ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಅ.21 ವಿಜಯದಶಮಿಯಂದು ನವರಾತ್ರಿ ಉತ್ಸವ ಸಮಾಪನ

Sathya Sai Grama: ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ಕಳೆದ ಎಂಟು ದಿನಗಳಿಂದ ನಡೆಯುತ್ತಿರುವ ನವರಾತ್ರಿ ಉತ್ಸವವು ಅ.21ರಂದು ವಿಜಯದಶಮಿಯಂದು ಸಮಾಪನಗೊಳ್ಳಲಿದೆ. ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಉತ್ಸವದ ಅಂಗವಾಗಿ ದುರ್ಗಾಪೂಜೆ, ವಿವಿಧ ಹೋಮಗಳು, ಮಹಾರುದ್ರಯಾಗ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿವೆ.

ಮುದ್ದೇನಹಳ್ಳಿಯಲ್ಲಿ ಅ.21ರಂದು ನವರಾತ್ರಿ ಉತ್ಸವ ಸಮಾಪನ

-

Profile
Siddalinga Swamy Oct 19, 2026 9:31 PM

ಚಿಕ್ಕಬಳ್ಳಾಪುರ, ಅ.19: ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ಕಳೆದ ಎಂಟು ದಿನಗಳಿಂದ ನಡೆಯುತ್ತಿರುವ ನವರಾತ್ರಿ ಉತ್ಸವವು ಅ.21ರಂದು ವಿಜಯದಶಮಿಯಂದು ಸಮಾಪನಗೊಳ್ಳಲಿದೆ. ಸದ್ಗುರು ಶ್ರೀ ಮಧುಸೂದನ ಸಾಯಿ ಅವರ (Sadguru Sri Madhusudan Sai) ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಉತ್ಸವದ ಅಂಗವಾಗಿ ದುರ್ಗಾಪೂಜೆ, ವಿವಿಧ ಹೋಮಗಳು, ಮಹಾರುದ್ರಯಾಗ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿವೆ.

ಸತ್ಯಸಾಯಿ ಗ್ರಾಮದ ಶ್ರೀ ಸತ್ಯಸಾಯಿ ಹೃದಯ ಮಂದಿರದ ಆವರಣದಲ್ಲಿರುವ ಯಾಗಶಾಲೆಯಲ್ಲಿ ಅ.11ರಂದು ಆರಂಭವಾದ ನವರಾತ್ರಿ ಉತ್ಸವದಲ್ಲಿ ನಾಡಿನ ವಿವಿಧ ಗಣ್ಯರು, ಧಾರ್ಮಿಕ ಮುಖಂಡರು, ಶಿಕ್ಷಣ ತಜ್ಞರು ಹಾಗೂ ಭಕ್ತರು ಭಾಗವಹಿಸಿದ್ದಾರೆ.

Sathya Sai Grama

ಅ.20ರಂದು ನವರಾತ್ರಿ ಉತ್ಸವದ ಅಂಗವಾಗಿ ಬೆಳಿಗ್ಗೆ 7.30ಕ್ಕೆ ಚಂಡಿಕಾ ಹೋಮ ನಡೆಯಲಿದೆ. ಇದೇ ವೇಳೆ ಅ.18ರಿಂದ ಆರಂಭವಾಗಿರುವ ಮಹಾರುದ್ರಯಾಗ ಮುಂದುವರಿಯಲಿದ್ದು, ರುದ್ರ ಪಾರಾಯಣ, ರುದ್ರಾಭಿಷೇಕ, ರುದ್ರ ಹೋಮ, ಮೃತ್ಯುಂಜಯ ಹೋಮ ಹಾಗೂ ಸಾಯಿ ಗಾಯತ್ರಿ ಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಸಂಜೆ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಪ್ರಸ್ತುತಿಗಳು ನಡೆಯಲಿವೆ.

Sathya Sai Grama Muddenahalli

ಅ.21ರಂದು ವಿಜಯದಶಮಿಯಂದು ಬೆಳಿಗ್ಗೆ 5.30ಕ್ಕೆ ಮಂಗಳವಾದ್ಯಗಳೊಂದಿಗೆ ಅಂತಿಮ ದಿನದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಬೆಳಗ್ಗೆ 6.30ಕ್ಕೆ ಅರುಣ ಪಾರಾಯಣ, ಮಹಾನ್ಯಾಸ ಪಾರಾಯಣ, ರುದ್ರ ಪಾರಾಯಣ ಹಾಗೂ ರುದ್ರಾಭಿಷೇಕ ನಡೆಯಲಿವೆ. ಬೆಳಗ್ಗೆ 10 ಗಂಟೆಗೆ ರುದ್ರ ಹೋಮ ಮತ್ತು ಸಾಯಿ ಗಾಯತ್ರಿ ಹೋಮದೊಂದಿಗೆ ಮಹಾಪೂರ್ಣಾಹುತಿ ನೆರವೇರಲಿದೆ. ಬಳಿಕ ಅಗ್ನಿ ಸಂಯೋಜನೆ, ಕುಂಭಾಭಿಷೇಕ ಹಾಗೂ ಮಹಾಮಂಗಳಾರತಿ ನಡೆಯಲಿವೆ.

