Chikkaballapur News: ಜಿಲ್ಲಾಡಳಿತದಿಂದ ನಡೆದ ಶ್ರೀ ರೇಣುಕಾಚಾರ್ಯರ ಜಯಂತಿ ಆಚರಣೆಯಲ್ಲಿ ಭಾಗಿಯಾಗಿ ಹೇಳಿಕೆ
ಉತ್ತಮ ಸಮಾಜವನ್ನು ಕಟ್ಟಲಿಕ್ಕೆ ಶ್ರಮಿಸಿದ 39 ಮಹನೀಯ ಸಾಧಕರ ಜಯಂತಿಗಳನ್ನು ಆಡಳಿತಾತ್ಮಾಕ ವ್ಯವಸ್ಥೆಯ ಮೂಲಕ ಆಚರಣೆ ಮಾಡಿ ಅವರ ಸಂದೇಶಗಳನ್ನು ಹಾಗೂ ಆದರ್ಶಗಳನ್ನು ಮುಂದಿನ ಪೀಳಿಗೆಗೆ ನಿರಂತರವಾಗಿ ತಲುಪಿಸುವ ಕಾರ್ಯವನ್ನು ನಿರಂತರ ವಾಗಿ ಮಾಡಲಾಗುತ್ತಿದೆ
-
ಚಿಕ್ಕಬಳ್ಳಾಪುರ: ರೇಣುಕಾಚಾರ್ಯರು ಸೇರಿದಂತೆ ಎಲ್ಲಾ ಸಮಾಜ ಸುಧಾರಕರ ಬದುಕು ಎಲ್ಲಾ ಕಾಲಕ್ಕೂ ಆದರ್ಶ ಮತ್ತು ಅನುಕರಣೀಯ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.
ನಗರ ಹೊರ ವಲಯ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ ,ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದ ಪ್ರಯುಕ್ತ ಶ್ರೀ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವ ಮೂಲಕ ಗೌರವ ಸಲ್ಲಿಸಿ ಮಾತನಾಡಿದರು.
ಉತ್ತಮ ಸಮಾಜವನ್ನು ಕಟ್ಟಲಿಕ್ಕೆ ಶ್ರಮಿಸಿದ 39 ಮಹನೀಯ ಸಾಧಕರ ಜಯಂತಿಗಳನ್ನು ಆಡಳಿತಾತ್ಮಾಕ ವ್ಯವಸ್ಥೆಯ ಮೂಲಕ ಆಚರಣೆ ಮಾಡಿ ಅವರ ಸಂದೇಶಗಳನ್ನು ಹಾಗೂ ಆದರ್ಶಗಳನ್ನು ಮುಂದಿನ ಪೀಳಿಗೆಗೆ ನಿರಂತರವಾಗಿ ತಲುಪಿಸುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.
ಇದನ್ನೂ ಓದಿ; Chikkaballapur News: ಮಾ.24 ರಿಂದ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ
ನಮ್ಮ ಸಮಾಜದಲ್ಲಿದ್ದ ಅನೇಕ ಅನಿಷ್ಟ ಪದ್ದತಿಗಳನ್ನು, ಅಂಕು ಡೊಂಕುಗಳನ್ನು ಖಂಡಿಸಿ ಸುಧಾರಣೆ ಮಾಡಿದ ಅನೇಕ ಮಹನೀಯ ಶರಣರ ಹಾಗೂ ಸುಧಾರಕರ ಜಯಂತಿಗಳನ್ನು ನಾವು ಪರಂಪರಾಗತವಾಗಿ ಆಚರಣೆ ಮಾಡುತ್ತಾ ಬಂದಿದ್ದೇವೆ. ಈ ಪದ್ದತಿಗೆ ಸ್ಪಷ್ಟ ರೂಪ ನೀಡಿ ಆಡಳಿತಾತ್ಮಕವಾಗಿ ಆಚರಣೆ ಮಾಡಿ ಸಮಾಜವನ್ನು ನಿರಂತರವಾಗಿ ಜಾಗೃತ ಗೊಳಿಸುವ ಆಶಯವನ್ನು ಸರ್ಕಾರ ಹೊಂದಿದೆ. ಅದರಂತೆ ಜಿಲ್ಲಾಡಳಿತದಿಂದ ಹಲವು ಸುಧಾರಕರ ಆಚರಣೆಗಳನ್ನು ಮಾಡಲಾಗುತ್ತಿದೆ, ಆ ನಿಟ್ಟಿನಲ್ಲಿ ಶ್ರೀ ರೇಣುಕಾಚಾರ್ಯರ ಆಚಾರ ವಿಚಾರಗಳನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ಅನುಸರಿಸೋಣ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡೋಣ ಎಂದರು.
ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ಮಹಾನ್ ಶರಣ ಮತ್ತು ಗುರುಗಳಲ್ಲಿ ಅಗ್ರ ಗಣ್ಯರು. ಇವರ ತತ್ವ ಬೋಧನೆಗಳು,ಬದುಕಿನ ಚರಿತ್ರೆ ಮತ್ತು ಸಾಮಾಜಿಕ ಪರಿವರ್ತನೆ ಯ ಸಾಧನೆಗಳು ಭಾರತೀಯ ಸಾಮಾಜಿಕ ಮತ್ತು ಧಾರ್ಮಿಕ ಚರಿತ್ರೆಯಲ್ಲಿ ಮಹತ್ವ ಪೂರ್ಣ ಸ್ಥಾನವನ್ನು ಪಡೆದಿವೆ. ಕನ್ನಡ ಭಾಷೆಯಲ್ಲಿ ಇವರ ಬದುಕು ಮತ್ತು ತತ್ವಗಳನ್ನು ವಿವರಿಸುವ ಹಲವು ಗ್ರಂಥಗಳಿವೆ. ಶ್ರೀ ರೇಣುಕಾಚಾರ್ಯರ "ಇಷ್ಟಲಿಂಗ" ಧಾರಣೆಯ ಮೂಲಕ ಭಗವಂತನನ್ನು ವೈಯಕ್ತಿಕ ಅನುಭವದ ಮೂಲಕ ಅರಿತುಕೊಳ್ಳಬೇಕೆಂಬ ತತ್ವವನ್ನು ಪ್ರಚಾರ ಮಾಡಿದರು. ಶೈವ ತತ್ವಶಾಸ್ತ್ರವನ್ನು ಜನಸಾಮಾನ್ಯರಿಗೆ ತಲುಪಿಸಲು ಹಾಗೂ ಅದನ್ನು ದೈನಂದಿನ ಜೀವನದ ಭಾಗವನ್ನಾಗಿ ಮಾಡಲು ಶ್ರಮಿಸಿದ್ದಾರೆ ಅದನ್ನು ನಾವು ನಮ್ಮ ದೈನಂದಿನ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಸಮುದಾಯದ ಮುಖಂಡ ಸುನಿಲ್ ಕುಮಾರ್ ಮಾತನಾಡು ತ್ತಾ, ಶ್ರೀ ರೇಣುಕಾಚಾರ್ಯರು ತೆಲಂಗಾಣ ರಾಜ್ಯದ ಕೊಲ್ಲಿಪಾಕಿ ಎಂಬ ಊರಿನಲ್ಲಿ ಜನಿಸಿದರು.
ಆಚಾರ್ಯರು ಬಾಲ್ಯದಲ್ಲೇ ಋಷಿಗಳ ಜೊತೆಯಲ್ಲಿ ನಿರಂತರ ಜ್ಞಾನಸಾಧನೆ ನಡೆಸಿ, ಶೈವ ತತ್ವಗಳನ್ನು ಆಳವಾಗಿ ಅಧ್ಯಯನ ಮಾಡಿದರು. ಅವರು ಲಿಂಗಾಯತ ಧರ್ಮದ ಸಿದ್ಧಾಂತ ಗಳನ್ನು ಪ್ರತಿಪಾದಿಸುತ್ತಾ ಶೈವ ಪರಂಪರೆಯನ್ನು ಬಲಪಡಿಸಲು ಅವರು ತಮ್ಮ ಜೀವನ ವನ್ನು ಮೀಸಲಾಗಿಟ್ಟಿದ್ದರು.
ಇಷ್ಟಲಿಂಗವನ್ನು ಧರಿಸುವ ಮೂಲಕ ನಿತ್ಯ ಶಿವನೊಂದಿಗೆ ಸಂಬಂಧವನ್ನು ಕಾಪಾಡ ಬೇಕೆಂಬ ತತ್ವವನ್ನು ಅವರು ಬೋಧಿಸಿದರು. ದೇವರನ್ನು ಹೊರಗಿನ ಪ್ರತಿಮೆಗಳಿಂದ ಅಲ್ಲದೆ, ತಮ್ಮ ಅಂತರಾಳದಲ್ಲಿ ಹುಡುಕಬೇಕೆಂಬ ನಂಬಿಕೆಯನ್ನು ಪ್ರಚುರ ಪಡಿಸಿ ಸಮಾನತೆ" ಎಂಬ ತತ್ವಕ್ಕೆ ಮಹತ್ವ ನೀಡಿದರು, ಅದರಲ್ಲಿ ಎಲ್ಲಾ ವರ್ಣಗಳೂ ಸಮಾನ ವೆಂಬ ನಂಬಿಕೆಯನ್ನು ಹರಡಿದರು.
ಇಂದಿಗೂ ಕೂಡ “ಶ್ರೀಲಂಕಾ”ದಲ್ಲಿ ನಾವು ರೇಣುಕಾಚಾರ್ಯರ ಆಶ್ರಮವನ್ನು , ಭೀಷ್ಮರು ಪ್ರತಿಷ್ಠಾಪನೆ ಮಾಡಿರುವ 6 ಕೋಟಿ ಶಿವಲಿಂಗಗಳನ್ನು ನೊಡಬಹುದು. ಆಚಾರ್ಯರ ಪ್ರಭಾವ ವಿದೇಶಕ್ಕೂ ಚಾಚಿತ್ತು ಎಂದು ತಿಳಿಸಿದರು.
ಈ ವೇಳೆ ಸಮುದಾಯದ ವಿದ್ಯಾರ್ಥಿಗಳಿಗೆ,ಹಿರಿಯ ಮುಖಂಡರಿಗೆ ಸನ್ಮಾನ ಮಾಡಲಾ ಯಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ಸಮುದಾಯದ ಮುಖಂಡರಾದ ಮಹೇಶ್ ಬಸವಾಪುರ, ರಾಜೇಂದ್ರ ಪ್ರಸಾದ್, ಭಾರತಿ, ಸಿದ್ದಣ್ಣ, ಪರಶಿವ ಮೂರ್ತಿ, ಡಾ|| ಸುಂದರ ರಾಜ್, ಜಯಣ್ಣ, ಜಗದಾಂಬ, ರೇಣುಕಾದೇವಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.