ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜನವರಿ ತಿಂಗಳು ಪೂರ್ತಿ ಜಿಲ್ಲಾದ್ಯಂತ ರಸ್ತೆ ಸುರಕ್ಷತಾ ಅರಿವು ಕಾರ್ಯಕ್ರಮ : ನ್ಯಾ. ಟಿ.ಪಿ. ರಾಮಲಿಂಗೇಗೌಡ ಕರೆ

ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಏರ್ಪಡಿಸಿದ್ದ ಯಮ ಮತ್ತು ಚಿತ್ರಗುಪ್ತನ ವೇಷದ ಪಾತ್ರದಾರಿಗಳು ತಮ್ ಅಭಿನಯದ ಮೂಲಕ ಜನರಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸುವ ಬಗ್ಗೆ ಜಾಗೃತಿ ಮೂಡಿಸಿದರು. ಪ್ರದರ್ಶನದ ವೇಳೆಯೇ ಹೆಲ್ಮೆಟ್ ಧರಿಸದೆ ಬಂದ ಬೈಕ್ ಸವಾರನನ್ನು ತಡೆದ ಪೊಲೀಸರು ಹೆಲ್ಮೆಟ್ ಧರಿಸದೆ ಸಂಚರಿವುದು ತಪ್ಪು ಎಂದು ತಿಳಿ ಹೇಳಿ ಬಿಟ್ಟುನ ಕಳಿಸುವುದನ್ನು ಗಮನಿಸಿದ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ದಂಡ ಹಾಕದೆ ಕಳಿಸುವುದು ಸರಿಯಲ್ಲ

ಜನವರಿ ತಿಂಗಳು ಪೂರ್ತಿ ಜಿಲ್ಲಾದ್ಯಂತ ರಸ್ತೆ ಸುರಕ್ಷತಾ ಅರಿವು ಕಾರ್ಯಕ್ರಮ

-

Ashok Nayak
Ashok Nayak Jan 3, 2026 1:11 AM

ಚಿಕ್ಕಬಳ್ಳಾಪುರ : ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ರಸ್ತೆ ಸುರಕ್ಷತಾ ಅರಿವು ಸಪ್ತಾಹ ಕಾರ್ಯಕ್ರಮವನ್ನು ಜನವರಿ ತಿಂಗಳ 30 ರವರೆಗೆ ವ್ಯಾಪಕವಾಗಿ ಹಮ್ಮಿಕೊಳ್ಳಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಟಿ.ಪಿ. ರಾಮಲಿಂಗೇಗೌಡ (Principal District and Sessions Judge and Chairman of the District Legal Services Authority T.P. Ramalingegowda) ತಿಳಿಸಿದರು.

ನಗರದ ಕೋರ್ಟ್ ಅವರಣದಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಅರಿವು ಸಪ್ತಾಹ ಕಾರ್ಯ ಕ್ರಮಕ್ಕೆ ಹಸಿರು ನೀಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಜನರು ಮಾರಕ ಕಾಯಿಲೆ ಕ್ಯಾನ್ಸರ್‌ನಿಂದ ಮೃತಪಡುವ ಪ್ರಮಾಣಕ್ಕಿಂತಲೂ ಹೆಚ್ಚಾಗಿ ಸಂಚಾರಿ ನಿಯಮಗಳನ್ನು ಪಾಲಿಸದೇ ಅಪಘಾತಗಳಿಂದ ಮೃತಪಡುತ್ತಿದ್ದಾರೆ ಎಂಬುದು ಆತಂಕಕಾರಿ ವಿಚಾರವಾಗಿದೆ. ಆದ್ದರಿಂದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಎಲ್ಲ ನಗರ, ಸ್ಥಳೀಯಾಡಳಿತ ಮತ್ತು ಗ್ರಾಮಾಂತರ ಆಡಳಿತ ವ್ಯಾಪ್ತಿಯಲ್ಲಿ ಜನವರಿ ಮಾಸವನ್ನು ರಸ್ತೆ ಸುರಕ್ಷತಾ ಮಾಸವನ್ನಾಗಿ ಆಚರಿಸಿ ಎಲ್ಲ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಸಂಚಾರಿ ನಿಯಮ ಗಳನ್ನು ಪಾಲಿಸುವಂತೆ ಪ್ರೇರಿಪಿಸುವ ಕೆಲಸವನ್ನು ಜಿಲ್ಲಾಡಳಿತದ ಸಹಕಾರ ಪಡೆದು ಮಾಡಲಾಗು ವುದು ಎಂದು ತಿಳಿಸಿದರು.

