ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Pramod Muthalik: ವಾಪಸಂದ್ರ ಮೂಲ ಮಠ ಅತಿಕ್ರಮಣ ಆರೋಪ: ತೆರವುಗೊಳಿಸಿ ಕ್ರಮಕ್ಕೆ ಪ್ರಮೋದ್ ಮುತಾಲಿಕ್ ಆಗ್ರಹ

ಮೂಲ ಮಠವು ಕೊಂಡಲಯ್ಯ ಹಾಗೂ ನಿಡುಮಾಮಡಯ್ಯ ಜಂಗಮಾದಿಗಳಿಗೆ ಸೇರಿದ್ದು, ಅವರ ಲಿಂಗೈಕ್ಯದ ಬಳಿಕ ಸರ್ಕಾರದ ಅಧೀನಕ್ಕೆ ಬಂದಿದ್ದು, ಮಠಕ್ಕೆ ಸಂಬಂಧಿಸಿದ ದಾಖಲೆಗಳು ಮುಜರಾಯಿ ಇಲಾಖೆಯಲ್ಲಿವೆ ಎಂದು ತಿಳಿಸಿದರು. ಆದರೆ, 2007ರ ಬಳಿಕ ಬಾಗೇಪಲ್ಲಿ ತಾಲೂಕಿನ ಗೂಳೂರು ಮಠದವರು ವಾಪಸಂದ್ರ ಜಂಗಮ ಮಠಕ್ಕೆ ಅತಿಕ್ರಮವಾಗಿ ಪ್ರವೇಶಿಸಿದ್ದಾರೆ

ಅತಿಕ್ರಮಣ ಆರೋಪ: ತೆರವುಗೊಳಿಸಿ ಕ್ರಮಕ್ಕೆ ಪ್ರಮೋದ್ ಮುತಾಲಿಕ್ ಆಗ್ರಹ

-

Profile
Ashok Nayak Aug 14, 2026 9:35 PM

ಚಿಕ್ಕಬಳ್ಳಾಪುರ: ನಗರದ ವಾಪಸಂದ್ರದಲ್ಲಿರುವ ಮುಜರಾಯಿ ವ್ಯಾಪ್ತಿಯ ಮೂಲ ಮಠವನ್ನು ಖಾಸಗಿ ವಿದ್ಯಾಸಂಸ್ಥೆ ಹಾಗೂ ಗೂಳೂರು ಮಠದವರು ಅತಿಕ್ರಮಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಿ, ಅಕ್ರಮವಿದ್ದರೆ ತೆರವುಗೊಳಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಒತ್ತಾಯಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಹಳೆಯ ಕೈಬರಹ ದಾಖಲೆಗಳನ್ನು ತಿದ್ದಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂಬ ಆರೋಪಗಳಿದ್ದು, ಈ ಬಗ್ಗೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ತನಿಖೆ ನಡೆಸಬೇಕು ಎಂದರು.

ಇದನ್ನೂ ಓದಿ: Pramod Mutalik: 1000 ಹಿಂದೂ ಮಹಿಳೆಯರಿಗೆ ತ್ರಿಶೂಲ ದೀಕ್ಷೆ: ಪ್ರಮೋದ್‌ ಮುತಾಲಿಕ್

ಮೂಲ ಮಠವು ಕೊಂಡಲಯ್ಯ ಹಾಗೂ ನಿಡುಮಾಮಡಯ್ಯ ಜಂಗಮಾದಿಗಳಿಗೆ ಸೇರಿದ್ದು, ಅವರ ಲಿಂಗೈಕ್ಯದ ಬಳಿಕ ಸರ್ಕಾರದ ಅಧೀನಕ್ಕೆ ಬಂದಿದ್ದು, ಮಠಕ್ಕೆ ಸಂಬಂಧಿಸಿದ ದಾಖಲೆಗಳು ಮುಜರಾಯಿ ಇಲಾಖೆಯಲ್ಲಿವೆ ಎಂದು ತಿಳಿಸಿದರು. ಆದರೆ, 2007ರ ಬಳಿಕ ಬಾಗೇಪಲ್ಲಿ ತಾಲೂಕಿನ ಗೂಳೂರು ಮಠದವರು ವಾಪಸಂದ್ರ ಜಂಗಮ ಮಠಕ್ಕೆ ಅತಿಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಆರೋಪಿಸಿದರು.

ಮಠದ ಜೀರ್ಣೋದ್ಧಾರಕ್ಕೆ ಆ.22, 23 ಹಾಗೂ 24ರಂದು ಆಯೋಜಿಸಿರುವ ಕಾರ್ಯಕ್ರಮಗಳನ್ನು ಕೂಡಲೇ ರದ್ದುಗೊಳಿಸಿ, ಜೀರ್ಣೋದ್ಧಾರಕ್ಕೆ ಸಂಬಂಧಿಸಿದ ಅನುಮತಿ ಹಾಗೂ ಆಸ್ತಿ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸುಂದ್ರೇಶ್ ನರ್ಗಲ್, ಶ್ರೀನಿವಾಸ್ ಗುರೂಜಿ, ನಾಗಾರ್ಜುನ್ ಗೌಡ ಮತ್ತಿತರರು ಉಪಸ್ಥಿತರಿದ್ದರು.