ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಲಿಂಗತ್ವ ಅಲ್ಪ-ಸಂಖ್ಯಾತರಿಗೆ ಸಹಾನುಭೂತಿಗಿಂತ ಸಮಾನ ಅವಕಾಶ ನೀಡಿ: ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ.ಅಕ್ಕೈ ಪದ್ಮಶಾಲಿ

ತಾರತಮ್ಯ ಸಮಾಜದ ಉದ್ದೇಶ ಅರಿತು ನಮ್ಮ ಗುರಿಯನ್ನು ಸಾಧಿಸಲು ಜಾಗರೂಕತೆ ಯಿಂದ ಮುಂದಾಗಬೇಕು. ಪಲ್ಲಟಗೊಂಡಿರುವ ಸಮಾನದಲ್ಲಿ ಜೀವಿಸುತ್ತಿರುವ ನಮಗೆ ನಮ್ಮ ಅದ್ಯತೆ ಗಳು ಏನಾಗಿರಬೇಕು ಎಂಬ ಬಗ್ಗೆ ಸ್ಪಷ್ಟತೆಯಿರಬೇಕು.ಇಂದು ನಮ್ಮದಲ್ಲದ ಜಗತ್ತನ್ನು ನಮಗೆ ಕಾಣಿಸುತ್ತಿರುವುದು ನಿಜಕ್ಕೂ ಆಶ್ಚರ್ಯವೆನಿಸುತ್ತದೆ

ಲಿಂಗತ್ವ ಅಲ್ಪ-ಸಂಖ್ಯಾತರಿಗೆ ಸಹಾನುಭೂತಿಗಿಂತ ಸಮಾನ ಅವಕಾಶ ನೀಡಿ

-

Profile
Ashok Nayak May 12, 2026 11:07 PM

ಚಿಕ್ಕಬಳ್ಳಾಪುರ: ಲಿಂಗತ್ವ ಅಲ್ಪ-ಸಂಖ್ಯಾತರೂ ಕೂಡ ಸಮಾಜದ ಮುಖ್ಯ ಭಾಗ ವಾಗಿರುವುದರಿಂದ ಸಹಾನುಭೂತಿಗಿಂತ ಸಮಾನ ಅವಕಾಶ ನೀಡುವ ಮೂಲಕ ಎಲ್ಲರಂತೆ ಘನತೆಯ ಬದುಕಿಗೆ ಅವಕಾಶ ಮಾಡಿಕೊಡುವ ಅಗತ್ಯವಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ.ಅಕ್ಕೈ ಪದ್ಮಶಾಲಿ ಅಭಿಪ್ರಾಯಪಟ್ಟರು.

ನಗರಹೊರವಲಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ ಚಕೋರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ತಾರತಮ್ಯ ಸಮಾಜದ ಉದ್ದೇಶ ಅರಿತು ನಮ್ಮ ಗುರಿಯನ್ನು ಸಾಧಿಸಲು ಜಾಗರೂಕತೆ ಯಿಂದ ಮುಂದಾಗಬೇಕು. ಪಲ್ಲಟಗೊಂಡಿರುವ ಸಮಾನದಲ್ಲಿ ಜೀವಿಸುತ್ತಿರುವ ನಮಗೆ ನಮ್ಮ ಅಧ್ಯತೆಗಳು ಏನಾಗಿರಬೇಕು ಎಂಬ ಬಗ್ಗೆ ಸ್ಪಷ್ಟತೆಯಿರಬೇಕು.ಇಂದು ನಮ್ಮದಲ್ಲದ ಜಗತ್ತನ್ನು ನಮಗೆ ಕಾಣಿಸುತ್ತಿರುವುದು ನಿಜಕ್ಕೂ ಆಶ್ಚರ್ಯವೆನಿಸುತ್ತದೆ ಎಂದರು.

ಇದನ್ನೂ ಓದಿ: Chikkaballapur News: ಮೊಬೈಲ್ ಮೋಹದಿಂದ ಮಕ್ಕಳು ಹಾದಿ ತಪ್ಪುವುದನ್ನು ತಡೆಯಬೇಕಿದೆ: ವಕೀಲ ಆರ್.ಮಟಮಪ್ಪ

ಯುವಶಕ್ತಿಯ ಬದುಕಿನ ಹಕ್ಕಾದ ಉದ್ಯೋಗದ ಸಮಸ್ಯೆ ನಿವಾರಣೆಗೆ ಮುಂದಾಗದ ಪ್ರಭುತ್ವಗಳು, ವರ್ತಮಾನಕ್ಕೆ ಕುರುಡಾಗಿರುವ ಸಂದರ್ಭವನ್ನು ನಾವಿಂದು ಕಾಣುತ್ತಿದ್ದೇವೆ. ಯುವ ಶಕ್ತಿ ಜಾಗೃತರಾಗಿ ತಮ್ಮ ಪಾಲಿನ ಹಕ್ಕುಗಳನ್ನು ಪಡೆಯಲು ಸಂಘಟಿತ ಹೋರಾ ಟಕ್ಕೆ ಮುಂದಾಗಬೇಕು. ಆಗ ಮಾತ್ರವೇ ಸಾಂವಿಧಾನಿಕ ಹಕ್ಕುಗಳನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.

