ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಎಸ್‌ಐಆರ್ ವಿರೋಧಿಸಿ ಮೆ.30ಕ್ಕೆ ಬೃಹತ್ ಪ್ರತಿಭಟನೆ : ಎದ್ದೇಳು ಕರ್ನಾಟಕದ ಶ್ರೀರಂಗಾಚಾರಿ

ಕೇಂದ್ರದ ಆಣತಿಯಂತೆ ದೇಶಾದ್ಯಂತ ನಡೆದಿರುವ ಮತದಾರರ ತೀವ್ರ ಪರಿಷ್ಕರಣೆಯು ದೇಶವ್ಯಾಪಿ ಕೋಟ್ಯಾಂತರ ಜನರ ಮತದಾನದ ಹಕ್ಕನ್ನು ಕಸಿಯಲು ಕೇಂದ್ರ ಚುನಾವಣಾ ಆಯೋಗದ ಮೂಲಕ ಹೊರಟಿದೆ. ಈಗಾಗಲೇ 13 ರಾಜ್ಯಗಳಲ್ಲಿ 6.5 ಕೋಟಿ ಮತದಾರರನ್ನು ಪಟ್ಟಿಯಿಂದ ಹೊರ ಹಾಕ ಲಾಗಿದೆ. ಇದರಲ್ಲಿ ಕನಿಷ್ಟ 5 ಕೋಟಿ ಅರ್ಹ ಮತದಾರರಿದ್ದಾರೆ ಎಂದರು.

ಎಸ್‌ಐಆರ್ ವಿರೋಧಿಸಿ ಮೆ.30ಕ್ಕೆ ಬೃಹತ್ ಪ್ರತಿಭಟನೆ

-

Profile
Ashok Nayak May 27, 2026 8:41 PM

ಚಿಕ್ಕಬಳ್ಳಾಪುರ : ಸಂವಿಧಾನ, ಪ್ರಜಾತಂತ್ರ ಮತ್ತು ಜನ ವಿರೋಧಿಯಾದ ಎಸ್‌ಐಆರ್ ರದ್ಧಾಗ ಬೇಕು. ಸರ್ವಾಧಿಕಾರಿ ಗುಣವಿರುವ ತೀವ್ರ ಮತಪಟ್ಟಿ ಪರಿಷ್ಕರಣೆ ಬದಲಿಗೆ(ಎಸ್‌ಐಆರ್) ಸಂವಿ ಧಾನ ಬದ್ಧವಾದ, ಜನಸ್ನೇಹಿಯಾದ ತೀವ್ರ ಪರಿಷ್ಕರಣೆ ( ಐಆರ್ )ಅನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಮೇ.೩೦ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿರೋಧ ಹೋರಾಟ ನಡೆಯಲಿದೆ ಎಂದು ಎದ್ದೇಳು ಕರ್ನಾಟಕದ ರಾಜ್ಯ ಖಜಾಂಚಿ ಶ್ರೀರಂಗಾಚಾರಿ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪ್ರಗತಿಪರ ಸಂಘಟನೆಗಳ ವತಿಯಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಕೇಂದ್ರದ ಆಣತಿಯಂತೆ ದೇಶಾದ್ಯಂತ ನಡೆದಿರುವ ಮತದಾರರ ತೀವ್ರ ಪರಿಷ್ಕರಣೆಯು ದೇಶವ್ಯಾಪಿ ಕೋಟ್ಯಾಂತರ ಜನರ ಮತದಾನದ ಹಕ್ಕನ್ನು ಕಸಿಯಲು ಕೇಂದ್ರ ಚುನಾವಣಾ ಆಯೋಗದ ಮೂಲಕ ಹೊರಟಿದೆ. ಈಗಾಗಲೇ 13 ರಾಜ್ಯಗಳಲ್ಲಿ 6.5ಕೋಟಿ ಮತದಾರರನ್ನು ಪಟ್ಟಿಯಿಂದ ಹೊರ ಹಾಕಲಾಗಿದೆ. ಇದರಲ್ಲಿ ಕನಿಷ್ಟ 5 ಕೋಟಿ ಅರ್ಹ ಮತದಾರರಿದ್ದಾರೆ ಎಂದರು.

