ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಶೇ.56ರ ಎಸ್‌ಸಿ-ಎಸ್‌ಟಿ ಮೀಸಲಾತಿಗೆ ಸಾಂವಿಧಾನಿಕ ಮಾನ್ಯತೆ ಕಲ್ಪಿಸುವುದು ಸರಕಾರದ ಕರ್ತವ್ಯ : ಮಾಜಿ ಸಂಸದ ಉಗ್ರಪ್ಪ ಆಗ್ರಹ

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಪ.ಜಾತಿ-ಪ.ಪಂಗಡವು ಶೇ.17.1 ಮತ್ತು 6.95 ಇರುತ್ತದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎನ್ನುವುದು ಭಾರತ ಸಂವಿಧಾನದ ನಿರ್ದೇಶನವಾಗಿದೆ. ಅದರಂತೆ, ಲೋಕಸಭೆ, ವಿಧಾನಸಭೆ, ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಜನಸಂಖ್ಯೆಗೆ ಅನುಗುಣ ವಾಗಿ ಮೀಸಲಾತಿ ನೀಡಲಾಗಿರುತ್ತದೆ.

ಎಸ್‌ಸಿ-ಎಸ್‌ಟಿ ಮೀಸಲಾತಿಗೆ ಸಾಂವಿಧಾನಿಕ ಮಾನ್ಯತೆ: ಸರಕಾರದ ಕರ್ತವ್ಯ

ಚಿಕ್ಕಬಳ್ಳಾಪುರ ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಮಾತನಾಡಿದರು. -

Profile
Ashok Nayak May 7, 2026 11:30 PM

ಚಿಕ್ಕಬಳ್ಳಾಪುರ: ಪ.ಜಾತಿ.ಪಂಗಡಕ್ಕೆ ರಾಜ್ಯ ಸರ್ಕಾರ 2022ರಲ್ಲಿ ವಿಶೇಷ ಕಾನೂನು ತಂದು ಹೆಚ್ಚಿಸಿರುವ ಶೇ.56ರ ಮೀಸಲಾತಿಯು ಉಚ್ಚ ನ್ಯಾಯಾಲಯದಲ್ಲಿ ಅಸಿಂಧುವಾಗದಂತೆ ಜಾಗ್ರತೆ ವಹಿಸಿ, ಶೇ.56ರ ಎಸ್‌ಸಿ-ಎಸ್‌ಟಿ ಮೀಸಲಾತಿಗೆ ಸಾಂವಿಧಾನಿಕ ಮಾನ್ಯತೆ ಕಲ್ಪಿಸುವುದು ಸರಕಾರದ ಕರ್ತವ್ಯವಾಗಿದೆ ಎಂದು ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಆಗ್ರಹಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಶೇ.56ರ ಎಸ್‌ಸಿ-ಎಸ್‌ಟಿ ಮೀಸಲಾತಿಗೆ ಸಾಂವಿಧಾನಿಕ ಮಾನ್ಯತೆ ಕಲ್ಪಿಸಲು ಮುಖ್ಯಮಂತ್ರಿಗಳು ಕೇಂದ್ರದ ಮೇಲೆ ಒತ್ತಡ ತಂದು ಸಂವಿಧಾನದ 9ನೇ ಪರಿಚ್ಛೇದಕ್ಕೆ (ಷೆಡ್ಯೂಲ್-9) ಸೇರಿಸಲು ತುರ್ತು ಕ್ರಮ ವಹಿಸಬೇಕು. ಇದಕ್ಕಾಗಿ ಕೂಡಲೇ ಸರ್ವಪಕ್ಷಗಳ ಸಭೆ ಕರೆದು ಎಲ್ಲರಿಗೂ ಈ ವಿಚಾರ ಮನವರಿಕೆ ಮಾಡಿಕೊಡಬೇಕು. ಇದೇ ನಿಯೋಗವನ್ನು ಪ್ರಧಾನಿಗಳ ಬಳಿಗೆ ಕರೆದೊಯ್ದು ಈ ಸಮುದಾಯಗಳಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದರು.

ಇದನ್ನೂ ಓದಿ: Chinthamani News: ಚಿಂತಾಮಣಿ ನಗರಸಭೆಯಲ್ಲಿ ಹೈವೋಲ್ಟೇಜ್ ಸಭೆ: ಐಡಿಎಸ್‌ಎಂಟಿ ಮಾರುಕಟ್ಟೆ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿ ಭರವಸೆ.

