿವೃದ್ದಿಗೆ ಬಳಸಿ, ಪ್ರಚಾರದ ಗೀಳಿಗೆ ಬಳಸಬೇಡಿ, ನಗೆಪಾಟಲಿಗೆ ಈಡುಮಾಡಬೇಡಿ. ಬಿಜೆಪಿ ವಿರುದ್ಧ ಸೈದ್ದಾಂತಿಕವಾಗಿ ದಾಳಿಮಾಡಿ ಹೋರಾಟ ಮಾಡೋಣ. ಅದನ್ನು ಬಿಟ್ಟು ಹಗುರ ಮಾತುಗಳಿಂದ ನಾಲಿಗೆಯಿದೆಯೆಂದು ಹೇಗೇಗೋ ಮಾತನಾಡಿ ನಗೆಪಾಟಲಿಗೆ ಒಳಗಾಗಬೇಡಿ ಎಂದು ಹರಿದಾಯ್ದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದ್ದು ನಾನಾ ತರದ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.