ಇದನ್ನೂ ಓದಿ:Chikkaballapur News: ತಾಯಿ ಪ್ರೀತಿ, ತ್ಯಾಗ, ಕರುಣೆ ಮತ್ತು ಮೌಲ್ಯಗಳ ಜೀವಂತ ಪ್ರತಿರೂಪ: ದಿಬ್ಬೂರಹಳ್ಳಿ ನಾಗರಾಜ್

ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಗೆ ಯಾರ ವಿರೋಧವೂ ಇಲ್ಲ. ಒಂದು ವೇಳೆ ವಿದೇಶಿ ಯರಿದ್ದರೆ ಅವರಿಗೆ ಮತದಾನದ ಹಕ್ಕು ಕೊಡಿ ಎಂದು ಯಾರೂ ಹೇಳುತ್ತಿಲ್ಲ. ಆದರೆ ಜನರನ್ನೆಲ್ಲಾ ಆರೋಪಿಗಳಂತೆ ನೋಡುತ್ತಾ ಕೋಟ್ಯಾಂತರ ಜನರನ್ನು ಪರದಾಡುವಂತೆ ಮಾಡುವ, ಕ್ಷುಲ್ಲಕ ಕಾರಣ ನೀಡಿ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ದೂರವಿಡುವುದು ಯಾವ ನ್ಯಾಯ.ಮತದಾರರ ಪಟ್ಟಿಯಿಂದ ಹೊರಗಿಡುವುದು ಮಾತ್ರವಲ್ಲ, ಅಂತಹವರಿಗೆ ಯಾವುದೇ ಸರಕಾರಿ ಸೌಲಭ್ಯಗಳು ಇರುವುದಿಲ್ಲ ಎಂಬುದನ್ನು ಬಿಹಾರ ಮತ್ತು ಪಶ್ಚಿಮಬಂಗಾಳದ ಬಿಜೆಪಿ ಮಂತ್ರಿಗಳು ಘೋಷಿಸಿದ್ದಾರೆ. ಇಂತಹ ಆಘಾತಕಾರಿ ಪ್ರಕ್ರಿಯೆಗೆ ರಾಜ್ಯದಲ್ಲಿ ಅವಕಾಶ ನೀಡದಂತೆ ತಡೆಯಲಿ ಮೇ.30ಕ್ಕೆ ಪ್ರತಿರೋಧ ಪ್ರತಿಭಟನೆ ನಡೆಯುತ್ತಿದೆ ಎಂದರು.

ದಸಂಸ ತಾಲೂಕು ಸಂಚಾಲಕ ಪರಮೇಶ್ ಮಾತನಾಡಿ, ಎಸ್‌ಐಆರ್ ಎಂಬ ಅಸಾಂವಿಧಾನಿಕ, ಅವೈಜ್ಞಾನಿಕ, ದೋಷಪೂರಿತ ಮತ್ತು ದುರುದ್ದೇಶದ ಮತದಾರರ ಪಟ್ಟಿಯ ಪರಿಷ್ಕರಣಾ ಪ್ರಕ್ರಿಯೆ ಯನ್ನು ನಿಲ್ಲಿಸುವುದು ಸಂವಿಧಾನ ಪ್ರೇಮಿಗಳ, ಪ್ರಗತಿಪರ ಚಿಂತನೆಯ ದೇಶಪ್ರೇಮಿಗಳ ನಡೆಯಾಗ ಬೇಕಿದೆ. ಮತದಾರರ ಪಟ್ಟಿ ಪರಿಷ್ಕರಣ ಈ ಹಿಂದಿನಿಂದಲೂ ನಡೆಯುತ್ತಲೇ ಬಂದಿದೆ. ಇದಕ್ಕೆ ಭಾರತದ ಯಾವ ನಾಗರೀಕರೂ ವಿರೋಧವಾಗಲಿ ಪ್ರತಿರೋಧವಾಗಲಿ ತೋರಿಲ್ಲ. ಆದರೆ ಇದೇ ಮೊದಲ ಬಾರಿಗೆ ಮತದಾರರ ತೀವ್ರ ಪರಿಷ್ಕರಣೆ ಎಂಬ ಹೊಸ ವಿಧಾನದ ಮೂಲಕ ಈ ನೆಲದ ಮೂಲನಿವಾಸಿಗಳನ್ನು, ಅಲ್ಪಸಂಖ್ಯಾತ ದಲಿತ ವರ್ಗಗಳನ್ನು ದೇಶದ ಮುಖ್ಯವಾಹಿನಿಯಿಂದ ದೂರವಿಡುವ ಕೆಲಸ ಮಾಡುತ್ತಿರುವುದು ಸರಿಯಲ್ಲ.ಕೇಂದ್ರ ಸರಕಾರದ ಈ ವ್ಯವಸ್ಥಿತ ಹುನ್ನಾರ ತಡೆಯುವ ಭಾಗವಾಗಿ ನಡೆಯುತ್ತಿರುವ ಮೇ.30ರ ಹೋರಾಟದಲ್ಲಿ ಭಾಗವಹಿಸಿ ಪ್ರತಿರೋಧ ತೋರಿ ಎಂದು ಮನವಿ ಮಾಡಿ ಎಂದರು.

