Chikkaballapur News: ಯುವಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ರಾಜಕೀಯ ಅಗತ್ಯ: ಕಾಮ್ರೇಡ್ ಲವಿತ್ರ
ಯುವಜನರ ಭವಿಷ್ಯದ ಪ್ರಶ್ನೆಗಳಿಗೆ ರಾಜಕೀಯದ ಮೂಲಕವೇ ಪರಿಹಾರ ಕಂಡುಕೊಳ್ಳಬೇಕಾಗಿದೆ. ಆದ್ದರಿಂದ ಯುವಜನರು ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಿ ರಾಜಕೀಯ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಯುವಜನರ ಒಗ್ಗಟ್ಟಿನ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಕರೆ ನೀಡಿದರು.
ಯುವಜನತೆ ಇಲ್ಲದ ಯಾವುದೇ ಕ್ಷೇತ್ರವಿಲ್ಲ. ಆದರೆ ಉದ್ಯೋಗದ ಅವಕಾಶಗಳ ಕೊರತೆಯಿಂದ ಇಂದಿನ ಯುವಜನರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷೆ ಕಾಮ್ರೇಡ್ ಲವಿತ್ರ ಹೇಳಿದರು. -
ಚಿಕ್ಕಬಳ್ಳಾಪುರ: ಯುವಜನತೆ ಇಲ್ಲದ ಯಾವುದೇ ಕ್ಷೇತ್ರವಿಲ್ಲ. ಆದರೆ ಉದ್ಯೋಗದ ಅವಕಾಶಗಳ ಕೊರತೆಯಿಂದ ಇಂದಿನ ಯುವಜನರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷೆ ಕಾಮ್ರೇಡ್ ಲವಿತ್ರ ಹೇಳಿದರು.
ನಗರದ ನಂದಿ ಬಯಲು ರಂಗಮAದಿರಲ್ಲಿ ಬುಧವಾರ ನಡೆದ ಡಿವೈಎಫ್‌ಐ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಿ ಅದರ ರೂಪುರೇಷಗಳನ್ನು ಸಭೆಗೆ ತಿಳಿಸುತ್ತಾ ಮಾತನಾಡಿದರು.
ಸರ್ಕಾರಿ ಉದ್ಯೋಗಗಳ ಸಂಖ್ಯೆ ಕಡಿಮೆಯಾಗುತ್ತಿರುವ ಪರಿಣಾಮ ಯುವಜನರು ಉದ್ಯೋಗಕ್ಕಾಗಿ ಪರದಾಡುವಂತಾಗಿದೆ. ಒಂದು ಸಾವಿರ ಪೊಲೀಸ್ ಹುದ್ದೆಗಳಿಗೆ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ಉದ್ಯೋಗದ ಬಿಕ್ಕಟ್ಟಿನ ಗಂಭೀರತೆಯನ್ನು ತೋರಿ ಸುತ್ತದೆ ಎಂದರು.
ರಾಜಕೀಯ ಪಕ್ಷಗಳು ಯುವಜನರ ಶಕ್ತಿಯನ್ನು ಅಧಿಕಾರಕ್ಕೆ ಏರಲು ಬಳಸಿಕೊಳ್ಳುತ್ತಿವೆ. ಚುನಾ ವಣಾ ಸಂದರ್ಭದಲ್ಲಿ ಯುವಜನರ ಪರವಾದ ಸರ್ಕಾರವೆಂದು ಭರವಸೆ ನೀಡುವ ಪಕ್ಷಗಳು ಅಧಿಕಾರಕ್ಕೆ ಬಂದ ನಂತರ ಯುವಜನರ ಸಮಸ್ಯೆಗಳ ಕುರಿತು ವಿರೋಧಿ ಧೋರಣೆ ಅನುಸರಿಸುತ್ತಿವೆ ಎಂದು ಆರೋಪಿಸಿದರು.
ಇದನ್ನೂ ಓದಿ: Chinthamani News: ನಿವೃತ್ತ ನೌಕರರ ಸಂಘಕ್ಕೆ ಸಂಗೀತ ಪರಿಕರಗಳ ಕೊಡುಗೆ
ಯುವಜನರ ಭವಿಷ್ಯದ ಪ್ರಶ್ನೆಗಳಿಗೆ ರಾಜಕೀಯದ ಮೂಲಕವೇ ಪರಿಹಾರ ಕಂಡುಕೊಳ್ಳಬೇಕಾಗಿದೆ. ಆದ್ದರಿಂದ ಯುವಜನರು ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಿ ರಾಜಕೀಯ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಯುವಜನರ ಒಗ್ಗಟ್ಟಿನ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಕರೆ ನೀಡಿದರು.
ಜಾತಿ ಮತ್ತು ಲಿಂಗ ತಾರತಮ್ಯವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಇನ್ನೂ ಸಾಧ್ಯ ವಾಗಿಲ್ಲ. ಕಾಲ ಬದಲಾಗಿದ್ದರೂ ತಾರತಮ್ಯದ ಸ್ವರೂಪಗಳು ಮಾತ್ರ ಬದಲಾಗಿವೆ; ಅದರ ಮೂಲ ಸಮಸ್ಯೆಗಳು ಇನ್ನೂ ಮುಂದುವರಿದಿವೆ ಎಂದು ಹೇಳಿದರು.
