Chikkaballapur News: ಸಮುದಾಯದ ಸೇವೆಯೇ ನನ್ನ ಜೀವನದ ಧ್ಯೇಯ: ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಅಭಿಮತ
ಜನ್ಮದಿನವೆಂದರೆ ಆಡಂಬರವಲ್ಲ, ಬದಲಿಗೆ ನಾವು ನಡೆದು ಬಂದ ಹಾದಿಯನ್ನು ಅವಲೋಕಿಸುವ ಸಂದರ್ಭ. ಆ ಮೂಲಕ ಭವಿಷ್ಯದಲ್ಲಿ ಇನ್ನಷ್ಟು ಜನಪರ ಹಾಗೂ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಸಂಕಲ್ಪಿಸುವ ದಿನ ಎಂದರೆ ತಪ್ಪಿಲ್ಲ. ಏನೇ ಆಗಲಿ ಇಂತಹ ಕಾರ್ಯಕ್ರಮಗಳು ಜೀವನೋ ತ್ಸಾಹಕ್ಕೆ ಸ್ಫೂರ್ತಿ ನೀಡುತ್ತವೆ
ಸಮುದಾಯದ ಸೇವೆಯೇ ನನ್ನ ಜೀವನದ ಧ್ಯೇಯವಾಗಿದೆ ಎಂದು ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು. -
ಚಿಕ್ಕಬಳ್ಳಾಪುರ: ಬಲಹೀನ ಸಮುದಾಯಗಳ ಸಬಲೀಕರಣದ ಚಿಂತನೆಯುಳ್ಳ ನಾನು ಅದನ್ನು ಬದುಕಿನುದ್ದಕ್ಕೂ ಪಾಲಿಸಿಕೊಂಡು ಬರಲಾಗಿದೆ. ಆಶಕ್ತ ಸಮುದಾಯಗಳು ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸದೃಢಗೊಂಡಾಗ ಮಾತ್ರ ಮಹಾನಾಯಕರು ಕಂಡ ಕನಸು ನನಸಾಗಲಿದೆ ಎಂದು ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಿಕ್ಕಕಾಡಿಗೇನಹಳ್ಳಿ ಕೃಷ್ಣಮೂರ್ತಿ ಹೇಳಿದರು.
ಅಂಬೇಡ್ಕರ್ ಭವನದಲ್ಲಿ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇನೆಯ ರಾಜ್ಯ ಯುವ ಘಟಕದ ವತಿಯಿಂದ ಆಯೋಜಿಸಿದ್ದ ಕೃಷ್ಣಮೂರ್ತಿ ಅವರ 53ನೇ ಜನ್ಮದಿನಾಚರಣೆ ಕಾರ್ಯ ಕ್ರಮದಲ್ಲಿ ಮಾತನಾಡಿದರು.
ವೈಯಕ್ತಿಕವಾಗಿ ನಾನು ಯಾವುದೇ ಜನ್ಮದಿನ ಆಚರಿಸಿಕೊಳ್ಳುವುದಿಲ್ಲ ಎಂದು ಮನಗಂಡ ಯುವಕರು ದಿಢೀರೆಂದು ಸರಳವಾಗಿ ಜನ್ಮದಿನಾಚರಣೆ ಆಯೋಜಿಸಿದ್ದು ಒಲ್ಲದ ಮನಸ್ಸಿನಿಂದು ಅವರ ಪ್ರೀತಿಗೆ ತಲೆ ಬಾಗಿದ್ದೇನೆ. ಇದಕ್ಕಾಗಿ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಇದನ್ನೂ ಓದಿ: Chikkaballapur News: ಭರತನಾಟ್ಯದ ಭವ್ಯ ರಂಗಪ್ರವೇಶ: ಸಂಸ್ಕೃತಿ ಸಂರಕ್ಷಣೆಯೊಂದಿಗೆ ಆಧ್ಯಾತ್ಮಿಕ ಉನ್ನತಿಗೆ ಕೃತಿಕಾ ಹೆಜ್ಜೆ
ಜನ್ಮದಿನವೆಂದರೆ ಆಡಂಬರವಲ್ಲ, ಬದಲಿಗೆ ನಾವು ನಡೆದು ಬಂದ ಹಾದಿಯನ್ನು ಅವಲೋಕಿಸುವ ಸಂದರ್ಭ. ಆ ಮೂಲಕ ಭವಿಷ್ಯದಲ್ಲಿ ಇನ್ನಷ್ಟು ಜನಪರ ಹಾಗೂ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಸಂಕಲ್ಪಿಸುವ ದಿನ ಎಂದರೆ ತಪ್ಪಿಲ್ಲ. ಏನೇ ಆಗಲಿ ಇಂತಹ ಕಾರ್ಯಕ್ರಮಗಳು ಜೀವನೋತ್ಸಾಹಕ್ಕೆ ಸ್ಫೂರ್ತಿ ನೀಡುತ್ತವೆ ಎಂದು ಹೇಳಿದರು.
ರಾಜಕೀಯ ಕಾರಣಕ್ಕಾಗಿ ರಾಷ್ಟ್ರೀಯ ಪಕ್ಷದಲ್ಲಿರಬಹುದು. ಆದರೆ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್ ಅವರ ಚಿಂತನೆಗಳು ಸದಾ ತಮ್ಮ ಹೃದಯದಲ್ಲಿ ಅಚ್ಚಳಿಯದೆ ಉಳಿದಿವೆ. ಸಮುದಾಯದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಸಮಾಜವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮುಂದುವರಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಸುರೇಶ್ ಎಂ., ದೇವದಾಸ್, ದೇವರಾಜ್, ಶ್ರೀನಿವಾಸ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಪ್ಪ, ಬಿಜೆಪಿ ಮುಖಂಡ ನಿಮ್ಮಾಕಲಕುಂಟೆ ಶ್ರೀರಾಮ್ ಸೇರಿದಂತೆ ಮಹಾ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇನೆಯ ರಾಜ್ಯ ಯುವ ಘಟಕದ ಪದಾಧಿಕಾರಿಗಳು ಹಾಗೂ ಆಪ್ತರು ಉಪಸ್ಥಿತರಿದ್ದರು.