ಇದನ್ನೂ ಓದಿ: Supreme Court: ಬೇರೆ ಜಾತಿ, ಧರ್ಮದ ಯುವಕನ ಮದುವೆಯಾದರೆ ಮಗಳಿಗೆ ಆಸ್ತಿಯಲ್ಲಿ ಪಾಲು ಕೊಡಬೇಕಿಲ್ಲ: ಸುಪ್ರೀಂ ಕೋರ್ಟ್‌

ಕಲಾವಿದನಿಗೆ ದಂಡದ ಅಧಿಕಾರ
ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಏರ್ಪಡಿಸಿದ್ದ ಯಮ ಮತ್ತು ಚಿತ್ರಗುಪ್ತನ ವೇಷದ ಪಾತ್ರದಾರಿಗಳು ತಮ್ ಅಭಿನಯದ ಮೂಲಕ ಜನರಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸುವ ಬಗ್ಗೆ ಜಾಗೃತಿ ಮೂಡಿಸಿದರು. ಪ್ರದರ್ಶನದ ವೇಳೆಯೇ ಹೆಲ್ಮೆಟ್ ಧರಿಸದೆ ಬಂದ ಬೈಕ್ ಸವಾರನನ್ನು ತಡೆದ ಪೊಲೀಸರು ಹೆಲ್ಮೆಟ್ ಧರಿಸದೆ ಸಂಚರಿವುದು ತಪ್ಪು ಎಂದು ತಿಳಿ ಹೇಳಿ ಬಿಟ್ಟುನ ಕಳಿಸುವುದನ್ನು ಗಮನಿಸಿದ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ದಂಡ ಹಾಕದೆ ಕಳಿಸುವುದು ಸರಿಯಲ್ಲ. ದಂಡ ಹಾಕುವ ಅಧಿಕಾರ ನಿಮಗೇ ಕೊಡುತ್ತೇನೆ. ನೀವೇ ತೀರ್ಮಾನ ಕೈಗೊಳ್ಳಿ ಎಂದು ಯಮಪಾತ್ರಧಾರಿಗೆ ಅಧಿಕಾರ ನೀಡಿದರು. ಯಮ ಪಾತ್ರಧಾರಿ ಪತ್ರಕರ್ತ ಸೋ.ಸು.ನಾಗೇಂದ್ರನಾಥ್ ಹೆಲ್ಮೆಟ್ ಧರಿಸದೆ ನಿರ್ಲಕ್ಷ್ಯ ವಹಿಸಿದರೆ ಸಾವು ಖಚಿತ. ಇನ್ನಾದರೂ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಎಂದರು.

ಆದರೂ ಸವಾರನ ಮುಖದಲ್ಲಿ ತಪ್ಪಿನ ಅರಿವು ಇಲ್ಲದ್ದನ್ನು ಗಮನಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಟಿ.ಪಿ. ರಾಮಲಿಂಗೇ ಗೌಡರು ಗರಂ ಆದರು. ತಪ್ಪು ಮಾಡುವುದು ಸಹಜ, ಆದರೆ ತಪ್ಪು ಮಾಡಿಯೂ ಪಶ್ಚಾತ್ತಾಪ ಪಡದಿದ್ದರೆ ಹೇಗೆ? ಕಾನೂನಿಗಿಂತ ಯಾವ ವ್ಯಕ್ತಿಯೂ ದೊಡ್ಡವರಲ್ಲ, ಈ ವರ್ತನೆ ಸರಿಯಲ್ಲ ಎಂದು ಬುದ್ದಿವಾದ ಹೇಳಿ ಕಳಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಹೆಲ್ಮೆಟ್ ನ್ಯಾಯಾಧೀಶರೆಂಬ ಅಭಿಧಾನ!!

