Mysore Dasara: ಮೈಸೂರು ದಸರಾ ಜಂಬೂಸವಾರಿಯಲ್ಲಿ ಗೌರಿಬಿದನೂರು ಕಲಾವಿದರ ಅರೆವಾದ್ಯ ಪ್ರದರ್ಶನ
ರಾಜ್ಯದ ಪ್ರತಿ ಜಿಲ್ಲೆಯಿಂದ ವಿವಿಧ ಕಲಾಪ್ರಕಾರಗಳ ಕಲಾವಿದರನ್ನು ಆಯ್ಕೆ ಮಾಡಲಾಗುತ್ತಿದೆ. ಅದರಂತೆ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಗೌರಿಬಿದನೂರು ತಾಲೂಕಿನ ಚರ್ಮವಾದ್ಯ–ಅರೆವಾದ್ಯ ಕಲಾತಂಡಕ್ಕೆ ಅವಕಾಶ ಲಭಿಸಿದೆ. ಕಲಾವಿದರು ಮೈಸೂರಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಜಿಲ್ಲೆಗೆ ಕೀರ್ತಿ ತರಲಿ ಎಂದು ಆಶಿಸಿದರು.
-
ಗೌರಿಬಿದನೂರು: ಮೈಸೂರು ದಸರಾ(Mysore Dasara) ಮಹೋತ್ಸವದ ವಿಜಯದಶಮಿ ಜಂಬೂಸವಾರಿಯಲ್ಲಿ ಅರೆವಾದ್ಯ ಜನಪದ ಕಲಾಪ್ರದರ್ಶನ ನೀಡಲು ಆಯ್ಕೆಯಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ 40 ಜನರ ಕಲಾತಂಡಕ್ಕೆ ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ಹಸಿರು ನಿಶಾನೆ ತೋರುವ ಮೂಲಕ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರತಿ ಜಿಲ್ಲೆಯಿಂದ ವಿವಿಧ ಕಲಾಪ್ರಕಾರಗಳ ಕಲಾವಿದರನ್ನು ಆಯ್ಕೆ ಮಾಡಲಾಗುತ್ತಿದೆ. ಅದರಂತೆ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಗೌರಿಬಿದನೂರು ತಾಲೂಕಿನ ಚರ್ಮವಾದ್ಯ–ಅರೆವಾದ್ಯ ಕಲಾತಂಡಕ್ಕೆ ಅವಕಾಶ ಲಭಿಸಿದೆ. ಕಲಾವಿದರು ಮೈಸೂರಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಜಿಲ್ಲೆಗೆ ಕೀರ್ತಿ ತರಲಿ ಎಂದು ಆಶಿಸಿದರು.
ಇದನ್ನೂ ಓದಿ: Mysore News: ನಂಜನಗೂಡಿನಲ್ಲಿ ಆರ್ವಿ ವಿಶ್ವವಿದ್ಯಾಲಯದ ಮೈಸೂರು ಕ್ಯಾಂಪಸ್ಗೆ ಚಾಲನೆ
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಜನಾರ್ದನ ಮೂರ್ತಿ ಮಾತನಾಡಿ, ನಾಡಿನ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಕಲಾತಂಡದ ಪ್ರದರ್ಶನ ಯಶಸ್ವಿಯಾಗಲಿ ಎಂದು ಹಾರೈಸಿದರು.
ಗ್ರಾಮೀಣ ಯುವ ಕಲಾ ಸಂಘದ ಅಧ್ಯಕ್ಷ ಹಾಗೂ ತಂಡದ ನಾಯಕ ಗೊಟ್ಲಗುಂಟೆ ವೆಂಕಟರಮಣಪ್ಪ ಮಾತನಾಡಿ, ಮೈಸೂರು ದಸರಾ ಮಹೋತ್ಸವದಲ್ಲಿ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಿದ ರಾಜ್ಯ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಸರಾ ಆಯ್ಕೆ ಸಮಿತಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಾರಿಗೆ ನಿಗಮದ ಅಧಿಕಾರಿಗಳಾದ ನರಸಿಂಹರೆಡ್ಡಿ, ಗಂಗರತ್ನಮ್ಮ, ಕಲಾತಂಡದ ತರಬೇತುದಾರರಾದ ರಾಮಕೃಷ್ಣ, ಗೆದರೆ ಶ್ರೀನಿವಾಸ್, ವೇಣು, ನರಸಿಂಹಮೂರ್ತಿ, ಬಾಲು, ರೋಜಾ, ಸಮೀರಾ, ಗಂಗಮ್ಮ ಸೇರಿದಂತೆ ಕಲಾವಿದರು ಉಪಸ್ಥಿತರಿದ್ದರು.