ಹಳೆಯ ಡ್ರೈಯರ್ ಖರೀದಿಸಿದ ವ್ಯಕ್ತಿಗೆ ಒಲಿದ ಅದೃಷ್ಟ: ಯಂತ್ರದೊಳಗೆ ಸಿಕ್ಕ ಕಂತೆ- ಕಂತೆ ನೋಟುಗಳು!
Viral Video: ಕಡಿಮೆ ಬೆಲೆಗೆ ಸೆಕೆಂಡ್ ಹ್ಯಾಂಡ್ ಡ್ರೈಯರ್ ಖರೀದಿ ಮಾಡಿದ ವ್ಯಕ್ತಿಯೊಬ್ಬರಿಗೆ ಹಣದ ರಾಶಿ ನೋಟುಗಳೇ ಸಿಕ್ಕಿರುವ ಘಟನೆವೊಂದು ಕಂಡು ಬಂದಿದೆ. ಡ್ರೈಯರ್ ಮೆಷಿನ್ ಮೂಲಕ ಯುವಕನು ಲಾಟರಿ ಗೆದ್ದಿದ್ದು ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಸೆಕೆಂಡ್ ಹ್ಯಾಂಡ್ ಡ್ರೈಯರ್ ನಲ್ಲಿ ರಾಶಿ ಹಣದ ನೋಟು ಪತ್ತೆ -
ನವದೆಹಲಿ,ಏ. 24: ಇಂದಿನ ಆಧುನಿಕ ಯುಗದಲ್ಲಿ ವಿವಿಧ ವಸ್ತುಗಳನ್ನು ಆನ್ ಲೈನ್ ಮೂಲಕವೇ ಖರೀದಿ ಮಾಡುತ್ತೇವೆ. ಅದರಲ್ಲೂ ಹಳೆಯ ವಸ್ತುಗಳನ್ನು ಇಂದು ಆನ್ ಲೈನ್ ಪ್ಲಾಟ್ ಫಾರ್ಮ್ ಮೂಲಕವೇ ಖರೀದಿಸುವುದು,ಮಾರಾಟ ಮಾಡುವುದು ಸಾಮಾನ್ಯವಾಗಿದೆ. ಇದೀಗ ಕಡಿಮೆ ಬೆಲೆಗೆ ಸೆಕೆಂಡ್ ಹ್ಯಾಂಡ್ ಡ್ರೈಯರ್ ಖರೀದಿ ಮಾಡಿದ ವ್ಯಕ್ತಿಯೊಬ್ಬರಿಗೆ ಹಣದ ರಾಶಿ ನೋಟುಗಳೇ ಸಿಕ್ಕಿರುವ ಘಟನೆವೊಂದು ಕಂಡು ಬಂದಿದೆ. ಡ್ರೈಯರ್ ಮೆಷಿನ್ ಮೂಲಕ ಯುವಕನು ಲಾಟರಿ ಗೆದ್ದಿದ್ದು ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.
ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್ ಮೂಲಕ ಹಳೆಯ ಸ್ಯಾಮ್ ಸಂಗ್ ಡ್ರೈಯರ್ ಅನ್ನು ವ್ಯಕ್ತಿಯೊಬ್ಬ ಖರೀದಿ ಮಾಡಿದ್ದಾನೆ. ಆದರೆ ಮನೆಯಲ್ಲಿ ಈ ಗೃಹ ಬಳಕೆಯ ವಸ್ತು ಬಳಕೆ ಮಾಡಿದಾಗ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ. ಬಟ್ಟೆಯನ್ನು ಸರಿಯಾಗಿ ಒಣಗಿಸುತ್ತಿರಲಿಲ್ಲ. ಈ ಬಗ್ಗೆ ಮಾರಾಟಗಾರನಿಗೆ ಕರೆ ಮಾಡಿದರೆ ಆತ ನಂಬರ್ ಅನ್ನೇ ಬ್ಲಾಕ್ ಮಾಡಿದ್ದಾನೆ.
ವಿಡಿಯೋ ನೋಡಿ:
Customer bought a Samsung dryer off Facebook Marketplace. Seller blocked him after pickup. Dryer wouldn't dry anything. Repair guy opens it up and finds the whole machine packed with money. Cleaned it out, fixed the dryer, and got a $1000 tip on top. Facebook Marketplace is wild. pic.twitter.com/ZYebAwPWJ1
— Clown World ™ 🤡 (@ClownWorld) April 22, 2026
ಇದಕ್ಕಾಗಿ ಆತ ಡ್ರೈಯರ್ ಅನ್ನು ದುರಸ್ತಿ ಮಾಡಲು ನಿರ್ಧಾರ ಮಾಡಿದ್ದಾನೆ. ಆದರೆ ರಿಪೇರಿ ಮಾಡುವಾಗ ಅದರ ಒಳಗಿದ್ದ ಹಣದ ಬಂಡಲ್ ನೋಡಿ ಆತನೇ ಶಾಕ್ ಆಗಿದ್ದಾನೆ . ಡ್ರೈಯರ್‌ನ ಒಳಭಾಗದಲ್ಲಿ ನೋಟುಗಳ ಕಟ್ಟನ್ನೇ ಇಡಲಾಗಿತ್ತು. ಈ ಹಣದ ಬಂಡಲ್ ಯಂತ್ರದ ಗಾಳಿಯ ಸಂಚಾರಕ್ಕೆ ತೊಂದರೆ ಮಾಡುತ್ತಿತ್ತು. ಅದಕ್ಕಾಗಿಯೇ ಅದು ಕೆಲಸ ಮಾಡುತ್ತಿರಲಿಲ್ಲ ಎಂಬುದು ತಿಳಿದು ಬಂದಿದೆ.
Viral Video: ಪಾಕಿಸ್ತಾನಿ ಮದುವೆಯಲ್ಲಿ ಧುರಂಧರ್ ಸಿನಿಮಾದ ಹವಾ; ಟೈಟಲ್ ಸಾಂಗ್‌ಗೆ ಭರ್ಜರಿ ಸೆಪ್ಟ್ ಹಾಕಿದ ಯುವಕರು
ಈ ವಿಡಿಯೋ ವಿವಿಧ ವೇದಿಕೆಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ನಾನು ಇನ್ಮುಂದೆ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನೇ ಖರೀದಿ ಮಾಡುವೆ ಎಂದು ಬರೆದಿದ್ದಾರೆ. ಮತ್ತೊಬ್ಬರು "ಡ್ರೈಯರ್‌ನ ಮೂಲಕ ಇಷ್ಟು ದೊಡ್ಡ ನೋಟುಗಳು ಸಿಗಲು ಸಾಧ್ಯವೇ ಇಲ್ಲ. ಇದು ಪ್ರಚಾರದ ಉದ್ದೇಶ" ಎಂದಿದ್ದಾರೆ.