ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gauribidabur News: ಸವಿತಾ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ

ತಾಲೂಕು ಸವಿತಾ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಡಿ.ಶಿವಕುಮಾರ್ ಮಾತನಾಡಿ, ಸಮುದಾಯದವರು ಸಂಘಟನೆ ಮತ್ತು ಒಗ್ಗಟ್ಟಿನಿಂದ ಸಾಗಿದಾಗ ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ನಮಗೆ ಪ್ರಾತಿನಿಧ್ಯ ಸಿಗಲಿದೆ, ಈ ನಿಟ್ಟಿನಲ್ಲಿ ನೂತನ ಪದಾಧಿ ಕಾರಿಗಳು ಸಮುದಾಯದ ಸಂಘಟನೆ ಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು

Gauribidabur News: ಸವಿತಾ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ

ತಾಲೂಕಿನ ಹೊಸೂರು ಗ್ರಾಮದಲ್ಲಿನ ಈಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲಿ ಹೊಸೂರು ಹೋಬಳಿ ಸವಿತಾ ಸಮಾಜದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. -

Profile
Ashok Nayak May 21, 2026 8:07 PM

ಗೌರಿಬಿದನೂರು : ತಾಲೂಕಿನ ಹೊಸೂರು ಗ್ರಾಮದಲ್ಲಿನ ಈಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲಿ ಹೊಸೂರು ಹೋಬಳಿ ಸವಿತಾ ಸಮಾಜದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಜಡಪ್ಪ(ಗೌರವಾಧ್ಯಕ್ಷ), ಹೇಮಂತ್ ಕುಮಾರ್(ಅಧ್ಯಕ್ಷ), ಮಂಜುನಾಥ್(ಉಪಾಧ್ಯಕ್ಷ), ನರಸಿಂಹ ರಾಜು (ಪ್ರಧಾನ ಕಾರ್ಯದರ್ಶಿ), ರಾಜೇಶ್(ಕಾರ್ಯದರ್ಶಿ) ಎಚ್.ಸಿ.ಸಂಜೀವ್ ಕುಮಾರ್(ಖಜಾಂಜಿ) ಆಯ್ಕೆಯಾದರು.

ಇದನ್ನೂ ಓದಿ: Gauribidanur News: ಮೇ.17ಕ್ಕೆ ಸಂಕಲ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ

ಈ ಸಂದರ್ಭದಲ್ಲಿ ತಾಲೂಕು ಸವಿತಾ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಡಿ.ಶಿವಕುಮಾರ್ ಮಾತನಾಡಿ, ಸಮುದಾಯದವರು ಸಂಘಟನೆ ಮತ್ತು ಒಗ್ಗಟ್ಟಿನಿಂದ ಸಾಗಿದಾಗ ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ನಮಗೆ ಪ್ರಾತಿನಿಧ್ಯ ಸಿಗಲಿದೆ, ಈ ನಿಟ್ಟಿನಲ್ಲಿ ನೂತನ ಪದಾಧಿ ಕಾರಿಗಳು ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಸವಿತಾ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಹಕಾರ್ಯದರ್ಶಿ ಎನ್.ಸತೀಶ್, ಹಿರಿಯರಾದ ಎಚ್.ಸಿ ಸಂಜೀವಕುಮಾರ್, ರಮಾಪುರ ಅಶ್ವತಪ್ಪ, ರಾಮಾಂಜನಪ್ಪ, ಮಂಜುನಾಥ,  ಹೊಸೂರಿನ ಚಂದ್ರಶೇಖರ್, ಕುರುಡಿ ಮೂರ್ತಿ, ಲೋಕೇಶ್ ಮತ್ತಿತರರು ಹಾಜರಿದ್ದರು.