Gudibande News: ಗುಡಿಬಂಡೆಯಲ್ಲಿ ಅರ್ಥಪೂರ್ಣವಾಗಿ ಬಾಬು ಜಗಜೀವನ್ ರಾಂ ರವರ ಪುಣ್ಯಸ್ಮರಣೆ
ಸಮಾಜದಲ್ಲಿನ ದೀನ ದಲಿತ ಜನಾಂಗಕ್ಕೆ ಆಗುತ್ತಿದ್ದ ಅನ್ಯಾಯವನ್ನು ವಿರೋಧಿಸಿ ಹೋರಾಟ ನಡೆಸಿದ ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ತಮ್ಮ ಹೋರಾಟದ ಮೂಲಕ ಸಮಾಜದಲ್ಲಿ ಶೋಷಿತ ಎಲ್ಲ ಜಾತಿ ವರ್ಗಗಳಿಗೆ ಆದರ್ಶವಾಗಿದ್ದಾರೆ. ಅವರನ್ನು ಕೇವಲ ಒಂದು ದಿನಕ್ಕೆ ಮಾತ್ರ ನೆನಪಿಸಿಕೊಳ್ಳದೇ ಸದಾ ಅವರನ್ನು ನೆನಪಿಸಿಕೊಳ್ಳಬೇಕು
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ದಲಿತ ಸಂಘಟನೆಗಳ ಸಹಯೋಗದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಂ ರವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. -
ಗುಡಿಬಂಡೆ: ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ದಲಿತ ಸಂಘಟನೆಗಳ ಸಹಯೋಗದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಂ ರವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಈ ವೇಳೆ ತಾಪಂ ಇಒ ನಾಗಮಣಿ ಮಾತನಾಡಿ, ಸಮಾಜದಲ್ಲಿನ ದೀನ ದಲಿತ ಜನಾಂಗಕ್ಕೆ ಆಗುತ್ತಿದ್ದ ಅನ್ಯಾಯವನ್ನು ವಿರೋಧಿಸಿ ಹೋರಾಟ ನಡೆಸಿದ ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ತಮ್ಮ ಹೋರಾಟದ ಮೂಲಕ ಸಮಾಜದಲ್ಲಿ ಶೋಷಿತ ಎಲ್ಲ ಜಾತಿ ವರ್ಗಗಳಿಗೆ ಆದರ್ಶವಾಗಿದ್ದಾರೆ. ಅವರನ್ನು ಕೇವಲ ಒಂದು ದಿನಕ್ಕೆ ಮಾತ್ರ ನೆನಪಿಸಿಕೊಳ್ಳದೇ ಸದಾ ಅವರನ್ನು ನೆನಪಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: Gudibande News: ಪೌರಕಾರ್ಮಿಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಕೃಷಿ ಸಚಿವರಾಗಿದ್ದ ಇವರು ಘೋಷಿಸಿದ ಹಸಿರು ಕ್ರಾಂತಿಯ ಪರಿಣಾಮವಾಗಿ ದೇಶದ ಜನರು ಇಂದು ಆಹಾರದ ಭದ್ರತೆ ಹೊಂದಲು ಸಾಧ್ಯವಾಗಿದೆ. ಅಂದಿನ ಕಾಲದಲ್ಲಿ ಆಹಾರದ ಕೊರತೆ ಉಂಟಾಗಿ ಜನತೆ ತಲ್ಲಣಿಸಿದಾಗ ಸುಧಾರಿತ ಬೀಜಗಳನ್ನು ಬಳಸಿ ಹಸಿರು ಕ್ರಾಂತಿಯ ಸಾಧನೆ ಮಾಡಿದ್ದರು. ಹಸಿರು ಕ್ರಾಂತಿಯ ಕಾರಣದಿಂದ ಆಹಾರ ಉತ್ಪಾದನೆ ಹೆಚ್ಚಾಗಿ ಹಸಿವನ್ನು ನಿಯಂತ್ರಣ ಮಾಡಲು ಸಾಧ್ಯವಾಯಿತು. ಜಗಜೀವನ್ ರಾಂ ರವರು ದೇಶಕ್ಕೆ ಕೊಟ್ಟ ಕೊಡುಗೆ ಅಪಾರವಾದುದು ಎಂದರು.
ಈ ವೇಳೆ ಬಾಬು ಜಗಜೀವನ್ ರಾಂ ರವರ ಭಾವಚಿತ್ರಕ್ಕೆ ಕಾರ್ಯಕ್ರಮದಲ್ಲಿದ್ದ ಗಣ್ಯರು ಹಾಗೂ ದಲಿತ ಮುಖಂಡರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸೂಚಿಸಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಿಗ್ಬತ್ತುಲ್ಲಾ, ಸಮಾಜ ಕಲ್ಯಾಣ ಇಲಾಖೆಯ ಲಕ್ಷ್ಮೀಪತಿರೆಡ್ಡಿ, ಸರ್ಕಾರಿ ನೌಕರರ ಸಂಘದ ಮುನಿಕೃಷ್ಣಪ್ಪ, ದಲಿತ ಮುಖಂಡರಾದ ರಮಣ, ರಾಜು, ಲಕ್ಷ್ಮೀನಾರಾಯಣ, ಎಂ.ಸಿ.ಚಿಕ್ಕನರಸಿಂಹಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.