ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shidlaghatta News: ಜಾತಿ ಬೇಧ ಮರೆತು ಸಮಾಜ ಒಗ್ಗಟ್ಟಾಗಬೇಕು : ಶ್ರೀರಾಮ ಆಚರಣ ಸಮಿತಿ ಅಧ್ಯಕ್ಷ ಬಿ.ವೆಂಕಟೇಶ್

ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಆಹ್ವಾನ ಇರುತ್ತದೆ. ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸಬೇಕು. ಕಾರ್ಯಕ್ರಮಕ್ಕೆ ರಾಜಕೀಯ ಬಣ್ಣ ಹಚ್ಚಬಾ ರದು ಎಂದು ಮನವಿ ಮಾಡಿದರು. ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ನಗರಸಭೆ ಕಮಿಷನರ್ ಆಹ್ವಾನ ನೀಡಲಾಗುವುದು. ಸಮಾಜದಲ್ಲಿ ಸೌಹಾರ್ದತೆ, ಸಹೋದರತ್ವ ಮತ್ತು ಒಗ್ಗಟ್ಟಿನ ಸಂದೇಶ ಸಾರುವ ಉದ್ದೇಶದಿಂದ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದರು.

ಜಾತಿ ಬೇಧ ಮರೆತು ಸಮಾಜ ಒಗ್ಗಟ್ಟಾಗಬೇಕು

ಯಾವ ದೇವರು ಕೂಡ ಜಾತಿ ಬೇಧ ಮಾಡುವಂತೆ ಹೇಳಿಲ್ಲ. ಸಮಾಜ ಉಳಿಯಬೇಕಾದರೆ ಹಾಗೂ ಬೆಳೆಯಬೇಕಾದರೆ ನಾವೆಲ್ಲರೂ ಒಂದಾಗಿ ಬದುಕಬೇಕು ಎಂದು ಶ್ರೀರಾಮ ಆಚರಣ ಸಮಿತಿ ಅಧ್ಯಕ್ಷ ಬಿ. ವೆಂಕಟೇಶ್ ಹೇಳಿದರು. -

Profile
Ashok Nayak May 16, 2026 12:20 AM

ಶಿಡ್ಲಘಟ್ಟ: ಯಾವ ದೇವರು ಕೂಡ ಜಾತಿ ಬೇಧ ಮಾಡುವಂತೆ ಹೇಳಿಲ್ಲ. ಸಮಾಜ ಉಳಿಯ ಬೇಕಾದರೆ ಹಾಗೂ ಬೆಳೆಯಬೇಕಾದರೆ ನಾವೆಲ್ಲರೂ ಒಂದಾಗಿ ಬದುಕಬೇಕು ಎಂದು ಶ್ರೀರಾಮ ಆಚರಣ ಸಮಿತಿ ಅಧ್ಯಕ್ಷ ಬಿ. ವೆಂಕಟೇಶ್ ಹೇಳಿದರು.

ನಗರದ ಶ್ರೀರಾಮ ಆಚರಣ ಸಮಿತಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೂನ್ 7ರಂದು ನಡೆಯಲಿರುವ ಶುಭ ಶೋಭಾಯಾತ್ರೆ ಸಂಪೂರ್ಣ ಪಕ್ಷಾತೀತ ಕಾರ್ಯ ಕ್ರಮವಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು.

ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಆಹ್ವಾನ ಇರುತ್ತದೆ. ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸಬೇಕು. ಕಾರ್ಯಕ್ರಮಕ್ಕೆ ರಾಜಕೀಯ ಬಣ್ಣ ಹಚ್ಚಬಾರದು ಎಂದು ಮನವಿ ಮಾಡಿದರು.

ಇದನ್ನೂ ಓದಿ: Chinthamani News: ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಈಜು ತರಬೇತಿ: ಡ್ಯಾನ್ಸ್ ಮಾಸ್ಟರ್ ಕೇಶವ ಅವರ ಸಾಮಾಜಿಕ ಕಳಕಳಿ

ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ನಗರಸಭೆ ಕಮಿಷನರ್ ಆಹ್ವಾನ ನೀಡಲಾಗುವುದು. ಸಮಾಜದಲ್ಲಿ ಸೌಹಾರ್ದತೆ,ಸಹೋದರತ್ವ ಮತ್ತು ಒಗ್ಗಟ್ಟಿನ ಸಂದೇಶ ಸಾರುವ ಉದ್ದೇಶದಿಂದ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದರು.

ಶೋಭಾಯಾತ್ರೆಯನ್ನು ಅದ್ದೂರಿಯಾಗಿ ನಡೆಸಲು ಸಮಿತಿ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ವಿವಿಧ ಭಾಗಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ನಗರದ ಪ್ರಮುಖ ಬೀದಿಗಳಲ್ಲಿ ಯಾತ್ರೆ ಸಂಚರಿಸಲಿದ್ದು, ಧಾರ್ಮಿಕ ಘೋಷಣೆಗಳು ಹಾಗೂ ವಿವಿಧ ಕಲಾತಂಡಗಳ ಪ್ರದರ್ಶನಗಳು ವಿಶೇಷ ಆಕರ್ಷಣೆಯಾಗಲಿವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಗೌರವ ಅಧ್ಯಕ್ಷ ಪ್ರಕಾಶ್, ಮಂಜುನಾಥ್, ಅನಿಲ್ ಕುಮಾರ್ ಜಿ.ಕೆ., ನಾಗೇಶ್, ಭರತ್, ರವಿಚಂದ್ರ, ಲಕ್ಷ್ಮಿಪತಿ, ವೆಂಕೋಬರಾವ್, ಲಕ್ಷ್ಮಿಕಾಂತ್, ಕಿರಣ್ ಅಶ್ವಥ್, ರಾಮಾಂಜನೇಯ, ಅಜಿತ್, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದರು.