ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: 37 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೂ ಎರಡು ದಾಖಲೆ ಬರೆದ ಸಂಜು ಸ್ಯಾಮ್ಸನ್!

ದಕ್ಷಿಣ ಆಫ್ರಿಕಾ ವಿರುದ್ಧ ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತದ ಪರ ಇನಿಂಗ್ಸ್‌ ಆರಂಭಿಸಿದ ಸಂಜು ಸ್ಯಾಮ್ಸನ್‌, 22 ಎಸೆತಗಳಲ್ಲಿ 37 ರನ್‌ ಸಿಡಿಸಿದರು. ಆ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಎರಡು ದೊಡ್ಡ ದಾಖಲೆಗಳನ್ನು ಬರೆದಿದ್ದಾರೆ. ಶುಭಮನ್‌ ಗಿಲ್‌ ಗಾಯದ ಕಾರಣ ಈ ಪಂದ್ಯದಲ್ಲಿ ಆಡಲು ಸಂಜುಗೆ ಅವಕಾಶ ಲಭಿಸಿತ್ತು.

37 ರನ್‌ ಗಳಿಸಿ ಟಿ20 ಕ್ರಿಕೆಟ್‌ನಲ್ಲಿ 2 ದಾಖಲೆ ಬರೆದ ಸಂಜು ಸ್ಯಾಮ್ಸನ್‌!

ಎರಡು ದೊಡ್ಡ ದಾಖಲೆಗಳನ್ನು ಬರೆದ ಸಂಜು ಸ್ಯಾಮ್ಸನ್‌. -

Profile
Ramesh Kote Dec 20, 2025 1:56 AM

ಅಹಮಾದಾಬಾದ್‌: ದಕ್ಷಿಣ ಆಫ್ರಿಕಾ ವಿರುದ್ಧದ ಐದನೇ ಟಿ20ಐ ಪಂದ್ಯದಲ್ಲಿ ಸ್ಪೋಟಕ 37 ರನ್‌ ಗಳಿಸುವ ಮೂಲಕ ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಹಾರ್ದಿಕ್‌ ಪಾಂಡ್ಯ ಅವರು ಎರಡು ದೊಡ್ಡ ದಾಖಲೆಗಳನ್ನು ಬರೆದಿದ್ದಾರೆ. ಡಿಸೆಂಬರ್‌ 19 ರಂದು ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಐದನೇ ಪಂದ್ಯದ ಇನಿಂಗ್ಸ್‌ ಮೂಲಕ ಸಂಜು ಸ್ಯಾಮ್ಸನ್‌ ಅವರು 8000 ಟಿ20 ಕ್ರಿಕೆಟ್‌ ರನ್‌ಗಳು ಹಾಗೂ ಟಿ20ಐ ಕ್ರಿಕೆಟ್‌ನಲ್ಲಿ 1000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ 8000 ರನ್‌ಗಳನ್ನು ಪೂರ್ಣಗೊಳಿಸಿದ ಭಾರತದ ಏಳನೇ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಸಂಜು ಬರೆದಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಶಿಖರ್‌ ಧವನ್‌, ಸೂರ್ಯಕುಮಾರ್‌ ಯಾದವ್‌, ಸುರೇಶ್‌ ರೈನಾ ಹಾಗೂ ಕೆಎಲ್‌ ರಾಹುಲ್‌ ಒಳಗೊಂಡ ಎಲೈಟ್‌ ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ. ಇದರ ಜೊತೆಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 1000 ರನ್‌ ಗಳಿಸಿದ 14ನೇ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಐದನೇ ಪಂದ್ಯದಲ್ಲಿ ಮಾರ್ಕೊ ಯೆನ್ಸನ್‌ಗೆ ಸಿಕ್ಸರ್‌ ಬಾರಿಸುವ ಮೂಲಕ ಅವರು ಈ ದಾಖಲೆಗೆ ಭಾಜನರಾದರು.

