ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಮುಂಬೈ ಇಂಡಿಯನ್ಸ್‌ಗೆ ಹಾರ್ದಿಕ್‌ ಪಾಂಡ್ಯ ಸೇರ್ಪಡೆಯಾಗಬೇಕೆಂದ ಎಸ್‌ ಬದ್ರಿನಾಥ್‌!

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಹಾರ್ದಿಕ್‌ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಟ್ರೇಡ್ ಮೂಲಕ ಸೇರ್ಪಡೆ ಮಾಡಿಕೊಳ್ಳಬೇಕು ಹಾಗೂ ಅದರ ಬದಲಾಗಿ ಆಯುಷ್‌ ಮ್ಹಾತ್ರೆ ಮತ್ತು ಶಿವಂ ದುಬೇ ಅವರನ್ನು ಮುಂಬೈ ತಂಡಕ್ಕೆ ನೀಡಬೇಕೆಂದು ಮಾಜಿ ಕ್ರಿಕೆಟಿಗ ಎಸ್‌ ಬದ್ರಿನಾಥ್‌ ಸಲಹೆ ನೀಡಿದ್ದಾರೆ.

ಸಿಎಸ್‌ಕೆಗೆ ಹಾರ್ದಿಕ್‌ ಪಾಂಡ್ಯ ಸೇರಬೇಕೆಂದ ಎಸ್‌ ಬದ್ರಿನಾಥ್‌!

ಹಾರ್ದಿಕ್‌ ಪಾಂಡ್ಯ ಸಿಎಸ್‌ಕೆಗೆ ಸೇರ್ಪಡೆಯಾಗಬೇಕೆಂದ ರಾಯುಡು. -

Profile
Ramesh Kote May 28, 2026 11:06 PM

ನವದೆಹಲಿ: ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡ ಟ್ರೇಡ್‌ ಡೀಲ್‌ ಮೂಲಕ ಮುಂಬೈ ಇಂಡಿಯನ್ಸ್‌ ತಂಡದಿಂದ ಹಾರ್ದಿಕ್‌ ಪಾಂಡ್ಯ (Hardik Pandya) ಅವರನ್ನು ಸೇರ್ಪಡೆ ಮಾಡಿಕೊಳ್ಳಬೇಕೆಂದು ಭಾರತದ ಮಾಜಿ ಕ್ರಿಕೆಟಿಗ ಎಸ್‌ ಬದ್ರಿನಾಥ್‌ (S Badrinath) ಸಲಹೆ ನೀಡಿದ್ದಾರೆ. ಹಾರ್ದಿಕ್‌ಗೆ ಬದಲಿಯಾಗಿ ಸಿಎಸ್‌ಕೆ ತಂಡದಿಂದ ಆಯುಷ್‌ ಮ್ಹಾತ್ರೆ ಮತ್ತು ಶಿವಂ ದುಬೆ ಅವರನ್ನು ಮುಂಬೈಗೆ ಕಳುಹಿಸಬೇಕಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಹಾರ್ದಿಕ್‌ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್‌ ಉತ್ತಮ ಸಾಧನೆ ಮಾಡದೇ ಇದ್ದರೂ ಅವರಿಗೆ ಸಿಎಸ್‌ಕೆ ನಾಯಕತ್ವ ನೀಡಬೇಕು ಎಂದು ಬದ್ರಿನಾಥ್ ಸಲಹೆ ನೀಡಿದ್ದಾರೆ.

