ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chintamani News: ಸಾಧನೆಗೈದ ಮೈಲಾಂಡ್ಲಹಳ್ಳಿಯ ಎಂ.ಸಿ.ವಿಜಯಕುಮಾರ್‌ಗೆ ಪಶುವೈದ್ಯಕೀಯ ಸ್ನಾತಕೋತ್ತರ ಪದವಿಯಲ್ಲಿ 6 ಚಿನ್ನದ ಪದಕ

ಚಿಂತಾಮಣಿ ತಾಲ್ಲೂಕಿನ ಮೈಲಾಂಡ್ಲಹಳ್ಳಿ ರೈತ ಕುಟುಂಬದ ಹಿನ್ನಲೆಯಲ್ಲಿ ಬಂದಿರುವ ಎಂ.ಸಿ.ವಿಜಯಕುಮಾರ್ ಎಂಬಿಎಸ್‌ಸಿ ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು 6 ಚಿನ್ನದ ಪದಕ ಪಡೆದಿದ್ದು ಈ ಮೂಲಕ ಸ್ನಾತಕೋತ್ತರ ಪದವಿಯಲ್ಲಿ ಅತಿಹೆಚ್ಚು ಚಿನ್ನದ ಪದಕವನ್ನು ಪಡೆದ ಕೀರ್ತಿಗೆ ಭಾಜನರಾಗಿದ್ದಾರೆ.

ಪಶು ವೈದ್ಯಕೀಯ ವಿವಿಯಲ್ಲಿ 15ನೇ ಘಟಿಕೋತ್ಸವ

-

Ashok Nayak
Ashok Nayak Feb 28, 2026 11:44 PM

ಚಿಂತಾಮಣಿ: ಬೀದರ್‌ನ ಪಶು ವೈದ್ಯಕೀಯ ವಿವಿಯಲ್ಲಿ 15ನೇ ಘಟಿಕೋತ್ಸವದಲ್ಲಿ ಮೈಲಾಂಡ್ಲಹಳ್ಳಿ ಗ್ರಾಮದ ಎಂ.ಸಿ.ವಿಜಯಕುಮಾರ್ 6 ಚಿನ್ನದ ಪದಕಗಳನ್ನು ಪಡೆದು ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದು ಮಾತ್ರವಲ್ಲದೆ ಗ್ರಾಮದ ಓರ್ವ ವಿದ್ಯಾರ್ಥಿಯ ಸಾಧನೆಗೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಪೋಷಕರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಚಿಂತಾಮಣಿ ತಾಲ್ಲೂಕಿನ ಮೈಲಾಂಡ್ಲಹಳ್ಳಿ ರೈತ ಕುಟುಂಬದ ಹಿನ್ನಲೆಯಲ್ಲಿ ಬಂದಿರುವ ಎಂ.ಸಿ.ವಿಜಯಕುಮಾರ್ ಎಂಬಿಎಸ್‌ಸಿ ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು 6 ಚಿನ್ನದ ಪದಕ ಪಡೆದಿದ್ದು ಈ ಮೂಲಕ ಸ್ನಾತಕೋತ್ತರ ಪದವಿಯಲ್ಲಿ ಅತಿಹೆಚ್ಚು ಚಿನ್ನದ ಪದಕವನ್ನು ಪಡೆದ ಕೀರ್ತಿಗೆ ಭಾಜನರಾಗಿದ್ದಾರೆ.

ಸ್ನಾತಕೋತ್ತರ ಪದವಿಯನ್ನು ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಲ್ಲಿ ಮಾಡಿದ್ದು ಸ್ನಾತಕೋತ್ತರ ವಿಭಾಗದಲ್ಲಿ 6 ಚಿನ್ನದ ಪದಕಗಳನ್ನು ತನ್ನ ಕೊರಳಿಗೆ ಹಾಕಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.

ಇದನ್ನೂ ಓದಿ: Chinthamani News: ಮುಂದಿನ ಪೀಳಿಗೆಗೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಉದ್ಯೋಗ ಸಿಗುವುದು ಅನುಮಾನ : ಇ ಒ ಆನಂದ್

ಬೀದರ್‌ನ ಕಮಠಾಣದ ನಂದಿನಗರದಲ್ಲಿರುವ ಪಶು ವೈದ್ಯಕೀಯ ವಿವಿಯಲ್ಲಿ ಶುಕ್ರವಾರ ನಡೆದ 15 ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ರೈತಾಪಿ ವರ್ಗದ ಹಿನ್ನಲೆಯುಳ್ಳ ತಂದೆ ಚಿಕ್ಕವೆಂಕಟರಾಯಪ್ಪ (ಪಿಳ್ಳಣ್ಣ) ಮತ್ತು ತಾಯಿ ಕಳಾವತಿ ಮಗ ಶಿಸ್ತುಬದ್ಧವಾಗಿ ಬಾಲ್ಯ ದಿಂದಲೂ ಶಿಕ್ಷಣಕ್ಕೆ ಆದ್ಯತೆ ನೀಡಿದ್ದ ಹಿನ್ನಲೆಯಲ್ಲಿ ಈ ಸಾಧನೆ ಸಾಧ್ಯವಾಯಿತೆಂದರು.

ಸಾಧನೆಗೈದ ಎಂ.ಸಿ.ವಿಜಯಕುಮಾರ್ ಮಾತನಾಡಿ ಈ ಸಾಧನೆ ಕಾರಣೀಭೂತರಾದ ತಂದೆ ತಾಯಿಯವರಿಗೆ ಹಾಗೂ ಶೈಕ್ಷಣಿಕ ವಿಚಾರದಲ್ಲಿ ನೆರವಾದ ನನ್ನೆಲ್ಲಾ ಉಪನ್ಯಾಸಕ ವೃಂದಕ್ಕೆ ಹಾಗೂ ಇಷ್ಟೊಂದು ಸಾಧನೆಗೆ ಸಹಕರಿಯಾದ ಎಲ್ಲರಿಗೂ ಸದಾ ಋಣಿ ಯಾಗಿರುವುದಾಗಿ ತಿಳಿಸಿದ್ದಾರೆ. 

ವಿವಿ ಕುಲಾಧಿಪತಿ ರಾಜ್ಯಪಾಲ ಥಾವರ್‌ಚಂದ್ ಗೆಹೋಟ್‌ರ ಸಮ್ಮುಖದಲ್ಲಿ ಎಂ.ಸಿ. ವಿಜಯಕುಮಾರ್ 6 ಚಿನ್ನದ ಪದಕಗಳ ಜೊತೆಗೆ ಸ್ನಾತಕೋತ್ತರ ಪದವಿ ಹಾಗೂ ಪದಕ ಪ್ರದಾನ ಮಾಡಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ರಾಜ್ಯ ಮತ್ತು ದೇಶದ ಕೀರ್ತಿಯನ್ನು ಹೆಚ್ಚಿಸುವಂತಹ ಸಾಧನೆ ಮಾಡಬೇಕೆಂದರೆಂದರು.

ಈ ಸಂದರ್ಭದಲ್ಲಿ ಪಶು ಸಂಗೋಪನೆ ಸಚಿವ ವೆಂಕಟೇಶ, ವಿವಿ ಕುಲಪತಿ ಪ್ರೊ.ಕೆ.ಸಿ. ವೀರಣ್ಣ ಇದ್ದರು.