ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೇ31 ರಂದು ಗೋಟಕನಾಪುರ ಗ್ರಾಮದಲ್ಲಿ ಕೆರೆ ಹಬ್ಬ

ಗೌರಿಬಿದನೂರು ಸೇವಾ ಪ್ರತಿಷ್ಠಾನದ ವತಿಯಿಂದ ಇದುವರೆಗೂ 16 ಕೆರೆಗಳನ್ನು ಪುನಶ್ಚೇತನ ಗೊಳಿಸಲಾಗಿದೆ. ನಮ್ಮ ತಾಲೂಕಿನವರೇ ಆದ ಹಿರಿಯ ಶ್ರೇಣಿಯ ಕೆ.ಎ.ಎಸ್ ಅಧಿಕಾರಿ ಬಿ.ಎನ್. ವರಪ್ರಸಾದ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯ ನಡೆದಿದೆ.  ಇದರಿಂದಾಗಿ ಒಟ್ಟಾರೆ ಐದುನೂರ ಎಪತೈದು ಎಕರೆಗಳಷ್ಟು ಕೆರೆ ಪ್ರದೇಶವು ಸ್ವಚ್ಛಗೊಂಡಿದೆ,

ಮೇ31 ರಂದು ಗೋಟಕನಾಪುರ ಗ್ರಾಮದಲ್ಲಿ ಕೆರೆ ಹಬ್ಬ

-

Profile
Ashok Nayak May 28, 2026 11:14 PM

ಗೌರಿಬಿದನೂರು : ,ಗೌರಿಬಿದನೂರು ಸೇವಾ ಪ್ರತಿಷ್ಟಾನ ಟ್ರಸ್ಟ್ ವತಿಯಿಂದ ದಿನಾಂಕ ಮೇ 31 ರಂದು ಗೊಟಕನಾಪುರ ಗ್ರಾಮದಲ್ಲಿ ಕೆರೆ ಹಬ್ಬ ಮತ್ತು ಗಂಗಾ ಆಹ್ವಾನ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಟ್ರಸ್ಟ್ ನ ಗೌರವಾಧ್ಯಕ್ಷ ಸಂಜೀವ ರೆಡ್ಡಿ ತಿಳಿಸಿದ್ದಾರೆ.

ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. 

ಗೌರಿಬಿದನೂರು ಸೇವಾ ಪ್ರತಿಷ್ಠಾನದ ವತಿಯಿಂದ ಇದುವರೆಗೂ 16 ಕೆರೆಗಳನ್ನು ಪುನಶ್ಚೇತನ ಗೊಳಿಸಲಾಗಿದೆ. ನಮ್ಮ ತಾಲೂಕಿನವರೇ ಆದ ಹಿರಿಯ ಶ್ರೇಣಿಯ ಕೆ.ಎ.ಎಸ್ ಅಧಿಕಾರಿ ಬಿ.ಎನ್. ವರಪ್ರಸಾದ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯ ನಡೆದಿದೆ.  ಇದರಿಂದಾಗಿ ಒಟ್ಟಾರೆ ಐದುನೂರ ಎಪತೈದು ಎಕರೆಗಳಷ್ಟು ಕೆರೆ ಪ್ರದೇಶವು ಸ್ವಚ್ಛಗೊಂಡಿದೆ, 

ಒಟ್ಟಾರೆಯಾಗಿ ಈ ಪ್ರದೇಶದಲ್ಲಿ 220 ಕೋಟಿ ಲೀಟರ್ ಗಳಷ್ಟು ನೀರಿನ ಸಂಗ್ರಹ ಸಾಮರ್ಥ್ಯವು ಅಧಿಕವಾಗಿದೆ ಎಂದರು. 

ಅದೇ ರೀತಿ, ಗೌರಿಬಿದನೂರು ನಗರಕ್ಕೆ ತಾಕಿ ಕೊಂಡೇ ಇರುವ ಮತ್ತು ನಗರದ ಜನತೆಗೆ ಪ್ರಮುಖ ನೀರಿನ ಆಸರೆಯಾಗಿರುವ ಗೊಟಕನಾಪುರದ ಕೆರೆಯ ಸುಮಾರು ನೂರಾ ಇಪತ್ತು ಎಕರೆ ಕೆರೆ ಪ್ರದೇಶದಲ್ಲಿ ಎಂಬತ್ತು ಎಕರೆ ಕೆರೆ ಪ್ರದೇಶವನ್ನು ಪುನಶ್ಚೇತನಗೊಳಿಸಲಾಗಿದ್ದು, ಮುಂಗಾರಿನ ಮೊದಲ ಮಳೆಗೇ ಕೆರೆಯಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗಿರುವುದಾಗಿ ತಿಳಿಸಿದರು.

