ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA SN Subbareddy: ಜನಸ್ಪಂದನೆ ಕಾರ್ಯಕ್ರಮ ಗ್ರಾಮೀಣರಿಗೆ ಸಿಕ್ಕಿರುವ ದೊಡ್ಡ ಅಸ್ತ್ರವಾಗಿದೆ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಜನಸ್ಪಂದನ ಕಾರ್ಯಕ್ರಮ ಹಾಗೂ ಸರ್ಕಾರದಿಂದ ವಿವಿಧ ಇಲಾಖೆ ಯೋಜನೆಯಲ್ಲಿ ಆಯ್ಕೆಯಾದ ಪಲಾನುಭವಿಗಳಿಗೆ ಸೌಲತ್ತುಗಳ ವಿತರಣಾ ಕಾರ್ಯ ಕ್ರಮದಲ್ಲಿ ಭಾಗಿಯಾಗಿದ್ದ ಜನತೆಯನ್ನು ಉದ್ದೇಶಿ ಸುತ್ತಾ ಮಾತನಾಡಿದ ಅವರು ಪ್ರತಿಯೊಂದು ಪಂಚಾಯತಿ ವ್ಯಾಪ್ತಿಯಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡುವ ಮೂಲಕ ಜನರ ಸಂಕಷ್ಟಗಳಿಗೆ ಮಿಡಿಯುವ ಕೆಲಸ ಮಾಡಲಾಗುತ್ತಿದೆ.

ಜನಸ್ಪಂದನೆ ಕಾರ್ಯಕ್ರಮ ಗ್ರಾಮೀಣರಿಗೆ ಸಿಕ್ಕಿರುವ ದೊಡ್ಡ ಅಸ್ತ್ರವಾಗಿದೆ

-

Ashok Nayak Ashok Nayak Oct 18, 2025 10:15 PM

ಬಾಗೇಪಲ್ಲಿ: ಕ್ಷೇತ್ರದ ಜನತೆ ತಾಲೂಕು ಕಛೇರಿ ಸುತ್ತ ತಮ್ಮ ಕೆಲಸ ಕಾರ್ಯಗಳಿಗಾಗಿ ಅಲೆದಾಡು ವುದನ್ನು ತಪ್ಪಿಸುವ ಉದ್ದೇಶದಿಂದ  ಜನಸ್ಪಂದನ ಎಂಬ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಬಡವರಿಗೋಸ್ಕರ  ಮಾಡುತ್ತಿರುವ ಈ ಕಾರ್ಯಕ್ರಮಕ್ಕೆ ಜನರು ಸ್ಪಂಧಿಸಬೇಕು ವಿವಿಧ ಇಲಾಖೆ ಗಳಿಂದ ಸರ್ಕಾರಿ ಸೌಲಭ್ಯಗಳಿಗೆ ಅರ್ಹರಾದವರಿಗೆ ಅವರಿದ್ದಲ್ಲಿಯೇ ವಿತರಣೆ  ಮಾಡಲಾಗುತ್ತಿದೆ ಎಂದು ಶಾಸಕ ಎಸ್.ಎನ್ ಸುಬ್ಬಾರೆಡ್ಡಿ( MLA SN Subbareddy)ತಿಳಿಸಿದರು.

ಬಾಗೇಪಲ್ಲಿ ತಾಲೂಕಿನ ಬಿಳ್ಳೂರು  ಸರ್ಕಾರಿ ಪ್ರೌಢಶಾಲಾ ಆವರಣ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಂದಾಯ ಇಲಾಖೆ ಮತ್ತು ತಾಲೂಕು ಪಂಚಾಯಿತಿ ಇವರ ಸಹಯೋಗದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮ ಹಾಗೂ ಸರ್ಕಾರದಿಂದ ವಿವಿಧ ಇಲಾಖೆ ಯೋಜನೆಯಲ್ಲಿ ಆಯ್ಕೆಯಾದ ಪಲಾನುಭವಿಗಳಿಗೆ ಸೌಲತ್ತುಗಳ ವಿತರಣಾ ಕಾರ್ಯ ಕ್ರಮದಲ್ಲಿ ಭಾಗಿಯಾಗಿದ್ದ ಜನತೆಯನ್ನು ಉದ್ದೇಶಿಸುತ್ತಾ ಮಾತನಾಡಿದ ಅವರು ಪ್ರತಿಯೊಂದು ಪಂಚಾಯತಿ ವ್ಯಾಪ್ತಿಯಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡುವ ಮೂಲಕ ಜನರ ಸಂಕಷ್ಟಗಳಿಗೆ ಮಿಡಿಯುವ ಕೆಲಸ ಮಾಡಲಾಗುತ್ತಿದೆ. ಯಾರಿಗಾಗಿ ಇದನ್ನು ಮಾಡಲಾಗುತ್ತಿದೆಯೋ ಅವರೇ ಇದನ್ನು ಅರಿತು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಸ್ಪಂದಿಸಬೇಕು. ಜನರು ಸರ್ಕಾರಿ ಕಚೇರಿಗಳನ್ನು ಅಳದಾಡುವುದರ ಬದಲು ಸ್ಥಳದಲ್ಲೇ ಸೌಲಭ್ಯಗಳನ್ನು ವಿತರಿಸಲಾಗುತ್ತಿದೆ ಎಂದರು.

