ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

SSLC: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ನಿರೀಕ್ಷೆಗೂ ಮೀರಿ ಹೊರ ಹೊಮ್ಮುವ ವಿಶ್ವಾಸ: ಬಿಇಒ ಎನ್.ವೆಂಕಟೇಶಪ್ಪ

ಪರೀಕ್ಷಾ ಕಾರ್ಯಗಳಿಗೆ ವಿವಿಧ ವರ್ಗದ ಅಧಿಕಾರಿಗಳನ್ನು ನಿಯೋಜಿಸಿದ್ದು, ಅಧೀಕ್ಷಕರು, 09 ಉಪ ಮುಖ್ಯ ಅಧೀಕ್ಷಕರು 01,ಪಶ್ನೆ ಪತ್ರಿಕೆ ಅಭಿರಕ್ಷಕರು, 09 ಜಾಗೃತದಳ ಅಧಿಕಾರಿಗಳು, 09 ಮೊಬೈಲ್ ಸ್ವಾಧೀನಾಧಿಕಾರಿಗಳು 09 ಹಾಗೂ 150 ಮಂದಿ ಕೊಠಡಿ ಮೇಲ್ವಿಚಾರಕ ಸಿಬ್ಬಂದಿ ನಿಯೋಜಿಸಲಾಗಿದೆ.

ಎಸ್ಎಸ್ಎಲ್ಸಿ ಪರೀಕ್ಷೆಗೆ 2353 ವಿದ್ಯಾರ್ಥಿಗಳು ನೋಂದಣಿ

-

Ashok Nayak
Ashok Nayak Mar 18, 2026 12:29 AM

ಬಾಗೇಪಲ್ಲಿ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ನಿರೀಕ್ಷೆಗೂ ಮೀರಿ ಹೊರಹೊಮ್ಮುವ ವಿಶ್ವಾಸವಿದೆ ಎಂದು ಬಿಇಒ ಎನ್. ವೆಂಕಟೇಶಪ್ಪ ಅಭಿಪ್ರಾಯಪಟ್ಟರು. ಪಟ್ಟಣದ ತಮ್ಮ ಬಿಇಓ ಕಚೇರಿಯಲ್ಲಿ ಮಂಗಳವಾರ ಎಸ್ ಎಸ್ ಎಲ್ ಸಿ ಪರೀಕ್ಷೆ ಸಂಬಂಧ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದರು. 

ಮಾ.18ರಿಂದ ಆರಂಭಗೊಂಡು ಏ.2ರ ವರೆಗೆ ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಸುಗಮ ಹಾಗೂ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ಹಾಗೂ ಬಿಇಒ ಕಚೇರಿ ಅಗತ್ಯ ಪೂರ್ವ ಸಿದ್ಧತೆ ಕೈಗೊಂಡಿರುವುದಾಗಿ ತಿಳಿಸಿದರು.

ತಾಲೂಕಿನಲ್ಲಿ ಒಟ್ಟು 9 ಪರೀಕ್ಷೆ ಕೇಂದ್ರಗಳನ್ನು ಗುರುತಿಸಿದ್ದು, ಪ್ರತಿ ಕೊಠಡಿಯಲ್ಲಿ ಸಿ.ಸಿ.ಕ್ಯಾಮೆರ ಅಳವಡಿಸಿ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಶೌಚಾಲಯ, ವಿದ್ಯುತ್ ವ್ಯವಸ್ಥೆ ಮತ್ತು ಭದ್ರತೆಗಾಗಿ ಕ್ರಮ ವಹಿಸಿರುವುದಾಗಿ ತಿಳಿಸಿದರು.

ಇದನ್ನೂ ಓದಿ: SSLC-2nd PUC Exam 2026: ಎಸ್ಎಸ್ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು 2ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ತಾಲೂಕಿನಲ್ಲಿ ಪ್ರೌಢಶಾಲೆಗಳ,ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು ಒಳಗೊಂ ಡಂತೆ ಒಟ್ಟು 2353 ಮಂದಿ ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಪರೀಕ್ಷೆ ಎದುರಿಸುತ್ತಿದ್ದಾರೆ.