ಇದನ್ನೂ ಓದಿ: Chikkaballapur News: ರಸಗೊಬ್ಬರ, ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಗೆ ಆಗ್ರಹಿಸಿ ಪುಟ್ಟಣ್ಣಯ್ಯ ಬಣದ ರೈತ ಸಂಘ ಪ್ರತಿಭಟನೆ

ಈ ಹಿನ್ನೆಲೆಯಲ್ಲಿ ಕೆರೆಗಳ ಪುನಶ್ಚೇತನದ ಕಾರ್ಯದ ಮಹತ್ವವನ್ನು ಜನರಿಗೆ ತಿಳಿಯಪಡಿಸುವ ಉದ್ದೇಶದಿಂದ ಕೆರೆಹಬ್ಬವನ್ನು ಆಯೋಜಿಸಿದ್ದು ಮುದುಗಾನಕುಂಟೆಯ ಗಂಗಾ ಭಾಗೀರಥಿಯ ಪಂಚಲೋಹದ ಮೂರ್ತಿ ಪ್ರತಿಷ್ಟಾಪಿಸಿ ಎಲ್ಲಾ ತಾಯಂದಿರಿಂದ ಜಲಾಭಿಶೇಕವನ್ನು ನೆರವೇರಿಸ ಲಾಗುವುದು. ಇದರ ಸಂಪೂರ್ಣ ಪೂಜಾ ಕೈಂಕರ್ಯದ ನೇತೃತ್ವವನ್ನು ವೇ.ಬಹ್ಮ ಶ್ರೀ ಅಶ್ವತ್ಥ ನಾರಾಯಣ ಶರ್ಮ ರವರು ವಹಿಸಿಕೊಳ್ಳುವರು ಎಂಬುದಾಗಿ ತಿಳಿಸಿದರು.

ಇದೇ ವೇಳೆ ಮಾತನಾಡಿದ ಟ್ರಸ್ಟ್ ನ ಸದಸ್ಯ ಮತ್ತು ಗೊಟಕನಾಪುರ ಕೆರೆಯ ಪುನಶ್ಚತನ ಕಾರ್ಯದ ಉಸ್ತುವಾರಿ ವರುಣ್, ಕೆರೆಹಬ್ಬವನ್ನು ಅತ್ಯಂತ ವಿಶಿಷ್ಟವಾಗಿ ಮತ್ತು ಸಾಂಪ್ರದಾಯಬದ್ದವಾಗಿ ಆಯೋಜಿಸಲಾಗಿದೆ ಮತ್ತು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪರಮ ಪೂಜ್ಯ ಶ್ರೀ ನಿಶ್ಚಲಾ ನಂದನಾಥ ಸ್ವಾಮೀಜಿ ರವರು ಶ್ರೀಮತಿ ತೇಜಸ್ವಿನಿ ಅನಂತ್ ಕುಮಾ‌ರ್, ರಾಷ್ಟ್ರೀಯ ಚಲನಚಿತ್ರ ಪ್ರಶಸ್ಥಿ ಪುರಸ್ಕೃತರಾದ ಅನಿರುದ್ಧ ಜತಕರ ರವರು ಆಗಮಿಸುವುದಾಗಿ ತಿಳಿಸಿದರು.

ಈ ಹಿನ್ನಲೆಯಲ್ಲಿ ಸಮಸ್ಥ ಗೌರಿಬಿದನೂರು ಜನತೆ ಈ ಅಪೂರ್ವವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರಿಬಿದನೂರು ತಾಲ್ಲೂಕನ್ನು ಸುಭಿಕ್ಷವಾಗಿಡುವ ದೃಷ್ಟಿಯಿಂದ ತಾಯಿ ಗಂಗಾ ಭಾಗೀರತಿಯನ್ನು ಪ್ರಾರ್ಥಿಸ ಬೇಕಾಗಿ ಕೋರಿದರು. ಇದೇ ಸಂದರ್ಭದಲ್ಲಿ ಪ್ರತಿಷ್ಟಾನದ ಕಾನೂನು ಸಲಹೆಗಾರರಾದ ಹರೀಶ್,ಖಜಾಂಚಿ ಉಪೇಂದ್ರ ಸೇರಿದಂತೆ ಇನ್ನಿತರರು ಹಾಜರಿದ್ದರು.