ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IISC: ಜ್ಞಾನಾಧಾರಿತ ತಂತ್ರಜ್ಞಾನವು ಜ್ಞಾನದ ಸೃಷ್ಟಿ ಮತ್ತು ಹುಡುಕಾಟದ ಮಹಾಮನೆಯಾಗಬೇಕಿದೆ: ಐಐಎಸ್ಸಿ ಸೀನಿಯರ್ ಪ್ರೊ.ನರಹರಿ ಅಭಿಮತ

ಎ.ಐ.ತಂತ್ರಜ್ಞಾನದಿಂದಾಗಿ ಸಮಾಜಕ್ಕೆ ಜನಸಮುದಾಯಗಳಿಗೆ ಸಾಕಷ್ಟು ಅನುಕೂಲವಾಗಿ ಅವಕಾಶ ಗಳು ಹೆಚ್ಚಾಗಲಿವೆ. ಇಂತಹ ಸೂಕ್ಷ್ಮ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ಐಇಇಇ(IEEE) ಅಂತರಾಷ್ಟ್ರೀಯ ವಿಚಾರ ಸಂಕಿರಣಗಳು ನೆರವಾಗಲಿವೆ. ಇದನ್ನು ಬಳಸಿಕೊಳ್ಳುವ ಕೆಲಸ ಆಗಬೇಕಿದೆ. ದೇಶವಿದೇಶಗಳ 13ಕ್ಕೂ ಹೆಚ್ಚು ದೇಶ ಗಳ 365ಕ್ಕೂ ಹೆಚ್ಚು ಸಂಶೋಧನಾರ್ಥಿಗಳು ಭಾಗಿಯಾಗುತ್ತಿರುವುದೇ ಸಂತೋಷ

ಜ್ಞಾನಾಧಾರಿತ ತಂತ್ರಜ್ಞಾನವು ಜ್ಞಾನದ ಸೃಷ್ಟಿಯ ಮಹಾಮನೆಯಾಗಬೇಕಿದೆ

ನಾಲೆಡ್ಜ್ ಟೆಕ್ನೋಲಜಿ ಎಂಬುದು ಕೇವಲ ಪದವಿಗಷ್ಟೇ ಸೀಮಿತವಾಗದೆ ಜ್ಞಾನದ ಸೃಷ್ಟಿ ಮತ್ತು ಹುಡುಕಾಟದ ಕಡೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕಡೆ ಹೆಚ್ಚಿನ ಗಮನ ಹರಿಸಿರುವುದನ್ನು ನಾವಿಂದು ಕಾಣಬಹುದು ಎಂದು ಬೆಂಗಳೂರಿನ ಐಐಎಸ್ಸಿ ಹಿರಿಯ ವಿಜ್ಞಾನಿ ಯದತಿ ಪ್ರೊ.ನರಹರಿ ಹೇಳಿದರು. -

Profile
Ashok Nayak Apr 24, 2026 7:51 PM

ಚಿಕ್ಕಬಳ್ಳಾಪುರ : ನಾಲೆಡ್ಜ್ ಟೆಕ್ನೋಲಜಿ ಎಂಬುದು ಕೇವಲ ಪದವಿಗಷ್ಟೇ ಸೀಮಿತವಾಗದೆ ಜ್ಞಾನದ ಸೃಷ್ಟಿ ಮತ್ತು ಹುಡುಕಾಟದ ಕಡೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕಡೆ ಹೆಚ್ಚಿನ ಗಮನ ಹರಿಸಿರುವುದನ್ನು ನಾವಿಂದು ಕಾಣಬಹುದು ಎಂದು ಬೆಂಗಳೂರಿನ ಐಐಎಸ್ಸಿ(IISC) ಹಿರಿಯ ವಿಜ್ಞಾನಿ ಯದತಿ ಪ್ರೊ.ನರಹರಿ ಹೇಳಿದರು.

ನಗರ ಹೊರವಲಯ ಎಸ್‌ಜೆಸಿಐಟಿ ಕ್ಯಾಂಪಸ್ಸಿನಲ್ಲಿ ಶುಕ್ರವಾರ 4ನೇ ವರ್ಷದ ಐಇಇಇ ನಾಲೆಡ್ಜ್ ಇಂಜನಿಯರಿಂಗ್ ಮತ್ತು ಕಮ್ಯುನಿಕೇಷನ್ ಸಿಸ್ಟಮ್ ಎಂಬ ವಿಷಯದ ಮೇಲೆ ನಡೆದ ಅಂತರ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.