ಬಾಲಕರ 1177, ಬಾಲಕಿಯರ 1176 ಒಟ್ಟು 9 ಪರೀಕ್ಷಾ ಕೇಂದ್ರ ದಲ್ಲಿ 2353 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.  ಎಂದರು.

ಈ ಬಾರಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಮತ್ತು ಶಿಕ್ಷಕ ಸಮೂಹವು ನಿರಂತರ ಪ್ರಯತ್ನ ನಡೆಸಿರುವುದನ್ನು, ಪ್ರತಿ ವಿದ್ಯಾರ್ಥಿಯ ಪೋಷಕರು  ನೀಡಿರುವ ಸಹಕಾರ ಸ್ಮರಿಸಬೇಕಿದೆ ಎಂದರು.

ಪರೀಕ್ಷಾ ಕಾರ್ಯಗಳಿಗೆ ವಿವಿಧ ವರ್ಗದ ಅಧಿಕಾರಿಗಳನ್ನು ನಿಯೋಜಿಸಿದ್ದು, ಅಧೀಕ್ಷಕರು, 09 ಉಪ ಮುಖ್ಯ ಅಧೀಕ್ಷಕರು 01,ಪಶ್ನೆ ಪತ್ರಿಕೆ ಅಭಿರಕ್ಷಕರು, 09 ಜಾಗೃತದಳ ಅಧಿಕಾರಿಗಳು, 09 ಮೊಬೈಲ್ ಸ್ವಾಧೀನಾಧಿಕಾರಿಗಳು 09 ಹಾಗೂ 150 ಮಂದಿ ಕೊಠಡಿ ಮೇಲ್ವಿಚಾರಕ ಸಿಬ್ಬಂದಿ ನಿಯೋಜಿಸ ಲಾಗಿದೆ. ಪರೀಕ್ಷಾ ಕೇಂದ್ರದ ಹೊರ ಆವರಣದಲ್ಲಿ ಸೆಕ್ಷನ್ 144 ಜಾರಿ, ಜೊತೆಗೆ ಪೊಲೀಸ್, ಆರೋಗ್ಯ ಇನ್ನಿತರೆ ಇಲಾಖೆಗಳ ಸಹಯೋಗ ಹೊಂದಿರುವುದಾಗಿ ಹೇಳಿದರು.

ಪರೀಕ್ಷೆ ಕೇಂದ್ರಗಳು: ತಾಲ್ಲೂಕಿನಲ್ಲಿ ಒಟ್ಟು 9 ಪರೀಕ್ಷಾ ಕೇಂದ್ರಗಳು ಇದ್ದು ಪಟ್ಟಣದಲ್ಲಿ 4 ಪರೀಕ್ಷಾ ಕೇಂದ್ರಗಳು ಸರ್ಕಾರಿ ಬಾಲಕರ ಪ್ರೌಢಶಾಲೆ,ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಯಂಗ್ ಇಂಡಿಯಾ ಶಾಲೆ, ಬಿ.ಜಿ.ಎಸ್. ಶಾಲೆ, ಸರ್ಕಾರಿ ಪ್ರೌಢಶಾಲೆ ಗೂಳೂರು, ಕೆ.ಪಿ.ಎಸ್.ಶಾಲೆ, ಚೇಳೂರು, ಪ್ರಶಾಂತಿ ಪ್ರೌಢಶಾಲೆ ಚೇಳೂರು, ಸರ್ಕಾರಿ ಪ್ರೌಢಶಾಲೆ ಪಾತಪಾಳ್ಯ,ಸರ್ಕಾರಿ ಪ್ರೌಢಶಾಲೆ ಮಿಟ್ಟೇಮರಿ ಈ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ ಎಂದು ಹೇಳಿದರು.