IND vs SA: ಹಾರ್ದಿಕ್‌ ಪಾಂಡ್ಯ ಅಬ್ಬರ, 5ನೇ ಪಂದ್ಯ ಗೆದ್ದು ಟಿ20ಐ ಸರಣಿ ಮುಡಿಗೇರಿಸಿಕೊಂಡ ಭಾರತ!

ಮಾರ್ಕೊ ಯೆನ್ಸನ್‌ ಅವರು ಹಾಕಿದ್ದ ಲೆನ್ತ್‌ ಎಸೆತವನ್ನು ಸಂಜು ಸ್ಯಾಮ್ಸನ್‌ ತಮ್ಮ ಮುಷ್ಠಿಯಿಂದ ಮಿಡ್‌ ಮೇಲೆ ಸ್ಟ್ಯಾಂಡ್ಸ್‌ಗೆ ಚೆಂಡನ್ನು ಹೊಡೆದರು. ಆ ಮೂಲಕ ತಮ್ಮ ಟಿ20 ಕ್ರಿಕೆಟ್‌ನಲ್ಲಿ ತಮ್ಮ ನೂತನ ಮೈಲುಗಲ್ಲುಗಳನ್ನು ಸ್ಥಾಪಿಸಿದರು. ಅಂದ ಹಾಗೆ ಶುಭಮನ್‌ ಗಿಲ್‌ ಗಾಯಕ್ಕೆ ತುತ್ತಾದ ಕಾರಣ ಸಂಜುಗೆ ಆಡಲು ಅವಕಾಶ ಸಿಕ್ಕಿತ್ತು, ಅದರಂತೆ ಅವರು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಭಾರತಕ್ಕೆ ಭರ್ಜರಿ ತಂದುಕೊಟ್ಟಿದ್ದರು. 37 ರನ್‌ ಗಳಿಸಿದ ಬಳಿಕ ಜಾರ್ಜ್ ಲಿಂಡೆಗೆ ಕ್ಲೀನ್‌ ಬೌಲ್ಡ್‌ ಆದರು.



ಪುರುಷರ ಟಿ20 ಕ್ರಿಕೆಟ್‌ನಲ್ಲಿ 8000 ರನ್‌ ಗಳಿಸಿದ ಭಾರತೀಯ ಬ್ಯಾಟರ್ಸ್‌

ವಿರಾಟ್ ಕೊಹ್ಲಿ - 13,543 ರನ್, 414 ಪಂದ್ಯಗಳು

ರೋಹಿತ್ ಶರ್ಮಾ - 12,248 ರನ್, 463 ಪಂದ್ಯಗಳು

ಶಿಖರ್ ಧವನ್ - 9,797 ರನ್, 334 ಪಂದ್ಯಗಳು

ಸೂರ್ಯಕುಮಾರ್ ಯಾದವ್ - 8,970 ರನ್, 345 ಪಂದ್ಯಗಳು

ಸುರೇಶ್ ರೈನಾ - 8,654 ರನ್, 336 ಪಂದ್ಯಗಳು

ಕೆಎಲ್ ರಾಹುಲ್ - 8,125 ರನ್, 239 ಪಂದ್ಯಗಳು

ಸಂಜು ಸ್ಯಾಮ್ಸನ್ – 8000*, 319 ಪಂದ್ಯಗಳು

ಮುಂದಿನ ವರ್ಷ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ನಡೆಯಲಿದೆ. ಅದಕ್ಕಾಗಿ ಅಜಿತ್‌ ಅಗರ್ಕರ್‌ ನಾಯಕತ್ವದ ಬಿಸಿಸಿಐ ಆಯ್ಕೆ ಸಮಿತಿಯು ಡಿಸೆಂಬರ್‌ 20 ರಂದು ಭಾರತ ತಂಡವನ್ನು ಪ್ರಕಟಿಸಲಿದೆ. ಸಂಜು ಸ್ಯಾಮ್ಸನ್‌ ಈ ಟೂರ್ನಿಯ ಭಾರತ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.