2024ರಲ್ಲಿ ಭೌತಶಾಸ್ತ್ರ(Physics)ದ ಸಂಶೋಧನೆಗೆ ನೀಡುವ ನೊಬೆಲ್ ಪ್ರಶಸ್ತಿ(Nobel Award)ಯನ್ನು ಇಬ್ಬರು ಪಡೆದಿದ್ದಾರೆ. ಒಬ್ಬರು ಅಮೆರಿಕಾದ ಭೌತವಿಜ್ಞಾನಿ ಜಾನ್ ಹಾಫ್‌ಪೀಲ್ಡ್ , ಮತ್ತೊಬ್ಬರು ಕೆನಡಿಯನ್ ಬ್ರಿಟೀಷ್ ಕಂಪ್ಯೂಟರ್ ಸೈನ್ಟಿಸ್ಟ್ ಜೆಫ್ರಿ ಇ ಹಿಲ್ಟ್ನ್‌ಗೆ ಬಂದಿದೆ. ಇವರಿಬ್ಬರೂ ಕೂಡ ಮೆಷಿನ್ ಲರ್ನಿಂಗ್ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆ ಈ ಪ್ರಶಸ್ತಿ ಬಂದಿದೆ.

ಇದನ್ನೂ ಓದಿ: Chikkaballapur News: ನನ್ನ ವಿರುದ್ಧ ನಿಂತು ಜಿಲ್ಲಾ ಪಂಚಾಯಿತಿ ಸ್ಥಾನ ಗೆಲ್ಲಲಿ ನೋಡೋಣ : ಕಾಕಲ ಚಿಂತೆ ರಾಜಣ್ಣ ಸವಾಲು

ಅಂದರೆ ಕೃತಕ ಬುದ್ದಿಮತ್ತೆ(Artificial Intelligence), ಕ್ವಾಂಟಮ್ ತಂತ್ರಜ್ಞಾನಗಳು ಇಂದು ಜಗತ್ತನ್ನು ವ್ಯಾಪಿಸಿರುವ ಈ ಹೊತ್ತಿನಲ್ಲಿ ಮಷಿನ್ ಲರ್ನಿಂಗ್ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಕಾರಿಕ ಬೆಳವಣಿಗೆಗಳು ನೊಬೆಲ್ ಪ್ರಶಸ್ತಿ ಪಡೆಯುವಷ್ಟರ ಮಟ್ಟಿಗೆ ಬಲಿಷ್ಟವಾಗಿವೆ ಎಂದು ಅರಿಯ ಬೇಕಿದೆ. ಮೇಲಾಗಿ 200 ವರ್ಷಗಳಿಂದ ಪರಿಹಾರ ಕಾಣದಿದ್ದ ಅನ್‌ಸಾಲ್ವ್ಡ್ ಪ್ರೋಟೀನ್ಸ್ ಸ್ಟ್ರಕ್ಷರ್ ಪ್ರಿಡಿಕ್ಟ್ ಮಾಡಿದ್ದಕ್ಕೆ ಅವರಿಗೆ ಪ್ರಶಸ್ತಿ ಬಂದಿದೆ ಎಂದರು.

ಎ.ಐ.ತಂತ್ರಜ್ಞಾನದಿಂದಾಗಿ ಸಮಾಜಕ್ಕೆ ಜನಸಮುದಾಯಗಳಿಗೆ ಸಾಕಷ್ಟು ಅನುಕೂಲವಾಗಿ ಅವಕಾಶಗಳು ಹೆಚ್ಚಾಗಲಿವೆ. ಇಂತಹ ಸೂಕ್ಷ್ಮ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ಐಇಇಇ(IEEE) ಅಂತರಾಷ್ಟ್ರೀಯ ವಿಚಾರ ಸಂಕಿರಣಗಳು ನೆರವಾಗಲಿವೆ. ಇದನ್ನು ಬಳಸಿಕೊಳ್ಳುವ ಕೆಲಸ ಆಗಬೇಕಿದೆ. ದೇಶವಿದೇಶಗಳ 13ಕ್ಕೂ ಹೆಚ್ಚು ದೇಶ ಗಳ 365ಕ್ಕೂ ಹೆಚ್ಚು ಸಂಶೋಧನಾರ್ಥಿಗಳು ಭಾಗಿಯಾಗುತ್ತಿರುವುದೇ ಸಂತೋಷ ಎಂದು ತಿಳಿಸಿದರು.