2024ರಲ್ಲಿ ಮುಂಬೈ ಇಂಡಿಯನ್ಸ್ ನಾಯಕನಾಗಿ ನೇಮಕಗೊಂಡ ಬಳಿಕ, ಹಾರ್ದಿಕ್‌ ಪಾಂಡ್ಯ ಕಳೆದ ಸೀಸನ್‌ನಲ್ಲಿ ತಂಡವನ್ನು ಪ್ಲೇಆಫ್ಸ್‌ಗೆ ಕೊಂಡೊಯ್ದಿದ್ದರು. ಆದರೆ 2024ರಲ್ಲಿ ತಂಡ ಕೊನೆಯ ಸ್ಥಾನದಲ್ಲಿ ಮುಗಿಸಿದ್ದರೆ, ಈ ವರ್ಷ ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಆದರೂ ಹಾರ್ದಿಕ್ ಸೇರ್ಪಡೆಯಿಂದ ಸಿಎಸ್‌ಕೆ ತಂಡಕ್ಕೆ ಉತ್ತಮ ಸಮತೋಲನ ಸಿಗುತ್ತದೆ ಎಂದು ಬದ್ರಿನಾಥ್ ನಂಬಿದ್ದಾರೆ.

IPL 2026: ʻಅದು ಮೂರ್ಖ ಪ್ರಶ್ನೆʼ-ರಿಪೋರ್ಟರ್‌ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಗುಡುಗಿದ ಗ್ಲೆನ್‌ ಫಿಲಿಪ್ಸ್!

“ನಾನು ಮುಂಬೈ ಇಂಡಿಯನ್ಸ್‌ ಟೀಮ್‌ ಮ್ಯಾನೇಜ್‌ಮೆಂಟ್‌ನಲ್ಲಿದ್ದರೆ ಹಾರ್ದಿಕ್‌ ಪಾಂಡ್ಯ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಶಿವಂ ದುಬೆ ಮತ್ತು ಆಯುಷ್‌ ಮ್ಹಾತ್ರೆ ಅವರೊಂದಿಗೆ ಟ್ರೇಡ್ ಮಾಡುತ್ತಿದ್ದೆ. ಸಂಜು ಸ್ಯಾಮ್ಸನ್‌, ಋತುರಾಜ್‌ ಗಾಯಕ್ವಾಡ್‌ ಮತ್ತು ಹಾರ್ದಿಕ್ ಪಾಂಡ್ಯ ಅವರೊಂದಿಗೆ ಸಿಎಸ್‌ಕೆ ಬ್ರ್ಯಾಂಡ್ ಅನ್ನು ಅಗ್ರ ಹಂತಕ್ಕೆ ಕೊಂಡೊಯ್ಯಲಿದೆ. ಸಂಜು ಸ್ಯಾಮ್ಸನ್‌ನೇ ಸಿಎಸ್‌ಕೆ ನಾಯಕನಾಗಬೇಕು ಎಂಬ ಯಾವುದೇ ಕಟ್ಟುನಿಟ್ಟಿನ ನಿಯಮವಿಲ್ಲ. ಹಾರ್ದಿಕ್ ನಾಯಕತ್ವ ಕೇಳಿದರೆ, ಎಂಎಸ್‌ ಧೋನಿ ಅವರೊಂದಿಗೆ ಇರುವ ಅತ್ಯುತ್ತಮ ಸಂಬಂಧದ ಕಾರಣದಿಂದ ನಾನು ಅವರನ್ನು ಸಿಎಸ್‌ಕೆ ನಾಯಕನನ್ನೇ ಮಾಡುತ್ತೇನೆ,” ಎಂದು ಎಸ್‌ ಬದ್ರಿನಾಥ್ ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಹೇಳಿದ್ದಾರೆ.

“ಹಾರ್ದಿಕ್ ಬಳಿ ಇನ್ನೂ ಕನಿಷ್ಠ ಮೂರು ಅದ್ಭುತ ಸೀಸನ್‌ಗಳು ಉಳಿದಿವೆ. ಅವರು ಸಿಎಸ್‌ಕೆ ತಂಡಕ್ಕೆ ಅಸಾಧಾರಣ ಸಮತೋಲನ ತರುತ್ತಾರೆ. ತಂಡವನ್ನೇ ಅವರ ಸುತ್ತ ಕಟ್ಟಿಕೊಳ್ಳಬಹುದಾದಷ್ಟು ಪ್ರಭಾವ ಬೀರುತ್ತಾರೆ. ಜೊತೆಗೆ, ಬೇರೆ ಯಾವುದೇ ಫ್ರಾಂಚೈಸಿಗಿಂತ ಸಿಎಸ್‌ಕೆಗೆ ಸೇರುವುದು ಹಾರ್ದಿಕ್‌ಗೆ ಸಹ ಉಪಯೋಗಕಾರಿ. ಏಕೆಂದರೆ ಚೆನ್ನೈ ನಿಮ್ಮ ಇಮೇಜ್ ಅನ್ನು ಸಂಪೂರ್ಣ ಬೇರೆ ಮಟ್ಟಕ್ಕೆ ಏರಿಸಬಲ್ಲದು,” ಎಂದು ಅವರು ಸೇರಿಸಿದರು.