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಪ.ಜಾತಿ-ಪ.ಪಂಗಡವು ಶೇ.17.1 ಮತ್ತು 6.95 ಇರುತ್ತದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎನ್ನುವುದು ಭಾರತ ಸಂವಿಧಾನದ ನಿರ್ದೇಶನವಾಗಿದೆ. ಅದರಂತೆ, ಲೋಕಸಭೆ, ವಿಧಾನಸಭೆ, ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲಾಗಿರುತ್ತದೆ. ಎಸ್‌ಸಿಪಿ, ಟಿಎಸ್‌ಪಿ ಕಾನೂನಿನಡಿ ಜನಸಂಖ್ಯೆಗೆ ಅನುಗುಣವಾಗಿ ಆಯವ್ಯಯದಲ್ಲಿ ಅನುದಾನ ನೀಡಲಾಗಿರುತ್ತದೆ. ಹೀಗಿದ್ದಾಗ ಇದಕ್ಕೆ ಸಾಂವಿಧಾನಿಕ ಮಾನ್ಯತೆ ದೊರೆಯದಿದ್ದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅನ್ಯಾಯವಾಗಲಿದೆ ಎಂದು ಬೇಸರಿಸಿದರು.

ಮೀಸಲಾತಿ ಭಿಕ್ಷೆಯಲ್ಲ???

ಮೀಸಲಾತಿ ಭಿಕ್ಷೆಯಲ್ಲ.ಅದು ಭಾರತ ಸಂವಿಧಾನ ನೀಡಿರುವ ಹಕ್ಕು.ಈ ಕಾರಣದಿಂದಲೇ ರಾಜ್ಯ ದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪಜಾತಿ-ಪ.ಪಂಗಡದವರಿಗೆ ಜನಸಂಖ್ಯೆಗೆ ಅನುಗುಣ ವಾಗಿ ಅಂದರೆ ಶೇ.15ರ ಬದಲು-17, ಶೇ.3ರ ಬದಲು 7 ಮೀಸಲಾತಿಯನ್ನು ಅನುಕ್ರಮವಾಗಿ ನೀಡ ಬೇಕೆಂದು ದಶಕಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದೆ.ಪರಿಣಾಮ ಕರ್ನಾಟಕ ಉಚ್ಛ ನ್ಯಾಯಾಲಯವು ರಿಟ್ ಸಂಖ್ಯೆ 16852/2015 ಕರ್ನಾಟಕ ರಾಜ್ಯ ನಾಯಕ ವಿದ್ಯಾರ್ಥಿ ಸಂಘವು ಎಸ್‌ಸಿ, ಎಸ್ಟಿ ಮೀಸಲಾತಿಯನ್ನು ಹೆಚ್ಚಿಸಲು ದಾಖಲಿಸಿದ ಮನವಿಯನ್ನು ಪರಿಗಣಿಸು ವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಈ ಕುರಿತು ತೀರ್ಮಾನ ಕೈಗೊಳ್ಳಲು ಪ್ರಾಯೋಗಿಕ ದತ್ತಾಂಶ ಸಂಗ್ರಹಿಸಲು ರಾಜ್ಯ ಸರಕಾರದ ಆದೇಶ ಸಂಖ್ಯೆ; ಎಸ್‌ಡಬ್ಲ್ಯುಡಿ. 303 ಪಿ.ವಿ.ವೈ 2015 ದಿನಾಂಕ 22/07/2017ರಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ನೇತೃತ್ವದಲ್ಲಿ ಆಯೋಗ ರಚಿಸಿತ್ತು ಎಂದು ಸ್ಮರಿಸಿದರು.

ವಿಶೇಷ ಪ್ರಕರಣ!!