cbpm6d

ಎಸ್‌ಐಆರ್ ಎಂದರೆ ಪ್ರತಿಯೊಬ್ಬರೂ ಹೊಸದಾಗಿ ಮತದಾರರ ಪಟ್ಟಿಗೆ ನೋಂದಾಯಿಸಿಕೊಳ್ಳಿ ಎಂದು ಅರ್ಥ.ಮೊದಲಿಗೆ ಪ್ರತಿಯೊಬ್ಬರೂ 2025ರ ಮತದಾರರ ಪಟ್ಟಿಯಲ್ಲಿ ಮಾತ್ರವಲ್ಲ, 2022ರ ಮತದಾರರ ಪಟ್ಟಿಯಲ್ಲಿಯೂ ನಿಮ್ಮ ಹೆಸರು ಇರಬೇಕು.ಅಥವಾ ನಿಮ್ಮ ತಂದೆತಾಯಿ ಹೆಸರು ಇದೆ ಎಂದು ನಿರೂಪಿಸಬೇಕು.ಆಗದಿದ್ದರೆ ಅವರು ಕೇಳುವ ದಾಖಲಾತಿಗಳಲ್ಲಿ ಒಂದನ್ನು ತೋರಿಸಬೇಕು. ಇವೆಲ್ಲಾ ಇದೆ ಎಂದಿದ್ದರೂ ಲಾಜಿಕಲ್ ಡಿಸ್ಕ್ರಿಪೆನ್ಸಿ ಹೆಸರಿನ, ದಿನಾಂಕಗಳ ವಿಳಾಸದಲ್ಲಿ ಸಣ್ಣ ಪುಟ್ಟ ವ್ಯತ್ಯಾಸವಿದ್ದರೂ ಸಾಕು ಅನುಮಾನಾಸ್ಪದ ಮತದಾರರು ಎಂದು ಮತದಾನದ ಹಕ್ಕನ್ನು ನಿರಾಕರಿಸಲಾಗಿದೆ.ಈ ದಾಖಲೆ ಗದ್ದಲದಲ್ಲಿ ಇದುವರೆಗೆ ಅತಿಹೆಚ್ಚು ಡಿಲೀಟ್ ಆಗಿರುವವರೆಂದರೆ ವಿವಾಹಿತ ಮಹಿಳೆಯರು, ಅಲೆಮಾರಿ, ಆದಿವಾಸಿ, ದಲಿತ ಸಮುದಾಯಗಳು, ಗ್ರಾಮೀಣ ಬಡವರು ಹಾಗೂ ಅಲ್ಪಸಂಖ್ಯಾತರೇ ಆಗಿದ್ದಾರೆ. ಕರ್ನಾಟಕದಲ್ಲಿ ಮೇ.30ರಂದು ಈ ಪ್ರಕ್ರಿಯೆಗೆ ಚಾಲನೆ ದೊರೆಯುವುದರಿಂದ ಪ್ರಗತಿಪರ ಸಂಘಟನೆಗಳು ಎಚ್ಚರವಹಿಸಿ ಪ್ರತಿರೋಧ ಹೋರಾಟದಲ್ಲಿ ಭಾಗಿಯಾಗಬೇಕು ಎಂದರು.

ಮೇ.30ರ ಜಿಲ್ಲೆಯ ಹೋರಾಟದಲ್ಲಿ ಗಡ್ಡಂವೆಂಕಟೇಶ್ ಬಣದ ದಸಂಸ, ಎದ್ದೇಳು ಕರ್ನಾಟಕ, ಜೀತವಿಮುಕ್ತಿ ಕರ್ನಾಟಕ, ಎಸ್‌ಡಿಪಿಐ, ಕರ್ನಾಟಕ ರಾಜ್ಯ ರೈತ ಸಂಘ, ಅಸೆಡ್ಡಾ, ಕೆ.ವಿಎಸ್, ಸಿಪಿಐಎಂ ಸೇರಿ 30ಕ್ಕೂ ಹೆಚ್ಚು ಸಂಘಟನೆಗಳು ಭಾಗಿಯಾಗಲಿವೆ ಎಂದರು.