Students honored: ಎಸ್.ಎಸ್.ಎಲ್.ಸಿ ಫಲಿತಾಂಶ : ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
ತಾಲೂಕಿನ ಮಾಚಹಳ್ಳಿ ಸರ್ಕಾರಿ ಪ್ರೌಢಶಾಲೆಯು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸತತ ಎರಡನೇ ವರ್ಷವೂ ಶೇ.100ರಷ್ಟು ಫಲಿತಾಂಶದ ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾದ 14 ವಿದ್ಯಾರ್ಥಿ ಗಳಲ್ಲಿ ಒಬ್ಬ ವಿದ್ಯಾರ್ಥಿನಿ ಅತ್ಯುನ್ನತ ದರ್ಜೆಯಲ್ಲಿ, 11 ವಿದ್ಯಾರ್ಥಿಗಳು ಪ್ರಥಮ ದರ್ಜೆ ಯಲ್ಲಿ ಹಾಗೂ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ತಾಲೂಕಿನ ಮಾಚಹಳ್ಳಿ ಸರ್ಕಾರಿ ಪ್ರೌಢಶಾಲೆಯು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. -
ಗುಡಿಬಂಡೆ: ತಾಲೂಕಿನ ಮಾಚಹಳ್ಳಿ ಸರ್ಕಾರಿ ಪ್ರೌಢಶಾಲೆಯು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸತತ ಎರಡನೇ ವರ್ಷವೂ ಶೇ.100ರಷ್ಟು ಫಲಿತಾಂಶದ ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾದ 14 ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿನಿ ಅತ್ಯುನ್ನತ ದರ್ಜೆಯಲ್ಲಿ, 11 ವಿದ್ಯಾರ್ಥಿಗಳು ಪ್ರಥಮ ದರ್ಜೆ ಯಲ್ಲಿ ಹಾಗೂ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಈ ಶಾಲೆಯು ಕರ್ನಾಟಕ ರಾಜ್ಯ ಪರೀಕ್ಷೆಗಳು ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಯಿಂದ A ಗ್ರೇಡ್ ಪಡೆದಿರುತ್ತದೆ.
ಇದನ್ನೂ ಓದಿ: Karnataka SSLC Exam-2: ಮೇ 26ರಿಂದ ರಾಜ್ಯಾದ್ಯಂತ SSLC ಪರೀಕ್ಷೆ-2, ಈ ನಿಯಮ ಪಾಲನೆ ಕಡ್ಡಾಯ
ಇನ್ನೂ ಯರ್ರಹಳ್ಳಿ ಗ್ರಾಮದ ನಾರಾಯಣಸ್ವಾಮಿ ರವರ ಮಗಳಾದ ಕುಮಾರಿ ಶಿಲ್ಪ, ಮಾಚಹಳ್ಳಿ ಗ್ರಾಮದ ಪುಷ್ಪ. ಎ. ಹಾಗೂ ಪಸುಪಲೋಡು ಗ್ರಾಮದ ಭರತ ಎಂಬ ವಿದ್ಯಾರ್ಥಿಗಳನ್ನು ಅವರ ಮನೆಗಳಿಗೆ ಭೇಟಿ ನೀಡಿ ಸನ್ಮಾನಿಸಿ, ಗೌರವಿಸಿ ಪೋಷಕರೊಂದಿಗೆ ಸಾಧನೆಯ ಸಂತಸವನ್ನು ಹಂಚಿ ಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆ ಮಾಚ ಹಳ್ಳಿಯ ಮುಖ್ಯ ಶಿಕ್ಷಕರಾದ ಮಂಜಾ ನಾಯಕ್ ಸಿ. ಸಹಶಿಕ್ಷಕರಾದ ಚಂದ್ರಶೇಖರ್ ಎಲ್ ವಿ, ರಾಜಾರೆಡ್ಡಿ, ಸಿಬ್ಬಂದಿಯವರಾದ ಶ್ಯಾಮಸುಂದರ್ ಹಾಗೂ ಪೋಷಕರು ಹಾಜರಿದ್ದರು.