J K KrishnaReddy: ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಜನ್ಮದಿನ: ಆಧಾರ್ ಶಾಲೆ ಮಕ್ಕಳಿಗೆ ₹10 ಸಾವಿರ ದೇಣಿಗೆ ನೀಡಿ ಸಾರ್ಥಕ ಆಚರಣೆ
ಹುಟ್ಟುಹಬ್ಬದ ಹೆಸರಿನಲ್ಲಿ ಅನಗತ್ಯ ಖರ್ಚು ಮಾಡದೆ, ಸಮಾಜದ ಮುಖ್ಯವಾಹಿನಿಯಿಂದ ದೂರ ವಿರುವ ವಿಶೇಷ ಮಕ್ಕಳ ಶಾಲಾ ನೆರವಿಗೆ ಧಾವಿಸಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ತಾಲ್ಲೂಕು ಅಧ್ಯಕ್ಷ ಚಲಪತಿ, ಪಕ್ಷದ ಪ್ರಮುಖ ಮುಖಂಡರು,ಆಧಾರ್ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
-
ಚಿಂತಾಮಣಿ: ಜೆಡಿಎಸ್(JDS) ಯುವ ಘಟಕದ ತಾಲ್ಲೂಕು ಅಧ್ಯಕ್ಷರಾದ ಚಲಪತಿ ಅವರ ನೇತೃತ್ವದಲ್ಲಿ ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ(J K KrishnaReddy) ಅವರ ಹುಟ್ಟುಹಬ್ಬವನ್ನು ಅತ್ಯಂತ ಸಾರ್ಥಕ ಹಾಗೂ ಮಾದರಿ ರೀತಿಯಲ್ಲಿ ಆಚರಿಸಲಾಯಿತು.
ಚಿಂತಾಮಣಿ ನಗರದ ಪ್ರಸಿದ್ಧ ಆಧಾರ್ ವಿಶೇಷ ಮಕ್ಕಳ ಶಾಲೆ'ಯಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ,ಮಾಜಿ ಶಾಸಕರ ಜನ್ಮದಿನದ ಅಂಗವಾಗಿ ಶಾಲೆಯ ವಿಶೇಷ ಮಕ್ಕಳ ಒಳಿತಿ ಗಾಗಿ10 ಸಾವಿರ ರೂಪಾಯಿಗಳ ನಗದು ದೇಣಿಗೆಯನ್ನು ಹಸ್ತಾಂತರಿಸಲಾಯಿತು.
ಇದನ್ನೂ ಓದಿ: Chinthamani News: ಚಿಂತಾಮಣಿಯಲ್ಲಿ ಬೃಹತ್ ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
ಹುಟ್ಟುಹಬ್ಬದ ಹೆಸರಿನಲ್ಲಿ ಅನಗತ್ಯ ಖರ್ಚು ಮಾಡದೆ, ಸಮಾಜದ ಮುಖ್ಯವಾಹಿನಿಯಿಂದ ದೂರವಿರುವ ವಿಶೇಷ ಮಕ್ಕಳ ಶಾಲಾ ನೆರವಿಗೆ ಧಾವಿಸಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ತಾಲ್ಲೂಕು ಅಧ್ಯಕ್ಷ ಚಲಪತಿ, ಪಕ್ಷದ ಪ್ರಮುಖ ಮುಖಂಡರು,ಆಧಾರ್ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.