Shidlaghatta News: ಶಿಡ್ಲಘಟ್ಟದಲ್ಲಿ ಪೂಜಮ್ಮ ದೇವಿಯ ಹಸಿಕರಗ ಮಹೋತ್ಸವ ಅದ್ದೂರಿ
ಮೆರವಣಿಗೆಯ ವೇಳೆ ತಮಟೆ ತಾಳಕ್ಕೆ ಕರಗದ ಪೂಜಾರಿ ಶಿವರಾಜ್ ಅವರು ಹೆಜ್ಜೆ ಹಾಕಿ ಸಾಂಪ್ರದಾ ಯಿಕ ನೃತ್ಯ ಪ್ರದರ್ಶಿಸಿದರು. ಡೊಳ್ಳು, ತಾಳ, ನಾದಸ್ವರಗಳ ಘೋಷದಲ್ಲಿ ಅವರ ಚುರುಕು ನೃತ್ಯ ಭಕ್ತರ ಮನ ಗೆದ್ದಿತು. ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯನ್ನು ಸಾರ್ವಜನಿಕರು ಹೂವಿನ ಸುರಿಮಳೆಯ ಮೂಲಕ ಭಕ್ತಿಯಿಂದ ಸ್ವಾಗತಿಸಿದರು
ನಗರದ ಬೈಪಾಸ್ ರಸ್ತೆಯಲ್ಲಿರುವ ಪೂಜಮ್ಮ ದೇವಾಲಯದಲ್ಲಿ ಪೂಜಮ್ಮ ದೇವಿ ಅವರ ಹಸಿಕರಗ ಮಹೋತ್ಸವವು ಧಾರ್ಮಿಕ ಉತ್ಸಾಹದ ನಡುವೆ ಅದ್ದೂರಿಯಾಗಿ ಜರುಗಿತು. -
ಶಿಡ್ಲಘಟ್ಟ: ನಗರದ ಬೈಪಾಸ್ ರಸ್ತೆಯಲ್ಲಿರುವ ಪೂಜಮ್ಮ ದೇವಾಲಯದಲ್ಲಿ ಪೂಜಮ್ಮ ದೇವಿ ಅವರ ಹಸಿಕರಗ ಮಹೋತ್ಸವವು ಧಾರ್ಮಿಕ ಉತ್ಸಾಹದ ನಡುವೆ ಅದ್ದೂರಿಯಾಗಿ ಜರುಗಿತು.
ನಗರ ಬಸ್ ನಿಲ್ದಾಣದಿಂದ ಆರಂಭವಾದ ಹಸಿಕರಗ ಮೆರವಣಿಗೆ ದೇವಾಲಯದವರೆಗೂ ಭವ್ಯವಾಗಿ ಸಾಗಿತು. ಮೆರವಣಿಗೆಯ ವೇಳೆ ತಮಟೆ ತಾಳಕ್ಕೆ ಕರಗದ ಪೂಜಾರಿ ಶಿವರಾಜ್ ಅವರು ಹೆಜ್ಜೆ ಹಾಕಿ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದರು. ಡೊಳ್ಳು, ತಾಳ, ನಾದಸ್ವರಗಳ ಘೋಷದಲ್ಲಿ ಅವರ ಚುರುಕು ನೃತ್ಯ ಭಕ್ತರ ಮನ ಗೆದ್ದಿತು. ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯನ್ನು ಸಾರ್ವಜನಿಕರು ಹೂವಿನ ಸುರಿಮಳೆಯ ಮೂಲಕ ಭಕ್ತಿಯಿಂದ ಸ್ವಾಗತಿಸಿದರು.
ಇದನ್ನೂ ಓದಿ: Shidlaghatta News: ಹಿಂಸೆಗೆ ಒಳಗಾದವರ ಧ್ವನಿಯಾಗಿ ಜಾಂಭವ ಯುವ ಸೇನೆ
ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ ಮತ್ತು ಅಲಂಕಾರ ಕಾರ್ಯಕ್ರಮಗಳು ನೆರವೇರಿದವು. ಭಕ್ತರು ಹರಕೆಗಳನ್ನು ಸಲ್ಲಿಸಿ ದೇವಿಯ ಆಶೀರ್ವಾದ ಪಡೆದರು. ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವೂ ನಡೆಯಿತು.
ಶಿಡ್ಲಘಟ್ಟ ನಗರದ ಗಣ್ಯರು, ದೇವಾಲಯದ ಟ್ರಸ್ಟ್ ಸದಸ್ಯರು ಮತ್ತು ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಹಸಿಕರಗ ಮಹೋತ್ಸವವನ್ನು ಯಶಸ್ವಿಗೊಳಿಸಿದರು. ಪೂಜಮ್ಮ ದೇವಿಯ ಕೃಪೆ ಯಿಂದ ನಗರದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಭಕ್ತರು ಪ್ರಾರ್ಥಿಸಿದರು.
ಉತ್ಸವದ ಸಂದರ್ಭದಲ್ಲಿ ಯಾವುದೇ ಅಯುತಕರ ಘಟನೆ ನಡೆಯದಂತೆ ಸಿಪಿಐ ಆನಂದ್ ಕುಮಾರ್ ಅವರ ನೇತೃತ್ವದಲ್ಲಿ ಪಿಎಸ್‌ಐ ವೇಣುಗೋಪಾಲ್ ಹಾಗೂ ಪೊಲೀಸ್ ಸಿಬ್ಬಂದಿಯಿಂದ ಬಿಗಿ ಬಂದೋಬಸ್ತು ಏರ್ಪಡಿಸಲಾಗಿತ್ತು. ಭಕ್ತರು ಶಿಸ್ತಿನಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಒಟ್ಟಾರೆ, ತಮಟೆ ತಾಳದ ನಾದದಲ್ಲಿ ನಡೆದ ಹಸಿಕರಗ ಮಹೋತ್ಸವವು ಭಕ್ತಿ ಹಾಗೂ ಸಂಪ್ರದಾಯದ ವೈಭವವನ್ನು ಅನಾವರಣಗೊಳಿಸಿತು.