ಯುವಜನರ ನೈಜ ಸಮಸ್ಯೆಗಳ ಕುರಿತ ಹೋರಾಟವನ್ನು ದಿಕ್ಕುತಪ್ಪಿಸುವ ಭಾಗವಾಗಿ “ಮೀಸಲಾತಿ ಬೇಕೇ, ಬೇಡವೇ?” ಎಂಬ ಏಕಮುಖ ಚರ್ಚೆಯನ್ನು ಹುಟ್ಟುಹಾಕಲಾಗುತ್ತಿದೆ. ಇಂತಹ ಚರ್ಚೆಗಳ ಹಿಂದೆ ಇರುವ ರಾಜಕೀಯ ಉದ್ದೇಶವನ್ನು ಯುವಜನರು ಅರ್ಥಮಾಡಿಕೊಳ್ಳಬೇಕು. ಶಿಕ್ಷಣ, ಉದ್ಯೋಗ, ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳಂತಹ ಮೂಲಭೂತ ಪ್ರಶ್ನೆಗಳ ಕುರಿತು ಯುವಜನರು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು ಎಂದು ಕಾಮ್ರೇಡ್ ಲವಿತ್ರ ಹೇಳಿದರು.
ವಿದ್ಯಾರ್ಥಿ ಹೋರಾಟಗಳು ಪ್ರಬಲವಾಗಿದ್ದ ಕಾಲಘಟ್ಟದಲ್ಲಿ ಹುಟ್ಟಿಕೊಂಡ ಚಳವಳಿಗಳು ಇಂದು ಹಲವು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಡಿವೈಎಫ್‌ಐ ರಾಜ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸದ ಸಂಗತಿ ಎಂದು ರೈತ ಮುಖಂಡ ಭಕ್ತರಹಳ್ಳಿ ಬೈರೇಗೌಡ ಹೇಳಿದರು.
ಸಮ್ಮೇಳನದ ಯಶಸ್ಸಿಗೆ ರೈತ ಸಂಘದಿಂದ ಅಗತ್ಯವಾದ ಎಲ್ಲ ರೀತಿಯ ನೆರವು ಹಾಗೂ ಸಹಕಾರ ಒದಗಿಸಲಾಗುವುದು. ಯುವಜನರ ಸಮಸ್ಯೆಗಳ ಕುರಿತು ಚರ್ಚಿಸುವುದರ ಜೊತೆಗೆ, ವಿದ್ಯಾರ್ಥಿಗಳಲ್ಲಿ ಮನುಷ್ಯತ್ವ, ಸಾಮಾಜಿಕ ಕಳಕಳಿ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ವಿಚಾರ ಸಂಕಿರಣಗಳು ನಡೆಯಬೇಕು ಎಂದರು.
ಯುವಜನರು ದೇಶದ ಶಕ್ತಿ. ಅವರನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಜವಾಬ್ದಾರಿ ಸಮಾಜ ಹಾಗೂ ಸಂಘಟನೆಗಳ ಮೇಲಿದೆ. ಯುವ ಜನರನ್ನು ಸರಿದಾರಿಯಲ್ಲಿ ಮುನ್ನಡೆಸಲು ವಿಫಲವಾದರೆ ದೇಶದ ಭವಿಷ್ಯ ಅಂಧಕಾರದತ್ತ ಸಾಗುವ ಅಪಾಯವಿದೆ. ಆದ್ದರಿಂದ ಯುವಜನರಲ್ಲಿ ಸಾಮಾಜಿಕ ಕಳಕಳಿ, ವೈಚಾರಿಕ ಪ್ರಜ್ಞೆ ಮತ್ತು ಜನಪರ ಹೋರಾಟದ ಮನೋಭಾವ ಬೆಳೆಸಬೇಕು ಎಂದು ಬಿ.ವಿ.ಆನಂದ್ ಹೇಳಿದರು.
ಸು.ದಾ. ವೆಂಕಟೇಶ್ ಮಾತನಾಡಿ, ಡಿವೈಎಫ್‌ಐ ರಾಜ್ಯ ಸಮ್ಮೇಳನದಲ್ಲಿ ಸಮಾಜದ ದುರ್ಬಲ ವರ್ಗಗಳ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ದಲಿತರು, ರೈತರು, ನೆಲೆ ಕಳೆದುಕೊಳ್ಳುತ್ತಿರು ವವರು, ಜಲ ಸಂಪನ್ಮೂಲ ಹಾಗೂ ಕೂಲಿ ಕಾರ್ಮಿಕರ ಸಮಸ್ಯೆಗಳು ಪ್ರಧಾನವಾಗಿ ಚರ್ಚೆ ಯಾಗಬೇಕು. ಈ ಸಮುದಾಯಗಳ ಹಕ್ಕುಗಳ ರಕ್ಷಣೆಗೆ ಮುಂದಿನ ಹೋರಾಟಗಳ ರೂಪುರೇಷೆ ಸಿದ್ಧಪಡಿಸಬೇಕು ಎಂದು ಹೇಳಿದರು.