ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chinthamani News: ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಈಜು ತರಬೇತಿ: ಡ್ಯಾನ್ಸ್ ಮಾಸ್ಟರ್ ಕೇಶವ ಅವರ ಸಾಮಾಜಿಕ ಕಳಕಳಿ

ತರಬೇತಿ ನಡೆಯುತ್ತಿರುವ ಸ್ಥಳಕ್ಕೆ ಇತ್ತೀಚೆಗೆ ಸ್ಥಳೀಯ ಮುಖಂಡರಾದ ಡಾ!ವಿ.ಅಮರ್ ಅವರು ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಕೇಶವ ಅವರ ಈ ಕಾರ್ಯವನ್ನು ಶ್ಲಾಘಿಸಿದ ಅವರು ಕೇವಲ 5 ದಿನಗಳಲ್ಲಿ 3 ವರ್ಷದ ಮೇಲ್ಪಟ್ಟ ಮಕ್ಕಳು ಅತ್ಯುತ್ತಮ ವಾಗಿ ಈಜು ಕಲಿಯು ತ್ತಿರುವುದು ಆಶ್ಚರ್ಯಕರ ಮತ್ತು ಮೆಚ್ಚುವಂತದ್ದು.

ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಈಜು ತರಬೇತಿ

-

Profile
Ashok Nayak May 15, 2026 12:25 AM

ಚಿಂತಾಮಣಿ: ಬೇಸಿಗೆಯ ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಕೇವಲ ನೃತ್ಯವಲ್ಲದೆ, ಜೀವನ ಕ್ಕೆ ಅತ್ಯಗತ್ಯವಾದ ಈಜು ಕಲೆಯನ್ನೂ ಕಲಿಸುವ ಮೂಲಕ ಚಿಂತಾಮಣಿಯ ಖ್ಯಾತ ಡ್ಯಾನ್ಸ್ ಮಾಸ್ಟರ್ ಕೇಶವ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಕೇಶವ ಡ್ಯಾನ್ಸ್ ಅಕಾಡೆಮಿ ವತಿಯಿಂದ ಆಯೋಜಿಸಲಾದ ಈ ಬೇಸಿಗೆ ಶಿಬಿರದಲ್ಲಿ ಮಕ್ಕಳು ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.

ಈ ಶಿಬಿರದ ವಿಶೇಷತೆಯೆಂದರೆ,ಆಧುನಿಕ ಸ್ವಿಮ್ಮಿಂಗ್ ಪೂಲ್‌ಗಳ ಬದಲಾಗಿ ನೈಸರ್ಗಿಕ ವಾದ ಬಾವಿಯಲ್ಲಿ ಮಕ್ಕಳಿಗೆ ಈಜು ಕಲಿಸಿಕೊಡಲಾಗುತ್ತಿದೆ. ಬಾವಿಯಲ್ಲಿ ಈಜು ಕಲಿತರೆ ಯಾವುದೇ ಸಂದರ್ಭದಲ್ಲೂ ಧೈರ್ಯವಾಗಿ ನೀರಿನಲ್ಲಿ ಇಳಿಯಬಹುದು ಎಂಬ ಉದ್ದೇಶ ದೊಂದಿಗೆ ಕೇಶವ ಅವರು ತಮ್ಮ ದಂಪತಿಗಳು ಹಾಗೂ ಮುನಿಕೃಷ್ಣ ಅವರ ಸಹಯೋಗ ದೊಂದಿಗೆ ಈ ತರಬೇತಿ ನೀಡುತ್ತಿದ್ದಾರೆ.

ಇದನ್ನೂ ಓದಿ: Chinthamani News: ಕರ್ತವ್ಯನಿಷ್ಠ ಅಧಿಕಾರಿಗೆ ಗೌರವ: ಚಿಂತಾಮಣಿ ಉಪ ವಿಭಾಗದ ಡಿವೈಎಸ್ಪಿ ಮುರಳಿಧರ್ ಪಿ ಬೀಳ್ಕೊಡುಗೆ ಸಮಾರಂಭ

ತರಬೇತಿ ನಡೆಯುತ್ತಿರುವ ಸ್ಥಳಕ್ಕೆ ಇತ್ತೀಚೆಗೆ ಸ್ಥಳೀಯ ಮುಖಂಡರಾದ ಡಾ!ವಿ.ಅಮರ್ ಅವರು ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಕೇಶವ ಅವರ ಈ ಕಾರ್ಯ ವನ್ನು ಶ್ಲಾಘಿಸಿದ ಅವರು ಕೇವಲ 5 ದಿನಗಳಲ್ಲಿ 3 ವರ್ಷದ ಮೇಲ್ಪಟ್ಟ ಮಕ್ಕಳು ಅತ್ಯುತ್ತಮ ವಾಗಿ ಈಜು ಕಲಿಯುತ್ತಿರುವುದು ಆಶ್ಚರ್ಯಕರ ಮತ್ತು ಮೆಚ್ಚುವಂತದ್ದು.

ಕಳೆದ 15 ವರ್ಷಗಳಿಂದ ಕೇಶವ ಅವರು ಈ ಸೇವೆಯನ್ನು ನೀಡುತ್ತಿರುವುದು ಶ್ಲಾಘನೀಯ.

ಚಿಂತಾಮಣಿಯ ಸಾರ್ವಜನಿಕರು ಮತ್ತು ಪೋಷಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಶಿಬಿರದಲ್ಲಿ ಪಾಲ್ಗೊಂಡಿರುವ ಮಕ್ಕಳು ಈಜು ಕಲಿಯುವುದರ ಜೊತೆಗೆ ಜಲಕ್ರೀಡೆಯಲ್ಲಿ ಸಂಭ್ರಮಿಸುತ್ತಿದ್ದಾರೆ. ಮಕ್ಕಳೊಂದಿಗೆ ಬಂದ ಪೋಷಕರು ಕೂಡ ಈ ನೈಸರ್ಗಿಕ ಕಲಿಕಾ ವಿಧಾನದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.