ಈ ನಿಟ್ಟಿನಲ್ಲಿ ಇಂತಹ ಜ್ವಲಂತ ಸಾಮಾಜಿಕ ವಿಚಾರಧಾರೆಗಳ ಬಗ್ಗೆ ನಿಮ್ಮ ಮನಸ್ಸು ಗಳನ್ನು ಸಜ್ಜುಗೊಳಿಸುವ ಕೆಲಸವನ್ನು ಗುಪ್ತಗಾಮಿನಿಯಂತೆ ಅಕಾಡೆಮಿಯ ಚಕೋರ ಬಳಗ ತನ್ನ ಕೆಲಸ ತಾನು ಮಾಡುತ್ತಿದೆ ಎಂದ ಅವರು ಪ್ರತಿಯೊಬ್ಬರೂ ವ್ಯಕ್ತಿ ಗೌರವಕ್ಕೆ ಮನ್ನಣೆ ನೀಡಬೇಕು ಎಂದರು.

8linga

ಕೇವಲ ಭಾರತ ಮಾತ್ರವಲ್ಲ ಇಡೀ ವಿಶ್ವವೇ ವಿಷಮ ಸ್ಥಿತಿಯಲ್ಲಿದೆ. ನಾವು ಬಯಸದಿದ್ದರೂ ಯುದ್ಧವು ನಮ್ಮ ಮನೆಬಾಗಿಲಿಗೆ ಬಂದು ನಿಂತಿದೆ. ಇಂತಹ ಹೊತ್ತು ಶಾಲಾ ಕಾಲೇಜು ಗಳಲ್ಲಿ ಚಕೋರ ಕಾರ್ಯಕ್ರಮ ಅನುರಣಿಸುತ್ತಿರುವುದು ಸಂತೋಷ ತಂದಿದೆ. ನೀವೆಲ್ಲಾ ಇದರ ಸದುಪಯೋಗಪಡಿಸಿಕೊಳ್ಳಬೇಕು.ಅವಕಾಶಗಳು ತಾನಾಗೇ ಬರುವುದಿಲ್ಲ.ಬಂದಾಗ ಸಮರ್ತವಾಗಿ ಬಳಸಿಕೊಂಡು ಜೀವನದೊಂದಿಗೆ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.

ಕಸಾಪ ತಾಲೂಕು ಅಧ್ಯಕ್ಷ ಯಲುವಹಳ್ಳಿ ಸೋಣ್ಣೇಗೌಡ ಮಾತನಾಡಿ ಸಮಾಜದಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ತೃತೀಯ ಲಿಂಗಿಗಳ ಬಗ್ಗೆ ಚಕೋರ ಗಮನ ಹರಿಸಿ ಅವರ ಬದುಕು ಬವಣೆ ಬಗ್ಗೆ ಉಪನ್ಯಾಸಗಳ ಮೂಲಕ ಯುವ ಸಮೂಹಕ್ಕೆ ತಿಳಿಸಲು ಹೊರಟಿರು ವುದು ಹೆಮ್ಮೆಯ ಸಂಗತಿ. ಇದಕ್ಕಾಗಿ ಸಾಹಿತ್ಯ ಅಕಾಡೆಮಿಯನ್ನು ಮನಸಾ ಅಭಿನಂದಿಸು ತ್ತೇನೆ ಎಂದರು.

m8t

ದೈಹಿಕ ಬದಲಾವಣೆ ಕಾರಣಕ್ಕೆ ಅವಮಾನಕ್ಕೆ ಒಳಗಾಗುವುದು ಸಾಮಾಜಿಕ ಪಿಡುಗಲ್ಲದೆ ಬೇರಲ್ಲ.ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರ ಸರಿಯಾದ ರೀತಿಯಲ್ಲಿ ಅವಕಾಶ ಮತ್ತು ಹಕ್ಕುಗಳನ್ನು ನೀಡಬೇಕು. ಆಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕು. ಆರ್ಥಿಕ ಚೈತನ್ಯ ಮೂಡಿಸಿದಲ್ಲಿ ಭಿಕ್ಷಾಟನೆಯಿಂದ ದೂರವುಳಿಯುತ್ತಾರೆ. ಈ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಬದುಕು ಪರಿಚಯಿಸಬೇಕು.ಆಗ ಅಸಮಾನತೆ ಅಳಿಯಲಿದೆ ಎಂದರು.

