ಜೀವನದಲ್ಲಿ ಟೆನ್ಷನ್ ಇದ್ದದ್ದೇ ಎಂದು ಮಗುವಿಗೂ ತಿಳಿದಿದೆ! ಈಜಿಪ್ಟ್ನ ನವಜಾತ ಶಿಶುವಿನ ರಿಲ್ಯಾಕ್ಸ್ಡ್ ಭಂಗಿ ವೈರಲ್
Viral News: ಈಜಿಪ್ಟ್ನ ನವಜಾತ ಶಿಶುವೊಂದು ಶಾಂತ ವರ್ತನೆಯಿಂದಾಗಿ ಇಂಟರ್ನೆಟ್ನ ಗಮನ ಸೆಳೆದಿದೆ. ಹುಟ್ಟಿದಾಕ್ಷಣ ತನಗೆ ಯಾರ ಭಯ ಇಲ್ಲ ಎಂಬಂತೆ ಕಾಲು ಮೇಲೆ ಕಾಲು ಹಾಕಿ ಆರಾಮದಲ್ಲಿ ಮಲಗಿದೆ. ಈ ಮಗುವಿನ ಮುದ್ದಾದ ನೋಟವು ಬಹಳಷ್ಟು ಜನರನ್ನು ಆಕರ್ಷಿಸಿದೆ.
ಈಜಿಪ್ಟ್ನ ನವಜಾತ ಶಿಶುವಿನ ಆರಾಮದಾಯಕ ಭಂಗಿ -
ಕೈರೊ, ಅ. 18: ನವಜಾತ ಶಿಶುವಿನ ಅತ್ಯಂತ ಶಾಂತ ರೀತಿಯ ಭಂಗಿಯೊಂದು ಎಲ್ಲರ ಹೃದಯಗಳನ್ನು ಗೆದ್ದಿದೆ. ಕೈರೊ ಮೂಲದ ಶಿಶುವೈದ್ಯ ಹಾಗೂ ನವಜಾತ ಶಿಶುಶಾಸ್ತ್ರಜ್ಞ ಡಾ. ಇಸ್ಲಾಂ ಎಲ್ಡೆ ಹಂಚಿಕೊಂಡ ವೀಡಿಯೊದಲ್ಲಿ (Viral News) ಪುಟ್ಟ ಮಗುವೊಂದು ಆರಾಮದಾಯಕ ಭಂಗಿಯಲ್ಲಿ ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಹುಟ್ಟಿದಾಗ ಮಕ್ಕಳು ಅಳುವುದು, ಕೈಕಾಲುಗಳನ್ನು ಅಲುಗಾಡಿಸುವುದು ಸಹಜ. ಆದರೆ ಈ ಮಗುವಿನ ಅತ್ಯಂತ ಆರಾಮದಾಯಕ ನೋಟವು ನೆಟ್ಟಿಗರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಈಜಿಪ್ಟ್ನಲ್ಲಿರುವ ನವಜಾತ ಶಿಶುವೊಂದು ಶಾಂತ ವರ್ತನೆಯಿಂದಾಗಿ ಇಂಟರ್ನೆಟ್ನ ಗಮನ ಸೆಳೆದಿದೆ. ಹುಟ್ಟಿದಾಕ್ಷಣ ತನಗೆ ಯಾರ ಭಯ ಇಲ್ಲ ಎಂಬಂತೆ ಕಾಲು ಮೇಲೆ ಕಾಲು ಹಾಕಿ ಆರಾಮದಲ್ಲಿ ಮಲಗಿದೆ. ಈ ಮಗುವಿನ ಮುದ್ದಾದ ನೋಟವು ಜನರನ್ನು ಬಹಳಷ್ಟು ಆಕರ್ಷಿಸಿದೆ.
ವಿಡಿಯೊ ನೋಡಿ:
A newborn baby has caught attention on social media for resting in an unusually relaxed pose shortly after birth. Instead of crying, the baby appeared calm, lying with both hands behind its head and one leg crossed over the other, as though enjoying a peaceful nap. The adorable pose has drawn amused reactions, with many praising the little one's effortless confidence and natural aura. #newbornbaby #Aura #Centristnation
— Centrist Nation TV (@centristnattv) October 17, 2026
ಕೈರೊ ಮೂಲದ ಮಕ್ಕಳ ತಜ್ಞರೊಬ್ಬರು ಈ ವಿಡಿಯೊ ಹಂಚಿಕೊಂಡಿದ್ದಾರೆ. ಮಗುವೊಂದು ಹೆರಿಗೆಯ ನಂತರದ ವೈದ್ಯಕೀಯ ಪ್ರಕ್ರಿಯೆಯ ಬಳಿಕ ಯಾವುದೇ ಭಯ ಇಲ್ಲದೆ ಅತ್ಯಂತ ನೆಮ್ಮದಿಯಿಂದ ಮಲಗಿರುವುದನ್ನು ಕಾಣಬಹುದು. ಈ ದೃಶ್ಯ ನೋಡಿದ ಅನೇಕರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ಅಪರಿಚಿತರ ಮೇಲೆಯೂ ಭಾರತೀಯರ ನಂಬಿಕೆ ಕಂಡು ಭಾವುಕನಾದೆ ಎಂದ ಅಮೆರಿಕದ ಲೇಖಕ
"ಯಾವುದೇ ಟೆನ್ಷನ್ ಇಲ್ಲದೆ ಜೀವನವನ್ನು ಹೇಗೆ ಎಂಜಾಯ್ ಮಾಡಬೇಕು ಎಂಬುದನ್ನು ಇದು ಮೊದಲೇ ಕಲಿತು ಬಂದಿದೆ" ಎಂದು ತಮಾಷೆಯಾಗಿ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ʼʼಮಗು ಸಂಪೂರ್ಣವಾಗಿ ಒತ್ತಡ ಮುಕ್ತ ಮನೋಭಾವ ಅಳವಡಿಸಿಕೊಂಡಿದೆʼʼ ಎಂದು ಬರೆದಿದ್ದಾರೆ. ಒಟ್ಟಿನಲ್ಲಿ ಈ ಶಿಶು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ. ವಿಜ್ಞಾನದ ಪ್ರಕಾರ ನವಜಾತ ಶಿಶುಗಳು ಇಂತಹ ಮುಖ ಭಾವ ಹೊಂದುವುದು ಸಾಮಾನ್ಯ ಎನಿಸಿದರೂ ಈ ಮಗುವಿನ ಮುದ್ದಾದ ನೋಟ ಅನೇಕರಿಗೆ ಆಕರ್ಷಕ ಎನಿಸಿದೆ.