ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯಿಂದ ಶ್ರೀಕ್ಷೇತ್ರ ಕೈವಾರಕ್ಕೆ ಧಾರ್ಮಿಕ ಪ್ರವಾಸ; ತಾತಯ್ಯನವರ ದರ್ಶನ, ಸತ್ಸಂಗ ಹಾಗೂ ಸಾಮೂಹಿಕ ಪ್ರಾರ್ಥನೆ
ಮೈಸೂರು ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ಪುಣ್ಯಕ್ಷೇತ್ರ ಗಳಿಗೆ ಭೇಟಿ ನೀಡುವುದರಿಂದ ಮನಸ್ಸಿಗೆ ಉಲ್ಲಾಸ ಹಾಗೂ ಚೈತನ್ಯ ದೊರೆಯುತ್ತದೆ. ಸಂಸ್ಥೆಯ ವತಿ ಯಿಂದ ಈಗಾಗಲೇ ಹಲವು ಪುಣ್ಯಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳಲಾಗಿದೆ. ಕೈವಾರ ಕ್ಷೇತ್ರದಲ್ಲಿ ಯೋಗ ಬಂಧುಗಳಿಗೆ ಉತ್ತಮ ಸೌಕರ್ಯಗಳನ್ನು ಒದಗಿಸಿಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
-
ಕೈವಾರ: ಶ್ರೀಕ್ಷೇತ್ರ ಕೈವಾರದ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ಮಠಕ್ಕೆ ಮೈಸೂರಿನ ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ವತಿಯಿಂದ 500ಕ್ಕೂ ಹೆಚ್ಚು ಯೋಗಬಂಧುಗಳು ಧಾರ್ಮಿಕ ಪ್ರವಾಸ ಕೈಗೊಂಡು ಭೇಟಿ ನೀಡಿದರು.
ಮೈಸೂರಿನಿಂದ 10 ಬಸ್‌ಗಳಲ್ಲಿ ಆಗಮಿಸಿದ ಯೋಗಬಂಧುಗಳು ಸರತಿಸಾಲಿನಲ್ಲಿ ನಿಂತು ಸದ್ಗುರು ಕೈವಾರ ತಾತಯ್ಯನವರ ದರ್ಶನ ಪಡೆದರು. ಬಳಿಕ ಸದ್ಗುರುಗಳ ಮಂದಿರದಲ್ಲಿ ಧ್ಯಾನ ಹಾಗೂ ದಾಸೋಹ ಭವನದಲ್ಲಿ ಪ್ರಸಾದ ಸ್ವೀಕರಿಸಿದರು.
ಮಠದ ಸಂಕೀರ್ತನಾ ಮಂದಿರದಲ್ಲಿ ಸತ್ಸಂಗ ಕಾರ್ಯಕ್ರಮ ಹಾಗೂ ಸಾಮೂಹಿಕ ಪ್ರಾರ್ಥನೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರವಚನಕಾರ ತಳಗವಾರ ಆನಂದ್ ಮಾತನಾಡಿ, ಕೈವಾರ ತಾತಯ್ಯನವರು ಮಹಾನ್ ಯೋಗಸಾಧಕರಾಗಿದ್ದು, ಯೋಗಸಾಧನೆಯ ಮಹತ್ವ ಮತ್ತು ಅದರ ವಿಧಾನಗಳನ್ನು ತಮ್ಮ ಕೀರ್ತನೆ ಹಾಗೂ ಶತಕಗಳ ಮೂಲಕ ಜನರಿಗೆ ತಿಳಿಸಿಕೊಟ್ಟಿದ್ದಾರೆ. ತಾತಯ್ಯ ನವರ ಯೋಗಸಾಧನಾ ವಿಧಾನವನ್ನು ಅಧ್ಯಯನ ಮಾಡುವುದರಿಂದ ಉತ್ತಮ ಯೋಗಸಾಧಕ ರಾಗಲು ಸಹಕಾರಿಯಾಗಲಿದೆ ಎಂದರು. ಇದೇ ವೇಳೆ ಕೈವಾರ ಕ್ಷೇತ್ರದ ಮಹಿಮೆಯನ್ನು ವಿವರಿಸಿದರು.
ಇದನ್ನೂ ಓದಿ: Chikkaballapur News: ಅಧಿಕಾರಿಗಳನ್ನು ಹೀಯಾಳಿಸುವ ಶಾಸಕರ ಪ್ರವೃತ್ತಿ ಖಂಡನೀಯ: ರಾಜ್ಯ ಉಪಾಧ್ಯಕ್ಷ ವೆಂಕಟರಮಣಪ್ಪ
ಮೈಸೂರು ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವುದರಿಂದ ಮನಸ್ಸಿಗೆ ಉಲ್ಲಾಸ ಹಾಗೂ ಚೈತನ್ಯ ದೊರೆಯುತ್ತದೆ. ಸಂಸ್ಥೆಯ ವತಿಯಿಂದ ಈಗಾಗಲೇ ಹಲವು ಪುಣ್ಯಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳಲಾಗಿದೆ. ಕೈವಾರ ಕ್ಷೇತ್ರದಲ್ಲಿ ಯೋಗಬಂಧುಗಳಿಗೆ ಉತ್ತಮ ಸೌಕರ್ಯಗಳನ್ನು ಒದಗಿಸಿಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಯೋಗಬಂಧುಗಳು ಶ್ರೀ ಅಮರನಾರೇಯಣಸ್ವಾಮಿ, ಶ್ರೀ ಭೀಮಲಿಂಗೇಶ್ವರಸ್ವಾಮಿ ದೇವಾಲಯ ಹಾಗೂ ತಾತಯ್ಯನವರು ತಪಸ್ಸಿದ್ಧಿ ಪಡೆದ ಗವಿಯನ್ನು ದರ್ಶಿಸಿದರು. ಕಾರ್ಯಕ್ರಮದಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಭಜನೆ ನಡೆಯಿತು.
ಶ್ರೀಯೋಗಿನಾರೇಯಣ ಮಠದ ವ್ಯವಸ್ಥಾಪಕ ಕೆ. ಲಕ್ಷ್ಮೀನಾರಾಯಣ, ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಜಿಲ್ಲಾ ಸಂಚಾಲಕ ಕಿರಣ್, ವಿಠ್ಠಲರಾಯಣ್ಣ, ನಾಗೇಂದ್ರರಾಜೇಆರಸ್, ರಾಜಶೇಖರ ಯಾಗಂಟಿ, ಮುನಿರಾಜು, ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.