semi

ಭಾರತೀಯ ಕೃಷಿರಂಗಕ್ಕೆ ಕೃತಕ ಬುದ್ದಿಮತ್ತೆ, ಗೇಮ್ ಥಿಯರಿ ತಂತ್ರಜ್ಞಾನ ಬಳಸಿಕೊಂಡು ಹೇಗೆ ನೆರವಾಗಬಹುದು ಎಂಬ ಬಗ್ಗೆ ನಾನು ಸಂಶೋಧನೆ ಮಾಡಿದ್ದೇನೆ. ಭಾರತದ ಕೃಷಿ ವಿಶ್ವವಿದ್ಯಾಲಯ ಗಳು ವಾರದಲ್ಲಿ ಎರಡು ದಿನ ಪ್ರತಿ ಮಂಗಳವಾರ, ಶುಕ್ರವಾರ ರೈತಾಪಿಗಳಿಗೆ ಕೆಲವು ತಿಳುವಳಿಕೆಯ ಸಂಗತಿಗಳನ್ನು ನೀಡುತ್ತಿವೆ.ಮುಖ್ಯವಾಗಿ ಹವಾಮಾನ ಬದಲಾವಣೆ, ಕ್ರೀಮಿ ಮತ್ತು ಕೀಟನಾಶಕ ಬಳಕೆ,ರಸಗೊಬ್ಬರದ ಪರಿಮಾಣ ಬಗ್ಗೆ ಮಾಹಿತಿ ನೀಡುತ್ತಿರುವುದನ್ನು ಕಾಣಬಹುದು. ಇಂತಹ ಕೃತಕ ಬುದ್ದಿಮತ್ತೆ, ಗೇಮ್ ಥಿಯರಿ ತಂತ್ರಜ್ಞಾನದ ಸಹಾಯದಿಂದ ಇನ್ನೂ ಹೆಚ್ಚಿನ ಮಾಹಿತಿ ಯನ್ನು ರೈತರಿಗೆ ನೀಡುವ ಮೂಲಕ ಕೃಷಿರಂಗದಲ್ಲಿ ಎದುರಾಗಬಹುದಾದ ಸಂಕಷ್ಟಗಳಿಂದ ರೈತರನ್ನು ಪಾರು ಮಾಡಬಹುದು. ಮಂಡ್ಯದ ಬತ್ತದ ತಳಿಯ ಬಗ್ಗೆ ಕೃಷಿ ವಿಜ್ಞಾನಿಗಳು ಕೊಡುವ ಸಲಹೆ ಮಾರ್ಗದರ್ಶನ, ಎಐ ನೀಡಿದ ಮಾಹಿತಿ ಹೋಲಿಸಿ ನೋಡಿದಾಗ ಎಐನ ಪಾರದರ್ಶಕತೆ ಹೆಚ್ಚಿನದೇ ಆಗಿರುವುದನ್ನು ಕಂಡಿದ್ದೇವೆ. ಹೀಗಾಗಿ ಎಐ ತಂತ್ರಜ್ಞಾನ ವರವೇ ವಿನಃ ಶಾಪವಲ್ಲ ಎಂದರು.

ಆರೋಗ್ಯ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಕೃಷಿಕ್ಷೇತ್ರಗಳಲ್ಲಿ ಕೃತಕಬುದ್ದಿಮತ್ತೆಯ ವಿರಾಟ್ ಸ್ವರೂಪವನ್ನು ಯುವಶಕ್ತಿಗೆ , ಆಸಕ್ತ ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಇಂತಹ ಜ್ಞಾನಾ ಧಾರಿತ ತಂತ್ರಜ್ಞಾನ ಮತ್ತು ಸಂವಹನ ವ್ಯವಸ್ಥೆಯನ್ನು ಒಳಗೊಂಡ ಅಂತರಾಷ್ಟ್ರೀಯ ತಾಂತ್ರಿಕ ಸಮ್ಮೇಳನಗಳು ನಡೆಯುವ ಅಗತ್ಯವಿದೆ ಎಂದರು.

cbpm1 j

ಇರಾನ್ ಇಸ್ರೇಲ್ ಅಮೆರಿಕಾ ನಡುವಿನ ಯುದ್ಧಗಳು ಕೂಡ ಎಐ ತಂತ್ರಜ್ಞಾನ (AI Technology) ಬಳಸಿಕೊಂಡು ನಿರ್ಧಿಷ್ಟವಾಗಿ ಮತ್ತು ನಿಖರವಾಗಿ ಶತೃಗಳ ನೆಲೆಗಳನ್ನು ಧ್ವಂಸ ಮಾಡುತ್ತಿರುವ ಸನ್ನಿವೇಶವನ್ನು ಜಗತ್ತು ಕಾಣುತ್ತಿದೆ. ಇದರರ್ಥ ಎಐ ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ, ನೈತಿಕವಾಗಿ, ಐಚಿತ್ಯಪೂರ್ಣವಾಗಿ, ಬಳಸಿದರೆ ಜಗತ್ತಿಗೆ ಒಳಿತಾಗಲಿದೆ.ಇಲ್ಲವೆ ವಿನಾಶ ಖಚಿತ ಎಂಬ ಸಂದೇಶ ವನ್ನು ಕೂಡ ಯುವಜನತೆ ಅರಿಯಬೇಕಿದೆ ಎಂಬುದನ್ನು ತಿಳಿಸಲು ಇಂತಹ ವಿಚಾರ ಸಂಕಿರಣ ಗಳು ಉತ್ತಮ ವೇದಿಕೆಗಳಾಗಲಿವೆ ಎಂದರು.

ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಕೃತಕ ಬುದ್ದಿಮತ್ತೆ ತಂತ್ರಜ್ಞಾನವು ಸಿಂಹಪಾಲು ಹೊಂದಿದೆ. ಎಐ ಮಿಷನ್, ಟೆಲಿಕಾಂ ಮಿಷನ್, ಕ್ವಾಂಟಮ್ ಮಿಷನ್, ಸೆಮಿಕಂಡಕ್ಟರ್ ಮಿಷನ್ ಹೀಗೆ ಪ್ರಾರಂಭಿಸಲಾಗಿದೆ. ಇಂತಹ ಮಿಷನ್‌ಗಳು ಭಾರತ ದೇಶಕ್ಕೆ ತುಂಬಾ ಅಗತ್ಯವಿದೆ. ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಈ ವಿಚಾರಸಂಕಿರಣಗಳಲ್ಲಿ ಬರುವ ಫಲಿತಾಂಶಗಳೂ ನೆರವಾಗಲಿವೆ.

ವಿಜ್ಞಾನ ಮತ್ತು ಆಧ್ಯಾತ್ಮದ ಮಹೋನ್ನತ ವ್ಯಕ್ತಿತ್ವವಾಗಿ ನಿರ್ಮಲಾನಂದನಾಥ ಮಹಾಸ್ವಾಮೀಜಿ £ ಬಹುದೊಡ್ಡ ಸೇತುವೆಯಾಗಿ ಇದ್ದಾರೆ. ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಮುನ್ನಡೆ ದಲ್ಲಿ ಎಐ ತಂತ್ರಜ್ಞಾನದ ಗ್ರಾಹಕರಾಗುವ ಬದಲಿಗೆ ಅದರ ನಿರ್ಮಾತೃಗಳಾಗುವರು ಎಂದು ಅಭಿಪ್ರಾಯಪಟ್ಟರು.

ತೈತ್ತರಿಯ ಉಪನಿಷತ್ತು ಹೇಳುವಂತೆ ಬ್ರಹ್ಮ ಎಂದರೆ ಯಾರು? ಎನ್ನುವುದಕ್ಕೆ ಯಾವ ವಸ್ತು ಪ್ರಪಂಚದ ಉಗಮ ವಿಕಾಸ ವಿನಾಶಕ್ಕೆ ಕಾರಣವಾಗುತ್ತದೆಯೋ ಅದೇ ಬ್ರಹ್ಮವಾಗಿದೆ ಎನ್ನುತ್ತದೆ. ಬೃಗು ವರ್ಣನಿಗೆ ಹೇಳುವ ಅನ್ನಮಯಕೋಶ, ಪ್ರಾಣಮಯಕೋಶ, ಮನೋಮಯಕೋಶ, ವಿಜ್ಞಾನಮಯಕೋಶ, ಆನಂದಮಯಕೋಶಗಳ ವಿಶ್ಲೇಷಣೆಯೂ ಇಂದಿನ ಕೃತಕಬುದ್ಧಿಮತ್ತೆ ತಂತ್ರಜ್ಞಾನ ಮಹತ್ವವನ್ನು ಹೇಳಿದೆ ಎಂದರು.

ಸಮ್ಮೇಳನದಲ್ಲಿ ಬೆಂಗಳೂರಿನ ಟಿಸಿಎಸ್ ಹಿರಿಯ ವಿಜ್ಞಾನಿ ಡಾ. ಪ್ರಶಾಂತ್ ಮಿಶ್ರಾ, ವಾಷಿಂಗ್‌ಟನ್ ಮೈಕ್ರೋಸಾಪ್ಟ್ ಟ್ರಾನ್ಸ್ಲೇಟರ್ ಡಾ.ತಮ್ಮೇಗೌಡ, ವಿಟಿಯು ಎಕ್ಸಿಕ್ಯೂಟೀವ್ ಕೌನ್ಸಿಲ್ ಮೆಂಬರ್ ಮಂಜುನಾಥ್ ಬಚ್ಚೇಗೌಡ, ಆಡಳಿತಾಧಿಕಾರಿ ಡಾ.ಶಿವರಾಮರೆಡ್ಡಿ , ಪ್ರಾಂಶುಪಾಲ ಡಾ.ಜಿ.ಟಿ ರಾಜು, ಡಾ.ರಾಜಶೇಖರ್ ಡಾ, ಭಾನುಮತಿ, ರಂಗಸ್ವಾಮಿ ಮತ್ತಿತರರು ಇದ್ದರು.

*
ಮನೋಬೌದ್ಧಿಕ ಜ್ಞಾನವೃದ್ದಿಗೆ ಯೋಗ ಸಹಕಾರಿ. ಯೋಗ ಚಿತ್ತವೃತ್ತಿ ನಿರೋಧಃ ಎಂಬ ಮಾತು ಇದನ್ನೇ ಹೇಳುತ್ತಿದೆ. ಇದನ್ನು ಮನಗಂಡು ಎಸ್‌ಜೆಸಿಐಟಿ ತಾಂತ್ರಿಕ ಕಾಲೇಜಿನಲ್ಲಿ ಈಇಇಇ ಅಂತರಾಷ್ಟ್ರೀಯ ಸಮ್ಮೇಳನ ನಡೆಯುತ್ತಿದೆ.ಎಐ ತಂತ್ರಜ್ಞಾನದ ಪಡಸಾಲೆಯಲ್ಲಿ ಬಹುದೊಡ್ಡ ಕ್ರಾಂತಿಯೇ ಆಗುತ್ತಿದೆ.ಏನೇ ಆಗಲಿ ಎಲ್ಲವೂ ಜೀವಪರವಾಗಿರಬೇಕು. 13 ದೇಶಗಳ ಉತ್ಕೃಷ್ಟ ಪ್ರಬಂಧಗಳು ಇಲ್ಲಿ ಮಂಡನೆಯಾಗಿ ಜಗತ್ತಿನ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡು ಹಿಡಿಯು ವಂತಾಗಲಿ ಎಂದರು.

ಇದೇ ವೇಳೆ ಚುಂಚಶ್ರೀಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ಮಂಚನಬಲೆ ಶಾಲೆಯ ಪ್ರಣತಿರಾಜ್,ಪಿಎಸ್,ಅಗಲಗುರ್ಕಿ ಶಾಲೆಯ ಪಿ.ಎಸ್.ಸೂಫಿಯಾ, ಬಾಗೇ ಪಲ್ಲಿ ಬಿಜಿಎಸ್ ಶಾಲೆಯ ಯಶಸ್ವಿನಿ .ಎನ್.,ಬಿಜಿಎಸ್ ಪಬ್ಲಿಕ್ ಶಾಲೆ ಗೌರಿಬಿದನೂರಿನ ತೇಜಶ್ರೀ ಆರ್ ಎಂಬ  ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮುಂದಿನ ಬಾಳಿಗೆ ಶುಭ ಕೋರಿದರು.