Gudibande News: ನೈಜ ಚುನಾವಣೆಯ ಅನುಭವ ಪಡೆದ ವಿದ್ಯಾರ್ಥಿಗಳು; ಪ್ರಜಾಪ್ರಭುತ್ವ ಮೌಲ್ಯಗಳ ಅರಿವು
ಅಭ್ಯರ್ಥಿಗಳ ಪ್ರಚಾರ, ಪರ–ವಿರೋಧ ಪಕ್ಷಗಳ ಆರೋಪ–ಪ್ರತ್ಯಾರೋಪ, ಮತದಾರರ ಓಲೈಕೆ, ಮತಗಟ್ಟೆ ಮುಂದೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ವಿದ್ಯಾರ್ಥಿಗಳು ಹಾಗೂ ಫಲಿತಾಂಶ ಕ್ಕಾಗಿ ಕಾತರದಿಂದ ಕಾಯುತ್ತಿದ್ದ ಅಭ್ಯರ್ಥಿಗಳ ಸಂಭ್ರಮ ಸಾಮಾನ್ಯ ಚುನಾವಣೆಯನ್ನೇ ನೆನಪಿಸು ವಂತಿತ್ತು. ಮತದಾನಕ್ಕೂ ಮುನ್ನ ಎಲ್ಲ ವಿದ್ಯಾರ್ಥಿಗಳು ಮತದಾರರ ಪ್ರತಿಜ್ಞೆ ಸ್ವೀಕರಿಸಿ ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಿದರು.
ತಾಲೂಕಿನ ಮಾಚಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 2026-27ನೇ ಸಾಲಿನ ಶಾಲಾ ಸಂಸತ್ ಚುನಾವಣೆ ಹಬ್ಬದ ವಾತಾವರಣದಲ್ಲಿ ಯಶಸ್ವಿಯಾಗಿ ನಡೆಯಿತು. -
ಗುಡಿಬಂಡೆ: ತಾಲೂಕಿನ ಮಾಚಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 2026–27ನೇ ಸಾಲಿನ ಶಾಲಾ ಸಂಸತ್ ಚುನಾವಣೆ ಹಬ್ಬದ ವಾತಾವರಣದಲ್ಲಿ ಯಶಸ್ವಿಯಾಗಿ ನಡೆಯಿತು.
ಗುಡಿಬಂಡೆ ತಾಲೂಕು ಸ್ವೀಪ್ ಸಮಿತಿ ಹಾಗೂ ಶಾಲೆಯ ಮತದಾರರ ಸಾಕ್ಷರತಾ ಕ್ಲಬ್ ಸಹಯೋಗ ದಲ್ಲಿ ಆಯೋಜಿಸಿದ್ದ ಚುನಾವಣೆಯಲ್ಲಿ ವಿದ್ಯಾರ್ಥಿಗಳು ನೈಜ ಚುನಾವಣೆಯ ಸಂಪೂರ್ಣ ಪ್ರಕ್ರಿಯೆ ಯನ್ನು ಅನುಭವಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರ್ಥೈಸಿಕೊಂಡರು.
ಅಭ್ಯರ್ಥಿಗಳ ಪ್ರಚಾರ, ಪರ–ವಿರೋಧ ಪಕ್ಷಗಳ ಆರೋಪ–ಪ್ರತ್ಯಾರೋಪ, ಮತದಾರರ ಓಲೈಕೆ, ಮತಗಟ್ಟೆ ಮುಂದೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ವಿದ್ಯಾರ್ಥಿಗಳು ಹಾಗೂ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದ ಅಭ್ಯರ್ಥಿಗಳ ಸಂಭ್ರಮ ಸಾಮಾನ್ಯ ಚುನಾವಣೆಯನ್ನೇ ನೆನಪಿಸುವಂತಿತ್ತು. ಮತದಾನಕ್ಕೂ ಮುನ್ನ ಎಲ್ಲ ವಿದ್ಯಾರ್ಥಿಗಳು ಮತದಾರರ ಪ್ರತಿಜ್ಞೆ ಸ್ವೀಕರಿಸಿ ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಿದರು.
ಇದನ್ನೂ ಓದಿ: Gudibande News: ದಲಿತರ ಭೂಮಿಯಲ್ಲಿ ಸೋಲಾರ್ ಪ್ಲಾಂಟ್ ಅಳವಡಿಕೆ; ಸಂತ್ರಸ್ಥರ ಅನಿರ್ದಿಷ್ಟಾವಧಿ ಮೌನ ಸತ್ಯಾಗ್ರಹ
ಚುನಾವಣೆಯ ಅಧಿಸೂಚನೆ ಪ್ರಕಟವಾದ ಬಳಿಕ ನಾಮಪತ್ರ ಸಲ್ಲಿಕೆ, ಪರಿಶೀಲನೆ, ಹಿಂಪಡೆಯು ವಿಕೆ, ಪ್ರಚಾರ, ಮತದಾನ, ಮತ ಎಣಿಕೆ, ಫಲಿತಾಂಶ ಪ್ರಕಟಣೆ, ಖಾತೆ ಹಂಚಿಕೆ ಹಾಗೂ ಪ್ರಮಾಣ ವಚನ ಸ್ವೀಕಾರ ಸೇರಿದಂತೆ ಎಲ್ಲ ಹಂತಗಳನ್ನು ವಿದ್ಯಾರ್ಥಿಗಳೇ ಅಚ್ಚುಕಟ್ಟಾಗಿ ನಿರ್ವಹಿಸಿದರು. ರಹಸ್ಯ ಮತದಾನ ವ್ಯವಸ್ಥೆ, ಮತಪತ್ರ, ಮತದಾರರ ಪಟ್ಟಿ ಹಾಗೂ ಗುರುತಿನ ಚೀಟಿಗಳ ಬಳಕೆಯ ಮೂಲಕ ವಿದ್ಯಾರ್ಥಿಗಳಿಗೆ ನೈಜ ಚುನಾವಣೆಯ ಅನುಭವ ಕಲ್ಪಿಸಲಾಯಿತು. ಮತಗಟ್ಟೆ ಸಿಬ್ಬಂದಿ, ಚುನಾವಣಾಧಿಕಾರಿಗಳು ಹಾಗೂ ಮತ ಎಣಿಕೆ ಸಿಬ್ಬಂದಿಯಾಗಿಯೂ ವಿದ್ಯಾರ್ಥಿಗಳೇ ಕಾರ್ಯ ನಿರ್ವಹಿಸಿದರು.
ಮತ ಎಣಿಕೆಯ ಬಳಿಕ ಪ್ರಕಟವಾದ ಫಲಿತಾಂಶದಲ್ಲಿ 8ನೇ ತರಗತಿಯ **ಕುಶಲ್ ಜಿ.ಎನ್. ಶಾಲಾ ಸಂಸತ್ತಿನ ಪ್ರಧಾನಮಂತ್ರಿಯಾಗಿ ಆಯ್ಕೆಯಾದರು. 10ನೇ ತರಗತಿಯ ದೀಕ್ಷಾ ಆರೋಗ್ಯ ಸಚಿವರಾಗಿ, 9ನೇ ತರಗತಿಯ ಸ್ವಾತಿ ಪಿ. ಸ್ವಚ್ಛತೆ ಮತ್ತು ನೈರ್ಮಲ್ಯ ಸಚಿವರಾಗಿ, ಚೇತನ್ ಕುಮಾರ್ ಪರಿಸರ ಸಂರಕ್ಷಣಾ ಸಚಿವರಾಗಿ, ರಮೇಶ್ ಕ್ರೀಡಾ ಸಚಿವರಾಗಿ, ಸ್ವಾತಿ ಪಿ. ಸಾಂಸ್ಕೃತಿಕ ಸಚಿವರಾಗಿ, 8ನೇ ತರಗತಿಯ ಅಖಿಲಾ ನೀರು ಮತ್ತು ಆಹಾರ ಪೂರೈಕೆ ಸಚಿವರಾಗಿ ಹಾಗೂ ೧೦ನೇ ತರಗತಿಯ ಚೇತನ್ ನಾಯ್ಕ ಹಣಕಾಸು ಸಚಿವರಾಗಿ ಆಯ್ಕೆಯಾದರು.
ಶಾಲೆಯ ಮುಖ್ಯ ಶಿಕ್ಷಕ ಸಿ. ಮಂಜಾ ನಾಯ್ಕ ಮಾತನಾಡಿ, ಮಕ್ಕಳಲ್ಲಿ ಪ್ರಜಾಪ್ರಭುತ್ವದ ಹಕ್ಕು-ಕರ್ತವ್ಯಗಳ ಅರಿವು ಮೂಡಿಸುವುದು, ಕಡ್ಡಾಯ ಹಾಗೂ ರಹಸ್ಯ ಮತದಾನದ ಮಹತ್ವ ತಿಳಿಸುವುದು, ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸುವುದು ಮತ್ತು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ರೂಪಿಸುವ ಉದ್ದೇಶದಿಂದ ಮಾದರಿ ಶಾಲಾ ಸಂಸತ್ ಚುನಾವಣೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಜಯಮ್ಮ, ಚಂದ್ರಶೇಖರ್, ರಾಜಾರೆಡ್ಡಿ, ಅತಿಥಿ ಶಿಕ್ಷಕರಾದ ಸೋಮಶೇಖರ, ನವ್ಯ, ರಾಧ, ದ್ವಿತೀಯ ದರ್ಜೆ ಸಹಾಯಕ ಶ್ಯಾಮ್ ಸುಂದರ್, ಅಡುಗೆ ಸಿಬ್ಬಂದಿ ಸಂಜೀವಮ್ಮ ಹಾಗೂ ಪುಷ್ಪಮ್ಮ ಸೇರಿದಂತೆ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.