Chikkaballapur News: ಅಂಗಡಿಗಳ ಮೇಲೆ ದಾಳಿ ಕೋಟ್ಪಾ ಕಾಯ್ದೆ ಉಲ್ಲಂಘನೆಗೆ 3100 ರೂ.ಗಳ ದಂಡ ಸಂಗ್ರಹ : ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್
ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಶಿಕ್ಷಾರ್ಹ ಅಪರಾಧವಾಗಿದ್ದು, ಅಂಗಡಿ ಮಾಲೀಕರು/ ನಿರ್ವಾ ಹಕರು ಕಡ್ಡಾಯವಾಗಿ ಸೆಕ್ಷನ್-4 ರ ನಾಮಫಲಕ ಅಳವಡಿಸಿರಬೇಕು ಮತ್ತು ಅಂಗಡಿ ಸುತ್ತಮುತ್ತ ಧೂಮಪಾನ ಮಾಡದಂತೆ ನೋಡಿಕೊಳ್ಳಬೇಕು. ಲೈಟರ್, ಆಶ್ ಟ್ರೇ, ಬೆಂಕಿಪೊಟ್ಟಣ ಇತ್ಯಾದಿ ಪ್ರಚೋದನಕಾರಿ ವಸ್ತುಗಳನ್ನು ಪ್ರದರ್ಶಿಸಬಾರದು ಎಂದು ಅಂಗಡಿ ಮಾಲೀಕರಿಗೆ ಸೂಚಿಸಿದರು.
ಕೋಟ್ಪಾ ಕಾಯ್ದೆಯನ್ನು ಉಲ್ಲಂಘಿಸುತ್ತಿದ್ದ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಉಲ್ಲಂಘಿಸಿದವರ ವಿರುದ್ಧ ಕೋಟ್ಪಾ ಕಾಯ್ದೆಯ ಅನ್ವಯ ಬುಧವಾರ ದಂಡ ವಿಧಿಸಲಾಯಿತು ಎಂದು ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್ ತಿಳಿಸಿದರು. -
ಚಿಕ್ಕಬಳ್ಳಾಪುರ: ಕೋಟ್ಪಾ ಕಾಯ್ದೆಯನ್ನು ಉಲ್ಲಂಘಿಸುತ್ತಿದ್ದ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಉಲ್ಲಂಘಿಸಿದವರ ವಿರುದ್ಧ ಕೋಟ್ಪಾ ಕಾಯ್ದೆಯ ಅನ್ವಯ ಬುಧವಾರ ದಂಡ ವಿಧಿಸಲಾಯಿತು ಎಂದು ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಬುಧವಾರ ಜಿಲ್ಲಾಡಳಿತ ಭವನದ ಎದುರು ಇರುವ ಅಂಗಡಿಗಳಿಗೆ ಕೋಟ್ಪಾ ದಾಳಿ ಹಮ್ಮಿಕೊಂಡು ಕೋಟ್ಪಾ ಕಾಯ್ದೆಯ ಕುರಿತು ಅರಿವು ಮೂಡಿಸಿ ಮಾತನಾಡಿದರು.
ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಶಿಕ್ಷಾರ್ಹ ಅಪರಾಧವಾಗಿದ್ದು, ಅಂಗಡಿ ಮಾಲೀಕರು/ ನಿರ್ವಾಹಕರು ಕಡ್ಡಾಯವಾಗಿ ಸೆಕ್ಷನ್-4 ರ ನಾಮಫಲಕವನ್ನು ಅಳವಡಿಸಿರಬೇಕು ಮತ್ತು ಅಂಗಡಿ ಸುತ್ತಮುತ್ತ ಧೂಮಪಾನ ಮಾಡದಂತೆ ನೋಡಿಕೊಳ್ಳಬೇಕು. ಲೈಟರ್, ಆಶ್ ಟ್ರೇ, ಬೆಂಕಿಪೊಟ್ಟಣ ಇತ್ಯಾದಿ ಪ್ರಚೋದನಕಾರಿ ವಸ್ತುಗಳನ್ನು ಪ್ರದರ್ಶಿಸಬಾರದು ಎಂದು ಅಂಗಡಿ ಮಾಲೀಕರಿಗೆ ಸೂಚಿಸಿದರು.
ಸಾರ್ವಜನಿಕರಿಗೆ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ತಂಬಾಕಿನಲ್ಲಿ ಸುಮಾರು 7,000ಕ್ಕೂ ಹೆಚ್ಚು ರಾಸಾಯನಿಕಳಿದ್ದು, ಇದರಲ್ಲಿ ಶೇ 70ರಷ್ಟು ರಾಸಾಯನಿಕಗಳು ಕ್ಯಾನ್ಸರ್ ಕಾರಕವಾಗಿರುತ್ತವೆ. ಸ್ವಚ್ಛತೆ ಹಾಗೂ ಯಾವುದೇ ರೀತಿಯ ಫುಡ್ ಕಲರ್ಸ್ʼಗಳನ್ನು ಬಳಸದಂತೆ ಅಂಗಡಿ ಮಾಲೀಕರಿಗೆ ಈ ವೇಳೆ ಎಚ್ಚರಿಸಿದರು. ಕೋಟ್ಪಾ ಕಾಯ್ದೆಯನ್ನು ಉಲ್ಲಂಘಿ ಸಿದ 4 ಅಂಗಡಿ ಮಾಲೀಕರಿಗೆ ತಿಳುವಳಿಕೆ ನೋಟೀಸ್ ಜಾರಿ ಮಾಡಿ, 11 ಪ್ರಕರಣಗಳನ್ನು ದಾಖಲಿಸಿ ರೂ. 3,100/- ಗಳ ಮೊತ್ತವನ್ನು ಸ್ಥಳದಲ್ಲಿಯೇ ದಂಡ ವಿಧಿಸಿ ಸಂಗ್ರಹ ಮಾಡಲಾಯಿತು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಎಸ್.ಕೃಷ್ಣ ಪ್ರಸಾದ್, ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಕಾಶ, ಹಿರಿಯ ಆರೋಗ್ಯ ನಿರೀಕ್ಷಣಾಧಿ ಕಾರಿಗಳಾದ ನರಸಿಂಹಯ್ಯ, ಶಶಿಕುಮಾರ್ ಮತ್ತು ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ನಾರಾಯಣಸ್ವಾಮಿ, ಪ್ರಿಯಾ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಮಾಜ ಕಾರ್ಯಕರ್ತ ಮಂಜುನಾಥ್ ಭಾಗವಹಿಸಿದ್ದರು.