ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಮಂಚೇನಹಳ್ಳಿ ಮಾನಸ ಆಸ್ಪತ್ರೆಯಲ್ಲಿ ಉಚಿತ ಕೀಲು, ಎಲುಬು ಸಾಂಧ್ರತೆ ಪರೀಕ್ಷಾ ಶಿಬಿರ

ಡಿ.20ರ ಶನಿವಾರ ಮಂಚೇನಹಳ್ಳಿಯಲ್ಲಿ ನಡೆಯಲಿರುವ ಉಚಿತ ತಪಾಸಣೆ ಶಿಬಿರದ ಕುರಿತು ಏರ್ಪಡಿಸಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು  ಗ್ರಾಮೀಣ ಜನತೆಗೆ ಆರೋಗ್ಯ ಸಂಬಂಧಿ ವಿಚಾರಗಳಲ್ಲಿ ತಿಳುವಳಿಕೆ ಕೊರತೆಯಿದೆ. ಇದನ್ನು ಮನಗಂಡು ಈ ಶಿಬಿರ ಆಯೋಜಿಸ ಲಾಗಿದೆ ಎಂದರು.

ಉಚಿತ ಕೀಲು, ಎಲುಬು ಸಾಂಧ್ರತೆ ಪರೀಕ್ಷಾ ಶಿಬಿರ

-

Ashok Nayak
Ashok Nayak Dec 20, 2025 12:42 AM

ಚಿಕ್ಕಬಳ್ಳಾಪುರ: ಜಿಲ್ಲೆಯ ಮಂಚೇನಹಳ್ಳಿಯ ಮಾನಸ ಆಸ್ಪತ್ರೆಯಲ್ಲಿ ಶನಿವಾರ ಉಚಿತ ಕೀಲು ಹಾಗೂ ಮೈಕೈ ನೋವು ಚಿಕಿತ್ಸೆ ಮತ್ತು ಉಚಿತ ಎಲುಬು ಸಾಂಧ್ರತೆ(ಬೋನ್ ಮಿನರಲ್ ಡೆನ್ಸಿಟಿ) ಪರೀಕ್ಷಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಮಾನಸ ಆಸ್ಪತ್ರೆಯ ಮೂಳೆ ತಜ್ಞ ಡಾ.ಪ್ರತೀಕ್ ಮನವಿ ಮಾಡಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ದರು.

ಡಿ.20ರ ಶನಿವಾರ ಮಂಚೇನಹಳ್ಳಿಯಲ್ಲಿ ನಡೆಯಲಿರುವ ಉಚಿತ ತಪಾಸಣೆ ಶಿಬಿರದ ಕುರಿತು ಏರ್ಪಡಿಸಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು  ಗ್ರಾಮೀಣ ಜನತೆಗೆ ಆರೋಗ್ಯ ಸಂಬಂಧಿ ವಿಚಾರಗಳಲ್ಲಿ ತಿಳುವಳಿಕೆ ಕೊರತೆಯಿದೆ. ಇದನ್ನು ಮನಗಂಡು ಈ ಶಿಬಿರ ಆಯೋಜಿಸಲಾಗಿದೆ ಎಂದರು.

ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ

ಜಿಲ್ಲೆಯ ಮಂಚೇನಹಳ್ಳಿ, ಗೌರಿಬಿದನೂರು,ಚಿಕ್ಕಬಳ್ಳಾಪುರ,ಗುಡಿಬಂಡೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ವಾಸವಿದ್ದು, ದಿನನಿತ್ಯದ ದುಡಿಮೆ ಹಾಗೂ ಕೆಲಸದ ಒತ್ತಡದಲ್ಲಿ ಆರೋಗ್ಯದ ಕಡೆ ಉದಾಸೀನ ಭಾವನೆ ತಾಳುತ್ತಾರೆ.ಇಂತಹವರನ್ನು ಮೈಕೈ ನೋವು ಸಾಮಾನ್ಯವಾಗಿ ಕಾಡುತ್ತಿರುತ್ತದೆ. ಇದಲ್ಲದೆ ಬೆನ್ನುಮೂಳೆ,ಸೊಂಟ ಹಾಗೂ ಮಂಡಿ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಈ ರೀತಿಯ ನೋವುಗಳನ್ನು ಪ್ರಾರಂಭಿಕ ಹಂತದಲ್ಲೇ ನಿರ್ಲಕ್ಷ್ಯ ಮಾಡಿದರೆ, ನಂತರ ಶಸ್ತ್ರಚಿಕಿತ್ಸೆ ಅವಶ್ಯಕವಾಗುವ ಪರಿಸ್ಥಿತಿ ಉಂಟಾಗುತ್ತದೆ.ಆದರೆ ಆರಂಭಿಕ ಹಂತದಲ್ಲೇ ತಪಾಸಣೆಗೆ ಒಳಪಡಿಸಿ ಸೂಕ್ತ ಚಿಕಿತ್ಸೆ ನೀಡಿದರೆ ನೋವಿನಿಂದ ಸಂಪೂರ್ಣ ಗುಣಮುಖರಾಗಲು ಸಾಧ್ಯವಿದೆ ಎಂದು ಡಾ.ಪ್ರತೀಕ್ ತಿಳಿಸಿದರು.

ಜನರಲ್ಲಿ ನೋವಿನ ಕುರಿತು ಅರಿವು ಮೂಡಿಸುವುದು ಹಾಗೂ ಪ್ರಾರಂಭಿಕ ಹಂತದಲ್ಲಿರುವ ಮೂಳೆ ಸಂಬAಧಿತ ರೋಗಗಳು ಮತ್ತು ಇತರೆ ನೋವು ಸಮಸ್ಯೆಗಳನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಉಚಿತ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಕೇವಲ ಚಿಕಿತ್ಸೆ ಮಾತ್ರ ವಲ್ಲದೆ, ತಜ್ಞರಿಂದ ಪಾಲಿಸಬೇಕಾದ ಆಹಾರ ಪದ್ಧತಿ,ವ್ಯಾಯಾಮ ಹಾಗೂ ಜೀವನಶೈಲಿ ಕುರಿತು ಅಗತ್ಯ ಮಾರ್ಗದರ್ಶನವೂ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಶಿಬಿರದಲ್ಲಿ ಎಲ್ಲ ರೀತಿಯ ತಪಾಸಣೆ ಸಂಪೂರ್ಣ ಉಚಿತವಾಗಿರುತ್ತದೆ. ಜೊತೆಗೆ ಉಚಿತ ಚಿಕಿತ್ಸೆ ನೀಡಲಾಗುವುದರೊಂದಿಗೆ ಅಗತ್ಯ ಔಷಧಿಗಳನ್ನೂ ಉಚಿತವಾಗಿ ವಿತರಿಸಲಾಗುತ್ತದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ.ಖದೀಜಾ ಶೇಕ್, ಡಾ.ಸತೀಶ್ ಇದ್ದರು.