ಇದೇ ದಿನ ಲಕ್ಷ್ಮೀನಾರಾಯಣ ಹೃದಯ ಹೋಮ ಮತ್ತು ಕುಬೇರ ಲಕ್ಷ್ಮೀ ಹೋಮಗಳೂ ನಡೆಯಲಿದ್ದು, ನವರಾತ್ರಿ ಉತ್ಸವದ ಧಾರ್ಮಿಕ ವಿಧಿವಿಧಾನಗಳು ಪೂರ್ಣಗೊಳ್ಳಲಿವೆ. ಸತ್ಯಸಾಯಿ ಗ್ರಾಮದ ಪ್ರೇಮಾಮೃತಂ ಸಭಾಂಗಣದಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಆಯೋಜನೆಯಾಗಿವೆ.

Muddenahalli News

ಎಂಟು ದಿನಗಳ ಧಾರ್ಮಿಕ ಆಚರಣೆ

ಅ.11ರಂದು ಸಹಸ್ರ ಮೋದಕ ಗಣಪತಿ ಹೋಮ, ನವಗ್ರಹ ಹೋಮ ಹಾಗೂ ಶನಿ ಶಾಂತಿ ವಿಧಿವಿಧಾನಗಳೊಂದಿಗೆ ಉತ್ಸವ ಆರಂಭವಾಯಿತು. ಅ.12ರಂದು ದುರ್ಗಾ ಹೋಮ, ಭಗವತಿ ತ್ರಿಕಾಲ ಪೂಜೆ ಹಾಗೂ ಸಾಮೂಹಿಕ ಲಲಿತಾ ಸಹಸ್ರನಾಮ ಪಠಣ ನಡೆಯಿತು. ಅ.13ರಂದು ಪವಮಾನ ಹೋಮ ಮತ್ತು ಆಶ್ಲೇಷಬಲಿ, ಅ.14ರಂದು ಧನ್ವಂತರಿ ಹೋಮ ಹಾಗೂ ವಿಷ್ಣು ಸಹಸ್ರನಾಮ ಹೋಮ ನೆರವೇರಿದವು.

ಅ.15ರಂದು ಲಲಿತಾ ಹೋಮ, ದುರ್ಗಾ ಹೋಮ, ಸುವಾಸಿನಿ ಮತ್ತು ಕನ್ಯಾ ಪೂಜೆ, ಅ.16ರಂದು ಮೇಧಾ ದಕ್ಷಿಣಾಮೂರ್ತಿ ಹೋಮ ಹಾಗೂ ಮಹಾಸರಸ್ವತಿ ಹೋಮಗಳು ನಡೆದವು. ಅ.17ರಂದು ಲಕ್ಷ್ಮೀನರಸಿಂಹ ಹೋಮ ಮತ್ತು ಗಾಯತ್ರಿ ಹೋಮ ನೆರವೇರಿದರೆ, ಅ.18ರಂದು ರಾಮತಾರಕ ಹೋಮ, ಆಂಜನೇಯ ಹೋಮ ಹಾಗೂ ಸಾಯಿ ಗಾಯತ್ರಿ ಜಪ ಪುರಸ್ಸರ ಹೋಮಗಳೊಂದಿಗೆ ಮಹಾರುದ್ರಯಾಗಕ್ಕೂ ಚಾಲನೆ ದೊರೆಯಿತು.

ರಾಜಕಾರಣದಲ್ಲಿ ಧರ್ಮ ಉಳಿಯಲು ಧಾರ್ಮಿಕ ಗುರುಗಳು ಆಶೀರ್ವದಿಸಬೇಕು: ನೊಣವಿನಕೆರೆ ಶ್ರೀ

ದುರ್ಗಾಪೂಜೆಯ ಅಂಗವಾಗಿ ದೇವಿಯ ವಿವಿಧ ಸ್ವರೂಪಗಳನ್ನು ಆರಾಧಿಸಲಾಗುತ್ತಿದ್ದು, ಪಶ್ಚಿಮ ಬಂಗಾಳದ ಕೋಲ್ಕತ್ತಾದ ಕುಮಾರ್ಟುಲಿಯಿಂದ ವಿಶೇಷವಾಗಿ ತರಿಸಲಾದ ಗಂಗಾನದಿಯ ಮಣ್ಣಿನ ದುರ್ಗಾದೇವಿಯ ಮೂರ್ತಿಗಳು ಪೂಜೆಯ ಕೇಂದ್ರಬಿಂದುವಾಗಿವೆ. ಬಂಗಾಳದ ಸಾಂಪ್ರದಾಯಿಕ ಧಾಕಿ ಕಲಾವಿದರ ವಾದನ ಉತ್ಸವಕ್ಕೆ ವಿಶೇಷ ಮೆರುಗು ನೀಡಿದೆ. ಪ್ರತಿದಿನ ಸಂಜೆ ಕುಂಕುಮಾರ್ಚನೆ, ಚಂಡಿಕಾ ಪಾರಾಯಣ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಹಾಗೂ ಮಹಾಮಂಗಳಾರತಿ ನಡೆಯುತ್ತಿವೆ.