ನಾಗಮೋಹನ್‌ದಾಸ್ ಆಯೋಗವು ವ್ಯಾಪಕ ಅಧ್ಯಯನ ಕೈಗೊಂಡು ಎಸ್.ಸಿ,ಎಸ್ಟಿ ಮೀಸಲಾತಿ ಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಶೇ.15, ಶೇ.3 ರ ಬದಲು ಶೇ.17 ಮತ್ತು ಶೇ.7ಕ್ಕೆ ಹೆಚ್ಚಿಸಲು ದಿನಾಂಕ 2/07/2020ರಂದು ವರದಿ ನೀಡಿತ್ತು. ಈ ವರದಿಯನ್ನು ಅವಲೋಕಿಸಲು ರಾಜ್ಯ ಸರಕಾರ ನ್ಯಾಯಮೂರ್ತಿ ಸುಭಾಷ್ ಆಡಿ ನೇತೃತ್ವದಲ್ಲಿ ಮತ್ತೊಂದು ಆಯೋಗ ನೇಮಕ ಮಾಡಿತ್ತು. ಆ ಆಯೋಗ ಸಹ ದಿನಾಂಕ 7/10/2022ರಂದು ತನ್ನ ವರದಿಯಲ್ಲಿ ಎಸ್.ಎಸ್.,ಎಸ್.ಟಿ. ಮೀಸಲಾತಿ ಶೇ.೧೭, ಶೇ.೭ ಅನುಕ್ರಮವಾಗಿ ನೀಡಲು ತಿಳಿಸಿತ್ತು. ಈ ಎಲ್ಲಾ ಕಾರಣಗಳಿಂದ ಸರ್ವ ಪಕ್ಷಗಳ ಸಹಕಾರದಿಂದ ರಾಜ್ಯ ಸರಕಾರ "ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನು ಸೂಚಿತ ಪಂಗಡಗಳು ಅಧಿನಿಯಮ ೨೦೨೨ನ್ನು ಜಾರಿಗೊಳಿಸಲು ಸಾಧ್ಯವಾಯಿತು ಎಂಬುದನ್ನು ಸ್ಪಷ್ಟಪಡಿಸಿದರು.

ಎಸ್‌ಸಿ, ಎಸ್‌ಟಿ ಅಧಿನಿಯಮ-2022!!!
ಕರ್ನಾಟಕ ರಾಜ್ಯ ಸರಕಾರ ಜಾರಿಗೊಳಿಸಿರುವ "ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು ಅಧಿನಿಯಮ 2022" ಊರ್ಜಿತವಾಗಬೇಕಾದರೆ ಮುಖ್ಯಮಂತ್ರಿಗಳು ಮತ್ತು ಅವರ ಸಚಿವ ಸಂಪುಟದ ಜತೆಗೆ ಎಲ್ಲಾ 224 ಕ್ಷೇತ್ರಗಳ ಶಾಸಕ ಸಂಸದರು ಪಜಾತಿ ಪಂಗಡ ಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ನ್ಯಾಯ ವಿತರಣೆಯಲ್ಲಿ ಬದ್ಧತೆ ಮತ್ತು ಪ್ರಾಮಾಣಿಕತೆ ಪ್ರದರ್ಶನ ಮಾಡಬೇಕಿದೆ ಎಂದು ಒತ್ತಾಯಿಸಿದರು.

9ನೇ ಪರಿಚ್ಛೇದಕ್ಕೆ ಸೇರ್ಪಡೆ???

ಮೇಲಾಗಿ ಮುಖ್ಯಮಂತ್ರಿಗಳೇ ಮುಂದಾಗಿ ನಿಂತು ಕೇಂದ್ರ ಸರಕಾರದ ಬಳಿಗೆ ಸರ್ವಪಕ್ಷಗಳ ನಿಯೋಗ ತೆಗೆದುಕೊಂಡು ಹೋಗುವ ಮೂಲಕ ಪ್ರಧಾನಿಗಳಿಗೆ ರಾಜ್ಯ ಸರಕಾರದ ನಿಲುವನ್ನು ಮನವರಿಕೆ ಮಾಡಿಕೊಡುವ ಮೂಲಕ ತಮಿಳುನಾಡು ಮಾದರಿ ಆಸ್ಸಾಂ ಮಾದರಿಯಲ್ಲಿ ಶೇ.56 ರಷ್ಟು ಮೀಸಲಾತಿ ಜಾರಿ ಮಾಡಬೇಕಾದರೆ ಸಂವಿಧಾನದ 9ನೇ ಪರಿಚ್ಛೇದಕ್ಕೆ ಇದನ್ನು ಸೇರ್ಪಡೆ ಮಾಡಲೇಬೇಕು ಎಂದು ಆಗ್ರಹಿಸಿದರು.

