ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sadguru Madhusudan Sai: ಮೊದಲೇ ರೋಗ ಲಕ್ಷಣ ಗುರುತಿಸಿ ಅಧ್ಯಯನ ಮಾಡಿದರೆ ರೋಗಿಗಳನ್ನು ಉಳಿಸಬಹುದು: ಸದ್ಗುರು ಶ್ರೀ ಮಧುಸೂದನ ಸಾಯಿ

ಜಗತ್ತಿನ ಹಲವು ಕಡೆಗಳಲ್ಲಿ ಮಕ್ಕಳು ಪ್ರೀತಿಯಿಂದ ವಂಚಿತರಾಗುವುದನ್ನು ನೋಡುತ್ತಿದ್ದೇವೆ. ಆರಂಭಿಕ ವರ್ಷಗಳಲ್ಲಿ ಅವರು ಅನುಭವಿಸಬೇಕಾದ ಕಾಳಜಿ ಮತ್ತು ಪ್ರೀತಿ ಸಿಗುತ್ತಿಲ್ಲ. ಒಂಟಿ ಪೋಷಕರಿರುವ ಅನೇಕ ಮಕ್ಕಳನ್ನು ನೋಡುತ್ತಿದ್ದೇವೆ. ಕೆಲವರಿಗೆ ತಾಯಿಯ ಪ್ರೀತಿ ಸಿಕ್ಕಿರುವುದಿಲ್ಲ. ಅವರನ್ನು ಅವರೇ ಜಯಿಸುವುದಕ್ಕೆ ಇಡೀ ಜೀವನ ಬೇಕಾಗುತ್ತದೆ.

ಮೊದಲೇ ರೋಗ ಲಕ್ಷಣ ಗುರುತಿಸಿ ಅಧ್ಯಯನ ಮಾಡಿದರೆ ರೋಗಿಗಳನ್ನು ಉಳಿಸಬಹುದು

ಚಿಲಿ ದೇಶದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಪೆಟ್ರಿಸಿಯೋ ಒಸ್ವಾಲ್ಡೋ ವೀಸ್ ಅವರು ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಂದ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಮಾನವೀಯ ಪುರಸ್ಕಾರ' ಸ್ವೀಕರಿಸಿದರು. -

Ashok Nayak Ashok Nayak Oct 10, 2025 3:23 PM

ಚಿಕ್ಕಬಳ್ಳಾಪುರ: ಯಾವುದೇ ರೋಗಕ್ಕೆ ಸಂಬಂಧಿಸಿದಂತೆ ರೋಗಲಕ್ಷ್ಮಣಗಳನ್ನು ಮೊದಲೇ ಗುರುತಿಸಿ ಅದರ ಬಗ್ಗೆ ಅಧ್ಯಯನ ಮಾಡಬೇಕು. ಇದರಿಂದ ರೋಗ ನಿರ್ಣಯದ ಜೊತೆಗೆ ರೋಗಿ ಗಳನ್ನು ಉಳಿಸಬಹುದು ಎಂದು ಸದ್ಗುರು ಮಧುಸೂದನ ಸಾಯಿ(Sadguru Madhusudan Sai) ಹೇಳಿದರು.

ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವ'ದ 55ನೇ ದಿನವಾದ ಆಶೀರ್ವಚನ ನೀಡಿದ ಸದ್ಗುರು, ಸರಿಯಾದ ತಜ್ಞರಿಂದ ಚಿಕಿತ್ಸೆಗಳು ಸಿಗದ ಕಾರಣ ಜನರು ಪರಿಹಾರವನ್ನು ಹುಡುಕುತ್ತಾ ಸ್ಥಳದಿಂದ ಸ್ಥಳಕ್ಕೆ ಹೋಗುತ್ತಾರೆ, ಅವರಿಗೆ ಸರಿಯಾದ ರೋಗ ನಿರ್ಣಯ ಮಾಡಲಾಗುವುದಿಲ್ಲ. ಆದ್ದರಿಂದ ಅವರು ಹಲವು ವರ್ಷಗಳ ಕಾಲ ಬಳಲುವಂತಾಗುತ್ತದೆ ಎಂದು ವಿಷಾಧಿಸಿದರು.

ಇದನ್ನೂ ಓದಿ: Chikkanayakanahalli News: ಸಂತರ ಜಯಂತಿ ಒಂದೇ ದಿನ ಆಚರಣೆಗೆ ತೀವ್ರ ವಿರೋಧ

೩೦೦ಕ್ಕೂ ಹೆಚ್ಚು ಅಪರೂಪದ ಚರ್ಮದ ಕಾಯಿಲೆಗಳ ಪ್ರಕರಣಗಳನ್ನು ನಮ್ಮ ಸಂಸ್ಥೆಯು ಪತ್ತೆ ಹಚ್ಚಿದೆ. ಸರಿಯಾಗಿ ರೋಗನಿರ್ಣಯದ ಕೆಲಸ ಆಗುತ್ತಿಲ್ಲ. ಇವುಗಳಿಗೆ ಪರಿಹಾರಗಳನ್ನು ಕಂಡು ಕೊಳ್ಳುವ ನಿಟ್ಟಿನಲ್ಲಿ ನಮ್ಮ ಆಸ್ಪತ್ರೆ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.

ಜಗತ್ತಿನ ಹಲವು ಕಡೆಗಳಲ್ಲಿ ಮಕ್ಕಳು ಪ್ರೀತಿಯಿಂದ ವಂಚಿತರಾಗುವುದನ್ನು ನೋಡುತ್ತಿದ್ದೇವೆ. ಆರಂಭಿಕ ವರ್ಷಗಳಲ್ಲಿ ಅವರು ಅನುಭವಿಸಬೇಕಾದ ಕಾಳಜಿ ಮತ್ತು ಪ್ರೀತಿ ಸಿಗುತ್ತಿಲ್ಲ. ಒಂಟಿ ಪೋಷಕರಿರುವ ಅನೇಕ ಮಕ್ಕಳನ್ನು ನೋಡುತ್ತಿದ್ದೇವೆ. ಕೆಲವರಿಗೆ ತಾಯಿಯ ಪ್ರೀತಿ ಸಿಕ್ಕಿರುವುದಿಲ್ಲ. ಅವರನ್ನು ಅವರೇ ಜಯಿಸುವುದಕ್ಕೆ ಇಡೀ ಜೀವನ ಬೇಕಾಗುತ್ತದೆ. ಯಾಕೆಂದರೆ ಯಾರನ್ನು ಪ್ರೀತಿಸುವುದು, ಯಾರನ್ನು ನಂಬುವುದು ಅಥವಾ ಬೇರೆಯವರ ಆರೈಕೆಗೆ ಪ್ರತಿಕ್ರಿಯಿಸುವುದು ಹೇಗೆ ಎಂಬುದು ಅವರಿಗೆ ತುಂಬಾ ಕಷ್ಟವಾಗುತ್ತದೆ ಎಂದು ಹೇಳಿದರು.

ಚಿಲಿ ದೇಶದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಪೆಟ್ರಿಸಿಯೋ ಒಸ್ವಾಲ್ಡೋ ವೀಸ್  ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಮಾನವೀಯ ಪುರಸ್ಕಾರ' ನೀಡಿ ಗೌರವಿಸಲಾಯಿತು.ಚಿಲಿ ದೇಶದ ಪ್ರತಿನಿಧಿ ಪೆಡ್ರೋಗುಟೈರೆಜ್ ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.