ಅAಕಗಳಿಕೆಗಾಗಿ ಓದುವುದು ಅಪಾಯಕಾರಿ ಬೆಳವಣಿಗೆ. ಪುಸ್ತಕ ಓದುವ ಸಂಸ್ಕೃತಿ, ಪತ್ರಿಕೆ ಓದುವ ಬೆಳೆಯಬೇಕು.ಬಸವಣ್ಣನ ವಚನ ಕಲಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ ವಚನ ನಮ್ಮ ಅಂತರAಗ ಬೆಳಗಬೇಕು ಎಂದರು.

ಪ್ರಾAಶುಪಾಲ ಜಿ.ಡಿ.ಚಂದ್ರಯ್ಯ ಮಾತನಾಡಿ ಹೆಣ್ಣು ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು. ಅಂಕಗಳಿಸುವುದಷ್ಟೇ ಓದಿನ ಉದ್ದೇಶವಾಗ ಬಾರದು. ಅಂಕಗಳನ್ನು ಮೀರಿದ ಆರೋಗ್ಯಕರ ಸಮಾಜ ಕಟ್ಟುವುದು ನಮ್ಮ ಜವಾಬ್ದಾರಿ ಯಾಗಬೇಕಿದೆ. ಈದಿಸೆಯಲ್ಲಿ ಕಾಲೇಜಿನಲ್ಲಿ ಹತ್ತು ಹಲವು ಕಾರ್ಯಕ್ರಮಗಳಿಗೆ ಅವಕಾಶ ಒದಗಿಸಲಾಗುತ್ತಿದೆ ಎಂದರು.

ನAದಿ ಪ್ರೌಢಶಾಲೆಯ ಶಿಕ್ಷಕ ತತ್ತೂರು ಲೋಕೇಶಪ್ಪ ಕಾಯಕಯೋಗಿ ಬಸವಣ್ಣನವರ ಚಿಂತನೆಗಳ ಬಗ್ಗೆ ಉಪನ್ಯಾಸ ನೀಡಿ ಮಾತನಾಡುತ್ತಾ ನಡೆ ಮತ್ತು ನುಡಿಯ ಸಾದೃಶ್ಯದ ಬಗ್ಗೆ ವಚನಕಾರರು ಹೇಳಿದಂತೆ ಬೇರಾರೂ ಹೇಳಿರಲು ಸಾಧ್ಯವಿಲ್ಲ.ಮನುಷ್ಯರಾಡುವ ಮಾತಿಗೆ ಮುತ್ತು, ಮಾಣಿಕ್ಯ, ಸ್ಪಟಿಕದ ಗುಣವಿದೆ ಎಂಬುದನ್ನು ತೋರಿಸಿ ಕೊಟ್ಟ ಬಹು ದೊಡ್ಡ ದಾರ್ಶನಿಕ ಬಸವಣ್ಣ ಎಂದರು.

ಹತ್ತು ಹಲವು ವಚನಗಳ ಮೂಲಕ ವಿದ್ಯಾರ್ಥಿಗಳಿಗೆ ಕಲ್ಯಾಣದ ಕ್ರಾಂತಿ, ವಚನ ಚಳವಳಿ, ಅನುಭವ ಮಂಟಪ, ದಾಸೋಹದ ಮಹತ್ವ, ಸಾಮರಸ್ಯದ ಜಗತ್ತಿನ ಹೆಚ್ಚುಗಾರಿಕೆಯ ಬಗ್ಗೆ ತಿಳಿಸಿಕೊಟ್ಟರು.

ಚಕೋರ ಜಿಲ್ಲಾ ಸಂಚಾಲಕರಾದ ಪಾತಮುತ್ತುಕದಹಳ್ಳಿ ಚಲಪತಿಗೌಡ, ಈಧರೆ ಪ್ರಕಾಶ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯ ಕ್ರಮದ ಮೂಲಕ ಸಾಮಾನ್ಯ ಜ್ಞಾನದ ಪರಿಚಯ ಮಾಡಿಕೊಡಲಾಯಿತು.

ಈ ವೇಳೆ ತುತ್ತೂರು ಲೋಕೇಶಪ್ಪ,ಅಕೈ ಪದ್ಮಶಾಲಿ, ಮಹಿಳಾ ಹೋರಾಟಗಾರ್ತಿ ಸೌಮ್ಯ, ಪಾತಮುತ್ತುಕದ ಹಳ್ಳಿ ಚಲಪತಿಗೌಡ, ಉಪನ್ಯಾಸಕ ಹಾಲಪ್ಪ, ಜಿ.ಡಿ.ಚಂದ್ರಯ್ಯ, ಅರ್ಥಶಾಸ್ತ್ರ ಪ್ರಾಧ್ಯಾಪಕ ಹೆಚ್.ಹರೀಶ್‌ಬಾಬು, ಇಂಗ್ಲೀಷ್ ಉಪನ್ಯಾಸಕ ನರಸಿಂಹ ಮೂರ್ತಿ, ಕನ್ನಡ ಉಪನ್ಯಾಸಕ ವೆಂಕಟೇಶಪ್ಪ ಮತ್ತಿತರರು ಇದ್ದರು.