ಸಾರ್ವಜನಿಕರ ಬೇಡಿಕೆಗೆ ಸ್ಪಂದನೆ : ಎಚ್ ಕ್ರಾಸ್–ಟಿನ್ ಫ್ಯಾಕ್ಟರಿ ನಡುವೆ “ವೇಗದೂತ” ಬಸ್ ಸೇವೆ ಆರಂಭ
ಸಾರ್ವಜನಿಕರಿಗೆ ವೇಗವಾದ, ಸುರಕ್ಷಿತ ಹಾಗೂ ಉತ್ತಮ ಗುಣಮಟ್ಟದ ಸಾರಿಗೆ ಸೌಲಭ್ಯ ಒದಗಿಸುವ ಉದ್ದೇಶದಿಂದ “ವೇಗದೂತ” ಸೇವೆಗಳನ್ನು ಹಂತ ಹಂತವಾಗಿ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು. ಕಡಿಮೆ ನಿಲ್ದಾಣಗಳ ಮೂಲಕ ಕಾರ್ಯಾ ಚರಿಸುವ ಈ ಬಸ್ ಸೇವೆಯಿಂದ ಪ್ರಯಾಣ ಸಮಯ ಕಡಿಮೆ ಯಾಗಲಿದ್ದು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ
-
ಶಿಡ್ಲಘಟ್ಟ: ಬೆಂಗಳೂರು ನಗರ ಹಾಗೂ ಹೊರ ವಲಯಗಳಿಗೆ ಪ್ರತಿದಿನ ಸಂಚಾರ ಮಾಡುವ ಸಾರ್ವಜನಿಕರ ಅನುಕೂಲಕ್ಕಾಗಿ ಟಿನ್ ಫ್ಯಾಕ್ಟರಿಯಿಂದ ಹೊಸಕೋಟೆಯ ಎಚ್ ಕ್ರಾಸ್ ಬಸ್ ನಿಲ್ದಾಣದವರೆಗೆ ನೂತನ “ವೇಗದೂತ” ಬಸ್ ಸೇವೆ ಆರಂಭಿಸಲಾಯಿತು.
ಕರ್ನಾಟಕ ಸರ್ಕಾರದ ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ(Muzrai and Transport Minister Ramalinga Reddy)ಅವರು ತಾಲೂಕಿನ ಎಚ್ ಕ್ರಾಸ್ ವರವಲಯದ ತರಬಹಳ್ಳಿ–ಲಕ್ಷ್ಮಿಪುರ ಸಮೀಪ ನಡೆದ ಕಾರ್ಯಕ್ರಮದಲ್ಲಿ ನೂತನ ಬಸ್ ಮಾರ್ಗಗಳನ್ನು ಲೋಕಾರ್ಪಣೆ ಮಾಡಿ ಚಾಲನೆ ನೀಡಿದರು.
ಇದನ್ನೂ ಓದಿ: Chinnaswamy Stadium: ಚಿನ್ನಸ್ವಾಮಿ ಸ್ಟೇಡಿಯಂಗೆ ಹೈಟೆಕ್ ಟಚ್; ಆಸನ ಸಾಮರ್ಥ್ಯ 55,000ಕ್ಕೆ ಹೆಚ್ಚಳ
ಬಳಿಕ ಮಾತನಾಡಿದ ಅವರು, ಸಾರ್ವಜನಿಕರಿಗೆ ವೇಗವಾದ, ಸುರಕ್ಷಿತ ಹಾಗೂ ಉತ್ತಮ ಗುಣಮಟ್ಟದ ಸಾರಿಗೆ ಸೌಲಭ್ಯ ಒದಗಿಸುವ ಉದ್ದೇಶದಿಂದ “ವೇಗದೂತ” ಸೇವೆಗಳನ್ನು ಹಂತ ಹಂತವಾಗಿ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು. ಕಡಿಮೆ ನಿಲ್ದಾಣಗಳ ಮೂಲಕ ಕಾರ್ಯಾ ಚರಿಸುವ ಈ ಬಸ್ ಸೇವೆಯಿಂದ ಪ್ರಯಾಣ ಸಮಯ ಕಡಿಮೆಯಾಗಲಿದ್ದು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಶಿಡ್ಲಘಟ್ಟ ಕ್ಷೇತ್ರದ ಶಾಸಕ ಬಿ.ಎನ್. ರವಿಕುಮಾರ್(Shidlaghatta constituency MLA B.N. Ravikumar) ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಬೆಂಗಳೂರಿನೊಂದಿಗೆ ವೇಗವಾದ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಈ ಸೇವೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೊಸಕೋಟೆ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ(MLA Sharath Bachchegowda), ಸಾರಿಗೆ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.