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೆಲ್ಮೆಟ್ ಬಳಕೆಯ ಬಗ್ಗೆ ಇತ್ತೀಚಿಗೆ ವ್ಯಾಪಕ ಪ್ರಚಾರವಾಗುತ್ತಿದೆ. ಪ್ರತಿಯೊಬ್ಬರು ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಬಳಸುತ್ತಿದ್ದಾರೆ. ಜನಪ್ರತಿನಿಧಿಗಳು, ಆಡಳಿತ ವರ್ಗದವರು, ವಕೀಲರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಯಾವುದೇ ಸಾರ್ವಜನಿಕರು ಹೆಲ್ಮೆಟ್ ಧರಿಸದಿದ್ದರೆ ದಂಡ ಪಾವತಿ ಮಾಡುತ್ತಿರುವುದು ರಾಜ್ಯಮಟ್ಟದಲ್ಲಿ ಗಮನ ಸೆಳೆದಿದೆ.

ಈ ರೀತಿ ಹೆಲ್ಮೆಟ್ ಬಳಕೆಯ ಬಗ್ಗೆ ಜಿಲ್ಲಾಡಳಿತ ಪ್ರಯತ್ನ ಮಾಡಿದರೂ ಸಹ ಹೆಲ್ಮೆಟ್ ಬಳಕೆಗೆ ಸಾರ್ವಜನಿಕರು ಸ್ಪಂದನೆಯು ನೀರಸವಾಗಿತ್ತು. ಆದರೆ ಜಿಲ್ಲಾ ನ್ಯಾಯಾಧೀಶರಾಗಿ ಜಿಲ್ಲೆಗೆ ಬಂದ ಕೂಡಲೇ ರಾಮಲಿಂಗೇಗೌಡರು ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮೊದಲು  ಮಾಡಿದರು. ಜಿಲ್ಲಾಡಳಿತದ ಸಹಕಾರ ಪಡೆದು ಎಲ್ಲರೂ ಹೆಲ್ಮೆಟ್ ಧರಿಸಿ ಸಂಚಾರಿ ನಿಯಮ ಗಳನ್ನು ಪಾಲಿಸಲು ಕ್ರಮವಹಿಸಿದ ಕಾರಣಕ್ಕಾಗಿ ಇವರನ್ನು ಹೆಲ್ಮೆಟ್ ನ್ಯಾಯಾಧೀಶರು ಎಂದೇ ಜಿಲ್ಲೆಯಲ್ಲಿ ಖ್ಯಾತಿ ಗಳಿಸಿದ್ದಾರೆ. ಇದರ ಶ್ರೇಯ ಯಾರಿಗೆ ಸಲ್ಲುತ್ತದೆ ಎಂದು ಮಾಧ್ಯಮದವರು ಕೇಳಿದಾಗ ಪ್ರತಿಕ್ರಿಯೆ ನೀಡಿದ ನ್ಯಾಯಾಧೀಶರು ನಾನೇನು ವಿಶೇಷ ಕಾರ್ಯಕ್ರಮ ಮಾಡಲಿಲ್ಲ. ಜಿಲ್ಲಾಡಳಿತವನ್ನು ಮುಖ್ಯವಾಗಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಚಾರಿ ನಿಯಮಗಳ ಪಾಲನೆ ಕಡ್ಡಾಯವಾಗಿ ಆಗಬೇಕು. ಅಮೂಲ್ಯ ಜೀವಗಳ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಪ್ರೇರೇಪಿಸ ಲಾಯಿತು.

ಪೊಲೀಸ್ ಸಿಬ್ಬಂದಿಗಳು, ಮಾಧ್ಯಮ ಪ್ರತಿನಿಧಿಗಳು ಅದ್ಬುತ ಸಹಕಾರ, ಸಾರ್ವಜನಿಕರ ಉತ್ತಮ ಸ್ಪಂದನೆಯಿAದ ಸಂಚಾರಿ ನಿಯಮಗಳ ಪಾಲನೆ, ಹೆಲ್ಮೆಟ್ ಧರಿಸಿ ಚಾಲನೆ ಮಾಡುವ ಕಾರ್ಯ ಯಶಸ್ವಿಯಾಗಿದೆ. ಆದ್ದರಿಂದ ಆ ಎಲ್ಲಾ ಕ್ರೆಡಿಟ್ ಎಲ್ಲರಿಗೂ ಸೇರಬೇಕು ಎಂದು ತಿಳಿಸಿ ಮುಂದೆಯು ಎಲ್ಲ ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದರು.