ವೈಭವ್‌ ಸೂರ್ಯವಂಶಿಗೆ ಈಗಲೇ ಭಾರತ ತಂಡದಲ್ಲಿ ಅವಕಾಶ ನೀಡಬೇಡಿ: ಆಕಾಶ್‌ ಚೋಪ್ರಾ ವಾರ್ನಿಂಗ್‌!

“ಹಾರ್ದಿಕ್‌ ಪಾಂಡ್ಯ ಅವರು ಗುಜರಾತ್‌ ಟೈಟನ್ಸ್‌ ತಂಡದಿಂದ ಮುಂಬೈ ಇಂಡಿಯನ್ಸ್‌ಗೆ ಬಂದು ನಾಯಕನಾದ ರೀತಿ, ಎಂಐ ಇದೀಗ ಹಾರ್ದಿಕ್ ಅವರನ್ನು ಟ್ರೇಡ್ ಮಾಡಬೇಕಾದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ರೋಹಿತ್‌ ಶರ್ಮಾ 15 ವರ್ಷಗಳ ಕಾಲ ಆಡಿದ್ದು, ಐದು ಪ್ರಶಸ್ತಿಗಳನ್ನು ಗೆದ್ದುಕೊಟ್ಟಿದ್ದಾರೆ. ಅವರು ಮುಂಬೈ ಅಭಿಮಾನಿಗಳ ಹೃದಯದ ಆಟಗಾರ. ಹಾರ್ದಿಕ್ ಅವರು ನಾಯಕತ್ವ ವಹಿಸಿದ ನಂತರದಿಂದ ಎಂಐ ತಂಡದಲ್ಲಿ ಏನೋ ಸರಿಯಿಲ್ಲದಂತಾಗಿದೆ,” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಹೀಗಾಗಿ ಹಾರ್ದಿಕ್ ಅವರನ್ನು ತಂಡದಿಂದ ಬಿಟ್ಟರೆ, ಎಂಐ ಇನ್ನೂ ಅದ್ಭುತ ತಂಡವಾಗಿಯೇ ಉಳಿಯುತ್ತದೆ. ಹಾರ್ದಿಕ್ ಅವರನ್ನು ಟ್ರೇಡ್ ಮಾಡಿ ತಿಲಕ್‌ ವರ್ಮಾ, ಜಸ್‌ಪ್ರೀತ್‌ ಬುಮ್ರಾ ಅಥವಾ ಸೂರ್ಯಕುಮಾರ್‌ ಯಾದವ್‌ ಅವರಲ್ಲಿ ಒಬ್ಬರನ್ನು ನಾಯಕನನ್ನಾಗಿ ಮಾಡಬಹುದು. ಇದು ಹಾರ್ದಿಕ್ ಅವರ ತಪ್ಪಲ್ಲ. ಆದರೆ ಅವರು ನಾಯಕತ್ವ ಬಯಸಿದ ವಿಚಾರ ತಂಡದ ಒಳಗಿನ ಸಮತೋಲನದ ಮೇಲೆ ಪರಿಣಾಮ ಬೀರಿದೆ,” ಎಂದು ಬದ್ರಿನಾಥ್‌ ತಮ್ಮ ಮಾತು ನಿಲ್ಲಿಸಿದರು.