ಕೇಂದ್ರವೂ ಮಾಡಬೇಕಿದೆ!!!
ಕೇಂದ್ರ ಸರಕಾರವೂ ಕೂಡ ರಾಜ್ಯ ಸರಕಾರ ಸಲ್ಲಿಸಿರುವ ಶೇ.56ರ ಮೀಸಲಾತಿ ಕಾನೂನನ್ನು ಸಂವಿಧಾನದ 9ನೇ ಷೆಡ್ಯೂಲ್‌ಗೆ ಸೇರಿಸುವ ಮೂಲಕ ಸಾಂವಿಧಾನಿಕ ಭದ್ರತೆಯನ್ನು ನೀಡಿ ಈಗಾಗಲೇ ಶೇ.56ರ ಮೀಸಲಾತಿಯಂತೆ ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿ ಬದುಕು ಕಟ್ಟಿ ಕೊಂಡಿರುವವರ ರಕ್ಷಣೆಗೇ ನಿಲ್ಲಬೇಕು ಎಂದು ಒತ್ತಾಯಪಡಿಸಿದರು.

ಜನಸಂಖ್ಯೆಯೇ ಆಧಾರ!!!
ಪ್ರಜಾಪ್ರಭುತ್ವದಲ್ಲಿ ಜನಸಂಖ್ಯೆಯೇ ಆಧಾರ. ಅದರಂತೆ ಎಸ್‌ಸಿ-ಎಸ್‌ಟಿ ಸಮುದಾಯಗಳಿಗೆ ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿ ಅವರ ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ಸವಲತ್ತುಗಳು ಸಿಗಬೇಕು. "ನಮ್ಮ ಹಕ್ಕುಗಳನ್ನು ನೀಡಲು ವಿಳಂಬ ಮಾಡಿದರೆ, ಎಸ್‌ಸಿ-ಎಸ್‌ಟಿ ಸಮುದಾಯಗಳು ಸುಮ್ಮನೆ ಕೂರುವುದಿಲ್ಲ. ಮುಂದಿನ ದಿನಗಳಲ್ಲಿ ತಮಗೆ ಸರಿ ಎನಿಸುವ ದಾರಿ ಯನ್ನು ಕಂಡುಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

"ಮೀಸಲಾತಿ ಎಂಬುದು ಕೇವಲ ಚುನಾವಣಾ ಗಿಮಿಕ್ ಆಗಬಾರದು.ಅಂಬೇಡ್ಕರ್ ಅವರ ಆಶಯ ದಂತೆ ಶೋಷಿತ ವರ್ಗಗಳ ಬದುಕು ಸುಧಾರಿಸಬೇಕಾದರೆ, ಅನುಷ್ಠಾನದಲ್ಲಿರುವ ಲೋಪಗಳನ್ನು ಸರಿಪಡಿಸಿ ನ್ಯಾಯಯುತ ಪಾಲು ನೀಡಬೇಕು ಎಂದು ಒತ್ತಾಯಿಸಿದರು.

sಸುದ್ದಿಗೋಷ್ಟಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಯಲುವಹಳ್ಳಿ ರಮೇಶ್, ವಕೀಲ ನಾರಾಯಣಸ್ವಾಮಿ ರಾಜ್ಯ ಗೌರವಾಧ್ಯಕ್ಷರು ಎಂ.ನರಸಿಂಹಯ್ಯ, ಖಜಾಂಚಿ ಈ ರಾಜಪ್ಪ, ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಗೌರಿಬಿದನೂರಿನ ಬಾಬಣ್ಣ, ಗುಡಿಬಂಡೆಯ ನರೇಂದ್ರ, ಬಾಗೇ ಪಲ್ಲಿಯ ನರಸಿಂಹಪ್ಪ, ದೊಡ್ಡಬಳ್ಳಾಪುರದ ಮುನಿಕೃಷ್ಣಪ್ಪ, ಚಿಕ್ಕಬಳ್ಳಾಪುರದ ಕೆ.ವಿ.ಗವಿ ರಾಯಪ್ಪ, ಜಿ.ಮೂರ್ತಿ, ಪಿ.ಮುನಿವೆಂಕಟಸ್ವಾಮಿ, ನರಸಿಂಹರಾಜು, ಕೃಷ್ಣಪ್ಪ, ಎಸ್.ಎನ್.ಅಶ್ವತ್ಥ್ ನಾರಾಯಣ, ವಕೀಲ ಮಟಮಪ್ಪ, ಮತ್ತಿತರರು ಮುಖಂಡರು ಇದ್ದರು.