ಹೆಲ್ಮೆಟ್ ಧರಿಸಿ ಶೇ೯೦ರಷ್ಟು ಜೀವ ಉಳಿಸಿ!!

ನೂತನ ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಹಾಗೂ ಲಘು ವಾಹನಗಳ ಚಾಲಕರು ಸೀಟ್ ಬೆಲ್ಟ್ ಧರಿಸಿ ಪ್ರಯಾಣ ಮಾಡಿದರೆ ಶೇ.90ರಷ್ಟು ಅಪಘಾತಗಳನ್ನು ತಡೆಗಟ್ಟಬಹುದು ಎಂದು ಅಂಕಿ ಅಂಶಗಳು ಸಾಬೀತು ಪಡಿಸಿವೆ. ಈ ಮಾಹಿತಿಯನ್ನು ಮತ್ತು ಅರಿವನ್ನು ಜಿಲ್ಲೆಯ ಪ್ರತಿಯೊಬ್ಬ ಸಾರ್ವಜನಿಕರಿಗೂ ತಿಳಿಸುವ ನಿಟ್ಟಿನಲ್ಲಿ ರಸ್ತೆ ಸುರಕ್ಷತಾ ಮಾಸವನ್ನು ಆಚರಣೆ ಮಾಡಲಾಗುವುದು. ಈ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಕೈ ಜೋಡಿಸಿರುವ ಎಲ್ಲ ಸರ್ಕಾರೇತರ ಸಂಸ್ಥೆಗಳಿಗೆ, ಜಿಲ್ಲಾಡಳಿತದ ವರ್ಗದವರಿಗೆ ಹಾಗೂ ಸಾರ್ವಜನಿಕರಿಗೆ ಧನ್ಯವಾದಗ ಳನ್ನು ತಿಳಿಸಿ ಜಿಲ್ಲೆಯ ಸಮಸ್ತ ನಾಗರಿಕರಿಗೆ ಹೊಸ ವರ್ಷದ ಶುಭ ಕೋರಿದರು.

ಜಾಥಾ ಕಾರ್ಯಕ್ರಮದಲ್ಲಿ ಕಲಾವಿದ ಸೋಸು ನಾಗೇಂದ್ರ ರವರು ಯಮನ ಪಾತ್ರದಲ್ಲಿ, ಗಾಯಕರು ಮತ್ತು ಕಲಾವಿದರಾದ ಮಂಚನಬಲೆ ಶ್ರೀನಿವಾಸ್  ಚಿತ್ರಗುಪ್ತನ ವೇಷ ಧರಿಸಿ ಸಾರ್ವಜನಿಕರಲ್ಲಿ ಸಂಚಾರಿ ನಿಯಮಗಳ ಪಾಲನೆಯ ಬಗ್ಗೆ ಅರಿವು ಮೂಡಿಸಿದರು. ಈ ವೇಳೆ ಶಿರಸ್ತ್ರಾ ಣ ಧರಿಸದೆ ಸಂಚಾರ ಮಾಡುತ್ತಿದ್ದವರನ್ನು ತಡೆದು ಪೊಲೀಸ್ ಸಿಬ್ಬಂದಿಗಳಿಂದ ದಂಡ ಪಾವತಿಸುವಂತೆ ಮಾಡಿದ್ದು, ಸಾರ್ವಜನಿಕರ ಮೆಚ್ಚುಗೆ ಪಡೆಯಿತು.

ಈ ವೇಳೆ ಜಿಲ್ಲಾಧಿಕಾರಿ ಜಿ. ಪ್ರಭು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ವೈ.ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್  ಚೌಕ್ಸೆ,ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಭಾಸ್ಕರ್  ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ಶಿಲ್ಪ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗನಾಥ್ ರೈ, ತಹಸೀಲ್ದಾರ್ ರಶ್ಮಿ, ಜಿಲ್ಲಾ ಸಾರಿಗೆ ಅಧಿಕಾರಿ ಎಸ್. ನಾಗರಾಜ ನಾಯಕ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಭಿಲಾಷ್ ಹಾಗೂ ವಕೀಲರು,ಮೋಟಾರು ವಾಹನ ತರಬೇತುದಾರರು ಮತ್ತು ಮಾಲೀಕ ರಾದ ಕೆ,ಪಿ.ನವಮೋಹನ್ ಮತ್ತು ಸಾರಿಗೆ ಇಲಾಖೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.