ಇದನ್ನೂ ಓದಿ: Bagepally News: ಪ್ರತಿ 6 ತಿಂಗಳಿಗೊಮ್ಮೆ ಅರೋಗ್ಯ ತಪಾಸಣೆ ಮಾಡಿಸಿಕೊಳ್ಳಿ: ಕೆ.ಟಿ.ವೀರಾಂಜನೇಯ

ಕಂದಾಯ ಇಲಾಖೆಯಿಂದ ನೂರು ಜನರಿಗೆ ಪಿಂಚಣಿ ಸೌಲಭ್ಯ, ೪೫ ಹಕ್ಕುಪತ್ರಗಳು, ಸಾಗುವಳಿ ಚೀಟಿಗಳ ಖಾತೆ ೧೦, ಸ್ಮಶಾನಗಳಿಗೆ ಜಾಗ, ನೂರು ಜನರಿಗೆ ಜಮೀನಿನ ಪೋಡಿ, ಬರಿ ಕಂದಾಯ ಇಲಾಖೆಯಿಂದ ಮಾತ್ರ ೪೯೦ ಸೌಲಭ್ಯಗಳನ್ನು ವಿತರಿಸಲಾಯಿತು. ಜನರ ಮನೆಯ ಬಳಿಗೇ ತಾಲೂಕು ಆಡಳಿತ ಬಂದು ಕೆಲಸ ಮಾಡಲಾಗುತ್ತದೆ. ಹಾಗೂ ತಾಲೂಕು ಪಂಚಾಯಿತಿಯಿAದ ೩೦೦ ಜನ ಫಲಾನುಭವಿಗಳಿಗೆ  ವಿವಿಧ ಸೌಲಭ್ಯಗಳು, ಇನ್ನು ಆರೋಗ್ಯ ಇಲಾಖೆ, ಕಾರ್ಮಿಕರ ಇಲಾಖೆ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ಇನ್ನು ಅನೇಕ ಇಲಾಖೆಗಳು  ನಿಮಗೋಸ್ಕರ ಇವತ್ತು ಸೌಲಭ್ಯಗಳು ವಿತರಿಸಲಾಗುತ್ತಿದೆ. ಬಡವರಿಗೋಸ್ಕರ ಬಡವರಿಗಾಗಿ ಈ ಜನಸ್ಪಂದನ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಲ್ಲರೂ ಇಂತಹ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ವೇಳೆ ತಾಲೂಕು ದಂಡಾಧಿಕಾರಿ ಮನೀಷಾ ಎಸ್ ಪತ್ರಿ ಮಾತನಾಡಿ ಪ್ರತಿಯೊಬ್ಬರು ಜನಸ್ಪಂದನ ಕಾರ್ಯಕ್ರಮದ ವಿಶೇಷತೆ ಏನು ಎಂಬುದು ತಿಳಿಯಬೇಕು.ಇದು ಯಾವುದೇ ರಾಜಕೀಯ ಉದ್ದೇಶ ದಿಂದ ಅಲ್ಲ  ಕರ್ನಾಟಕ ಸರ್ಕಾರದ ವತಿಯಿಂದ  ಮಾಡಲಾಗುತ್ತಿರುವ ಒಂದು ಕಾರ್ಯಕ್ರಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ಮಾಡಲಾಗುತ್ತಿದೆ ವಿವಿಧ ಜನರಿಗೆ ಸರ್ಕಾರಿ ಸೌಲತ್ತುಗಳನ್ನು ವಿತರಿಸಲು ಜನಸ್ಪಂದನವನ್ನು ಮಾಡಲಾಗುತ್ತಿದೆ ಎಂದರು.

ಇನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಯಿಂದ  ಗರ್ಭಿಣಿ ಮಹಿಳೆಯರಿಗೆ ಶ್ರೀಮಂತವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ತಹಸೀಲ್ದಾರ್  ಎನ್. ಮನೀಷಾ ಮಹೇಶ್ ಪತ್ರಿ, ಇಒ ಜಿ.ವಿ.ರಮೇಶ್, ಡಾ,, ಸಿ.ಎನ್. ಸತ್ಯನಾರಾಯಣರೆಡ್ಡಿ, ಶಿಶುಅಭಿವೃದ್ದಿ ಇಲಾಖೆಯ ರಾಮಚಂದ್ರ, ಬಿ.ಇ.ಒ. ವೆಂಕಟೇಶಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶಿವಪ್ಪ, ಪಶುವ?ದ್ಯಾದಿಕಾರಿ ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆಯ  ಲಲಿತ, ಕೃಷಿ ಇಲಾಖೆಯ ಶ್ರೀನಿವಾಸ್, ಬೆಸ್ಕಾಂ ಇಲಾಖೆಯ ಸೋಮ ಶೇಖರ್, ಶ್ರೀನಿವಾಸ್, ಅರಣ್ಯ ಇಲಾಖೆಯ ವಾಸುದೇವಮೂರ್ತಿ, ಆಹಾರ ಇಲಾಖೆಯ ಪುಷ್ಪಾ, ರೇಷ್ಮೆ ಇಲಾಖೆಯ ಸುರೇಶ್,  ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ನಿರ್ಮಲಮ್ಮ, ಪಿ.ಡಿ.ಒ. ಭಾಗ್ಯಮ್ಮ, ಮುಖಂಡರಾದ ಪಿ. ಮಂಜುನಾಥರೆಡ್ಡಿ, ಕೆ.ಕೆ. ವೆಂಕಟೇಶ್, ಕೆ.ಸಿ. ಚಂದ್ರಶೇಖರರೆಡ್ಡಿ, ಬಿ.ವಿ. ವೆಂಕಟರವಣ, ಪ್ರಸನ್ನಕುಮಾರ್, ರಾಮಲಿಂಗಾರೆಡ್ಡಿ, ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು.